Govinda Govinda: ಗೋವಿಂದ ಗೋವಿಂದ ಎನ್ನುತ್ತಿದ್ದಾರೆ ಸುಮಂತ್: 4 ವರ್ಷಗಳ ಬಳಿಕ ಕನ್ನಡಕ್ಕೆ ಮರಳಿದ ದಿಲ್ವಾಲ

Sumanth Shailendra: ಸುಮಂತ್ ಅವರ ಹೋಮ್ ಬ್ಯಾನರ್ ಆಗಿರುವ ಶೈಲೇಂದ್ರ ಪ್ರೊಡಕ್ಷನ್ಸ್ ಹಾಗೂ ಎಲ್ ಜಿ ಕ್ರಿಯೇಷನ್ಸ್, ರವಿ ಗರಣಿ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ಗೋವಿಂದ ಗೋವಿಂದ ಸಿನಿಮಾ ನಿರ್ಮಿಸಿದ್ದಾರೆ.  ಸದ್ಯ ಮಾಡರ್ನ್ ಸುಪ್ರಭಾತ ಎಂಬ ವಿಭಿನ್ನ ಶೈಲಿಯ ಸಾಂಗ್ ರಿಲೀಸ್ ಮಾಡಿರುವ ಚಿತ್ರತಂಡ, ಸಿನಿಮಾ ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಗೋವಿಂದ ಗೋವಿಂದ ಸಿನಿಮಾದ ಪೋಸ್ಟರ್​

ಗೋವಿಂದ ಗೋವಿಂದ ಸಿನಿಮಾದ ಪೋಸ್ಟರ್​

  • Share this:
ಆಟ ಚಿತ್ರದ ಮೂಲಕ 2011ರಲ್ಲಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಸುಮಂತ್ ಶೈಲೇಂದ್ರ ಬಾಬು, ನಂತರ ದಿಲ್‍ವಾಲಾ, ತಿರುಪತಿ ಎಕ್ಸ್‍ಪ್ರೆಸ್, ಬೆತ್ತನಗೆರೆ, ಭಲೇ ಜೋಡಿ, ಲೀ ಚಿತ್ರಗಳಲ್ಲಿ ನಟಿಸಿದ್ದರು. ಆದರೆ ಆ ಬಳಿಕ ಟಾಲಿವುಡ್‍ಗೆ ಹಾರಿದ ಸುಮಂತ್ 2018ರಲ್ಲಿ ಬ್ರ್ಯಾಂಡ್ ಬಾಬು ಚಿತ್ರದಲ್ಲಿ ನಟಿಸಿದ್ದರು. ಕಳೆದ ವರ್ಷ ಮಿಸ್ ಇಂಡಿಯಾ ಎಂಬ ತೆಲುಗು ಮಲ್ಟಿಸ್ಟಾರ್ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು ಸುಮಂತ್. ಇಂತಹ ಸುಮಂತ್ ಶೈಲೇಂದ್ರ ಬಾಬು ಈಗ ಲೀ ಚಿತ್ರ ರಿಲೀಸ್ ಆಗಿ 4 ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ರೀ - ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಗೋವಿಂದ ಗೋವಿಂದ ಎನ್ನುತ್ತಿದ್ದಾರೆ. ಹೌದು, ಸುಮಂತ್ ನಾಯಕನಾಗಿರುವ  ಲೆಟೆಸ್ಟ್ ಸಿನಿಮಾ ಗೋವಿಂದ ಗೋವಿಂದ. ಇದೊಂದು ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು ತಿಲಕ್ ಆ್ಯಕ್ಷನ್ ಕಟ್ ಹೇಳಿದ್ದಾರೆ.  

ಸುಮಂತ್ ಅವರ ಹೋಮ್ ಬ್ಯಾನರ್ ಆಗಿರುವ ಶೈಲೇಂದ್ರ ಪ್ರೊಡಕ್ಷನ್ಸ್ ಹಾಗೂ ಎಲ್ ಜಿ ಕ್ರಿಯೇಷನ್ಸ್, ರವಿ ಗರಣಿ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ಗೋವಿಂದ ಗೋವಿಂದ ಸಿನಿಮಾ ನಿರ್ಮಿಸಿದ್ದಾರೆ.  ಸದ್ಯ ಮಾಡರ್ನ್ ಸುಪ್ರಭಾತ ಎಂಬ ವಿಭಿನ್ನ ಶೈಲಿಯ ಸಾಂಗ್ ರಿಲೀಸ್ ಮಾಡಿರುವ ಚಿತ್ರತಂಡ, ಸಿನಿಮಾ ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ.ಮಾಡರ್ನ್ ಸುಪ್ರಭಾತ ಹಾಡಿಗೆ ದೇವ್ ರಂಗಭೂಮಿ ಸಾಹಿತ್ಯ ಬರೆದಿದ್ದು, ಖ್ಯಾತ ಜಾನಪದ ಗಾಯಕ ಕಡಬಗೆರೆ ಮುನಿರಾಜು ಕಂಠದಾನ ಮಾಡಿದ್ದಾರೆ. ಹಿತನ್ ಹಾಸನ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡಿಗೆ ಸಂಗೀತ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದೇವ್ ರಂಗಭೂಮಿಯವರೇ ಗೋವಿಂದ ಗೋವಿಂದ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.


ಗೋವಿಂದ ಗೋವಿಂದ ಚಿತ್ರಕ್ಕೆ ಕೆ ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ಚಿತ್ರಕ್ಕೆ ರವಿಚಂದ್ರನ್ ಅವರ ಸಂಕಲನವಿದೆ. ಪುಟ್ಟಸ್ವಾಮಿ ಅವರು ಕಲಾ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದ್ದು, ಥ್ರಿಲ್ಲರ್ ಮಂಜು ಅವರ ನಿರ್ದೇಶನದಲ್ಲಿ ಚಿತ್ರದ ಫೈಟ್ಸ್ ಮೂಡಿಬಂದಿವೆ.ಸುಮಂತ್ ಶೈಲೇಂದ್ರ ಬಾಬು ನಾಯಕನಾಗಿರುವ ಈ ಚಿತ್ರದಲ್ಲಿ ಕವಿತಾ ಗೌಡ, ಭಾವನಾ ಮೆನನ್, ರೂಪೇಶ್ ಶೆಟ್ಟಿ, ಪವನ್ ಕುಮಾರ್, ಹಾಸ್ಯ ನಟ ವಿಜಯ್ ಚೆಂಡೂರ್, ಅಚ್ಯುತ್ ಕುಮಾರ್, ವಿ. ಮನೋಹರ್, ಕೆ. ಮಂಜು, ಕಡ್ಡಿಪುಡಿ ಚಂದ್ರು, ಪದ್ಮಾ ವಾಸಂತಿ, ಶ್ರೀನಿವಾಸ ಪ್ರಭು, ಗೋವಿಂದೇ ಗೌಡ, ಯಮುನಾ ಶ್ರೀನಿಧಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಒಟ್ಟಾರೆ ಗೋವಿಂದ ಗೋವಿಂದ ಇದೇ ಏಪ್ರಿಲ್ 16ರಂದು ರಿಲೀಸ್ ಆಗಲಿದೆ.
Published by:Anitha E
First published: