ಲವ್, ಸೆಕ್ಸ್​, ದೋಖಾ : ನಟ ಮಿಥುನ್ ಚಕ್ರವರ್ತಿ ಪುತ್ರನ ವಿರುದ್ಧ ಎಫ್ಐಆರ್‌

news18
Updated:July 3, 2018, 4:15 PM IST
ಲವ್, ಸೆಕ್ಸ್​, ದೋಖಾ : ನಟ ಮಿಥುನ್ ಚಕ್ರವರ್ತಿ ಪುತ್ರನ ವಿರುದ್ಧ ಎಫ್ಐಆರ್‌
news18
Updated: July 3, 2018, 4:15 PM IST
-ನ್ಯೂಸ್ 18 ಕನ್ನಡ

ಬಾಲಿವುಡ್‌ ನಟ ಮಿಥುನ್‌ ಚಕ್ರವರ್ತಿ ಅವರ ಪತ್ನಿ ಯೋಗಿತಾ ಬಾಲಿ ಮತ್ತು ಪುತ್ರ ಮಹಾಕ್ಷಯ್‌ ವಿರುದ್ಧ ಅತ್ಯಾಚಾರ‌, ವಂಚನೆ ಮತ್ತು ಬಲವಂತದ ಗರ್ಭಪಾತದ ಆರೋಪದ ಮೇಲೆ ಎಫ್ಐಆರ್‌ ದಾಖಲಿಸುವಂತೆ ದಿಲ್ಲಿ ನ್ಯಾಯಾಲಯ ಸೋಮವಾರ ಆದೇಶಿಸಿದೆ.

ಮಹಾಕ್ಷಯ್‌ ಭೋಜ್​ಪುರಿ ನಟಿಯೊಬ್ಬರನ್ನು ಪ್ರೀತಿಸಿ ವಂಚಿಸಿದ ಪ್ರಕರಣಕ್ಕಾಗಿ ದಿಲ್ಲಿಯ ರೋಹಿಣಿ ನ್ಯಾಯಾಲಯ ಪೊಲೀಸರಿಗೆ ಎಫ್ಐಆರ್‌ ದಾಖಲಿಸುವಂತೆ ಸೂಚಿಸಿದೆ. ಮಿಥುನ್ ಚಕ್ರವರ್ತಿ ಪುತ್ರ ಮದುವೆ ಆಗುವ ಭರವಸೆ ನೀಡಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಅಲ್ಲದೆ ತಾನು ಗರ್ಭವತಿಯಾದ ಸಮಯದಲ್ಲಿ ನನ್ನ ಅನುಮತಿಯಿಲ್ಲದೆ ಗರ್ಭಪಾತ ಮಾಡಿಸಿದ್ದಾರೆ ಎಂದು ಭೋಜ್​ಪುರಿ ನಟಿ ಆರೋಪಿಸಿದ್ದರು.

ಮಗನ ಈ ಕೃತ್ಯಕ್ಕೆ ತಾಯಿ ಯೋಗಿತಾ ಬಾಲಿ ಕೂಡ ಸಹಕರಿಸಿರುವುದಾಗಿ ಆರೋಪದಲ್ಲಿ ತಿಳಿಸಲಾಗಿದೆ. ಆದರೆ, ಈ ಬಗ್ಗೆ ಮಹಾಕ್ಷಯ್‌ ಅಥವಾ ಯೋಗಿತಾ ಬಾಲಿ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

'ಜಿಮ್ಮಿ', 'ರಾಕಿ' ಸೇರಿದಂತೆ ಬಾಲಿವುಡ್​ನಲ್ಲಿ 8 ಸಿನಿಮಾಗಳಲ್ಲಿ ಅಭಿನಯಿಸಿರುವ ನಟ ಮಹಾಕ್ಷಯ್‌ ಮತ್ತು ನಿರ್ದೇಶಕ ಸುಭಾಷ್ ಶರ್ಮಾಳ ಮಗಳು ಮದಾಲಸಾ ಶರ್ಮಾ ವಿವಾಹ ಜುಲೈ 7 ರಂದು ನಡೆಸಲು ನಿಶ್ಚಯಿಸಲಾಗಿತ್ತು. ಇದರ ಬೆನ್ನಲ್ಲೇ ಪುತ್ರ ಮಹಾಕ್ಷಯ್‌ ವಿರುದ್ಧ ಆರೋಪ ಕೇಳಿ ಬಂದಿರುವುದು ಹಿರಿಯ ನಟ ಮಿಥುನ್ ಚಕ್ರವರ್ತಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
First published:July 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ