Chiranjeevi Sarja: ಚಿರು ಸಾವಿಗೆ ಸಂತಾಪ ಸೂಚಿಸಿದ ಮಾಲಿವುಡ್ ತಾರೆಯರು

ಚಿರಂಜೀವಿ ಸರ್ಜಾ ಕೈಯಲ್ಲಿ ಅನೇಕ ಸಿನಿಮಾಗಳಿದ್ದವು. ಸಾವಿಗೂ ಮುನ್ನ ಸಿನಿಮಾ ಒಂದಕ್ಕೆ ಸಹಿ ಹಾಕಿ ಬಂದಿದ್ದರು. ಇವರ ನಟನೆಯ ‘ರಣಂ‘ ಸಿನಿಮಾ ಶೂಟಿಂಗ್​ ಮುಗಿದಿದ್ದು, ಡಬ್ಬಿಂಗ್​ ಮಾತ್ರ ಬಾಕಿಯಿತ್ತು.

chiranjeevi sarja

chiranjeevi sarja

 • Share this:
  ನಟ ಚಿರಂಚೀವಿ ಸರ್ಜಾ ಸಾವಿಗೆ ಮಾಲಿವುಡ್​ ತಾರೆಯರು ಸಂತಾಪ ಸೂಚಿಸಿದ್ದಾರೆ. ನಟ ಪೃಥ್ವಿರಾಜ್​​​ ಸುಕುಮಾರನ್​​​ , ಜಯಸೂರ್ಯ,  ನಜ್ರಿಯಾ ನಜೀಮ್​ ಫಾಹದ್​​​ ಸೇರಿದಂತೆ ಅನೇಕ ತಾರೆಯರು ಸಾಮಾಜಿಕ ಜಾಲತಾಣದಲ್ಲಿ ಚಿರಂಜೀವಿ ಸರ್ಜಾ ಅವರ ಫೋಟೋ ಹಾಕುವ ಮೂಲಕ ಬೇಸರ ಹೊರಹಾಕಿದ್ದಾರೆ.

  ನಟ ಪೃಥ್ವಿರಾಜ್​​​ ಸುಕುಮಾರನ್ ​ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ‘ಚಿರಂಜೀವಿ ಸರ್ಜಾ ಹಠಾಟ್​ ನಿಧಾನದ ಸುದ್ದಿ ಕೇಳಿ ಬೇಸರಗೊಂಡಿದ್ದೇನೆ. ಮೇಘನಾ ಮತ್ತು ಇಡೀ ಕುಟುಂಬಕ್ಕೆ ಈ ಆಘಾತವನ್ನು, ದುಃಖವನ್ನು ತಡೆಯುವ ಶಕ್ತಿಕೊಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ‘ ಎಂದು ಬರೆದುಕೊಂಡಿದ್ದಾರೆ.  ಚಿರು ಸಾವಿನ ಬಗ್ಗೆ ಇನ್​​​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡ ನಟ ಜಯಸೂರ್ಯ ನಿಜವಾಗಲು ಹಾರ್ಟ್​ಬ್ರೇಕಿಂಗ್​ ಎಂದು ಹೇಳಿದ್ದಾರೆ.   
  View this post on Instagram
   

  Really Heartbreaking ..... 🙏🙏🙏


  A post shared by actor jayasurya (@actor_jayasurya) on


  ನಟಿ ನಜ್ರಿಯಾ ನಜೀಮ್​ ಫಾಹದ್​ ಕೂಡ ಇನ್​​ಸ್ಟಾ ಖಾತೆಯಲ್ಲಿ ‘ ಶಾಕ್​ ಆಗಿದ್ದೇನೆ. ಮಿಸ್​ ಯು ಭಾಯ್​ ಎಂದು ಬರೆದುಕೊಳ್ಳುವ ಮೂಲಕ ಚಿರಂಜೀವಿ ಸರ್ಜಾ ಅವರಿಗೆ ಸಂತಾಪ ಸೂಚಿಸಿದ್ದಾರೆ.

      
  View this post on Instagram
   

  Will miss u bhai! 🖤In shock


  A post shared by Nazriya Nazim Fahadh (@nazriyafahadh) on


  ಅನೇಕ ಕಲಾವಿದರು ಚಿರಂಜೀವಿ ಸರ್ಜಾ ಅವರ ಅಗಲಿಕೆಗೆ ಬೇಸರ ಹೊರಹಾಕಿದ್ದಾರೆ. 39ನೇ ವರ್ಷದಲ್ಲಿ ವಿಧಿಯ ಕ್ರೂರ ಲೀಲೆಗೆ ಸಾವನ್ನಪ್ಪಿದ್ದ ಚಿರು ‘ವಾಯುಪುತ್ರ‘ ಸಿನಿಮಾದ ಮೂಲಕ ಸ್ಯಾಂಡಲ್​​ವುಡ್​ ಪ್ರವೇಶ ಪಡೆದರು. ಸಹಾಯ ನಿರ್ದೇಶಕನಾಗಿ ಸಿನಿಮಾದ ಅನೇಕ ಕೆಲಸವನ್ನು ಮಾಡುತ್ತಾ ನಂತರ ಹೀರೋ ಆಗಿ ತೆರೆ ಮೇಲೆ ಮಿಂಚಿದ್ದರು. 22ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ.

  2018ರಲ್ಲಿ ಮೇಫನಾ ರಾಜ್​ ಅವರನ್ನು ಪ್ರೀತಿಸಿ ಕ್ರಿಶ್ಚಿಯನ್​ ಮತ್ತು ಹಿಂದೂ ಸಂಪ್ರದಾಯದಂತೆ ವಿವಾಹವಾಗುತ್ತಾರೆ. ಅನೇಕ ತಾರೆಯರು ಇವರ ಮದುವೆಗೆ ಬಂದು ಹಾರೈಸಿದ್ದರು. ಇತ್ತೀಚೆಗೆ ಇವರಿಬ್ಬರ ವಿವಾಹವಾಗಿ 2 ವರ್ಷಗಳಾಗಿತ್ತು. ಆದರೆ ನಿನ್ನೆ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆ.

  ಚಿರಂಜೀವಿ ಸರ್ಜಾ ಕೈಯಲ್ಲಿ ಅನೇಕ ಸಿನಿಮಾಗಳಿದ್ದವು. ಸಾವಿಗೂ ಮುನ್ನ ಸಿನಿಮಾ ಒಂದಕ್ಕೆ ಸಹಿ ಹಾಕಿ ಬಂದಿದ್ದರು. ಇವರ ನಟನೆಯ ‘ರಣಂ‘ ಸಿನಿಮಾ ಶೂಟಿಂಗ್​ ಮುಗಿದಿದ್ದು, ಡಬ್ಬಿಂಗ್​ ಮಾತ್ರ ಬಾಕಿಯಿತ್ತು. ಆದರೀಗ ಸಾವನ್ನಪ್ಪುವ ಮೂಲಕ ಸ್ಯಾಂಡಲ್​ವುಡ್​ಗೆ ದೊಡ್ಡ ಆಘಾತವನ್ನು ನೀಡಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲಿ ಮರಣ ಹೊಂದಿದ ಚಿರುಂಜೀವಿ ಸರ್ಜಾ ಬಗ್ಗೆ ಸ್ಯಾಂಡಲ್​ವುಡ್​ ದುಃಖದಲ್ಲಿ ಮುಳುಗಿದೆ.

  Chiranjeevi Sarja Death: ಚಿರಂಜೀವಿ ಸರ್ಜಾ ಇನ್​​ಸ್ಟಾಗ್ರಾಂನ ಕೊನೆಯ ಪೋಸ್ಟ್​ನಲ್ಲಿ ಏನಿತ್ತು?

   

   
  First published: