• Home
  • »
  • News
  • »
  • entertainment
  • »
  • Shahid Kapoor: ಐಷಾರಾಮಿ ಮನೆಯಲ್ಲಿ ಅಜ್ಜಿ-ಮೊಮ್ಮಗಳ ಡ್ಯಾನ್ಸ್

Shahid Kapoor: ಐಷಾರಾಮಿ ಮನೆಯಲ್ಲಿ ಅಜ್ಜಿ-ಮೊಮ್ಮಗಳ ಡ್ಯಾನ್ಸ್

ನೃತ್ಯಾಭ್ಯಾಸ

ನೃತ್ಯಾಭ್ಯಾಸ

ಶಾಹಿದ್‌ ತಾಯಿ ನೀಲಿಮಾ ನಟಿ ಮಾತ್ರವಲ್ಲದೇ ಹಿರಿಯ ಕಥಕ್‌ ನೃತ್ಯಗಾರ್ತಿಯೂ ಹೌದು. ಮಿಶಾ ಹಾಗೂ ನೀಲಿಮಾ ಒಟ್ಟಿಗೆ ನೃತ್ಯಾಭ್ಯಾಸ ಮಾಡುತ್ತಿದ್ದ ಕೆಲ ಸುಂದರ ಕ್ಷಣಗಳ ಫೋಟೋಗಳನ್ನು ಮೀರಾ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

  • Share this:

ಸಾಮಾನ್ಯವಾಗಿ ಅಭಿಮಾನಿಗಳಿಗೆ ಸೆಲೆಬ್ರಿಟಿಗಳ(Celebrity), ಅವರ ನೆಚ್ಚಿನ ನಟ ನಟಯರ ದಿನಚರಿಯ ಬಗ್ಗೆ ಕುತೂಹಲವಿರುತ್ತದೆ. ಆದ್ರೆ ಈಗ ಸೋಷಿಯಲ್‌ ಮೀಡಿಯಾ (Social Media) ಬಳಕೆ ಹೆಚ್ಚಾದ ಮೇಲೆ ಇಂಥ ಸಾಕಷ್ಟು ಕುತೂಹಲಗಳಿಗೆ ಉತ್ತರ ಸಿಗುತ್ತೆ. ಅದರೂ ಸೆಲೆಬ್ರಿಟಿಗಳೆಂದರೆ ಆಗಾಗ ತಮ್ಮ ದಿನಚರಿಯ, ವಿಶೇಷದಿನಗಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡ್ತಾನೇ ಇರ್ತಾರೆ. ಇತ್ತೀಚೆಗೆ ಬಾಲಿವುಡ್‌ ನಟ ಶಾಹಿದ್‌ ಕಪೂರ್‌ (Shahid Kapoor) ಪತ್ನಿ ಮೀರಾ ರಜಪೂತ್‌, ತಮ್ಮ ಮಗಳು ಹಾಗೂ ಶಾಹಿದ್‌ ತಾಯಿ ನೀಲಿಮಾ ಫೋಟೋಗಳನ್ನು (Photos) ಇನ್ಸ್ಟಾ ಸ್ಟೋರಿಯಲ್ಲಿ ಪೋಸ್ಟ್‌ ಮಾಡಿದ್ದರು.


ಮೊಮ್ಮಗಳಿಗೆ ನೃತ್ಯಾಭ್ಯಾಸ ಮಾಡಿಸಿದ ಅಜ್ಜಿ ನೀಲಿಮಾ ಅಜೀಮ್‌


ಮಗಳು ಮಿಶಾ ಕಪೂರ್‌ಗೆ ಅಜ್ಜಿ ನೀಲಿಮಾ ಅಜೀಮ್‌ ಡ್ಯಾನ್ಸ್‌ ಹೇಳಿಕೊಡುತ್ತಿರುವ ಫೋಟೋಗಳನ್ನು ಮೀರಾ ರಜಪೂತ್‌ ಅವರು ಹಂಚಿಕೊಂಡಿದ್ದಾರೆ.




ಶಾಹಿದ್‌ ತಾಯಿ ನೀಲಿಮಾ ನಟಿ ಮಾತ್ರವಲ್ಲದೇ ಹಿರಿಯ ಕಥಕ್‌ ನೃತ್ಯಗಾರ್ತಿಯೂ ಹೌದು. ಮಿಶಾ ಹಾಗೂ ನೀಲಿಮಾ ಒಟ್ಟಿಗೆ ನೃತ್ಯಾಭ್ಯಾಸ ಮಾಡುತ್ತಿದ್ದ ಕೆಲ ಸುಂದರ ಕ್ಷಣಗಳ ಫೋಟೋಗಳನ್ನು ಮೀರಾ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.


ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಮೀರಾ ಹಂಚಿಕೊಂಡ ಫೋಟೋಗಳಲ್ಲಿ ನೆಲಿಮಾ ಅಜೀಮ್, ಮಿಶಾಗೆ ಕೆಲವು ಕಥಕ್ ಹಂತಗಳನ್ನು ಕಲಿಸಿದರು ಅನ್ನೋದನ್ನು ನೋಡಬಹುದಾಗಿದೆ.


ಇದನ್ನೂ ಓದಿ: Love Story: ಗಂಡ IAS ಅಧಿಕಾರಿ, ಹೆಂಡ್ತಿ IPS ಆಫೀಸರ್; 1 ರೂ. ಖರ್ಚು ಮಾಡದೆ ಮದುವೆಯಾದ ಜೋಡಿ


ಆದ್ರೆ ಚಿತ್ರದಲ್ಲಿ ಮಿಶಾ ಮುಖ ಕಾಣಿಸುವುದಿಲ್ಲ. ಮತ್ತೊಂದು ಫೋಟೋದಲ್ಲಿ, ಇಬ್ಬರು ಸೂರ್ಯನ ಕಿರಣ ಬೀಳುವಂಥ ರೂಂ ನಲ್ಲಿ ಅಭ್ಯಾಸ ಮಾಡುವಾಗ ನೃತ್ಯದ ಪೋಸ್ ನೀಡಿದ್ದಾರೆ.


ಹೃದಯಸ್ಪರ್ಶಿಯಾದ ಗುರು-ಶಿಷ್ಯರ ಕ್ಷಣವನ್ನು ಸೆರೆಹಿಡಿಯುವಲ್ಲಿ ನಿರತರಾಗಿದ್ದ ಮೀರಾ, “ಇಟ್ಸ್‌ ಟೈಂ” ಎಂದು ಚಿತ್ರದೊಂದಿಗೆ ಬರೆದಿದ್ದಾರೆ.


ಪೋಸ್ಟ್‌ನಲ್ಲಿ ಐಷಾರಾಮಿ ಡ್ಯುಪ್ಲೆಕ್ಸ್‌ ಮನೆಯ ನೋಟ


ಇನ್ನು ಮೀರಾ ರಜಪೂತ್‌ ಹಂಚಿಕೊಂಡ ಪೋಸ್ಟ್‌ ಅವರ ಹೊಸ ಐಷಾರಾಮಿ ಡ್ಯೂಪ್ಲೆಕ್ಸ್‌ ಮನೆಯ ನೋಟವನ್ನೂ ಒಳಗೊಂಡಿದೆ. ಅಲ್ಲದೇ ಮೀರಾ ಹಾಗೂ ಶಾಹಿದ್‌ ಅವರ ಬೃಹತ್‌ ಕೋಣೆಯನ್ನು ಕೂಡ ಚಿತ್ರಗಳಲ್ಲಿ ನೋಡಬಹುದಾಗಿದೆ.


ಅಲ್ಲದೇ ಬಾಲ್ಕನಿಯ ಬೃಹತ್ ಗಾಜಿನ ಬಾಗಿಲುಗಳನ್ನೂ ಕಾಣಬಹುದು. ಬೂದು ಬಣ್ಣದ ಒಳಾಂಗಣ ಮತ್ತು ಪೀಠೋಪಕರಣಗಳೊಂದಿಗೆ ದಂಪತಿಗಳ ಬೆಲೆಬಾಳುವ ಕೋಣೆಯನ್ನು ಫೋಟೋಗಳಲ್ಲಿ ಕಾಣಬಹುದು.




ಅಂದಹಾಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್‌ ಮುಂಬೈನ ವರ್ಲಿಯಲ್ಲಿರುವ ಈ ಐಷಾರಾಮಿ ಡ್ಯೂಪ್ಲೆಕ್ಸ್ ಅಪಾರ್ಟ್‌ಮೆಂಟ್‌ಗೆ ಶಿಫ್ಟ್‌ ಆಗಿದ್ದರು. ದಂಪತಿಯ ಹಳೆಯ ಮನೆ ಜುಹುವಿನಲ್ಲಿತ್ತು.


ವರದಿಯ ಪ್ರಕಾರ, ಮೀರಾ ಮತ್ತು ಶಾಹಿದ್ ಅವರ ಹೊಸ ಮನೆಯು ₹58 ಕೋಟಿ ಮೌಲ್ಯದ್ದಾಗಿದೆ. ಇದು ತ್ರೀಸಿಕ್ಸ್ಟಿ ವೆಸ್ಟ್‌ನಲ್ಲಿದೆ. ಅಂದಹಾಗೆ ಇದು ವರ್ಲಿಯಲ್ಲಿರುವ ಗಗನಚುಂಬಿ ಕಟ್ಟಡವಾಗಿದೆ.


ಅದ್ದೂರಿ ಸೆಲೆಬ್ರಿಟಿ ಮನೆ


ಬಾಂದ್ರಾ-ವರ್ಲಿ ಸಮುದ್ರ ಲಿಂಕ್‌ನ ಅದ್ಭುತ ನೋಟವನ್ನು ಹೊಂದಿದೆ. ಈ ಅದ್ದೂರಿ ಸೆಲೆಬ್ರಿಟಿ ಮನೆ ಆರು ಪಾರ್ಕಿಂಗ್ ಸ್ಲಾಟ್‌ಗಳನ್ನು ಮತ್ತು ವಿಶಾಲವಾದ 500-ಚದರ ಅಡಿ ಬಾಲ್ಕನಿಯನ್ನು ಹೊಂದಿದೆ ಎನ್ನಲಾಗಿದೆ.


ಅಂದಹಾಗೆ ಮೀರಾ ರಜಪೂತ್‌ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ವೈಯಕ್ತಿಕ ಜೀವನದ ಝಲಕ್‌ಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಅವರು 2015ರಲ್ಲಿ ಶಾಹಿದ್ ಅವರನ್ನು ವಿವಾಹವಾಗಿದ್ದು, ದಂಪತಿಗೆ ಮಿಶಾ ಕಪೂರ್‌ (6 ವರ್ಷ) ಹಾಗೂ ಜೈನ್‌ ಕಪೂರ್‌ (4 ವರ್ಷ)ದ ಮಕ್ಕಳಿದ್ದಾರೆ.


ಇನ್ನು, ಶಾಹಿದ್ ಕೊನೆಯದಾಗಿ ಮೃಣಾಲ್ ಠಾಕೂರ್ ಜೊತೆಗೆ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ವೆಬ್ ಸರಣಿ ಫರ್ಜಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಪ್ರೈಮ್ ವಿಡಿಯೋ ಈ ವೆಬ್‌ಸಿರೀಸ್‌ನ ಟ್ರೇಲರ್‌ಅನ್ನು ಜನವರಿ 13 ರಂದು ಬಿಡುಗಡೆ ಮಾಡಿದೆ. ರಾಜ್ ನಿಡಿಮೋರು ಮತ್ತು ಕೃಷ್ಣ ಡಿಕೆ ಅವರು ಫರ್ಜಿಯನ್ನು ರಚಿಸಿದ್ದಾರೆ ಮತ್ತು ಶಾಹಿದ್ ಜೊತೆಗೆ ನಟ ವಿಜಯ್ ಸೇತುಪತಿ ನಟಿಸಿದ್ದು ಇದು ಇಬ್ಬರ OTT ಚೊಚ್ಚಲ ಚಿತ್ರವಾಗಿದೆ.

Published by:Divya D
First published: