ಲೋಕಸಭಾ ಚುನಾವಣಾ ಕಣಕ್ಕಿಳಿದ ಮಿಮಿ ಚಕ್ರವರ್ತಿ-ನುಸ್ರತ್​ ಜಹಾನ್: ಜಾಲತಾಣಿಗರಿಂದ ಅಪಹಾಸ್ಯಕ್ಕೀಡಾದ ನಟಿಯರು

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ ಇಬ್ಬರು ನಟಿಯರು ಅಪಹಾಸ್ಯಕ್ಕೀಡಾಗಿದ್ದಾರೆ. ಅದರಲ್ಲೂ ಟಾಲಿವುಡ್​ನಲ್ಲಿ ಗುರುತಿಸಿಕೊಂಡಿರುವ ನಟಿ ಹಾಗೂ ಬಂಗಾಳಿ ನಟಿಯ ಮೇಲೆ ಜಾಲತಾಣಿಗರು ಸಾಕಷ್ಟು ಜೋಕ್​ಗಳನ್ನು ಹರಿ ಬಿಟ್ಟಿದ್ದಾರೆ.

ತೃಣಮೂಲ ಕಾಂಗ್ರೆಸ್​ನಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಮಿಮಿ ಹಾಗೂ ನುಸ್ರತ್

ತೃಣಮೂಲ ಕಾಂಗ್ರೆಸ್​ನಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಮಿಮಿ ಹಾಗೂ ನುಸ್ರತ್

  • News18
  • Last Updated :
  • Share this:
ಲೋಕಸಭಾ ಚುನಾವಣಾ ರಣರಂಗ ರಾಜಕೀಯ ಯುದ್ಧಕ್ಕೆ ಸಿದ್ದವಾಗುತ್ತಿದೆ. ಇದರಲ್ಲಿ ಸೆಣಸಾಡಲು ನುರಿತ ರಾಜಕೀಯ ಪಟುಗಳೊಂದಿಗೆ ಹೊಸಬರು ಹಾಗೂ ಸಿನಿ ರಂಗದ ತಾರೆಯರು ಸಜ್ಜಾಗಿದ್ದಾರೆ. ಒಂದು ಕಡೆಯಿಂದ ಪಕ್ಷಗಳು ಎಲ್ಲ ತಮ್ಮ ತಮ್ಮ ಅಭ್ಯರ್ಥಿಗಳ ಹೆಸರನ್ನು ಒಂದೊಂದಾಗಿ ಪ್ರಕಟಿಸಲು ಆರಂಭಿಸಿದ್ದಾರೆ.

ಇದನ್ನೂ ಓದಿ: #Karthi19: ಕಾಲಿವುಡ್​ಗೆ ಕಾಲಿಟ್ಟ ಕಿರಿಕ್​ ಹುಡುಗಿ: ಸೆಟ್ಟೇರಿತು ಕಾರ್ತಿ-ರಶ್ಮಿಕಾರ ತಮಿಳು ಸಿನಿಮಾ

ಹೀಗಿರುವಾಗಲೇ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್​ ಮಂಗಳವಾರ ತಮ್ಮ ಪಕ್ಷದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿತ್ತು. ಇದಾದ ನಂತರ ಬಂಗಾಳಿ ನಟಿಯರಾದ ಮಿಮಿ ಚಕ್ರವರ್ತಿ ಹಾಗೂ ನುಸ್ರತ್​ ಜಹಾನ್​ ಸಹ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದರು.

ಮೂಲತಃ ಪಶ್ಚಿಮ ಬಂಗಾಳದವರಾದ ಮಿಮಿ, ತೆಲುಗು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡವರು. ಅಷ್ಟೇ ಅಲ್ಲದೆ 20ಕ್ಕೂ ಹೆಚ್ಚು ಬಂಗಾಳಿ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಇವರು ಚುನಾವಣೆಗೆ ನಿಲ್ಲುತ್ತಿರುವುದು ಜಾಧವ್​ಪುರ್ ಲೋಕಸಭಾ ಕ್ಷೇತ್ರದಿಂದ ಎಂಬುದು ವಿಶೇಷ.

ಪಶ್ಚಿಮ ಬಂಗಾಳದಲ್ಲಿ ಚಿರಪರಿಚಿತ ಮುಖವಾಗಿರುವ ನಟಿ ಮಿಮಿಗೆ ಟಿಕೆಟ್​ ನೀಡಲು ತೃಣಮೂಲ ಕಾಂಗ್ರೆಸ್​ ಪಕ್ಷ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ತಾರಾ ವರ್ಚಸ್ಸು ಬಳಸಿ ಸಂಸತ್ತನ್ನು ಪ್ರವೇಶಿಸಲು ಕಾತರರಾಗಿದ್ದಾರೆ ಮಿಮಿ ಚಕ್ರವರ್ತಿ.

ಇನ್ನು ನುಸ್ರತ್​ ಜಹಾನ್​ ಸಹ ಸಾಕಷ್ಟು ಬಂಗಾಳಿ ಸಿನಿಮಾಗಳಲ್ಲಿ ಕೆಲಸ ಮಾಡಿದ್ದು, 2011ರಲ್ಲಿ ಸಿನಿ ಜೀವನ ಆರಂಭಿಸಿದ್ದಾರೆ. ಈಕೆ ಬಸಿರ್​ಹಟ್​  ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಮಿಮಿ ಹಾಗೂ ನುಸ್ರತ್​ ಅವರಿಗೆ ತೃಣಮೂಲ ಕಾಂಗ್ರೆಸ್​ ಲೋಕಸಭಾ ಚುನಾವಣೆಯಲ್ಲಿ ಸೀಟು ನೀಡುವ ವಿಷಯವನ್ನು ಖುದ್ದು ಈ ನಟಿಯರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಜಾಲತಾಣಿಗರು ಇವರು ಸ್ಪರ್ಧಿಸುವ ವಿಚಾರವಾಗಿ ವ್ಯಂಗ್ಯ ಹಾಗೂ ಹಾಸ್ಯ ಭರಿತ ಪೋಸ್ಟ್​ಗಳ ಮಳೆಯನ್ನೇ ಹರಿಸಿದ್ದಾರೆ.

  

ಕೇವಲ ಫೇಸ್​ಬುಕ್​, ಟ್ವಿಟರ್​ ಅಲ್ಲದೇ ವಾಟ್ಸ್​ಆ್ಯಪ್​ನಲ್ಲೂ ನುಸ್ರತ್​ ಹಾಗೂ ಮಿಮಿ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಾಗಿ ಜೋಕ್​ಗಳು ಹರಿದಾಡುತ್ತಿದೆ. ಸದ್ಯ ಖ್ಯಾತ ಬಂಗಾಳಿ ನಟ ರುದ್ರನೀಲ್ ಚಕ್ರವರ್ತಿ ಈ ನಟಿಯರ ಪರವಾಗಿ ನಿಂತಿದ್ದು, ಇವರೂ ಸಹ ತೃಣ ಮೂಲ ಕಾಂಗ್ರೆಸ್​ನಲ್ಲಿ ಸಕ್ರಿಯವಾಗಿದ್ದಾರೆ.

PHOTOS: ತಮಿಳು ನಟ ಕಾರ್ತಿಗೆ #Karthi19 ಸಿನಿಮಾ ಸೆಟ್​ನಲ್ಲಿ ಜೊತೆಯಾದ ರಶ್ಮಿಕಾ ಮಂದಣ್ಣ..!

First published: