Kurup Movie Review: ಅಪರಾಧಿಯ ಕಥೆ ಹೇಳಲು ಹೋಗಿ ಮನಮುಟ್ಟುವ ನಿರೂಪಣೆಯಲ್ಲಿ ಎಡವಿದ ದುಲ್ಖರ್ ಸಲ್ಮಾನ್ ಸಿನಿಮಾ

Kurup Movie: ದೊಡ್ಡ ತೆರೆಯ ಮೇಲಿನ ಮನರಂಜನೆಗಾಗಿ ಕೊಲೆಯನ್ನು ‘ಗ್ಲಾಮರೈಸ್’ ಮಾಡಿದ್ದಕ್ಕಾಗಿ ಕುರುಪ್ ಸಿನಿಮಾದ ನಿರ್ಮಾಪಕರು ಒಂದು ವರ್ಗದ ಜನರಿಂದ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ಆ ಕಥೆಯಲ್ಲಿ ಅಪರಾಧಕ್ಕಿಂತ ಹೆಚ್ಚಿನ ಯಾವುದೋ ಮೌಲ್ಯವನ್ನು ಕಂಡುಕೊಂಡಿರುವ ನಿರ್ಮಾಪಕರು, ಕಾರಣಾಂತರಗಳಿಂದ ಈ ಚಿತ್ರಕ್ಕೆ ಟೀಕೆಗಳನ್ನು ಎದುರಿಸುವುದು ಯೋಗ್ಯ ಎಂದು ಭಾವಿಸಿರಬೇಕು.

ಕುರುಪ್

ಕುರುಪ್

 • Share this:
  37 ವರ್ಷಗಳ ಹಿಂದಿನ ಕೊಲೆಯ ಈ ಕಥೆಯು, ಸ್ಟಾರ್ ನಟ ದುಲ್ಖರ್ ಸಲ್ಮಾನ್ (Dulquer Salmaan ) ಕಾರಣದಿಂದ ಹೊಸ ಪೀಳಿಗೆಯ ಹೊಸ ಪ್ರೇಕ್ಷಕರನ್ನು ಪಡೆದುಕೊಂಡಿದೆ.

  ಕುರುಪ್ (kurup) , ನಾಲ್ಕು ದಶಕಗಳ ಕಾಲ ಸೆರೆಯಾಗದೆ, ನಗರದ ದಂತ ಕಥೆಯಾಗಿದ್ದ ಅಪರಾಧಿಯೊಬ್ಬನ ಕಥೆಯುಳ್ಳ ಸಿನಿಮಾ. ದುಲ್ಖರ್ ಸಲ್ಮಾನ್ ಸುಕುಮಾರ ಕುರುಪ್ (Sukumara Kurup) ಪಾತ್ರವನ್ನು ನಿರ್ವಹಿಸಿದ್ದಾರೆ. ಕೊಲೆಗಾರನ ಬಗ್ಗೆ ಸಿನಿಮಾ ಮಾಡಿರುವುದು ಇದೇ ಮೊದಲಲ್ಲ. ಮಲೆಯಾಳಂ (Malayalam) ಸಿನಿಮಾ ಎನ್‍ಎಚ್ 47 (1984) ಮತ್ತು ಪಿನ್ನೆಯುಂ (2016) ಹಾಗೂ ಹಿಂದಿ ಸಿನೆಮಾ ಮೋಹ್ ಮಾಯಾ ಮನಿ (2016) ಇಂತದ್ದೇ ಕಥಾ ವಸ್ತುವನ್ನು ಹೊಂದಿವೆ. ಆದರೆ 37 ವರ್ಷಗಳ ಹಿಂದಿನ ಕೊಲೆಯ ಈ ಕಥೆಯು, ಸ್ಟಾರ್ ನಟ ದುಲ್ಖರ್ ಸಲ್ಮಾನ್ ಕಾರಣದಿಂದ ಹೊಸ ಪೀಳಿಗೆಯ ಹೊಸ ಪ್ರೇಕ್ಷಕರನ್ನು ಪಡೆದುಕೊಂಡಿದೆ.

  ದೊಡ್ಡ ತೆರೆಯ ಮೇಲಿನ ಮನರಂಜನೆಗಾಗಿ ಕೊಲೆಯನ್ನು ‘ಗ್ಲಾಮರೈಸ್’ ಮಾಡಿದ್ದಕ್ಕಾಗಿ ಕುರುಪ್ ಸಿನಿಮಾದ ನಿರ್ಮಾಪಕರು ಒಂದು ವರ್ಗದ ಜನರಿಂದ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ಆ ಕಥೆಯಲ್ಲಿ ಅಪರಾಧಕ್ಕಿಂತ ಹೆಚ್ಚಿನ ಯಾವುದೋ ಮೌಲ್ಯವನ್ನು ಕಂಡುಕೊಂಡಿರುವ ನಿರ್ಮಾಪಕರು, ಕಾರಣಾಂತರಗಳಿಂದ ಈ ಚಿತ್ರಕ್ಕೆ ಟೀಕೆಗಳನ್ನು ಎದುರಿಸುವುದು ಯೋಗ್ಯ ಎಂದು ಭಾವಿಸಿರಬೇಕು.

  1984 ರಲ್ಲಿ ಕುರುಪ್ , ಚಾಕೋ (Chako) ಎಂಬ ವ್ಯಕ್ತಿಯನ್ನು ಕೊಂದು, ಆತನ ಶವವನ್ನು , ಸಂತ ವಿಮೆಯ ಹಣವನ್ನು ಪಡೆಯಲು ತನ್ನ ನಕಲಿ ಸಾವಿಗೆ ಬಳಸಿಕೊಂಡಿದ್ದನು. ಆತನ ಸಹಚರರನ್ನು ಬಂಧಿಸಿದರು, ಕುರುಪ್ ಕೇರಳ ಪೋಲೀಸರ ಕೈಗೆ ಸಿಕ್ಕಿರಲಿಲ್ಲ. ನಿದೇರ್ಶಕ ರಾಜೇಂದ್ರನ್ ಮತ್ತು ಅವರ ಬರಹಗಾರರ ತಂಡ, ಕೇರಳದ ಪ್ರಮುಖ ವಾಂಟೆಡ್ ಅಪರಾಧಿಗಳಲ್ಲಿ ಒಬ್ಬ , ಜನರ ಸ್ಮೃತಿಯಲ್ಲಿ ಕಥೆಯಾಗಿ ಹೇಗೆ ವಿಕಸನಗೊಂಡಿದ್ದಾನೆ ಎಂಬುದನ್ನು ಸೆರೆ ಹಿಡಿಯಲು ಪ್ರಯತ್ನಿಸಿದ್ದಾರೆ. ಅವರು ಎಲ್ಲಾ ಸೂಕ್ಷಗಳನ್ನು ಹೇಗೆ ಭಾಷಾಂತರಿಸಲು ಪ್ರಯತ್ನಸಿದ್ದಾರೆ ಎಂಬುವುದು ಪ್ರಶ್ನೆ.

  ಗೋಪಿ ಕೃಷ್ಣ ಕುರುಪ್ (ದುಲ್ಖರ್ ಸಲ್ಮಾನ್) ಅಪರಾಧ ಚಟವುಳ್ಳ ವ್ಯಕ್ತಿ. 12 ನೇ ತರಗತಿಯಲ್ಲಿ ಉತ್ತೀರ್ಣವಾಗಲು ಸಾಧ್ಯವಾಗದೆ, ಆತ ಭಾರತೀಯ ವಾಯು ನೆಲೆಯಲ್ಲಿ ಅದೃಷ್ಟ ಪರೀಕ್ಷೆಗೆ ಪ್ರಯತ್ನಿಸುತ್ತಾನೆ. ಹಲವಾರು ಪ್ರಯತ್ನಗಳ ನಂತರ, ತರಬೇತಿ ಶಿಬಿರದಲ್ಲಿ ಸ್ಥಾನ ಪಡೆಯುತ್ತಾನೆ. 1971ರ ಭಾರತ ಪಾಕಿಸ್ತಾನ ಯುದ್ಧದ ನಂತರ, ಕುರುಪ್ ದೇಶಕ್ಕೆ ಸೇರಿದ ಕೆಲವು ಶಸ್ತ್ರಾಸ್ತ್ರಗಳನ್ನು ಕದಿಯುತ್ತಾನೆ ಕೂಡ. ಅವನ ಮಹತ್ವಾಕಾಂಕ್ಷೆ ಹೆಚ್ಚಾಗುತ್ತಲೇ, ಐಎಎಫ್‍ನ ಕರ್ತವ್ಯದಿಂದ ತಪ್ಪಿಸಿಕೊಳ್ಳಲು, ತನ್ನ ನಕಲಿ ಸಾವಿನ ಯೋಜನೆ ರೂಪಿಸಿ, ಯಶಸ್ವಿಯಾಗುತ್ತಾನೆ. ಸುಧಾಕರ ಕುರುಪ್ ಎಂಬ ಹೊಸ ಹೆಸರಿನೊಂದಿಗೆ ಹೊಸ ಭವಿಷ್ಯ ರೂಪಿಸಿಕೊಳ್ಳಲು ಗಲ್ಫ್‍ಗೆ ಹೋಗುತ್ತಾನೆ. ಕುರುಪ್ ತನ್ನ ಅದೃಷ್ಟಕ್ಕೆ ಧನ್ಯವಾದ ಹೇಳಿ, ಹೊಸದಾಗಿ ಸಿಕ್ಕ ಸಂಪತ್ತಿನ ಜೊತೆ ಹೆಂಡತಿ ಮಕ್ಕಳೊಂದಿಗೆ ಸುಖವಾಗಿ ಬದುಕಬಹುದಿತ್ತು. ಆದರೆ ದುರಾಸೆ ಆತನನ್ನು ಮತ್ತೆ ಅದೃಷ್ಟ ಪರೀಕ್ಷೆಗೆ ಒಡ್ಡಿಕೊಳ್ಳಲು ಪ್ರೇರೇಪಿಸುತ್ತದೆ.

  ಮತ್ತೆ ತನ್ನ ನಕಲಿ ಮರಣದ ಯೋಜನೆ ರೂಪಿಸಿ, 8 ಲಕ್ಷ ರೂ ವಿಮಾ ಹಣ ಕಬಳಿಸುವ ಆಲೋಚನೆಯೊಂದಿಗೆ ಕುರುಪ್ ಕೇರಳಕ್ಕೆ ಮರಳುತ್ತಾನೆ. ಅವನ ಭಾಮೈದ ಭಾಸಿ ಪಿಳ್ಳೈ (ಶೈನ್ ಟಾಮ್ ಚಾಕೋ) ಸೇರಿದಂತೆ ಮೂರು ಜನರ ಸಹಾಯ ಪಡೆಯುತ್ತಾನೆ. ಕೊಳಕು ಮತ್ತು ಅಜಾಗರೂಕ ಕುಡುಕನ ಪಾತ್ರದಲ್ಲಿನ ಶೈನ್ ಅವರ ಅಭಿನಯ ಇಲ್ಲಿ ಗಮನ ಸೆಳೆಯುತ್ತದೆ. ಕುರುಪ್ ಯೋಜನೆಗೆ ಸಹಾಯ ಮಾಡಲು, ಭಾಸಿ ಮತ್ತು ಆತನ ಸಹಚರರು ಕುಡಿದ ಮತ್ತಿನಲ್ಲಿ ಒಬ್ಬ ಹಿಚ್‍ಹೈಕರ್‍ನನ್ನು ಕೊಲ್ಲುತ್ತಾರೆ.  ಇದನ್ನು ಓದಿ: ಡಿಸೆಂಬರ್​ನಲ್ಲಿ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದ್ದಾನೆ Avatara Purusha

  ಈ ಪಿತೂರಿ ಬಯಲಾಗುವ ಮುನ್ನ, ಡಿವೈಎಸ್ಪಿ ಕೃಷ್ಣದಾಸ್ ( ಇಂದ್ರಜಿತ್ ಸುಕುಮಾರನ್) ಅವರಿಂದ ಹೆಚ್ಚಿನ ತನಿಖೆ ನಡೆಯುವುದಿಲ್ಲ, ಇದು ಈ ಚಿತ್ರದ ದೊಡ್ಡ ನ್ಯೂನ್ಯತೆಗಳಲ್ಲಿ ಒಂದಾಗಿದೆ. ಯಾವುದೋ ಕಾರಣಕ್ಕೆ, ನಿರ್ಮಾಪಕರು ಅವಸರದಿಂದ ಕೊಲೆ ಮತ್ತು ತನಿಖೆಯ ಹಂತವನ್ನು ದಾಟಿ ಕುಪುಪನ್ನು ಬೆನ್ನಟ್ಟಲು ಪ್ರಯತ್ನಿಸಿದ್ದಾರೆ. ಚಿತ್ರ ನಿರ್ಮಾತೃರು ಪ್ರೇಕ್ಷಕರನ್ನು ನಿರೂಪಣೆಯತ್ತ ಸೆಳೆಯಲು ಆಸಕ್ತಿ ತೋರಿಲ್ಲ. ತನಿಖಾಧಿಕಾರಿಯ ಪಾತ್ರ ಕುರುಪನ್ನು ಸೆರೆ ಹಿಡಿಯಲು ಉತ್ಸಾಹವನ್ನು ಹೊಂದಿರುವಂತೆ ತೋರಿಸಿಲ್ಲ. ಅವರು ತನಿಖಾ ದೃಶ್ಯಗಳಲ್ಲಿ ರ್ಯಾಂಪ್ ವಾಕ್ ಮಾಡಿದ್ದಾರೆ ಮತ್ತು ಬೆನ್ನಟ್ಟುವ ದೃಶ್ಯಗಳಲ್ಲಿ ಓಡಲು ನಿರಾಕರಿಸಿದ್ದಾರೆ. ಒಂದೋ ಚಿತ್ರ ಕಥೆಗಾರರು ದುರ್ಬಲ ಪೊಲೀಸ್ ಪಾತ್ರವನ್ನು ಸೃಷ್ಟಿಸಿದ್ದಾರೆ, ಅಥವಾ ನಿರ್ದೇಶಕ ಇಂದ್ರಜಿತ್ ಅವರಿಂದ ಹೆಚ್ಚಿನ ಟೇಕ್‍ಗಳನ್ನು ಕೇಳುವ ಧೈರ್ಯ ಹೊಂದಿರಲಿಲ್ಲ.

  ಇದನ್ನು ಓದಿ: Puneeth Rajkumar: ಪುನೀತ್​ ನಮನ: ಸಿನಿಮಾಗಳ ಶೂಟಿಂಗ್​ ನಿಲ್ಲಿಸಲು ನಿರ್ಧಾರ..!  ಆರಂಭದಲ್ಲಿ ನಾವು, ಕುರುಪ್ ಅವರ ಕುಟುಂಬ ಮತ್ತು ಸ್ನೇಹಿತರ ಕ್ಷಣಿಕ ನೆನಪುಗಳ ಮೂಲಕ ಕುರುಪ್ ಬಗ್ಗೆ ತಿಳಿಯುತ್ತೇವೆ. ಆತ ಅಪರಾಧಿ ಹೌದು, ಆದರೆ ಅದಕ್ಕಿಂತ ಹೆಚ್ಚಾಗಿ ಒಬ್ಬ ಒಳ್ಳೆಯ ಸ್ನೇಹಿತ ಮತ್ತು ನಿಷ್ಟಾವಂತ ಪ್ರೇಮಿ ಎಂಬುದನ್ನು ತೋರಿಸಲಾಗಿದೆ. ನಿರೂಪಣೆಯ ಸ್ವರೂಪದ ಬಗೆಗಿನ ನಿರ್ಮಾಪಕ ಪ್ರೀತಿ, ಅವರು ಕಥೆಯನ್ನು ಮನಮುಟ್ಟು ರೀತಿಯಲ್ಲಿ ಹೇಳುತ್ತಿಲ್ಲ ಎಂಬುದನ್ನು ಅರಿಯದಿರುವಂತೆ ಮಾಡಿದೆ. ಅಂತ್ಯದಲ್ಲಿ, ನಗರದ ಪೌರಾಣಿಕ ಪಾತ್ರದ ರೂಪವನ್ನು ಪಡೆದುಕೊಳ್ಳುತ್ತಾನೆ. ನಿರ್ಮಾಪಕರು ಕಥಾ ವಸ್ತುವಿನ ವಿಶಿಷ್ಟ ಅಂಶಗಳನ್ನು ಗುರುತಿಸಲು ಮತ್ತು ಆನ್ವೇಷಿಸಲು ವಿಫಲರಾಗಿದ್ದಾರೆ. ಅದರ ಬದಲು ಈಗಾಗಲೇ ಜನರಿಗೆ ಗೊತ್ತಿರುವ ಕುರುಪ್‍ನ ಮಾಹಿತಿ ಮತ್ತು ಅವನ ಅಪರಾಧದ ಕಥೆಯನ್ನು ಅರೆ ಮನಸ್ಸಿನಿಂದ ಮತ್ತೆ ಹೇಳಿರುವಂತಿದೆ.
  First published: