Salman Khan: ದಕ್ಷಿಣ ಭಾರತದ ಈ ಚಿತ್ರದ ರಿಮೇಕ್​ನಲ್ಲಿ ನಾನು ನಟಿಸ್ತಿಲ್ಲ ಎಂದ ಸಲ್ಮಾನ್​ ಖಾನ್!

Mihan Lal: ಮೋಹನ್​ ಲಾಲ್​ ಅಭಿನಯದ 'ಲೂಸಿಫರ್'​ ಸಿನಿಮಾ ಕಳೆದ ವರ್ಷ ತೆರೆಗೆ ಬಂದು ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈ ಚಿತ್ರವನ್ನು ನೋಡಿ ಇಷ್ಟಪಟ್ಟಿದ್ದ ಚಿರಂಜೀವಿ, ಈ ಸಿನಿಮಾದ ತೆಲುಗು ರಿಮೇಕ್​ನಲ್ಲಿ ನಟಿಸುತ್ತಿದ್ದಾರೆ.

ಸಲ್ಮಾನ್ ಖಾನ್

ಸಲ್ಮಾನ್ ಖಾನ್

  • Share this:
    ಮಲಯಾಳಂನಲ್ಲಿ ತೆರೆಕಂಡು ಹಿಟ್​ ಆಗಿದ್ದ ಮೋಹನ್​ ಲಾಲ್​ ನಟನೆಯ 'ಲೂಸಿಫರ್'​ ಚಿತ್ರ ತೆಲುಗಿ​ಗೆ ರಿಮೇಕ್​ ಆಗುತ್ತಿದೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ, ಈ ವಿಚಾರ ಸುಳ್ಳು ಎಂದು ಸಲ್ಮಾನ್​ ಖಾನ್​ ಹೇಳಿದ್ದಾರೆ.

    ಮೋಹನ್​ ಲಾಲ್​ ಅಭಿನಯದ 'ಲೂಸಿಫರ್'​ ಸಿನಿಮಾ ಕಳೆದ ವರ್ಷ ತೆರೆಗೆ ಬಂದು ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈ ಚಿತ್ರವನ್ನು ನೋಡಿ ಇಷ್ಟಪಟ್ಟಿದ್ದ ಚಿರಂಜೀವಿ, ಈ ಸಿನಿಮಾದ ತೆಲುಗು ರಿಮೇಕ್​ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್​ ಹೀರೋ ಸಲ್ಮಾನ್​ ಖಾನ್​ ಕೂಡ ಇರಲಿದ್ದಾರೆ ಎನ್ನಲಾಗಿತ್ತು. ಆದರೆ, ಇದು ಸುಳ್ಳು ಎಂದು ಸಲ್ಮಾನ್​ ಖಾನ್​ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ,

    ಈಗಾಗಲೇ ಸಲ್ಮಾನ್​ ಖಾನ್​ ಸಾಕಷ್ಟು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಅವರು ಬೇರೆ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲವಂತೆ. ಹೀಗಾಗಿ ಸಲ್ಲು ಮಾಡುತ್ತಿರುವ ಪಾತ್ರದಲ್ಲಿ ಬೇರೆ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಕೂಡ ಮೂಡಿದೆ.

    ಇದನ್ನೂ ಓದಿ: ಮೆಗಾ ಪ್ರಾಜೆಕ್ಟ್: ಒಂದೇ ಚಿತ್ರದಲ್ಲಿ ಚಿರಂಜೀವಿ-ಸಲ್ಮಾನ್ ಖಾನ್?

    ಡ್ರಗ್​ ವಿಚಾರದ ಮೇಲೆ 'ಲೂಸಿಫರ್'​ ಸಿನಿಮಾ ನಿರ್ಮಾಣಗೊಂಡಿದೆ. ಈ ಸಿನಿಮಾ ಸೂಪರ್ ಡೂಪರ್​ ಹಿಟ್​ ಆಗಿತ್ತು. ವಿಜಯ್​ ಕೃಷ್ಣ ಆಚಾರ್ಯ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಲಾಕ್​ಡೌನ್​ ಇರುವ ಹಿನ್ನೆಲೆಯಲ್ಲಿ ಚಿತ್ರೀಕರಣ ಸಂಪೂರ್ಣವಾಗಿ ನಿಂತಿದೆ. ಲಾಕ್​ಡೌನ್ ಪೂರ್ಣಗೊಂಡ ನಂತರ ಚಿತ್ರೀಕರಣಕ್ಕೆ ಚುರುಕು ಮುಟ್ಟಿಸುವ ಆಲೋಚನೆ ಚಿತ್ರತಂಡದ್ದು.
    First published: