ಮಿಷ್ಟಿ ಮುಖರ್ಜೀ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ: ಸಾವಿಗೆ ಕಾರಣವಾಯ್ತಾ ಕೀಟೋ ಡಯಟ್?

ಮಿಷ್ಟಿ ಮುಖರ್ಜೀ, ಮೈ ಕೃಷ್ಣ ಹೂ, ಲೈಫ್ ಕೀ ತೋ ಲಗ್ ಗಯೀ ಸೇರಿದಂತೆ ಕೆಲ ಹಿಂದಿ ಹಾಗೂ ಬೆಂಗಾಲಿ ಸಿನಿಮಾಗಳಲ್ಲಿ ನಟಿಸಿದ್ದರು. ಜೊತೆಗೆ ಹಲವು ವಿಡಿಯೋ ಆಲ್ಬಮ್ ಸಾಂಗ್​ಗಳಲ್ಲೂ ಗ್ಲಾಮರಸ್ ಆಗಿ ಮಿಂಚಿದ್ದರು.

ಮಿಷ್ಟಿ ಮುಖರ್ಜೀ

ಮಿಷ್ಟಿ ಮುಖರ್ಜೀ

  • Share this:
ನಟಿಮಣಿಯರು ತೂಕ ಇಳಿಸಿಕೊಂಡು ಗ್ಲಾಮರ್ ಗೊಂಬೆಗಳಂತೆ ಕಾಣಲು ನಾನಾ ರೀತಿಯ ಡಯಟ್ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ನಟಿಗೆ ಇಂತಹ ಸ್ಟ್ರಿಕ್ಟ್ ಡಯಟ್ ಪ್ರಾಣಕ್ಕೆ ಕುತ್ತು ತಂದಿದೆ. ಹೌದು, ಕೆಲ ಬಾಲಿವುಡ್ ಹಾಗೂ ಬೆಂಗಾಲಿ ಸಿನಿಮಾಗಳಲ್ಲಿ ವಿಡಿಯೋ ಆಲ್ಬಮ್ ಸಾಂಗ್​ಗಳಲ್ಲಿ ಮಿಂಚಿದ್ದ ಮಿಷ್ಟಿ ಮುಖರ್ಜೀ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಮಿಷ್ಟಿ ಮುಖರ್ಜೀ, ಮೈ ಕೃಷ್ಣ ಹೂ, ಲೈಫ್ ಕೀ ತೋ ಲಗ್ ಗಯೀ ಸೇರಿದಂತೆ ಕೆಲ ಹಿಂದಿ ಹಾಗೂ ಬೆಂಗಾಲಿ ಸಿನಿಮಾಗಳಲ್ಲಿ ನಟಿಸಿದ್ದರು. ಜೊತೆಗೆ ಹಲವು ವಿಡಿಯೋ ಆಲ್ಬಮ್ ಸಾಂಗ್​ಗಳಲ್ಲೂ ಗ್ಲಾಮರಸ್ ಆಗಿ ಮಿಂಚಿದ್ದರು.

ಆದರೆ, ಕೆಲ ವರ್ಷಗಳಿಂದೀಚೆಗೆ ತೂಕ ಹೆಚ್ಚಿಸಿಕೊಂಡು, ಗ್ಲಾಮರ್ ಲೋಕದಿಂದಲೂ ದೂರವಾಗಿಬಿಟ್ಟಿದ್ದರು. ಹೀಗಾಗಿಯೇ ದೇಹದ ತೂಕ ಇಳಿಸಿಕೊಂಡು ಮತ್ತೆ ಗ್ಲಾಮರ್ ಗೊಂಬೆಯಂತೆ ಮಿಂಚಬೇಕು ಎಂದು ತೀರ್ಮಾನಿಸಿ ತುಂಬಾ ಕಟ್ಟುನಿಟ್ಟಾಗಿ ಡಯಟ್ ಮಾಡುತ್ತಿದ್ದರು. ಆದರೆ ಅವರು ಮಾಡುತ್ತಿದ್ದ ಕೀಟೋ ಡಯಟ್ ಅವರ ಪ್ರಾಣಕ್ಕೆ ಕುತ್ತು ತಂದಿದೆ ಎನ್ನಲಾಗಿದೆ.

ಕಳೆದ ಕೆಲ ತಿಂಗಳಿನಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಅದರ ನಡುವೆಯೇ ಕಟ್ಟುನಿಟ್ಟು ಕೀಟೋ ಡಯಟ್ ಪ್ರಾರಂಭಿಸಿದ್ದರು. ಅದರಿಂದಾಗಿ ಕಿಡ್ನಿಗಳ ಮೇಲೆ ತೀವ್ರ ಒತ್ತಡ ಬಿದ್ದು, ಎರಡೂ ಕಿಡ್ನೀಗಳೂ ಫೇಲೂರ್ ಆಗಿ, ಶುಕ್ರವಾರ ತಡರಾತ್ರಿ ವಿಧಿವಶರಾಗಿದ್ದಾರೆ ಎನ್ನಲಾಗಿದೆ.

ಮೂಲತಃ ಪಶ್ಚಿಮ ಬಂಗಾಳದವರಾಗಿದ್ದರೂ ನಿನ್ನೆ ಬೆಳಗ್ಗೆ ಮಿಷ್ಟಿ ತಂದೆ, ತಾಯಿ ಮತ್ತು ಸಹೋದರ, ಅವರ ಅಂತಿಮ ಕಾರ್ಯವನ್ನು ಬೆಂಗಳೂರಿನಲ್ಲೇ ನೆರವೇರಿಸಿದ್ದಾರೆ.

ಬೆಳ್ಳಿತೆರೆ ಮೇಲೆ ಭಾರತದ ಮೊದಲ ಸೂಪರ್​ ಹೀರೋ: ಮೂರು ಭಾಗಗಳಲ್ಲಿ ಬರಲಿದೆ ಶಕ್ತಿಮಾನ್ ಸಿನಿಮಾ!

ಅತ್ಯಂತ ಕಷ್ಟಕರವಾದ, ಅಷ್ಟೇ ಅಪಾಯಕಾರಿ ಡಯಟ್​ಗಳಲ್ಲಿ ಕೀಟೋ ಡಯಟ್ ಕೂಡ ಒಂದು. ಡಯಾಬಿಟೀಸ್, ಕಿಡ್ನಿ ಸಮಸ್ಯೆ, ಹೈ ಬಿಪಿ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಕೀಟೋ ಡಯಟ್ ಮಾಡಬಾರದು. ಆದರೆ ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಹಾಗೂ ದೇಹದ ಆರೋಗ್ಯಕ್ಕಿಂತ ಮುಖದ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡುವ ಭರದಲ್ಲಿ ಆರೋಗ್ಯ ಸಮಸ್ಯೆಗಳನ್ನು ಕಡೆಗಣಿಸಿ, ಕೀಟೋ ಡಯಟ್ ಮಾಡುವವರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.

ಸುಮಾರು ಒಂದು ತಿಂಗಳ ಕಾಲ ದಿನಕ್ಕೆ ಕೇವಲ ಒಂದು ಹೊತ್ತು ಊಟ ಮಾಡುವುದು, ಹಾಗೂ ಹೆಚ್ಚೆಚ್ಚು ಕೊಬ್ಬಿನಂಶ ಮಾತ್ರ ಇರುವ ಆಹಾರವನ್ನೇ ಸೇವಿಸುವುದು, ಹೀಗೆ ಕೀಟೋ ಡಯಟ್ನಲ್ಲೂ ಹಲವು ವಿಧಗಳಿವೆ. ಆದರೆ ಪರಿಣಿತಿ ಹೊಂದಿರುವ ಡಯಟೀಶಿಯನ್ ಅಥವಾ ವೈದ್ಯರ ಬಳಿ ಸಂಪರ್ಕಿಸಿಯೇ ಈ ಡಯಟ್ ಮಾಡುವುದು ಸೂಕ್ತ.
Published by:Vinay Bhat
First published: