ಬಾಲಿವುಡ್ ನಲ್ಲಿ ಮತ್ತೊಂದು ದೇಶಭಕ್ತಿಯ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ನಟ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಮಿಷನ್ ಮಜ್ನು (Mission Majnu) ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಕುತೂಹಲ ಮೂಡಿಸಿದೆ. ನಟ ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಟ್ವಿಟ್ಟರ್ನಲ್ಲಿ ಟ್ರೇಲರ್ ಅನ್ನು ಹಂಚಿಕೊಂಡಿದ್ದಾರೆ.
ಮಿಶನ್ ಮಜ್ನು ಟ್ರೈಲರ್ ಪೋಸ್ಟ್ ಜೊತೆಗೆ “ಜೋ ಖುದ್ ಸೆ ಪೆಹ್ಲೆ ದೇಶ್ ಕೆ ಬಾರೆ ಮೇ ಸೋಚೆ, ವಹೀ ಹೇ #ದೇಶಕೇಲಿಯೇಮಜ್ನು. ಐಸಾ ಹೀ ಏಕ್ ಮಜ್ನು ಹೈ ಅಮನ್ದೀಪ್ ಸಿಂಗ್.. ಜಿಸ್ನೆ ಇಂಡಿಯಾ ಕೆ ಸಬ್ಸೆ ಖತರ್ನಾಕ್ ಮಿಷನ್ ಕೆಲಿಯೆ ಅಪ್ನಿ ಜಾನ್ ಕಿ ಬಾಜಿ ಲಗಾ ದಿ... ನೈಜ ಘಟನೆಗಳಿಂದ ಪ್ರೇರಿತವಾದ ಸ್ಪೈ ಥ್ರಿಲ್ಲರ್ ಮಿಷನ್ ಮಜ್ನು ವೀಕ್ಷಿಸಿ" ಎಂಬುದಾಗಿ ನಟ ಸಿದ್ಧಾರ್ಥ್ ಬರೆದುಕೊಂಡಿದ್ದಾರೆ.
ಮಿಶನ್ ಮಜ್ನು ಟ್ರೈಲರ್ನಲ್ಲಿ ಏನಿದೆ?
ಪಾಕಿಸ್ತಾನವು ಅಕ್ರಮವಾಗಿ ಪರಮಾಣು ಬಾಂಬ್ಗಳನ್ನು ತಯಾರಿಸುತ್ತಿದೆ ಎಂಬುದನ್ನು ಬಹಿರಂಗಪಡಿಸುವ ಹಿನ್ನೆಲೆ ಧ್ವನಿಯೊಂದಿಗೆ ಟ್ರೈಲರ್ ಪ್ರಾರಂಭವಾಗುತ್ತದೆ. ಇದು ನಂತರ ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನು ರಾ (RAW) ಏಜೆಂಟ್ ಆಗಿ ಪರಿಚಯಿಸುತ್ತದೆ. ಅದರ ಬಗ್ಗೆ ವಿವರಗಳನ್ನು ಪಡೆಯುವ ಮತ್ತು ಅದನ್ನು ಮಟ್ಟಹಾಕುವವರ ಅಗತ್ಯವಿದೆ ಎಂದಾಗ ಸಿದ್ಧಾರ್ಥ್ ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಾರೆ.
ಸಿದ್ಧಾರ್ಥ್ಗೆ ಜೋಡಿಯಾದ ರಶ್ಮಿಕಾ ಮಂದಣ್ಣ
ಸಿದ್ಧಾರ್ಥ್ ಪಾಕಿಸ್ತಾನದಲ್ಲಿ ಕೆಲವೊಮ್ಮೆ ಟೈಲರ್ ಆಗಿ, ಮತ್ತೊಮ್ಮೆ ಪ್ಲಂಬರ್ ಆಗಿ ರಹಸ್ಯ ಕಾರ್ಯಾಚರಣೆ ಮಾಡುತ್ತಾರೆ ಎಂಬುದು ಟ್ರೈಲರ್ ನಲ್ಲಿ ಕಾಣುತ್ತದೆ. ಆದಾಗ್ಯೂ, ಆಲಿಯಾ ಭಟ್ ಅವರ ರಾಝಿಯನ್ನು ನೆನಪಿಸುವಂತೆ ಸಿದ್ಧಾರ್ಥ್ ಮಲ್ಹೋತ್ರಾ ಅವರು ಆ ದೇಶದ ಮಹಿಳೆಯನ್ನು ಮದುವೆಯಾಗುವ ಮೂಲಕ ಪಾಕಿಸ್ತಾನಕ್ಕೆ ಹೋಗುತ್ತಾರೆ. ಇಲ್ಲಿ ಸಿದ್ಧಾರ್ಥ್ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.
ಆಕ್ಷನ್ ಪ್ರಿಯರಿಗೆ ಈ ಚಿತ್ರ ಒಂದು ಟ್ರೀಟ್ ಆಗಲಿದೆ ಎಂಬ ಭರವಸೆಯನ್ನು ಟ್ರೈಲರ್ ನೀಡಿದೆ. ಪಾಕಿಸ್ತಾನದ ಸೇನಾ ಸಿಬ್ಬಂದಿಯೊಂದಿಗೆ ಹೋರಾಡುವುದರಿಂದ ಹಿಡಿದು ಚಲಿಸುವ ರೈಲಿನಿಂದ ಜಿಗಿಯುವವರೆಗೆ, ಟ್ರೈಲರ್ ಮಲ್ಹೋತ್ರಾ ಅವರ ಆಕ್ಷನ್ ಪಾರ್ಟ್ ಅನ್ನು ಅನಾವರಣಗೊಳಿಸುತ್ತದೆ.
ಟ್ರೇಲರ್ ಹಂಚಿಕೊಂಡ ನಟ
ಚಿತ್ರದ ಟ್ರೈಲರ್ ಸಾಕಷ್ಟು ಥ್ರಿಲ್, ಆಕ್ಷನ್ ಮತ್ತು ದೇಶಭಕ್ತಿಯನ್ನು ತೋರಿಸುತ್ತದೆ. ಹಿನ್ನಲೆಯಲ್ಲಿ ಪ್ಲೇ ಆಗುವ ಹಾಡು, 'ಮಾಟಿ ಕೋ ಮಾ ಕೆಹತೇ ಹೈ' ಆ ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಇನ್ನು ಚಿತ್ರದ ಕುರಿತು ಮಾತನಾಡಿರುವ ಸಿದ್ಧಾರ್ಥ್ ಮಲ್ಹೋತ್ರಾ, "ಮಿಷನ್ ಮಜ್ನು ಬಗ್ಗೆ ನಾನು ತುಂಬಾ ಉತ್ಸುಕನಾಗಿದ್ದೇನೆ. ಏಕೆಂದರೆ ತಾನು ಗೂಢಚಾರನಾಗಿ ಮೊದಲ ಬಾರಿಗೆ ನಟಿಸಿದ್ದೇನೆ.
Jo khud se pehle desh ke baare mein soche, wahi hain #DeshKeLiyeMajnu 🇮🇳
Aisa hi ek Majnu hai Amandeep Singh jisne India ke sabse khatarnak mission ke liye apni jaan ki baazi laga di 🫡
Watch Mission Majnu, a spy thriller inspired by true events.
pic.twitter.com/9jtDe0Q56S
— Sidharth Malhotra (@SidMalhotra) January 9, 2023
ಇನ್ನು, ಮಿಷನ್ ಮಜ್ನುವನ್ನು ರೋನಿ ಸ್ಕ್ರೂವಾಲಾ, ಅಮರ್ ಬುಟಾಲಾ ಮತ್ತು ಗರಿಮಾ ಮೆಹ್ತಾ ನಿರ್ಮಿಸಿದ್ದಾರೆ. ಪರ್ವೀಜ್ ಶೇಖ್, ಅಸೀಮ್ ಅರೋರಾ ಮತ್ತು ಸುಮಿತ್ ಬತೇಜಾ ಕಥೆ ಹೆಣೆದಿದ್ದಾರೆ.
ಸ್ಪೈ ಥ್ರಿಲ್ಲರ್ ಚಿತ್ರವನ್ನು ಶಂತನು ಬಾಗ್ಚಿ ನಿರ್ದೇಶಿಸಿದ್ದಾರೆ. ಅಂದಹಾಗೆ ಮಿಶನ್ ಮಜ್ನು ಚಿತ್ರವು ಜನವರಿ 20 ರಂದು OTT ಪ್ಲಾಟ್ಫಾರ್ಮ್ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ. ಇನ್ನು ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ ಸಿದ್ಧಾರ್ಥ್ ಮಲ್ಹೋತ್ರಾ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಿಶನ್ ಮಜ್ನು ಅವರ ನಿರೀಕ್ಷೆಯ ಚಿತ್ರವಾಗಿದೆ.
ಇನ್ನು ಅವರು ದಿಶಾ ಪಠಾನಿ ಹಾಗೂ ರಾಶಿ ಖನ್ನಾ ಜೊತೆಗೆ ಯೋಧ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಯೋಧ ಚಿತ್ರವನ್ನು ಕರಣ್ ಜೋಹರ್ ನಿರ್ದೇಶಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ