ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಂದ ಬಯಲಾಯ್ತು ಹಿರಿಯ ಕಲಾವಿದ ದತ್ತಣ್ಣ ಜೀವನ ರಹಸ್ಯ!

Mission Mangal Trailer: ‘ಮಿಷನ್​ ಮಂಗಳ್​’ ಚಿತ್ರದ ಟ್ರೈಲರ್​ ಗುರುವಾರ ಬಿಡುಗಡೆಯಾಗಿದೆ. ಜಗನ್​ ಶಕ್ತಿ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್​, ದತ್ತಣ್ಣ ವಿದ್ಯಾ ಬಾಲನ್​, ಸೋನಾಕ್ಷಿ ಸಿನ್ಹಾ, ತಾಪ್ಸೀ ಪನ್ನು, ನಿತ್ಯಾ ಮೆನನ್​ ಮೊದಲಾದವರು ಬಣ್ಣ ಹಚ್ಚಿದ್ದಾರೆ.

Rajesh Duggumane | news18
Updated:July 19, 2019, 2:20 PM IST
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಂದ ಬಯಲಾಯ್ತು ಹಿರಿಯ ಕಲಾವಿದ ದತ್ತಣ್ಣ ಜೀವನ ರಹಸ್ಯ!
ದತ್ತಣ್ಣ-ಅಕ್ಷಯ್​ ಕುಮಾರ್​
  • News18
  • Last Updated: July 19, 2019, 2:20 PM IST
  • Share this:
ಹಿರಿಯ ಕಲಾವಿದ ದತ್ತಣ್ಣ ಚಿತ್ರರಂಗಕ್ಕೆ ಕಾಲಿಟ್ಟಿದ್ದು 45ನೇ ವರ್ಷದಲ್ಲಿ. ಸಾಕಷ್ಟು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈಗ ಅವರು ಬಾಲಿವುಡ್​ಗೂ ಕಾಲಿಟ್ಟಿದ್ದಾರೆ. ಅಕ್ಷಯ್​ ಕುಮಾರ್​ ಅಭಿನಯದ ‘ಮಿಷನ್​ ಮಂಗಳ್’ ಸಿನಿಮಾದಲ್ಲಿ ದತ್ತಣ್ಣ ಅಭಿನಯಿಸಿದ್ದಾರೆ. ಈ ಚಿತ್ರದ ಟ್ರೈಲರ್​ ಬಿಡುಗಡೆ ಆಗಿದೆ. ಟ್ರೈಲರ್​ ರಿಲೀಸ್​ ಕಾರ್ಯಕ್ರಮದಲ್ಲಿ ದತ್ತಣ್ಣ ಮೊದಲು ಏನು ಕೆಲಸ ಮಾಡುತ್ತಿದ್ದೆ ಎಂಬ ಬಗ್ಗೆ ಹೇಳಿಕೊಂಡಿದ್ದಾರೆ.

ದತ್ತಣ್ಣ ಈ ಮೊದಲು ವಾಯುಪಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರಂತೆ. “ನಾನು ರಂಗಭೂಮಿ ಹಿನ್ನೆಲೆಯಿಂದ ಬಂದವನು. ವಾಯುಪಡೆಯಲ್ಲಿ 23 ವರ್ಷ ಹಾಗೂ ಎಚ್​ಎಎಲ್​ನಲ್ಲಿ 9  ವರ್ಷ ಕಾರ್ಯನಿರ್ವಹಿಸಿದ್ದೆ. ಹಾಗಾಗಿ ಚಿತ್ರರಂಗಕ್ಕೆ ಬರುವುದು ತಡವಾಯಿತು.  ಏರ್​ಫೋರ್ಸ್​​ನಲ್ಲಿರುವಾಗ ಉಪಗ್ರಹವನ್ನು ನಾನು ಮುಟ್ಟಿದ್ದೆ. ನನ್ನ ಅನೇಕ ಗೆಳೆಯರು ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ,” ಎಂದರು ದತ್ತಣ್ಣ.(ಕೃಪೆ: ಡೈಲಿ ಕನ್ನಡ)

‘ಮಿಷನ್​ ಮಂಗಳ್​’ ಚಿತ್ರದ ಟ್ರೈಲರ್​ ಗುರುವಾರ ಬಿಡುಗಡೆಯಾಗಿದೆ. ಜಗನ್​ ಶಕ್ತಿ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್​, ದತ್ತಣ್ಣ ವಿದ್ಯಾ ಬಾಲನ್​, ಸೋನಾಕ್ಷಿ ಸಿನ್ಹಾ, ತಾಪ್ಸೀ ಪನ್ನು, ನಿತ್ಯಾ ಮೆನನ್​ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆ.15ರಂದು ಸಿನಿಮಾ ತೆರೆಗೆ ಬರುತ್ತಿದೆ.

First published:July 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ