HOME » NEWS » Entertainment » MODEL AND PYATE HUDGIR HALLI LIFE SEASON 4 WINNER MEBIENA MICHEAL DIED IN A CAR ACCIDENT AT MANDYA RMD

Mebina Michel: ಕಾರು ಅಪಘಾತದಲ್ಲಿ ಮೃತಪಟ್ಟ ಪ್ಯಾಟೆ ಹುಡುಗಿ ಹಳ್ಳಿ ಲೈಫ್-4 ವಿನ್ನರ್ ಮೆಬೀನಾ ಮೈಕಲ್

Mebiena Micheal Car Accident: ಮೆಬೀನಾ ಖಾಸಗಿ ವಾಹಿನಿ ನಡೆಸುತ್ತಿದ್ದ ಪ್ಯಾಟೆ ಹುಡುಗಿ ಹಳ್ಳಿ ಲೈಫ್​ ರಿಯಾಲಿಟಿ ನಾಲ್ಕನೇ ಸೀಜನ್​ನ ವಿನ್ನರ್​ ಆಗಿದ್ದರು. ಇವರು ಮಾಡೆಲಿಂಗ್​ ಕೂಡ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲೂ ಮೆಬೀನ್​ ಸಕ್ರಿಯರಾಗಿದ್ದರು.

news18-kannada
Updated:May 27, 2020, 8:25 AM IST
Mebina Michel: ಕಾರು ಅಪಘಾತದಲ್ಲಿ ಮೃತಪಟ್ಟ ಪ್ಯಾಟೆ ಹುಡುಗಿ ಹಳ್ಳಿ ಲೈಫ್-4 ವಿನ್ನರ್ ಮೆಬೀನಾ ಮೈಕಲ್
ಮೆಬಿನಾ ಮೈಕಲ್ (ಮೇ 26, 2020): ಮೈಕೆಲ್ ಮಧುವಿನ ಮರಣದ ಸುದ್ದಿ ಹಸಿಯಾಗಿರುವಾಗಲೇ ಸ್ಯಾಂಡಲ್​ವುಡ್​ನಿಂದ ಮತ್ತೊಂದು ಸಾವಿನ ಸುದ್ದಿ ಹೊರಬಿದ್ದಿತ್ತು. ಯುವ ಪ್ರತಿಭೆ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ವಿನ್ನರ್ ಮೆಬಿನಾ ಮೈಕಲ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು.
  • Share this:
ಮಂಡ್ಯ (ಮೇ 27): ಪ್ಯಾಟೆ ಹುಡುಗಿ ಹಳ್ಳಿ ಲೈಫ್​ ಖ್ಯಾತಿಯ ಮೆಬೀನಾ ಮೈಕಲ್ ಮಂಡ್ಯ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಿಹಳ್ಳಿ ಬಳಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಅಪಘಾತ ಸಂಭವಿಸಿದೆ. ಮೆಬೀನಾ ಬೆಂಗಳೂರಿನಿಂದ ಸೋಮವಾರ ಪೇಟೆಯತ್ತ ಕಾರಿನಲ್ಲಿ ತೆರಳುತ್ತಿದ್ದರು. ದೇವಿಹಳ್ಳಿ ಬಳಿ ಇರುವ ತಿರುವಿನಲ್ಲಿ ಕಾರು ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೆಬೀನಾ ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ.

ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಇದ್ದ ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ. ಅವರನ್ನು ಆದಿ ಚುಂಚನಗಿತಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಲಾಕ್​ಡೌನ್​ನಿಂದ ಅವಕಾಶಗಳೇ ಇಲ್ಲದೆ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್​ ನಟಿ

ಮೆಬೀನಾ ಖಾಸಗಿ ವಾಹಿನಿ ನಡೆಸುತ್ತಿದ್ದ ಪ್ಯಾಟೆ ಹುಡುಗಿ ಹಳ್ಳಿ ಲೈಫ್​ ರಿಯಾಲಿಟಿ ನಾಲ್ಕನೇ ಸೀಜನ್​ನ ವಿನ್ನರ್​ ಆಗಿದ್ದರು. ಇವರು ಮಾಡೆಲಿಂಗ್​ ಕೂಡ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲೂ ಮೆಬೀನ್​ ಸಕ್ರಿಯರಾಗಿದ್ದರು.
First published: May 27, 2020, 8:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories