Sini Shetty: ಸಿನಿ ಶೆಟ್ಟಿಗೆ ಈ ಹೀರೋ ಅಂದ್ರೆ ಇಷ್ಟವಂತೆ, ಮಿಸ್ ಇಂಡಿಯಾ ಮನ ಗೆದ್ದವರ್ಯಾರು?

Vijay Deverakonda: ಹೌದು, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಸಿನಿ ಶೆಟ್ಟಿ ನನ್ನ ಮೊದಲ ಆಯ್ಕೆ ವಿಜಯ್ ದೇವರಕೊಂಡ ಎಂದಿದ್ದಾರೆ.

ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ

  • Share this:
ನಟ ವಿಜಯ್​ ದೇವರಕೊಂಡ (Vijay Deverakonda) ಸದ್ಯ ಎಲ್ಲೆಡೆ ಟ್ರೆಂಡಿಂಗ್ ಇರುವ ವಿಚಾರ. ಕೇವಲ ಅಭಿಮಾನಿಗಳು (fans) ಮಾತ್ರವಲ್ಲದೇ, ಸ್ಟಾರ್​ಗಳು ಅವರನ್ನು ಇಷ್ಟಪಡುತ್ತಾರೆ. ಹಲವಾರು ಸ್ಟಾರ್​ ನಟಿಯರು (Actress) ವಿಜಯ್ ದೇವರಕೊಂಡ ಇಷ್ಟ. ಅವರನ್ನು ಡೇಟ್ ಮಾಡಬೇಕು ಎಂದಿದ್ದಾರೆ. ಇದೀಗ ಮಿಸ್​ ಇಂಡಿಯಾ ಸಿನಿ ಶೆಟ್ಟಿ (Sini Shetty) ಸಹ ವಿಜಯ್ ದೇವರಕೊಂಡ ಹಿಂದೆ ಬಿದ್ದಿದ್ದಾರೆ. ಅರೇ, ಮಿಸ್​ ಇಂಡಿಯಾ ಈಗ ಏನ್ ಹೇಳಿದ್ರು ಅಂತ ಯೋಚನೆ, ಮಾಡ್ತಿದ್ರೆ ಈ ಸ್ಟೋರಿ ಓದಿ. 

ವಿಜಯ್ ದೇವರಕೊಂಡ ಇಷ್ಟವಂತೆ

ಎಲ್ಲರಿಗೂ ಗೊತ್ತಿರುವಂತೆ ನಮ್ಮ ಕರಾವಳಿ ಸುಂದರಿ ಸಿನಿ ಶೆಟ್ಟಿ ಈ ಬಾರಿ ಮಿಸ್​ ಇಂಡಿಯಾ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಸುಂದರಿ ಇತ್ತೀಚೆಗಷ್ಟೇ ನಾನು ಸಿನಿಮಾ ರಂಗಕ್ಕೆ ಬರುವುದಾದರೆ ಬಾಲಿವುಡ್​ ಮೂಲಕ ಎಂದು ಹೇಳಿದ್ದರು. ಇದೀಗ ಯಾವ ನಟನ ಜೊತೆ ಬರುವ ಆಸೆ ಎಂದು ಸಹ ತಿಳಿಸಿದ್ದಾರೆ.

ಹೌದು, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಸಿನಿ ಶೆಟ್ಟಿ ನನ್ನ ಮೊದಲ ಆಯ್ಕೆ ವಿಜಯ್ ದೇವರಕೊಂಡ ಎಂದಿದ್ದಾರೆ. ನನ್ನಿಷ್ಟದ ನಟ ಎಂದರೆ ಅದು ವಿಜಯ್ ದೇವರಕೊಂಡ. ಅವರೊಂದಿಗೆ ಸಿನಿಮಾ ಮಾಡುವ ಕನಸು ಕೂಡ ನನಗಿದೆ. ಅವಕಾಶ ಸಿಕ್ಕರೆ ಖಂಡಿತವಾಗಿಯೂ ಅವರ ಸಿನಿಮಾ ಮೂಲಕವೇ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡುವೆ ಎಂದು ಹೇಳಿಕೆ ನೀಡಿದ್ದಾರೆ.

ಕೇವಲ ಸಿನಿ ಶೆಟ್ಟಿ ಮಾತ್ರ ಅಲ್ಲ ಬಾಲಿವುಡ್​ ತಾರೆಯಾದ ಸಾರಾ ಅಲಿ ಖಾನ್ ಸಹ ವಿಜಯ್ ಜೊತೆ ಡೇಟಿಂಗ್ ಮಾಡುವ ಆಸೆ ಎಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಕರಣ್ ಜೋಹಾರ್​ ಸಾರಾ ಅಲಿ ಖಾನ್‌ಗೆ ‘ನೀವು ಡೇಟಿಂಗ್ ಮಾಡಲು ಇಷ್ಟಪಡುವ ಹುಡುಗನ ಹೆಸರನ್ನು ತಿಳಿಸಿ‘ ಎಂದು ಕೇಳುತ್ತಾರೆ.ಇದಕ್ಕೆ ಸಾರಾ ಅಲಿ ಖಾನ್ ಮೊದಲಿಗೆ ಯಾವುದೇ ಉತ್ತರ ನೀಡದೆ ಇದ್ದರೂ ನಂತರದಲ್ಲಿ ವಿಜಯ್​ ದೇವರಕೊಂಡ ಹೆಸರನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ರಿಲೀಸ್‌ಗೆ 2 ದಿನ ಮುನ್ನವೇ ಬಹುತೇಕ ಟಿಕೆಟ್ ಸೋಲ್ಡ್‌ ಔಟ್, ದಾಖಲೆ ಬರೆಯಲು ಸಜ್ಜಾದ ವಿಕ್ರಾಂತ್ ರೋಣ

ವಿಜಯ್ ದೇವರಕೊಂಡ ಅವರಿಗೆ ಅಭಿಮಾನಿಗಳ ಬಳಗ ಬಹಳ ದೊಡ್ಡದಿದೆ. ಈ ಹಿಂದೆ ಅಭಿಮಾನಿಯೊಬ್ಬರು ಇವರ ಟ್ಯಾಟು ಹಾಕಿಸಿಕೊಂಡ ವಿಚಾರ ಬಹಳ ಸದ್ದು ಮಾಡಿತ್ತು. ನೆಚ್ಚಿನ ನಾಯಕ ನಟ, ನಟಿಯರನ್ನು ಕಂಡರೆ ಯಾರಿಗೆ ಇಷ್ಟ ಇಲ್ಲ. ಒಮ್ಮೆಯಾದರು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ವಿಜಯ್​ ಲೇಡಿ ಅಭಿಮಾನಿ ಆಕೆಯ ಬೆನ್ನ ಮೇಲೆ ತನ್ನ ನೆಚ್ಚಿನ ನಟ ದೇವರಕೊಂಡ ಫೋಟೋ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದನ್ನು ಬಂದು ವಿಜಯ್​ ದೇವರಕೊಂಡ ಅವರಿಗೆ ತೋರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಸಿನಿಮಾದಲ್ಲಿ ಬ್ಯುಸಿ ಇದ್ದಾರೆ ನಟ

ಪುರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾ ಮಾಡುತ್ತಿದ್ದು, ಈ ಚಿತ್ರದಲ್ಲಿ ಖ್ಯಾತ ಬಾಕ್ಸರ್ ಮೈಕ್ ಟೈಸನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೆಲ ವರದಿಗಳ ಪ್ರಕಾರ, ಲೈಗರ್ ವಿಜಯ್ ದೇವರಕೊಂಡ ಅವರು ಬಹಳ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನನ್ಯಾ ಪಾಂಡೆ ಜೊತೆಗಿನ ಅವರ ಕೆಮಿಸ್ಟ್ರಿ ಹೇಗಿರಲಿದೆ ಎಂಬುದು ಈ ಚಿತ್ರದ ಮತ್ತೊಂದು ಕುತೂಹಲಕಾರಿ ಅಂಶವಾಗಿದೆ. ಇನ್ನು ಈ ಸಿನಿಮಾ ಆಗಸ್ಟ್ 25, 2022 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಬಟ್ಟೆ ಬಿಚ್ಚಿ ಕೆಟ್ಟರಾ ರಣವೀರ್ ಸಿಂಗ್? ಬಾಲಿವುಡ್‌ ನಟನಿಗೆ ಎದುರಾಯ್ತು ಈಗ ಸಂಕಷ್ಟ!

ಈಗಾಗಲೇ ಈ ಸಿನಿಮಾದ ಟ್ರೈಲರ್ ರಿಲೀಸ್​ ಆಗಿದ್ದು,  ಜನರಿಗೆ ಬಹಳ ಇಷ್ಟವಾಗಿದೆ. ಈ ಟ್ರೈಲರ್ ಹೈಪ್​ ಕ್ರಿಯೇಟ್​ ಮಾಡಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಧರ್ಮ ಪ್ರೊಡಕ್ಷನ್ಸ್ ಸಹಯೋಗದಲ್ಲಿ ಪುರಿ ಕನೆಕ್ಟ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ಪುರಿ ಜಗನ್ನಾಥ್, ಚಾರ್ಮಿ ಕೌರ್, ಕರಣ್ ಜೋಹರ್ ಮತ್ತು ಅಪೂರ್ವ ಮೆಹ್ತಾ ಒಟ್ಟಾಗಿ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿದ್ದಾರೆ.
Published by:Sandhya M
First published: