ತಾನೊಬ್ಬ ದೊಡ್ಡ ನಟಿಯಾಗಬೇಕು ಎನ್ನುವ ಸಾವಿರಾರು ಕನಸು (Dream) ಗಳನ್ನು ಹೊತ್ತ ರೂಪದರ್ಶಿ(Model) ಹಾಗೂ ನಟಿ (Actress) , ಕಾಸರಗೋಡು ಮೂಲದ ಶಹನಾ (Shahana) ತಮ್ಮ ಅಪಾರ್ಟ್ಮೆಂಟ್ (Apartment) ನಲ್ಲಿ ನಿಗೂಢ ರೀತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಕೆಯ ಪತಿ (Husband) ಯನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ನಟಿ ಕನ್ನಡದ ಲಾಕ್ಡೌನ್ (Lockdown) ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು. ಇದೀಗ ಯುವ ನಟಿ ಕಿಟಕಿ ಸರಳಿಗೆ ನೇಣು ಬಿಗುದುಕೊಂಡು ಸೂಸೈಡ್ (Suicide) ಮಾಡಿಕೊಂಡಿರುವುದು ಸಾಕಷ್ಟ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ತಾನೊಬ್ಬಳು ದೊಡ್ಡ ನಟಿಯಾಗಬೇಕೆಂದು ಕನಸು ಕಟ್ಟಿಕೊಂಡಿದ್ದಾಕೆ ಇದ್ದಕಿದ್ದ ಹಾಗೇ ಈ ರೀತಿ ತನ್ನ ಜೀವನವನ್ನು ಮುಗಿಸಿಕೊಂಡಿರುವುದು ನಿಜಕ್ಕೂ ದುರಂತ. 20 ವರ್ಷ ಶಹನಾ ಈ ರೀತಿ ಸಾವನ್ನಪ್ಪುತ್ತಾಳೆ ಎಂದು ಅವರ ಕುಟುಂಬಸ್ಥರು ಅಂದುಕೊಂಡಿರಲಿಲ್ಲ.
ಕಿಟಕಿ ಗ್ರಿಲ್ಗೆ ನೇಣು ಬಿಗಿದುಕೊಂಡ ನಟಿ!
ಗುರುವಾರ ರಾತ್ರಿ 11.30ರ ಸುಮಾರಿಗೆ ಪರಂಬಿಲ್ ಬಜಾರ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಕಿಟಕಿಯ ಗ್ರಿಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವ ನಟಿ ಶವ ಪತ್ತೆಯಾಗಿದೆ. ಶಹನಾ ಕಾಸರಗೋಡು ಮೂಲದವರಾಗಿದ್ದಾರೆ. ಅವರ ಸಾವಿನ ಬಗ್ಗೆ ಆಕೆಯ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಆಕೆಯ ಪತಿ ಸಜ್ಜದ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.
ಅಳಿಯನ ವಿರುದ್ಧ ದೂರು ಕೊಟ್ಟ ಶಹನಾ ತಾಯಿ
ಮಗಳು ಶಹನಾ ಶವ ಈ ಸ್ಥಿತಿಯಲ್ಲಿ ಪತ್ತೆಯಾಗಿರೋದು ಅವರ ತಾಯಿಗೆ ಆಘಾತ ಉಂಟುಮಾಡಿದೆ. ಅಳಿಯನ ವಿರುದ್ಧ ಶಹನಾ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಗಳಿಗೆ ಅವಳ ಪತಿ ಸಾಜನ್ ಹಿಂಸೆ ನೀಡುತ್ತಿದ್ದ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಆತನೆ ಮಗಳ ಸಾವಿಗೆ ಕಾರಣ ಎಂದು ದೂರು ನೀಡಿದ್ದಾರೆ. ದಾಂಪತ್ಯ ಕಲಹದಿಂದ ಶಹನಾ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಶಹನಾ ಪತಿ ಸಾಜನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಮಹೇಶ್ ಸಿನಿಮಾ ನೋಡಿ ಅಯ್ಯೋ, ಹಿಂಗಾಗೋಯ್ತಲ್ಲ ಎಂದ ಫ್ಯಾನ್ಸ್! ಮೊದಲ ದಿನವೇ ಇಷ್ಟೊಂದು ಹಣನಾ?
18ನೇ ವಯಸ್ಸಿಗೆ ಮದುವೆಯಾಗಿದ್ದ ಶಹನಾ!
ಕೇರಳದ ಕೋಯಿಕ್ಕೋಡ್ ಪರಂಬಿಲ್ ಬಜಾರ್ನಲ್ಲಿ ಶಹನಾ ವಾಸವಿದ್ದರು. ಸಾಜದ್ ಹಾಗೂ ಶಹನಾ ಸುಮಾರು ಒಂದೂವರೆ ವರ್ಷಗಳ ಹಿಂದೆ ಮದುವೆ ಆಗಿದ್ದರು.18ನೇ ವಯಸ್ಸಿಗೆ ಮದುವೆಯಾಗಿದ್ದ ಶಹನಾಗೆ ಗಂಡ ಸಾಜನ್ ಟಾರ್ಚರ್ ನೀಡುತ್ತಿದ್ದನಂತೆ. ಇಬ್ಬರು ಮದುವೆ ಆದಮೇಲೆ ಸುಖವಾಗಿರಲಿಲ್ಲ. ಹಣ ನೀಡುವಂತೆ ಸದಾ ಸಾಜದ್ ಶಹನಾಗೆ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಈ ವಿಚಾರ ಅವರ ಅಕ್ಕಪಕ್ಕದ ಮನೆಯವರಿಗೂ ತಿಳಿದಿತ್ತು.
ಇದನ್ನೂ ಓದಿ: ಆರ್‌ಆರ್‌ಆರ್ ಸಿನಿಮಾ ನೋಡಿದ್ದೀರಾ? ಹಾಗಿದ್ರೆ ಈ ಪ್ರಶ್ನೆಗಳಿಗೆ ಸರಿ ಉತ್ತರ ಬರೆಯಿರಿ!
ಸಿನಿಮಾದಲ್ಲಿ ನಟಿಸ್ಬೇಡ ಅಂತ ಟಾರ್ಚರ್!
ಶಹನಾಗೆ, ಪತಿ ಸಾಜದ್ ಸಿನಿಮಾದಲ್ಲಿ ನಟಿಸಬೇಡ ಎಂದು ಟಾರ್ಚರ್ ಕೊಡುತ್ತಿದ್ದನಂತೆ. ಅಷ್ಟೇ ಅಲ್ಲದೇ ಪ್ರತಿದಿನ ಕುಡಿದು ಬಂದು ಹಿಂಸೆ ನೀಡುತ್ತಿದ್ದನಂತೆ. ಶಹನಾ ಸಂಬಂಧಿಕರು ಯಾರು ಮನೆಗೆ ಬಾರದಂತೆ ಕಿರುಕುಳ ಕೊಡುತ್ತಿದ್ದನಂತೆ. ಇದೇ ಕಾರಣಕ್ಕೆ ಶಹನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಗಂಡನೇ ಇವಳನ್ನು ಕೊಂದು ಈ ರೀತಿ ನೇಣು ಬೀಗಿದ ಸ್ಥಿತಿಯಲ್ಲಿ ಹಾಕಿದ್ದಾನೆ ಅಂತ ಮತ್ತೆ ಕೆಲವರು ಹೇಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ