Sini Shetty: ಮಂಗಳೂರಿಗೆ ಬಂದ ಮಿಸ್​ ಇಂಡಿಯಾ, ತುಳುವಿನಲ್ಲಿ ಚೆಲುವೆ ಸಿನಿಶೆಟ್ಟಿ ಮಾತು

Sini Shetty visited mangaluru: ಮಿಸ್ ಇಂಡಿಯಾ ಪಟ್ಟವನ್ನು ಮುಡುಗೇರಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಸಿನಿ ಶೆಟ್ಟಿ ಮಂಗಳೂರಿಗೆ ಆಗಮಿಸಿದ್ದಾರೆ. ಮನೆ ಮಗಳನ್ನು ಕಿರೀಟದಲ್ಲಿ ನೋಡಿ ಮಂಗಳೂರಿನ ಜನ ಸಂತೋಷಗೊಂಡಿದ್ದಾರೆ.

ಸಿನಿ ಶೆಟ್ಟಿ

ಸಿನಿ ಶೆಟ್ಟಿ

  • Share this:
ಕರ್ನಾಟಕದ (Karnataka) ‘ಸಿನಿ ಶೆಟ್ಟಿ’ (Sini Shetty) ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022 (Femina Miss India World -2022) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಈ ವಿಚಾರ ಎಲ್ಲರಿಗೂ ಗೊತ್ತಿದೆ. ಇದಿಗ ಸಿನಿಶೆಟ್ಟಿ ಮಂಗಳೂರಿಗೆ ಆಗಮಿಸಿದ್ದು, ತವವರೂರಿಗೆ ಆಗಮಿಸಿದ ಮಿಸ್ ಇಂಡಿಯಾಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಅಲ್ಲಿನ ಜನತೆ ಕೂಡ ಊರಿನ ಹುಡುಗಿಯ ಜೊತೆ ಫೋಟೋ ತೆಗೆಸಿಕೊಂಡಿದ್ದು, ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ.

ಮಂಗಳೂರಿಗೆ ಬಂದ ಸುಂದರಿ

ಮಿಸ್ ಇಂಡಿಯಾ ಪಟ್ಟವನ್ನು ಮುಡುಗೇರಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಸಿನಿ ಶೆಟ್ಟಿ ಮಂಗಳೂರಿಗೆ ಆಗಮಿಸಿದ್ದಾರೆ. ಮನೆ ಮಗಳನ್ನು ಕಿರೀಟದಲ್ಲಿ ನೋಡಿ ಮಂಗಳೂರಿನ ಜನ ಸಂತೋಷಗೊಂಡಿದ್ದು, ಸಿನಿ ಶೆಟ್ಟಿಗೆ ಆರತಿ ಎತ್ತಿ, ಹೂ ಮಾಲೆ ಹಾಕಿ ಸಡಗರದಿಂದಲೇ ಬರಮಾಡಿಕೊಂಡು, ಸಂತಸ ವ್ಯಕ್ತಪಡಿಸಿದ್ದಾರೆ.



ಇನ್ನು ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿನಿ ಶೆಟ್ಟಿ ತುಳುವಿನಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದು, ಯಾವುದಾದರೂ ಒಳ್ಳೆಯ ಕತೆ ಸಿಕ್ಕರೆ ಸಿನಿಮಾದಲ್ಲಿ ನಟಿಸುವುದಾಗಿ ಅವರು ತಿಳಿಸಿದ್ದಾರೆ. ಇನ್ನು ಮೂಲಗಳ ಪ್ರಕಾರ ಸಿನಿಶೆಟ್ಟಿ 71ನೇ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾಗವಹಿಸಲು ಫುಲ್ ತಯಾರಿ ನಡೆಸಿದ್ದಾರೆ. ಹಾಗೆಯೇ ಸಿನಿ ಶೆಟ್ಟಿ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದಿದ್ದಾರೆ.

ದೇವಸ್ಥಾನಕ್ಕೆ ಭೇಟಿ ನೀಡಿದ ಸಿನಿ ಶೆಟ್ಟಿ

ಮುಂಬೈನ ಜಿಯೋ ವಲ್ಡ್ ಕನ್ವೆಂನ್ಷನ್ ಸೆಂಟರ್ ನಲ್ಲಿ ಜುಲೈ 3 ಎಂದು ನಡೆದ 'ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ -2022 ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಸುಂದರಿ ಮೂಲತಃ ಕರ್ನಾಟಕದ ಉಡುಪಿಯವರು.

ಇದನ್ನೂ ಓದಿ: ನಿಮ್ಮ ಭಾಷೆಯಲ್ಲೇ ವಿಕ್ರಾಂತ್ ರೋಣ ಸಿನಿಮಾ ನೋಡಬಹುದು! ಕನ್ನಡ ಸಿನಿಮಾರಂಗದಲ್ಲಿ ಇದು ಮೊದಲ ಪ್ರಯತ್ನ

ಹೌದು, 21 ವರ್ಷದ ಈ ಚೆಲುವೆ ಹುಟ್ಟಿದ್ದು ಬೆಳೆದಿದ್ದು ಮುಂಬೈನಲ್ಲಿ ಅಕೌಂಟಿಂಗ್ ಹಾಗೂ ಫೈನಾನ್ಸ್ನಲ್ಲಿ ಮಾಸ್ಟರ್ಸ್ ಪದವಿ ಪಡೆದಿದ್ದು ಈಗ ಸಿಎಫ್ ಎ (ಚಾರ್ಟರ್ಡ್ ಫೈನಾನ್ಶಿಯಲ್ ಅನಾಲಿಸ್ಟ್) ಕೋರ್ಸ್ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೇ ಸಿನಿ ಶೆಟ್ಟಿ ಭರತನಾಟ್ಯದಲ್ಲಿ ತರಬೇತಿ ಪಡೆದಿದ್ದು, ಅವರಿಗೆ ಬೇರೆ ಪ್ರಕಾರದ ಡ್ಯಾನ್ಸ್ಗಳು ಸಹ ಬಹಳ ಇಷ್ಟವಂತೆ. ಇವರನ್ನು ಬಹುಮುಖ ಪ್ರತಿಭೆ ಎಂದರೆ ತಪ್ಪಾಗಲ್ಲ.








View this post on Instagram






A post shared by Sini Shetty (@sinishettyy)






ಸಿನಿ ಶೆಟ್ಟಿ ಅವರ ಗೆಲುವು ಕರ್ನಾಟಕ ರಾಜ್ಯಕ್ಕೆ ಮತ್ತೊಂದು ಕೀರ್ತಿ ರತ್ನವನ್ನು ಸೇರಿಸಿದೆ, ಸಿನಿಗಿಂತ ಮೊದಲು ಕರ್ನಾಟಕದ ಲಾರಾ ದತ್ತಾ, ಸಾರಾ ಜೇನ್ ಡಯಾಸ್, ಮತ್ತು ಸಂಧ್ಯಾ ಚಿಬ್, ನಫೀಸಾ ಜೋಸೆಫ್, ರೇಖಾ ಹಂದೆ, ಮತ್ತು ಲೈಮರೈನಾ ಡಿಸೋಜಾ ಸೇರಿದಂತೆ ಅನೇಕ ಸುಂದರಿಯರು ಈ ಮೈಲುಗಲ್ಲನ್ನು ಸಾಧಿಸಿದ್ದಾರೆ. ಸಿನಿ ಶೆಟ್ಟಿ Instagram ನಲ್ಲಿ ಹೆಚ್ಚು ಆಕ್ಟೀವ್ ಆಗಿದ್ದು, 66.6 ಸಾವಿರ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಅವರು ಆಗಾಗ ತಮ್ಮ ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.



ಇದನ್ನೂ ಓದಿ: ಅನಾರೋಗ್ಯದಿಂದ ಲೆಜೆಂಡರಿ ಗಾಯಕ ಭೂಪಿಂದರ್ ಸಿಂಗ್ ವಿಧಿವಶ

ಇನ್ನು ಮಿಸ್ ವರ್ಲ್ಡ್ 2000 ಕಿರೀಟವನ್ನು ಅಲಂಕರಿಸಿದ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಸ್ಫೂರ್ತಿ ಎಂದು ಸಿನಿ ಬಹಿರಂಗಪಡಿಸಿದ್ದಾರೆ. ನೀವು ಒಬ್ಬ ವ್ಯಕ್ತಿಯನ್ನು ನೋಡಿದಾಗ, ಅವರ ಕೆಲವು ಮಾತುಗಳು ನಿಮಗೆ ಬಹಳ ಇಷ್ಟವಾಗುತ್ತದೆ ಎಂದಿದ್ದು, ಪ್ರಿಯಾಂಕಾ ಅವರ ಕೆಲ ಮಾತುಗಳು ನನಗೆ ಬಹಳ ಕಾಡಿದೆ ಎಂದಿದ್ದಾರೆ.
Published by:Sandhya M
First published: