Hridayam: ಮಗನ ‘ಹೃದಯಂ‘ ಚಿತ್ರದ ದೃಶ್ಯ ಹಂಚಿಕೊಂಡ ನಟ ಮೋಹನ್ ಲಾಲ್

Mohanlal: ನಟ ಮೋಹನ್ ಲಾಲ್ ಅವರು, ಸಾಮಾಜಿಕ ಮಾಧ್ಯಮದ ತಮ್ಮ ಅಧಿಕೃತ ಖಾತೆಗಳ ಮೂಲಕ ಹೃದಯಂ ಚಿತ್ರದ ದೃಶ್ಯದ ತುಣುಕನ್ನು ಹಂಚಿಕೊಂಡಿದ್ದಾರೆ. ಮೋಹನ್ ಲಾಲ್ ಹಂಚಿಕೊಂಡಿರುವ ಆ ವಿಡಿಯೋ ದೃಶ್ಯದಲ್ಲಿ ಮನಸ್ಸನ್ನು ತಟ್ಟುವ ಹಿತವಾದ ಸಂಗೀತ ಮತ್ತು ಜೋಡಿಗಳು ಅಗಲುವ ಸನ್ನಿವೇಶ ತೋರಿಸಲಾಗಿದೆ.

ಹೃದಯಂ/Hridayam

ಹೃದಯಂ/Hridayam

  • Share this:
    ಮಲೆಯಾಳಿಗಳು ಮತ್ತು ಇತರ ಮಲೆಯಾಳಂ ಚಿತ್ರಾಭಿಮಾನಿಗಳು ಅತ್ಯಂತ ನಿರೀಕ್ಷೆಯಿಂದ ಕಾಯುತ್ತಿರುವ ಮಾಲಿವುಡ್‍ನ (Mollywood) ಸಿನಿಮಾಗಳ ಪಟ್ಟಿಯಲ್ಲಿ, ಹೃದಯಂ (Hridayam) ಕೂಡ ಒಂದು. ರೋಮ್ಯಾಂಟಿಕ್ ಕಥಾ ಹಂದರವುಳ್ಳ ಈ ಸಿನಿಮಾದಲ್ಲಿ ಪ್ರಣವ್ ಮೋಹನ್‍ಲಾಲ್ (Pranav Mohanlal) ಮತ್ತು ಕಲ್ಯಾಣಿ ಪ್ರಿಯದರ್ಶನ್ (Kalyani Priyadarshini) ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಣವ್ ತಂದೆ ನಟ ಮೋಹನ್ ಲಾಲ್ (Mohanlal), ಈ ಚಿತ್ರದ ದೃಶ್ಯದ ತುಣುಕನ್ನು ಇಂದು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದಾರೆ.

    ನಟ ಮೋಹನ್ ಲಾಲ್ ಅವರು, ಸಾಮಾಜಿಕ ಮಾಧ್ಯಮದ ತಮ್ಮ ಅಧಿಕೃತ ಖಾತೆಗಳ ಮೂಲಕ ಹೃದಯಂ ಚಿತ್ರದ ದೃಶ್ಯದ ತುಣುಕನ್ನು ಹಂಚಿಕೊಂಡಿದ್ದಾರೆ. ಮೋಹನ್ ಲಾಲ್ ಹಂಚಿಕೊಂಡಿರುವ ಆ ವಿಡಿಯೋ ದೃಶ್ಯದಲ್ಲಿ ಮನಸ್ಸನ್ನು ತಟ್ಟುವ ಹಿತವಾದ ಸಂಗೀತ ಮತ್ತು ಜೋಡಿಗಳು ಅಗಲುವ ಸನ್ನಿವೇಶ ತೋರಿಸಲಾಗಿದೆ. ಈ ರೊಮ್ಯಾಂಟಿಕ್ ಸಿನಿಮಾ , ಅರುಣ್ (ಪ್ರಣವ್ ಮೋಹನ್ ಲಾಲ್ ) ಮತ್ತು ದರ್ಶನಾ (ದರ್ಶನ ರಾಜೇಂದ್ರನ್) ಎಂಬ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕಥೆಯನ್ನು ಆಧರಿಸಿದೆ.

    ಹೃದಯಂ ಸಿನಿಮಾ 2020ರಲ್ಲಿ ಬಿಡುಗಡೆ ಆಗಬೇಕಿತ್ತು, ಆದರೆ ಬಹಳಷ್ಟು ಸಿನಿಮಾಗಳಂತೆ, ಈ ಚಿತ್ರದ ಬಿಡುಗಡೆ ಕೂಡ ಕೊರೋನಾ ಸಾಂಕ್ರಾಮಿಕದ ಕಾರಣದಿಂದ ಹಲವಾರು ಬಾರಿ ಮುಂದೂಡಲ್ಪಟ್ಟಿತ್ತು. ಈ ಸಿನಿಮಾವನ್ನು 2022ರ ಜನವರಿ ತಿಂಗಳಲ್ಲಿ ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಮಾಡುವ ಆಶಯವನ್ನು ಚಿತ್ರ ತಂಡ ಹೊಂದಿದೆ, ಆದರೆ ಇನ್ನೂ ಸಿನಿಮಾ ಬಿಡುಗಡೆಯ ಅಧಿಕೃತ ದಿನಾಂಕ ನಿಗದಿ ಆಗಿಲ್ಲ.





    ಇದನ್ನು ಓದಿ:Power Star Puneeth Rajkumar; ರಾಜ್ಯಾದ್ಯಂತ 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪವರ್ ಸ್ಟಾರ್ ಗೆ ಶ್ರದ್ಧಾಂಜಲಿ

    ಹೃದಯಂ ಸಿನಿಮಾವನ್ನು, ಜನಪ್ರಿಯ ಚಿತ್ರ ನಿರ್ಮಾಪಕ ಮತ್ತು ಸಂಗೀತಗಾರ ವಿನೀತ್ ಶ್ರೀನಿವಾಸನ್ ನಿರ್ದೇಶಿಸಿದ್ದಾರೆ. ಒಂದು ಸುದೀರ್ಘ ಅಂತರದ ನಂತರ ವಿನೀತ್ ಶ್ರೀನಿವಾಸನ್ ನಿರ್ದೇಶನಕ್ಕೆ ಮತ್ತೆ ಮರಳುತ್ತಿದ್ದಾರೆ. ವಿನೀತ್ ಶ್ರೀನಿವಾಸನ್ ಮಲೆಯಾಳಂ ಚಿತ್ರದ ನಟರಲ್ಲಿ ಒಬ್ಬರಾಗಿದ್ದು, ಸಂಗೀತ ಸಂಯೋಜಕ, ಚಿತ್ರಕಥೆ ಬರಹಗಾರ ಮತ್ತು ಹಿನ್ನೆಲೆ ಧ್ವನಿ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕಲ್ಯಾಣಿ ಪ್ರಿಯದರ್ಶನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಶಾಖ್‌ ಸುಬ್ರಹ್ಮಣ್ಯಂ ಮತ್ತು ನೋಬಲ್ ಬಾಬು ಥಾಮಸ್ ನಿರ್ಮಿಸುತ್ತಿರುವ ಈ ಸಿನಿಮಾ ಮೇರಿಲ್ಯಾಂಡ್ ಸಿನಿಮಾಸ್ ಬ್ಯಾನರ್ ಆಡಿಯಲ್ಲಿ ನಿರ್ಮಾಣಗೊಳ್ಳುತ್ತಿದೆ.



    ಇದನ್ನು ಓದಿ: Shane Warne: ಅಶ್ಲೀಲ ಸಂದೇಶ ಕಳುಹಿಸಿ ಹೋಟೆಲ್ ಕೋಣೆಗೆ ಬಾ ಎಂದ ಖ್ಯಾತ ಕ್ರಿಕೆಟಿಗ!

    ಸಿನಿಮಾ ಅಭಿಮಾನಿಗಳಿಗೆ ಸಂಗೀತದ ರಸದೌತಣವನ್ನು ಉಣ ಬಡಿಸಲಿರುವ ಈ ಸಿನಿಮಾದಲ್ಲಿ ಒಟ್ಟು ಬರೋಬ್ಬರಿ 15 ಹಾಡುಗಳು ಇವೆ. ಆ ಹಾಡುಗಳಲ್ಲಿ ಹೆಚ್ಚಿನವುಗಳನ್ನು ಹೆಶಮ್ ಅಬ್ದುಲ್ ವಹಾಬ್, ಕೆ ಎಸ್ ಚಿತ್ರಾ, ಮೊಹಮದ್ ಮಕ್ಬೂಲ್ ಮನ್ಸೂರ್, ಸಚಿನ್ ವಾರಿಯರ್, ಜಾಬ್ ಕುರಿಯನ್, ಉನ್ನಿ ಮೆನನ್ ಮತ್ತು ಅರವಿಂದ್ ವೇಣುಗೋಪಾಲ್ ಸೇರಿದಂತೆ ಹಲವಾರು ಜನಪ್ರಿಯ ಗಾಯಕರು ಹಾಡಿದ್ದಾರೆ. ಮಲೆಯಾಳಂನ ಇಬ್ಬರು ಖ್ಯಾತ ನಟ ಮತ್ತು ನಟಿ ಈ ಸಿನಿಮಾದ ಹಾಡಿಗೆ ತಮ್ಮ ಧ್ವನಿಯನ್ನು ನೀಡಿರುವುದು ಒಂದು ವಿಶೇಷ. ಅವರು ಬೇರೆ ಯಾರೂ ಅಲ್ಲ, ನಟ ಪೃಥ್ವಿ ರಾಜ್ ಸುಕುಮಾರನ್ ಮತ್ತು ಈ ಚಿತ್ರದಲ್ಲಿ ಅಭಿನಯ ಕೂಡ ಮಾಡಿರುವ ನಟಿ ದರ್ಶನಾ ರಾಜೇಂದ್ರನ್. ಅವರಿಬ್ಬರು ಹೃದಯಂ ಚಿತ್ರದ ಎರಡು ಹಾಡುಗಳಿಗೆ ತಮ್ಮ ಧ್ವನಿ ನೀಡಿದ್ದಾರೆ.
    First published: