ಮತ್ತೆ ಒಂದಾದ ಬ್ಲಾಕ್ ಬಸ್ಟರ್ 'ದೃಶ್ಯಂ' ಜೋಡಿ: ಹೊಸ ಸಿನಿಮಾ ಘೋಷಣೆ

ಮೊಹನ್​ಲಾಲ್/Mohanlal

ಮೊಹನ್​ಲಾಲ್/Mohanlal

12th Man: 2013ರಲ್ಲಿ ತೆರೆಕಂಡ ಥ್ರಿಲ್ಲರ್​/ ಡ್ರಾಮಾ ಜಾನರ್​ನಲ್ಲಿ ಮೂಡಿ ಬಂದ ‘ದೃಶಂ’ ಸಿನಿಮಾ ತಂಡದೊಂದಿಗೆ ಲಾಲೆಟ್ಟನ್​ ಮತ್ತೊಮ್ಮೆ ಕೈ ಜೋಡಿಸಿದ್ದಾರೆ . ಹಾಗಾಗಿ ನಿರ್ದೇಶಕ ಜಿತು ಜೋಸೆಫ್​ ಮತ್ತೆ ಮೋಹನ್​​ಲಾಲ್​ ಅವರನ್ನು ತೆರೆ ಮೇಲೆ ವಿಭಿನ್ನವಾಗಿ ಕಾಣುವಂತೆ ಮಾಡಲು ಮುಂದಾಗಿದ್ದಾರೆ.

ಮುಂದೆ ಓದಿ ...
  • Share this:

ಮಾಲಿವುಡ್​ನಲ್ಲಿ ಲಾಲೆಟ್ಟನ್ ಎಂದೇ ಖ್ಯಾತಿ ಪಡೆದಿರುವ ನಟ ಮೋಹನ್​ಲಾಲ್​ ಇದೀಗ ಮುಂದಿನ ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್​ಪ್ರೈಸ್​ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ‘12th ಮ್ಯಾನ್’​ ಎಂಬ ಸಿನಿಮಾದಲ್ಲಿ ನಟಿಸುವುದಾಗಿ ಹೇಳಿಕೊಂಡಿದ್ದಾರೆ. 2013ರಲ್ಲಿ ತೆರೆಕಂಡ ಥ್ರಿಲ್ಲರ್​/ ಡ್ರಾಮಾ ಜಾನರ್​ನಲ್ಲಿ ಮೂಡಿ ಬಂದ ‘ದೃಶಂ’ ಸಿನಿಮಾ ತಂಡದೊಂದಿಗೆ ಲಾಲೆಟ್ಟನ್​ ಮತ್ತೊಮ್ಮೆ ಕೈ ಜೋಡಿಸಿದ್ದಾರೆ . ಹಾಗಾಗಿ ನಿರ್ದೇಶಕ ಜಿತು ಜೋಸೆಫ್​ ಮತ್ತೆ ಮೋಹನ್​​ಲಾಲ್​ ಅವರನ್ನು ತೆರೆ ಮೇಲೆ ವಿಭಿನ್ನವಾಗಿ ಕಾಣುವಂತೆ ಮಾಡಲು ಮುಂದಾಗಿದ್ದಾರೆ. ಇನ್ನು ಅಭಿಮಾನಿಗಳಂತೂ ಲಾಲೆಟ್ಟನ್ ಅವರ ಮುಂದಿನ ಸಿನಿಮಾ ಘೋಷಣೆ ಹಾಗೂ ಫಸ್ಟ್​ಲುಕ್ ಪೋಸ್ಟರ್ ನೋಡಿ ಸಂತಸಗೊಂಡಿದ್ದಾರೆ.


‘12th ಮ್ಯಾನ್’ ಫಸ್ಟ್​ಲುಕ್ ಪೋಸ್ಟರ್​ ಬಿಡುಗಡೆ ಮಾಡಿದ ಮೊಹನ್​ಲಾಲ್ ಅವರು ‘ನಿರ್ದೇಶಕ ಜಿತು ಜೋಸೆಫ್​ ಜತೆಗೆ ನನ್ನ ಮುಂದಿನ ಸಿನಿಮಾ 12th ಮ್ಯಾನ್ ಅನ್ನು ಘೋಷಿಸಲು ಸಂತಸವಾಗುತ್ತಿದೆ. ಆಶಿರ್ವಾದ್​ ಬ್ಯಾನರ್​ನಡಿಯಲ್ಲಿ ಆ್ಯಂಟನಿ ಪೆರಂಬವೂರ್​ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬರಲಿದೆ ಎಂದಿದ್ದಾರೆ. ಬ್ಲಾಕ್​ ಬಸ್ಟರ್​ ಥ್ರಿಲ್ಲರ್​ ‘ದೃಶ್ಯಂ’ ಮತ್ತು ’ದೃಶ್ಯಂ 2’ ಸಿನಿಮಾ ತಂಡದೊಂದಿಗೆ ಮತ್ತೆ ಒಂದಾಗುತ್ತಿರುವುದು ಸಂತಸವಾಗುತ್ತಿದೆ’ ಎಂದಿದ್ದಾರೆ.


12th ಮ್ಯಾನ್ ಫಸ್ಟ್​ ಲುಕ್​ ಪೋಸ್ಟರ್​ ಕಂಡಾಗ ಇದು ಪಕ್ಕಾ ಥ್ರಿಲ್ಲರ್​ ಸಿನಿಮಾದಂತೆ ಕಾಣುತ್ತದೆ. ಚಿತ್ರದ ಟ್ಯಾಗ್​ಲೈನ್​ ‘ನೆರಳುಗಳನ್ನು ಅನಾವರಣಗೊಳಿಸುತ್ತದೆ’ ಎಂದು ಬರೆಯಲಾಗಿದೆ.  ಪೋಸ್ಟರ್​ನಲ್ಲಿ ಮೋಹನ್​ಲಾಲ್ ಅವರು ಮಂಜು, ಗುಡ್ಡಗಾಡು ಆವರಿಸಿರುವ ಮನೆಯೊಂದರ ಕಡೆಗೆ ನಡೆದುಕೊಂಡು ಹೋಗುವ ಚಿತ್ರಣ ಕಾಣುತ್ತದೆ. ವಿ.ಎಸ್​ ವಿನಾಯಕ್​ ಈ ಸಿನಿಮಾ ಎಡಿಟ್​ ಮಾಡಲಿದ್ದು, ಅನಿಲ್ ಜಾನ್ಸನ್​ ಬ್ಯಾಗ್​ರೌಂಡ್​ ಸ್ಕೋರ್​ ನೀಡಲಿದ್ದಾರೆ.


ನಿರ್ದೆಶಕ ಜಿತು ಜೋಸೆಫ್ ಜತೆಗೆ ಮೋಹನ್​ಲಾಲ್​ ಅವರ 3ನೇ ಸಿನಿಮಾ ಇದಾಗಿದೆ. ಮುಂದಿನ ‘ರಾಮ್​’ ಸಿನಿಮಾದಲ್ಲೂ ಮೋಹನ್​ಲಾಲ್​  ಕಾಣಿಸಿಕೊಳ್ಳಲಿದ್ದಾರೆ. ತ್ರಿಶಾ, ಅದಿಲ್​ ಹುಸೈನ್​ ಮತ್ತು ಇಂದ್ರಜಿತ್​ ಈ ಚಿತ್ರದಲ್ಲಿ ನಿರ್ಣಾಯಕ ಪಾತ್ರ ಮಾಡುತ್ತಿದ್ದಾರೆ. ಇದು ಆ್ಯಕ್ಷನ್​ ಥ್ರಿಲ್ಲರ್​ ಸಿನಿಮಾ ಆಗಿದ್ದು, 2020ರಲ್ಲಿ ಶೂಟಿಂಗ್​ ಆರಂಭಗೊಂಡಿದೆ, ಆದರೆ ಕೊರೊನಾದಿಂದಾಗಿ ಸ್ಥಗಿತ ಮಾಡಲಾಗಿತ್ತು. ಇದೀಗ ಈ ವರ್ಷ ರಾಮ್ ಸಿನಿಮಾ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.ಮೊಹನ್​ಲಾಲ್​ ಅವರು ನಟ ಪೃಥ್ವಿರಾಜ್​ ಸುಕುಮಾರನ್​ ಅವರೊಂದಿಗೆ ಎರಡನೇ ನಿದೇಶನದ ಸಿನಿಮಾಗೆ ಸಹಿ ಹಾಕಿದ್ದಾರೆ. ಈ ಸಿನಿಮಾದ ಹೆಸರು ಬ್ರೊಡ್ಯಾಡಿ ಎಂದಾಗಿದೆ. ಫ್ಯಾಮಿಲಿ ಡ್ರಾಮ ಜಾಣರ್​ನಲ್ಲಿ ಮೂಡಿಬರುವ ಸಿನಿಮಾ ಇದಾಗಿದ್ದು, ಕಲ್ಯಾಣಿ ಪ್ರಿಯದರ್ಶಿನಿ, ಮೀನಾ, ಸೌಬಿನ್​ ಮುಖ್ಯ ಪಾತ್ರ ನಿರ್ವಹಿಸಲಿದ್ದಾರೆ. ಈ ಸಿನಿಮಾ ಕೂಡ ಆಶಿರ್ವಾದ ಸಿನಿಮಾ ಬ್ಯಾನರ್​ನಡಿ ಮೂಡಿ ಬರಲಿದೆ.

top videos
    First published: