ಹುಟ್ಟು ಹಬ್ಬದಂದು ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ; ‘ದೃಶ್ಯಂ 2‘ ಸಿನಿಮಾ ಘೋಷಿಸಿದ ಮೋಹನ್ ಲಾಲ್

mohanlal 'Drishyam 2': ಮೋಹನ್​ ಲಾಲ್​ ‘ದೃಶ್ಯಂ 2‘ ಸಿನಿಮಾ ಮಾಡುವುದಾಗಿ ನಿನ್ನೆ ಘೋಷಿಸಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ 20 ಸೆಕೆಂಡ್​ಗಳ ಟೀಸರ್​​ವೊಂದನ್ನು ಬಿಡುವ ಮೂಲಕ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅಭಿಮಾನಿಗಳು ಈ ವಿಚಾರ ತಿಳಿದು ಸಂತಸಗೊಂಡಿದ್ದಾರೆ.

ದೃಶ್ಯಂ 2

ದೃಶ್ಯಂ 2

 • Share this:
  ಮಾಲಿವುಡ್​ ಖ್ಯಾತ ನಟ ಮೋಹನ್​ ಲಾಲ್​ ಮೇ 21 ರಂದು ತಮ್ಮ 60ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ಸಂದರ್ಭದಂದು ಅಭಿಮಾನಿಗಳಿಗೆ ತಮ್ಮ ಮುಂದಿನ ಸಿನಿಮಾವನ್ನು ಘೋಷಿಸುವ ಮೂಲಕ ಉಡುಗೊರೆ ನೀಡಿದ್ದಾರೆ.

  ಮೋಹನ್​ ಲಾಲ್​ ‘ದೃಶ್ಯಂ 2‘ ಸಿನಿಮಾ ಮಾಡುವುದಾಗಿ ನಿನ್ನೆ ಘೋಷಿಸಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ 20 ಸೆಕೆಂಡ್​ಗಳ ಟೀಸರ್​​ವೊಂದನ್ನು ಬಿಡುವ ಮೂಲಕ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅಭಿಮಾನಿಗಳು ಈ ವಿಚಾರ ತಿಳಿದು ಸಂತಸಗೊಂಡಿದ್ದಾರೆ.

  ಹೊಸ ಚರಿತ್ರೆ ಬರೆಯಲಿದೆಯಾ ‘ದೃಶ್ಯಂ-2‘

  2013ರಲ್ಲಿ ಕ್ರೈಮ್​ ಥ್ರಿಲ್ಲರ್​​ ಜಾನರ್​ನಲ್ಲಿ ‘ದೃಶ್ಯಂ‘ ಸಿನಿಮಾ ಮಲಯಾಲಂನಲ್ಲಿ ತೆರೆ ಕಂಡಿತ್ತು. ಈ ಸಿನಿಮಾಗೆ ಜೀತು ಜೋಸೆಫ್​​ ಆ್ಯಕ್ಷನ್​ ಕಟ್​ ಹೇಳಿದ್ದರು. ಮೋಹನ್​ ಲಾಲ್​​​ ಮತ್ತು ಮೀನಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ದೃಶ್ಯ ಸಿನಿಮಾ ಬಿಡುಗೊಂಡ ನಂತರ ಅಧಿಕ ವೀಕ್ಷಣೆ ಕಂಡು ಹೊಸ ದಾಖಲೆಯನ್ನು ಬರೆದಿತ್ತು.

  ಇಷ್ಟು ಮಾತ್ರವಲ್ಲ, ಬೇರೆ ಭಾಷೆಗಳಲ್ಲೂ ರಿಮೇಕ್​ ಆಯಿತು. ಸ್ಯಾಂಡಲ್​ವುಡ್​ ಕೂಡ ಇದರಿಂದ ಹೊರತಾಗಿಲ್ಲ. ಕನ್ನಡದಲ್ಲಿ ‘ದೃಶ್ಯ‘ ಟೈಟಲ್​ನಡಿಯಲ್ಲಿ ಕ್ರೇಜಿಸ್ಟಾರ್​ ರವಿಚಂದ್ರ ಮತ್ತು ನವ್ಯಾ ನಾಯರ್​​​ ಈ ಸಿನಿಮಾ ನಟಿಸಿದ್ದರು.  ಪಿ. ವಾಸು ಆ್ಯಕ್ಷನ್​ ಕಟ್​ ಹೇಳಿದ್ದರು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಬಂದಿತ್ತು.

     ತೆಲುಗು ಭಾಷೆಯಲ್ಲೂ ಕೂಡ ‘ದೃಶ್ಯಂ‘ ಸಿನಿಮಾ ರಿಮೇಕ್ ಆಯಿತ್ತು. ಮಾತ್ರವಲ್ಲದೆ ಈ ಸಿನಿಮಾ ಚೀನಿ ನಿರ್ದೇಶಕರ ಮೇಲೂ ಪ್ರಭಾವ ಬೀರಿತ್ತು. ಹಾಗಾಗಿ ಕಳೆದ ವರ್ಷ ‘ಶೀಪ್​​ ವಿಥೌಟ್​ ಶೆಫರ್ಡ್‘​​ ಹೆಸರಿನಡಿ ‘ದೃಶ್ಯಂ‘ ಸಿನಿಮಾ ರಿಮೇಕ್​ ಆಗಿ ಬಿಡುಗಡಗೊಂಡಿದೆ. ವಿಶೇಷವೆಂದರೆ ಚೀನಿ ಭಾಷೆಗೆ ರಿಮೇಕ್​ ಆದ ಮೊದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ‘ದೃಶ್ಯಂ‘ ಸಿನಿಮಾ ಪಾತ್ರವಾಗಿದೆ.

  ಇದೀಗ ಮೋಹನ್​ ಲಾಲ್​ ‘ದೃಶ್ಯಂ 2‘ ಸಿನಿಮಾವನ್ನು ಮಾಡುತ್ತಿದ್ದಾರೆ. ಕೊರೋನಾ ಲಾಕ್​ಡೌನ್​ ಮುಗಿದ ನಂತರ ಮತ್ತು ಪರಿಸ್ಥಿತಿ ಸರಿಯಾದ ನಂತರ ಶೂಟಿಂಗ್​ ನಡೆಯಲಿದೆ. ಜೀತು ಜೋಸೆಫ್​​ ದೃಶ್ಯಂ 2 ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.  ಈ ಸಿನಿಮಾ ಕೂಡ ಹೊಸ ಚರಿತ್ರೆ ಬರೆಯಲಿದೆಯಾ ಎಂದು ಕಾದು ನೋಡ ಬೇಕಿದೆ.

  ‘ಕೆ.ಜಿ.ಎಫ್‘ ಈ​ ನಟಿಯ ಜೊತೆ ಇರುವುದು ನಾಲ್ಕೇ ಬಟ್ಟೆಯಂತೆ!
  First published: