Damayanthi Movie: ರಾಧಿಕಾ ಕುಮಾರಸ್ವಾಮಿ ಬೆಂಬಲಕ್ಕೆ ನಿಂತ ಮಲೆಯಾಳಂ ನಟ ಮೋಹನ್​ಲಾಲ್!

Mohan Lal: ರಾಧಿಕಾ ಕುಮಾರಸ್ವಾಮಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ದಮಯಂತಿ ಸಿನಿಮಾದ ಮಲೆಯಾಳಂ ಅವತರಣಿಕೆಯ ಪೋಸ್ಟರ್ ಅನ್ನು ಮಾಲಿವುಡ್ ನಟ ಮೋಹನ್ ಲಾಲ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

Sushma Chakre | news18-kannada
Updated:October 19, 2019, 9:09 AM IST
Damayanthi Movie: ರಾಧಿಕಾ ಕುಮಾರಸ್ವಾಮಿ ಬೆಂಬಲಕ್ಕೆ ನಿಂತ ಮಲೆಯಾಳಂ ನಟ ಮೋಹನ್​ಲಾಲ್!
ರಾಧಿಕಾ ಕುಮಾರಸ್ವಾಮಿ
  • Share this:
5 ವರ್ಷಗಳ ನಂತರ ನಟಿ ರಾಧಿಕಾ ಕುಮಾರಸ್ವಾಮಿ ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. 'ದಮಯಂತಿ', 'ಭೈರಾದೇವಿ', 'ಕಾಂಟ್ರಾಕ್ಟ್'​ ಸಿನಿಮಾಗಳಲ್ಲಿ ನಟಿಸುತ್ತಿರುವ ರಾಧಿಕಾ ಅವರ 'ದಮಯಂತಿ' ಸಿನಿಮಾ ಈ ತಿಂಗಳ ಅಂತ್ಯದಲ್ಲಿ ತೆರೆ ಕಾಣುವ ಸಾಧ್ಯತೆಯಿದೆ.

ನವರಸನ್ ಕತೆ ಬರೆದು, ನಿರ್ದೇಶಿಸಿರುವ 'ದಮಯಂತಿ' ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ತೆರೆಕಾಣಲಿದೆ. ತೆಲುಗಿನ 'ಭಾಗಮತಿ', 'ಅರುಂಧತಿ' ಸಿನಿಮಾ ರೀತಿಯಲ್ಲೇ ಸಾಕಷ್ಟು ಅದ್ದೂರಿಯಾಗಿ ಈ ಸಿನಿಮಾ ನಿರ್ಮಿಸಲಾಗಿದ್ದು, ರಾಧಿಕಾ ಕುಮಾರಸ್ವಾಮಿ ಅವರ ಸ್ಟಿಲ್​ಗಳು ಅನುಷ್ಕಾ ಶೆಟ್ಟಿ ಪಾತ್ರವನ್ನು ನೆನಪಿಸುವಂತಿದೆ. ಈಗಾಗಲೇ ಬೆಂಗಳೂರು, ಮೈಸೂರು, ಹೈದರಾಬಾದ್​ನಲ್ಲಿ 'ದಮಯಂತಿ' ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಯ ತಯಾರಿಯಲ್ಲಿದೆ.

ಶಂಕರ್​ನಾಗ್​ ಬಗ್ಗೆ ಶಾಕಿಂಗ್ ವಿಚಾರ ಬಿಚ್ಚಿಟ್ಟ ಜೈಜಗದೀಶ್; ಬಿಗ್​ಬಾಸ್​ ಮನೆಯಲ್ಲಿ ರಹಸ್ಯ ಬಯಲು

ರಾಧಿಕಾ ಕುಮಾರಸ್ವಾಮಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ದಮಯಂತಿ' ಸಿನಿಮಾದ ಮಲೆಯಾಳಂ ಅವತರಣಿಕೆಯ ಪೋಸ್ಟರ್ ಅನ್ನು ಮಾಲಿವುಡ್ ನಟ ಮೋಹನ್ ಲಾಲ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. 'ಮಲ್ಲು ದಮಯಂತಿ' ಹೆಸರಿನಲ್ಲಿ ಮಲೆಯಾಳಂನಲ್ಲಿ ತೆರೆಕಾಣಲಿರುವ ಈ ಸಿನಿಮಾದ ಬೆಂಬಲಕ್ಕೆ ಮೋಹನ್ ಲಾಲ್ ನಿಂತಿದ್ದಾರೆ. ಮಲೆಯಾಳಂನ ಹಿರಿಯ ನಟ ಮೋಹನ್ ಲಾಲ್ ಪಂಚಭಾಷೆಯಲ್ಲಿ ತೆರೆಕಾಣಲಿರುವ 'ದಮಯಂತಿ' ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದು, ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

damayanti poster released by mohan lal malayalam version
ದಮಯಂತಿ ಮಲೆಯಾಳಂ ಪೋಸ್ಟರ್ ರಿಲೀಸ್ ಮಾಡಿದ ಮೋಹನ್ ಲಾಲ್


Radhika Kumaraswamy: ನೀವು ಟಿಕ್​ಟಾಕ್ ಮಾಡ್ತೀರಾ? ಹಾಗಿದ್ರೆ ರಾಧಿಕಾ ಕುಮಾರಸ್ವಾಮಿ ಆಫರ್​ ಮಿಸ್​ ಮಾಡ್ಕೋಬೇಡಿ!

ಈ ಸಿನಿಮಾಗೆ ಗಣೇಶ್ ನಾರಾಯಣ್ ಸಂಗೀತವಿದ್ದು, ಪಿಕೆಎಚ್ ದಾಸ್ ಛಾಯಾಗ್ರಹಣವಿದೆ. 'ದಮಯಂತಿ' ಮೊದಲ ಟೀಸರ್​ನಿಂದಲೇ ಸಿನಿಪ್ರಿಯರಲ್ಲಿ ವಿಶೇಷ ಕುತೂಹಲ ಹುಟ್ಟಿಸಿದೆ. ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡೋ ಮೂಲಕ ಪಬ್ಲಿಸಿಟಿ ಶುರುಮಾಡಿರೋ ಚಿತ್ರತಂಡ, ಇತ್ತೀಚೆಗಷ್ಟೇ ದಮಯಂತಿ ಮಲಯಾಳಂ ಭಾಷೆಯ ಪೋಸ್ಟರ್ ಅನ್ನು ಮೋಹನ್ ಲಾಲ್ ಅವರಿಂದ ಬಿಡುಗಡೆ ಮಾಡಿಸಿದೆ.
First published: October 19, 2019, 9:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading