news18-kannada Updated:October 20, 2020, 7:14 PM IST
ಆ್ಯಡಂ ಪಾಷಾ
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಅದೇ ಕೇಸ್ಗೆ ಸಂಬಂಧಿಸಿ ಖ್ಯಾತ ಮಾಡೆಲ್ ಹಾಗೂ ಬಿಗ್ ಬಾಸ್ ಖ್ಯಾತಿಯ ಆ್ಯಡಂ ಪಾಷಾರನ್ನು ಪೊಲೀಸರು ಬಂಧಿಸಿದ್ದಾರೆ.
ಡ್ರಗ್ಸ್ ಕೇಸಿಗೆ ಸಂಬಂಧಿಸಿ ಆ್ಯಡಂ ಪಾಷಾರನ್ನು ಎಸ್ಸಿಬಿ ಅಧಿಕಾರಿಗಳು ಕರೆಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಅನಿಕಾಳಿಂದ ಡ್ರಗ್ಸ್ ಖರೀದಿ ಮಾಡಿ ಸೇವಿಸುತ್ತಿದ್ದಳು ಎಂಬದು ವಿಚಾರಣೆ ವೇಳೆ ತಿಳಿದುಬಂದಿದೆ. ಈ ಕಾರಣಕ್ಕೆ ಪೊಲೀಸರು ಆ್ಯಂಡ್ಯಂ ಪಾಷಾರನ್ನು ಬಂಧಿಸಿದ್ದಾರೆ.
ಈಗಾಗಲೇ ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ಅನಿಕಾಳನ್ನು ಡ್ರಗ್ಸ್ ಕೇಸಿನ ಆರೋಪದಡಿ ಬಂಧಿಸಲಾಗಿದೆ. ಇದೀಗ ಮಾಡೆಲ್ ಆ್ಯಡಂ ಪಾಷಾರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಯಾಂಡಲ್ವುಡ್ಗೆ ಅಂಟಿದ ಈ ಡ್ರಗ್ಸ್ ಎಂಬ ಮಹಾಪಿಡುಗು ಬಗೆದಷ್ಟು ಆಳವಾಗುತ್ತಾ ಹೋಗುತ್ತಿದೆ. ಚಿತ್ರ ನಟಿಯರು ಇದರ ಬಲೆಗೆ ಬಿದ್ದಿರುವುದು ಸಾಮಾನ್ಯ ಜನರ ಅಚ್ಚರಿಗೆ ಕಾರಣವಾಗಿದೆ.
ಈ ಮೊದಲು ಆ್ಯಡಂ ಪಾಷಾ ಅವರು ಬಂಧಿತ ಅನಿಕಾಳ ಬಗ್ಗೆ ಹೇಳಿಕೆ ನೀಡಿದ್ದರು. ನಾನು ಅನಿಕಾ ಸ್ನೇಹಿತರು. ಆಕೆಯ ಜೊತೆಗೆ ಸ್ನೇಹವಿದೆ. ಆದರೆ ಡ್ರಗ್ಸ್ ಲಿಂಕ್ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದರು. ಇನ್ನು ಆ್ಯಡಂ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 6 ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದರು. ಪ್ರೇಕ್ಷಕರನ್ನು ಮನರಂಜಿಸಿದ್ದರು. ಬಿಗ್ ಮನೆಯೊಳಕ್ಕೆ ಕನ್ನಡ ಕಳಿಯುತ್ತಾ, ಡ್ಯಾನ್ಸ್ ಮಾಡಿದ್ದರು.
ಹೊಸ ಸಿನಿಮಾಗೆ ನಾಯಕನಾಗಿ ವಸಿಷ್ಠ ಸಿಂಹ; ಚಿತ್ರದ ಟೈಟಲ್ ಏನು ಗೊತ್ತಾ?
Published by:
Harshith AS
First published:
October 20, 2020, 7:00 PM IST