ಈ ಬಾರಿಯ ಅಂದರೆ 2022ರ ಮಿಸ್ ಇಂಡಿಯಾ (Miss India) ಸ್ಪರ್ಧೆಯ ವಿಜೇತರ ಹೆಸರು ಬಹಿರಂಗವಾಗಿದ್ದು, ಮುಂಬೈನ ಜಿಯೋ ವಲ್ಡ್ ಕನ್ವೆಂನ್ಷನ್ ಸೆಂಟರ್ ನಲ್ಲಿ ಜುಲೈ 3 ಎಂದು ನಡೆದ 'ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ -2022 ಕಿರೀಟವನ್ನು ಕರ್ನಾಟಕದ (Karnataka ) ಸಿನಿ ಶೆಟ್ಟಿ (Sini Shetty) ಮುಡಿಗೇರಿಸಿಕೊಂಡಿದ್ದಾರೆ. ಮಿಸ್ ಇಂಡಿಯಾ 2020ರ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ತೆಲಂಗಾಣದ ಮಾನಸಾ ವಾರಣಾಸಿ ಸಿನಿ ಶೆಟ್ಟಿಗೆ ಮಿಸ್ ಇಂಡಿಯಾ ಕಿರೀಟ ನೀಡಿದ್ದಾರೆ.
ಕರ್ನಾಟಕ ಸಿನಿ ಶೆಟ್ಟಿಗೆ ಮಿಸ್ ಇಂಡಿಯಾ ಕಿರೀಟ
ಈ ಕುರಿತು ಫೆಮಿನಾ ಮಿಸ್ ಇಂಡಿಯಾ ಸಂಸ್ಥೆಯು ಭಾನುವಾರ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮಾಹಿತಿ ನೀಡಿದ್ದು, ಸಿನಿ ಶೆಟ್ಟಿ ಫೆಮಿನಾ ಮಿಸ್ ಇಂಡಿಯಾ ವಿನ್ನರ್ ಆಗಿದ್ದು, ಮೊದಲ ರನ್ನರ್ ಅಪ್ ಆಗಿ ರೂಬಲ್ ಶೇಖಾವತ್ ಮತ್ತು ಎರಡನೇ ರನ್ನರ್ ಅಪ್ ಆಗಿ ಶಿನಾತಾ ಚೌಹಾನ್ ಗೆದ್ದು ಬೀಗಿದ್ದಾರೆ ಎಂದು ತಿಳಿಸಿದೆ.
ಅಲ್ಲದೇ ಸಿನಿ ಶೆಟ್ಟಿಯ ಬಗ್ಗೆ ಬರೆದುಕೊಂಡಿರುವ ಸಂಸ್ಥೆ, ವಿನ್ನರ್ ಆಗಿರುವ ಈ ಸುಂದರಿ ಮಹಿಳೆಯರ ಪರವಾಗಿ ಗಟ್ಟಿ ಧ್ವನಿಯನ್ನು ಎತ್ತುವವರು, ಅವರ ಬದುಕಿನ ಅನೇಕ ಕಾರಣಗಳು ಹಾಗೂ ಅವರ ಶ್ರಮಕ್ಕೆ ಈ ವೇದಿಕೆಗೆ ಸಾಕ್ಷಿಯಾಗಿದ್ದು ಮಾತ್ರವಲ್ಲದೇ ಗೆದ್ದು ಬಿಗಿದ್ದಾರೆ. ಈ ಕಿರೀಟಕ್ಕೆ ಅವರ ಅರ್ಹರಾಗಿದ್ದು, ಈ ವಿಚಾರವನ್ನು ಹಂಚಿಕೊಳ್ಳಲು ಸಂತೋಷವಾಗುತ್ತದೆ ಎಂದಿದೆ.
ಇನ್ನು ಇದರ ಜೊತೆಗೆ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಕರ್ನಾಟಕದ ಸಿನಿ ಶೆಟ್ಟಿ ಅವರ ಬದುಕಿನ ಬಗ್ಗೆ ಸಹ ಒಂದಷ್ಟು ವಿಷಯಗಳನ್ನು ಹಂಚಿಕೊಳ್ಳಲಾಗಿದೆ. ಕರ್ನಾಟಕ ಮೂಲದ ಸಿನಿ ಶೆಟ್ಟಿ ಅವರಿಗೆ ಈಗ 21 ವರ್ಷ. ಮುಂಬೈನಲ್ಲಿ ಹುಟ್ಟಿ ಬೆಳೆದಿರುವ ಅವರು ಅವರು, ಅಕೌಂಟ್ ಮತ್ತು ಫೈನಾನ್ಸ್ ನಲ್ಲಿ ಮಾಸ್ಟರ್ಸ್ ಪದವಿ ಪಡೆದಿದ್ದಾರೆ. ಸದ್ಯ ಅವರು ಸಿಎಫ್ ಎ (ಚಾರ್ಟರ್ಡ್ ಫೈನಾನ್ಶಿಯಲ್ ಅನಾಲಿಸ್ಟ್) ಕೋರ್ಸ್ ಮಾಡುತ್ತಿದ್ದಾರೆ. ಇನ್ನು ಇವರು ಭರತನಾಟ್ಯ ಹಾಗೂ ಬೇರೆ ಶೈಲಿಯ ನೃತ್ಯದಲ್ಲೂ ಆಸಕ್ತಿ ಹೊಂದಿದ್ದು, ತರಬೇತಿ ಪಡೆದಿದ್ದಾರೆ.
ಇದನ್ನೂ ಓದಿ: ಮತ್ತೆ ವೈರಲ್ ಆಯ್ತು ರಶ್ಮಿಕಾ ಮಂದಣ್ಣ ಫೋಟೋಗಳು, ಶ್ರೀವಲ್ಲಿ ನೋಡಿ ಸೂಪರ್ ಅಂದ್ರು ಫ್ಯಾನ್ಸ್
ರನ್ನರ್ ಅಪ್ಗಳ ಬಗ್ಗೆ ಇಲ್ಲಿದೆ ಮಾಹಿತಿ
ಇನ್ನು ಫೆಮಿನಾ ಮಿಸ್ ಇಂಡಿಯಾದ ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮಿರುವ ರೂಬಲ್ ಶೇಖಾವತ್ ಮೂಲತಃ ರಾಜಸ್ಥಾನದವರು. ಅಲ್ಲದೇ, ಅವರು ರಾಜಮನೆತನದ ಹಾಗೂ ಶ್ರೀಮಂತ ಕುಟುಂಬದ ಹಿನ್ನೆಲೆಯನ್ನು ಹೊಂದಿದ್ದಾರೆ. ರೂಬಲ್ ನೃತ್ಯ, ನಟನೆ ಮತ್ತು ಚಿತ್ರಕಲೆ ಸೇರಿದಂತೆ ವಿವಿಧ ಹಲವು ಕ್ಷೇತ್ರಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಈ ಸಂಬಂಧಿತ ಕ್ಷೇತ್ರದಲ್ಲಿ ಪರಿಣಿತಿಯನ್ನು ಸಹ ಪಡೆದಿದ್ದಾರೆ. ಹಾಗೆಯೇ ರೂಬಲ್ ಮುಖ್ಯವಾಗಿ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದು, ಬಹುಮುಖ ಪ್ರತಿಭೆ ಎನ್ನಬಹುದು.
ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಕೋಮಲ್, ತೆರೆ ಮೇಲೆ ಯಾವಾಗ ಬರ್ತೀರಾ ಅಂತ ಕೇಳ್ತಿದ್ದಾರೆ ಫ್ಯಾನ್ಸ್!
ಫೆಮಿನಾ ಮಿಸ್ ಇಂಡಿಯಾದ ಎರಡನೇ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡ ಶಿನಾತಾ ಚೌಹಾಣ್ ಮೂಲತಃ ಉತ್ತರ ಪ್ರದೇಶದ ಸುಂದರಿ. ಇವರಿಗೆ ಹೆಚ್ಚು ಆಸಕ್ತಿ ಇರುವುದು ಶಿಕ್ಷಣ ಕ್ಷೇತ್ರದಲ್ಲಂತೆ. ಇದೇ ಕ್ಷೇತ್ರದಲ್ಲಿ ಏನಾದರು ಸಾಧನೆ ಮಾಡಬೇಕು ಎಂಬುದು ಅವರ ಕನಸಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ