• Home
  • »
  • News
  • »
  • entertainment
  • »
  • Shree Saini: 2ನೇ ಬಾರಿ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಶ್ರೀ ಸೈನಿ, ವಿಶ್ವ ಸುಂದರಿ 2021ರ ರನ್ನರ್ ಅಪ್ ಈಗ ಹೇಗಿದ್ದಾರೆ?

Shree Saini: 2ನೇ ಬಾರಿ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಶ್ರೀ ಸೈನಿ, ವಿಶ್ವ ಸುಂದರಿ 2021ರ ರನ್ನರ್ ಅಪ್ ಈಗ ಹೇಗಿದ್ದಾರೆ?

ಶ್ರೀ ಸೈನಿ

ಶ್ರೀ ಸೈನಿ

ವಿಶ್ವ ಸುಂದರಿ (Miss World) 2021ರ ಮೊದಲ ರನ್ನರ್ ಅಪ್ ಶ್ರೀ ಸೈನಿ (Shree Saini) ಹೊಸ ಪೇಸ್‌ಮೇಕರ್ (New Pacemaker) ಇಂಪ್ಲಾಂಟ್‌ಗಾಗಿ ಹೃದಯ ಶಸ್ತ್ರಚಿಕಿತ್ಸೆ (Heart Operation) ಗೆ ಒಳಗಾಗಿದ್ದಾರೆ.

  • Share this:

ಅಪರೂಪದ ಹೃದಯ ಕಾಯಿಲೆ (Heart Dieses) ಯಿಂದ ಜನಿಸಿದ್ದ ವಿಶ್ವ ಸುಂದರಿ (Miss World) 2021ರ ಮೊದಲ ರನ್ನರ್ ಅಪ್ ಶ್ರೀ ಸೈನಿ (Shree Saini) ಹೊಸ ಪೇಸ್‌ಮೇಕರ್ (New Pacemaker) ಇಂಪ್ಲಾಂಟ್‌ಗಾಗಿ ಹೃದಯ ಶಸ್ತ್ರಚಿಕಿತ್ಸೆ (Heart Operation) ಗೆ ಒಳಗಾಗಿದ್ದಾರೆ. ಸದ್ಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು, ಆಸ್ಪತ್ರೆಯಲ್ಲಿ ಸೈನಿ ವಿಶ್ರಾಂತಿ (Rest) ಪಡೆಯುತ್ತಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದ ಸೈನಿ ಶಸ್ತ್ರಚಿಕಿತ್ಸೆಯ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ದೀರ್ಘ ಟಿಪ್ಪಣಿ ಮೂಲಕ ಪ್ರಕ್ರಿಯೆಯನ್ನು ವಿವರಿಸಿದ ಸೈನಿ,"ನನ್ನ ಹೃದಯ ಶಸ್ತ್ರಚಿಕಿತ್ಸೆ ಸರಾಗವಾಗಿ ನಡೆದಿದೆ, ವೈದ್ಯರು ನನಗೆ ಹೃದಯದಲ್ಲಿ ಹೊಚ್ಚ ಹೊಸ ಪೇಸ್‌ಮೇಕರ್ ಅನ್ನು ಅಳವಡಿಸಿದ್ದಾರೆ. ನನ್ನ ದೇಹವು ಸಂಪೂರ್ಣ ಹೊಚ್ಚ ಹೊಸ ಸಾಧನಕ್ಕೆ ಒಗ್ಗಿಕೊಳ್ಳುತ್ತಿದೆ" ಎಂದಿದ್ದಾರೆ.


"ನನ್ನ ಎದೆಯಲ್ಲಿರುವ ಪೇಸ್‌ಮೇಕರ್ ಅನ್ನು ನಾನು ಅನುಭವಿಸುತ್ತೇದ್ದೇನೆ. ಸದ್ಯ ದೇವರ ದಯೆಯಿಂದ ನಾನು ಚೇತರಿಸಿಕೊಳ್ಳುತ್ತಿದ್ದೇನೆ ಮತ್ತು ಗುಣವಾಗುತ್ತಿದ್ದೇನೆ, ”ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದು ಕೊಂಡಿದ್ದಾರೆ.


ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ


ಜೊತೆಗೆ ಅದೇ ಪೋಸ್ಟ್‌ನಲ್ಲಿ ಶಸ್ತ್ರಚಿಕಿತ್ಞೆಯನ್ನು ಯಶಸ್ವಿಗೊಳಿಸಿದ ವೈದ್ಯರಿಗೆ, ನರ್ಸ್‌ಗಳಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ. ಹಾಗು ಮೆಸೇಜ್‌, ಫೋನ್‌ ಕರೆಗಳಿಂದ ವಿಚಾರಿಸಿಕೊಂಡ ಕುಟುಂಬ, ಸ್ನೇಹಿತರಿಗೂ ತಮ್ಮ ಪೋಸ್ಟ್‌ ಮೂಲಕ ಧನ್ಯವಾದ ತಿಳಿಸಿದ್ದಾರೆ.


\ಈ ಮೊದಲೇ ಹೇಳಿದಂತೆ ಸೈನಿ ಅಪರೂಪದ ಹೃದಯ ಕಾಯಿಲೆಯಿಂದ ಜನಿಸಿದ್ದರು. ಈಕೆಗೆ ಅವರ 12ನೇ ವಯಸ್ಸಿನಲ್ಲಿಯೇ ಶಾಶ್ವತ ಪೇಸ್‌ಮೇಕರ್ ಅನ್ನು ಅಳವಡಿಸಲಾಗಿದೆ. ಸೈನಿ ಕೂಡ ಖುದ್ದು ಈ ವಿಷಯವನ್ನು ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.


12ರ ಹರೆಯದಲ್ಲಿಯೇ ಹೃದಯ ಶಸ್ತ್ರಚಿಕಿತ್ಸೆ


“ನಾನು ಹೃದಯ ಸಂಬಂಧಿ ಕಾಯಿಲೆಯಿಂದ ಜನಿಸಿದವಳು. ನನ್ನ ಹೃದಯದ ಮೇಲಿನ ಮತ್ತು ಕೆಳಗಿನ ಕೋಣೆಗಳು ಪರಸ್ಪರ ಸಂವಹನ ನಡೆಸುತ್ತಿರಲಿಲ್ಲ. ನನ್ನ ಹೃದಯದ ಬ್ಲಾಕ್ ನನ್ನ ಹೃದಯ ಬಡಿತವನ್ನು ಕಡಿಮೆ ಮಾಡಲು ಕಾರಣವಾಯಿತು ಮತ್ತು ಇದರಿಂದ ನನ್ನ ಆರೋಗ್ಯ ಸ್ಥಿತಿ ಸಂಪೂರ್ಣ ಹದಗೆಡುತ್ತಿತ್ತು. ನಾನು 12 ವರ್ಷದವಳಾಗಿದ್ದಾಗ, ನನ್ನನ್ನು ಕಾಡುತ್ತಿರುವ ರೋಗವನ್ನು ನಿರ್ಣಯ ಮಾಡಲಾಯಿತು.  ಪೇಸ್‌ಮೇಕರ್ ಇಂಪ್ಲಾಂಟ್‌ಗಾಗಿ ತುರ್ತು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದೆ. ಪೇಸ್‌ಮೇಕರ್ ಅಳವಡಿಕೆಯಿಂದ ನನ್ನ ಹೃದಯ ಸಾಮಾನ್ಯ ವೇಗದಲ್ಲಿ ಬಡಿದುಕೊಳ್ಳುತ್ತದೆ” ಎಂದು ಸೈನಿ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ತನ್ನ ಅಭಿಮಾನಿಗಳೊಂದಿಗೆ ತಮ್ಮ ಆರೋಗ್ಯ ಸ್ಥಿತಿ ಬಗ್ಗೆ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ಅಪ್ಪು ಅವರ ಇದೊಂದು ಡೈಲಾಗ್​ ಎಂಥವರ ಕಣ್ಣಲ್ಲೂ ನೀರು ತರಿಸುತ್ತೆ, ಪುನೀತ್ ರಾಜ್​ಕುಮಾರ್​​ 'ವಿಶ್ವಮಾನವ'!


8 ಪೇಸ್‌ಮೇಕರ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಸೈನಿ


"ನನ್ನ ಪ್ರಸ್ತುತ ಪೇಸ್‌ಮೇಕರ್ ಬ್ಯಾಟರಿಗಳು ಕೆಲಸ ಮಾಡುತ್ತಿಲ್ಲ. ನನ್ನ ಜೀವಿತಾವಧಿಯಲ್ಲಿ, ನಾನು ಒಟ್ಟು 8 ಪೇಸ್‌ಮೇಕರ್ ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ” ಎಂದು ಶಸ್ತ್ರಚಿಕಿತ್ಸೆಯ ಮೊದಲು ಹಂಚಿಕೊಂಡ ಪೋಸ್ಟ್‌ನಲ್ಲಿ ಬರೆದಿದ್ದಾರೆ.


ಏಳು-ಬೀಳುಗಳ ನಂತರವೂ ಸಾಧನೆ ಮಾಡಿದ ಸೈನಿ


ಶ್ರೀ ಸೈನಿ ಪಂಜಾಬ್‌ನ ಲುಧಿಯಾನ ಮೂಲದವರು. ಆಕೆ ಕೇವಲ 5 ವರ್ಷದವಳಿದ್ದಾಗ ಆಕೆಯ ಕುಟುಂಬವು ವಾಷಿಂಗ್ಟನ್ ಡಿಸಿಗೆ ಸ್ಥಳಾಂತರಗೊಂಡಿತು. ಹೃದಯ ಕಾಯಿಲೆ ನಂತರ ಶ್ರೀ ಸೈನಿ ಮಾರಣಾಂತಿಕ ಅಪಘಾತವನ್ನು ಎದುರಿಸಿದಳು, ಇದರಿಂದಾಗಿ ಅವಳ ಮುಖದ ಮೇಲೆ ಸುಟ್ಟಗಾಯಗಳಾಗಿತ್ತು. ಹೀಗೆ ಕೇವಲ ಕಷ್ಟದ ಜೀವನವನ್ನೇ ಎದುರಿಸಿದ ಸೈನಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಚಲ ಹೊಂದಿದ್ದರು.


ಇದನ್ನೂ ಓದಿ: ಗಂಧದಗುಡಿ ಅಪ್ಪು ಕೊನೆಯ ಚಿತ್ರ ಅಲ್ಲ: ಶಿವಣ್ಣನ ಮಾತಿನಿಂದ ಅಭಿಮಾನಿಗಳಲ್ಲಿ ಹರ್ಷ!


ಬಾಲ್ಯದಿಂದ ಮಿಸ್ ವರ್ಲ್ಡ್ ಆಗುವ ಕನಸು ಹೊತ್ತಿದ್ದ ಸೈನಿ ಒಂದೇ ಒಂದು ಹಂತದಲ್ಲಿ ಆ ಕಿರೀಟದಿಂದ ವಂಚಿತರಾದರು. 2021ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ ಅವರು ವಿಜೇತರಾಗಿದ್ದು, ಅಮೆರಿಕಾ ನಿವಾಸಿಯಾಗಿರುವ ಭಾರತೀಯ ಮೂಲದ ಶ್ರೀ ಸೈನಿಶ್ರೀ ಸೈನಿ ರನರ್‌ ಅಪ್‌ ಆದರು.
ಇವರು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ತನ್ನ ತಂದೆಯ ಕಂಪನಿಯಲ್ಲಿ ಬಿಸಿನೆಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.

Published by:ವಾಸುದೇವ್ ಎಂ
First published: