Mission Mangal Trailer: ಮಿಷನ್​ ಮಂಗಲ್​ ಟ್ರೈಲರ್​ನಲ್ಲಿ ಅಶ್ಲೀಲ​ ದೃಶ್ಯ; ತಾಪ್ಸೀ ವಿರುದ್ಧ ಗರಂ ಆದ ಅಭಿಮಾನಿಗಳು!

Taapsee Pannu: ಈ ದೃಶ್ಯವನ್ನು ಹಾಸ್ಯದ ರೂಪದಲ್ಲಿಯೇ ತೋರಿಸಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ತಾಪ್ಸೀ ಪನ್ನು ಇಂಥ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಬೆಲೆಯನ್ನು ಕಳೆದುಕೊಳ್ಳುತ್ತಿದ್ಧಾರೆ ಎಂದು ಅನೇಕರು ಬರೆದುಕೊಂಡಿದ್ದಾರೆ

Rajesh Duggumane | news18
Updated:August 13, 2019, 4:06 PM IST
Mission Mangal Trailer: ಮಿಷನ್​ ಮಂಗಲ್​ ಟ್ರೈಲರ್​ನಲ್ಲಿ ಅಶ್ಲೀಲ​ ದೃಶ್ಯ; ತಾಪ್ಸೀ ವಿರುದ್ಧ ಗರಂ ಆದ ಅಭಿಮಾನಿಗಳು!
ತಾಪ್ಸೀ ಪನ್ನು
Rajesh Duggumane | news18
Updated: August 13, 2019, 4:06 PM IST
ಮಿಷನ್​ ಮಂಗಲ್​ ಚಿತ್ರದ ಎರಡನೇ ಟ್ರೈಲರ್​ ರಿಲೀಸ್​ ಆಗಿದೆ. ಮೊದಲ ಟ್ರೈಲರ್​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಅಭಿಮಾನಿಗಳು ಈ ಟ್ರೈಲರ್​ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ! ಇದಕ್ಕೆ ಕಾರಣ ಈ ವಿಡಿಯೋದಲ್ಲಿ ಬುರವ ದೃಶ್ಯ!

ತಾಪ್ಸೀ ಪನ್ನು ಕಾರಿನಲ್ಲಿ ಚಲಿಸುತ್ತಿರುತ್ತಾರೆ. ಈ ವೇಳೆ ಗೇರ್​ ಎಂದು ತಿಳಿದು ತಾಪ್ಸಿ ಪಕ್ಕದ ಸೀಟ್​ನಲ್ಲಿ ಕುಳಿತವನ ಮರ್ಮಾಂಗಕ್ಕೆ ಕೈ ಹಾಕಿ ಬಿಡುತ್ತಾರೆ! ಈ ದೃಶ್ಯವನ್ನು ಹಾಸ್ಯದ ರೂಪದಲ್ಲಿಯೇ ತೋರಿಸಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಈಭಾರೀ ಆಕ್ರೋಶ ವ್ಯಕ್ತವಾಗಿದೆ.

ನಮ್ಮ ದೇಶದವರು ಮಾಡಿದ ಸಾಧನೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ‘ಮಿಷನ್​ ಮಂಗಲ್’​ ಸಿನಿಮಾ ಮಾಡುತ್ತಿದೆ. ಹೀಗಿದ್ದರೂ, ಇಂಥ ಡಬಲ್​ ಮೀನಿಂಗ್​ ಸಂದೇಶ ಸಾರುವ ಜೋಕ್​ಗಳನ್ನು ಸೇರಿಸುವ ಅವಶ್ಯಕತೆ ಇತ್ತೇ? ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ತಾಪ್ಸೀ ಪನ್ನು ಇಂಥ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಬೆಲೆಯನ್ನು ಕಳೆದುಕೊಳ್ಳುತ್ತಿದ್ಧಾರೆ ಎಂದು ಅನೇಕರು ಬರೆದುಕೊಂಡಿದ್ದಾರೆ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅನೇಕರು ಈ ಸಿನಿಮಾವನ್ನು ನೋಡುವುದಿಲ್ಲ ಎಂದು ಘೋಷಿಸಿದ್ದಾರೆ. ಹಾಗಾಗಿ ಚಿತ್ರದ ಎರಡನೇ ಟ್ರೈಲರ್​ ಸಿನಿಮಾ ನಿರೀಕ್ಷೆಗೆ ಮೈಲೇಜ್​ ನೀಡಿದ್ದಕ್ಕಿಂತ ಚಿತ್ರಕ್ಕೆ ಮೈನಸ್​ ಆಗಿದೆ.

‘ಮಿಷನ್​ ಮಂಗಳ್​’ ಚಿತ್ರದ ಟ್ರೈಲರ್​ ಗುರುವಾರ ಬಿಡುಗಡೆಯಾಗಿದೆ. ಜಗನ್​ ಶಕ್ತಿ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್​, ದತ್ತಣ್ಣ ವಿದ್ಯಾ ಬಾಲನ್​, ಸೋನಾಕ್ಷಿ ಸಿನ್ಹಾ, ತಾಪ್ಸೀ ಪನ್ನು, ನಿತ್ಯಾ ಮೆನನ್​ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆ.15ರಂದು ಸಿನಿಮಾ ತೆರೆಗೆ ಬರುತ್ತಿದೆ.

ಇದನ್ನೂ ಓದಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಂದ ಬಯಲಾಯ್ತು ಹಿರಿಯ ಕಲಾವಿದ ದತ್ತಣ್ಣ ಜೀವನ ರಹಸ್ಯ!

First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...