Milind Soman: ತನ್ನ ಟ್ರೈಸೆಪ್ಸ್ ಬಗ್ಗೆ ನಟ ಮಿಲಿಂದ್ ಸೋಮನ್ ಏನು ಹೇಳಿದ್ದಾರೆ ನೋಡಿ

ನಟ ತನ್ನ ಫಿಟ್ನೆಸ್ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತಾರೆ. ಆ ನಟ ಬೇರೆ ಯಾರೂ ಅಲ್ಲ, ಮಿಲಿಂದ್ ಸೋಮನ್ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅವರು, ಪ್ರತಿಯೊಬ್ಬರೂ ತಾಳ್ಮೆಯಿಂದ ಮತ್ತು ಸ್ಥಿರವಾಗಿದ್ದರೆ, ತಮ್ಮ ತಮ್ಮ ಫಿಟ್ನೆಸ್ ಗುರಿಗಳನ್ನು ಸಾಧಿಸಬಹುದು ಎಂದು ನಂಬುತ್ತಾರೆ. ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು, ತುಂಬಾ ಕಠಿಣವಾದ ಅಭ್ಯಾಸಗಳನ್ನು ಮಾಡಬೇಕೆಂದಿಲ್ಲ ಎಂದು ಈ ನಟ ಹೇಳುತ್ತಾರೆ.

ಮಿಲಿಂದ್ ಸೋಮನ್

ಮಿಲಿಂದ್ ಸೋಮನ್

  • Share this:
ಈ ಫಿಟ್ನೆಸ್ (Fitness) ವಿಷಯಕ್ಕೆ ಬಂದರೆ ಈ ಕ್ರೀಡಾಪಟುಗಳು, ಚಲನ ಚಿತ್ರೋದ್ಯಮದ ನಟ (Actor) ಮತ್ತು ನಟಿಯರು (Actress) ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೇನೆ ಇರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೆಲವರಂತೂ ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಮತ್ತು ನಿಗದಿ ಪಡಿಸಿಕೊಂಡ ಫಿಟ್ನೆಸ್ ಗುರಿಗಳನ್ನು ತಲುಪಲು ತುಂಬಾನೇ ಕಸರತ್ತುಗಳನ್ನು ಮಾಡುತ್ತಾರೆ. ಇಲ್ಲೊಬ್ಬ ನಟ ತನ್ನ ಫಿಟ್ನೆಸ್ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತಾರೆ. ಆ ನಟ ಬೇರೆ ಯಾರೂ ಅಲ್ಲ, ಮಿಲಿಂದ್ ಸೋಮನ್ (Milind Soman) ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅವರು, ಪ್ರತಿಯೊಬ್ಬರೂ ತಾಳ್ಮೆಯಿಂದ ಮತ್ತು ಸ್ಥಿರವಾಗಿದ್ದರೆ, ತಮ್ಮ ತಮ್ಮ ಫಿಟ್ನೆಸ್ ಗುರಿಗಳನ್ನು ಸಾಧಿಸಬಹುದು ಎಂದು ನಂಬುತ್ತಾರೆ. ಅಪೇಕ್ಷಿತ ಫಲಿತಾಂಶಗಳನ್ನು (Result) ಸಾಧಿಸಲು, ತುಂಬಾ ಕಠಿಣವಾದ ಅಭ್ಯಾಸಗಳನ್ನು ಮಾಡಬೇಕೆಂದಿಲ್ಲ ಎಂದು ಈ ನಟ ಹೇಳುತ್ತಾರೆ.

ಟ್ರೈಸೆಪ್ಸ್ ಬಗ್ಗೆ ಜನರ ಪ್ರಶ್ನೆಗೆ ಉತ್ತರ ನೀಡಿದ ಮಿಲಿಂದ್
"ನಾನು ನನ್ನ ಟ್ರೈಸೆಪ್ಸ್ ಅನ್ನು ಹೇಗೆ ಮಾಡಿಕೊಂಡೆ ಅಂತ ಜನರು ಆಗಾಗ್ಗೆ ನನ್ನನ್ನು ಕೇಳುತ್ತಾರೆ. ಕಠಿಣ ಪರಿಶ್ರಮಕ್ಕೆ ಯಾವುದೇ ಪರ್ಯಾಯವಿಲ್ಲ, ಆದರೆ ಅದು ಅಷ್ಟು ಕಠಿಣವಾಗಿರಬೇಕಾಗಿಲ್ಲ" ಎಂದು ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದಾರೆ.

ತನ್ನ ಫಿಟ್ನೆಸ್ ಟಿಪ್ಸ್ ಅನ್ನು  ಶೇರ್ ಮಾಡಿದ ನಟ
"ಪ್ರತಿದಿನ ಕೇವಲ ಒಂದು ನಿಮಿಷದ ಪುಶ್ ಅಪ್ ಗಳನ್ನು ಮಾಡುವುದರೊಂದಿಗೆ ನೀವು ಈ ಫಿಟ್ನೆಸ್ ಪ್ರಯಾಣವನ್ನು ಪ್ರಾರಂಭಿಸಬಹುದು ಮತ್ತು ನಂತರದಲ್ಲಿ ನೀವು ಹ್ಯಾಂಡ್, ಸ್ಟ್ಯಾಂಡ್ ಪುಶ್ ಅಪ್ ಗಳು ಸೇರಿದಂತೆ ಅನೇಕ ರೀತಿಯ ಪುಶ್-ಅಪ್ ಗಳನ್ನು ಮಾಡಬಹುದು. ನೀವು ಅದನ್ನು ನಿಮಗೆ ಬೇಕಾದಷ್ಟು ಕಠಿಣವಾಗಿ ಮಾಡಬಹುದು" ಎಂದು ಅವರು ಹೇಳಿದರು. ಅವರು ನದಿಯ ದಡದಲ್ಲಿ ಪುಶ್-ಅಪ್ ಗಳನ್ನು ಮಾಡುತ್ತಿರುವ ವಿಡಿಯೋವೊಂದನ್ನು ಸಹ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Shenaz Treasury: ವಿಚಿತ್ರ ಕಾಯಿಲೆಗೆ ತುತ್ತಾದ ಬಾಲಿವುಡ್​ ನಟಿ, ಯಾರ ಮುಖವೂ ನೆನಪಿರುವುದಿಲ್ಲವಂತೆ!

ಇವರು ಇಲ್ಲಿ ತಮ್ಮಂತೆಯೇ ಫಿಟ್ನೆಸ್ ಕಾಪಾಡಿಕೊಳ್ಳುವ ಉತ್ಸಾಹಿಗಳಿಗೆ ನೀಡಿರುವ ದೊಡ್ಡ ಸಲಹೆ ಎಂದರೆ "ದೊಡ್ಡ ಟಿಪ್ಸ್ ಏನೆಂದರೆ – ನೀವು ನಿಯಮಿತವಾಗಿರಿ ಮತ್ತು ತಾಳ್ಮೆಯಿಂದಿರಿ" ಅಂತ. ಈ ಹಿಂದೆ, ಪ್ರತಿ ದಿನವೂ ತ್ವರಿತ ಆದರೆ ಪರಿಣಾಮಕಾರಿ ವ್ಯಾಯಾಮವನ್ನು ಮಾಡುವಂತಹ 56 ವರ್ಷದ ನಟ "ಸೂರ್ಯಾಸ್ತದ ಸಮಯದಲ್ಲಿ ಪುಶ್-ಅಪ್ ಗಳನ್ನು ಮಾಡುವುದು ಇನ್ನೂ ಚೆನ್ನಾಗಿರುತ್ತದೆ" ಎಂದು ಅವರು ಮತ್ತು ಸಹ ಫಿಟ್ನೆಸ್ ಉತ್ಸಾಹಿ ಮತ್ತು ಪತ್ನಿ ಅಂಕಿತಾ ಕೊನ್ವಾರ್ ಅವರು ಚಿತ್ರೀಕರಿಸಿದ ವೀಡಿಯೋಗೆ ಶೀರ್ಷಿಕೆ ನೀಡಿದ್ದಾರೆ.

ಪುಶ್ ಅಪ್ ಗಳನ್ನು ಏಕೆ ಮಾಡಬೇಕು?
ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ನೀವಿದ್ದರೆ, ಪುಶ್ ಅಪ್ ಗಳು ಇಡೀ ದೇಹವನ್ನು ಬಲಪಡಿಸುತ್ತವೆ ಮತ್ತು ಬಲವಾದ ತಿರುಳು, ಅಗಲವಾದ ಎದೆ ಮತ್ತು ಭುಜಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.

ಇದನ್ನು ಮಾಡುವುದು ಹೇಗೆ?
ಸರಿಯಾದ ಪುಶ್-ಅಪ್ ಮಾಡಲು, ಮೊದಲಿಗೆ ನೀವು ನೆಲದ ಮೇಲೆ ಕೆಳಗೆ ಮಲಗಿ ಮುಖವನ್ನು ಕೆಳಗೆ ಇರಿಸಿ ಮತ್ತು ನಿಮ್ಮ ಕೈಗಳನ್ನು ನಿಮ್ಮ ಭುಜಗಳ ಕೆಳಗೆ ಇರಿಸಿ.
ನಂತರ, ನೀವು ಉಸಿರನ್ನು ಒಳಕ್ಕೆಳೆದುಕೊಳ್ಳುತ್ತಿದ್ದಂತೆ ನಿಮ್ಮ ದೇಹವನ್ನು ನೆಲದಿಂದ ಒಂದು ಇಂಚು ಮೇಲಕ್ಕೆ ಎತ್ತಿ, ನಂತರ ನೀವು ಉಸಿರನ್ನು ಹೊರ ಬಿಡುವಾಗ ಪ್ರಾರಂಭದ ಸ್ಥಿತಿಗೆ ಹಿಂತಿರುಗಿ. ನಿಮ್ಮ ಎದೆ ಮತ್ತು ಬೆನ್ನಿನ ದೃಢತೆ ದೃಢವಾಗಿರಬೇಕು.

ಪ್ರತಿಯೊಬ್ಬರೂ ಪುಶ್-ಅಪ್ ಗಳನ್ನು ಮಾಡಬಹುದೇ?
ನಿಮ್ಮ ಭುಜದ ಆರೋಗ್ಯದ ಮೇಲೆ ನಿವೇಷ್ಟು ಚೆನ್ನಾಗಿ ಪುಶ್-ಅಪ್ ಗಳನ್ನು ಮಾಡಬಹುದು ಎಂಬುದು ಅವಲಂಬಿತವಾಗಿರುತ್ತದೆ ಎಂದು ಪ್ರಮಾಣೀಕೃತ ವೈಯಕ್ತಿಕ ತರಬೇತುದಾರ ಮತ್ತು ವೃತ್ತಿಪರ ಬಾಡಿಬಿಲ್ಡರ್, ಐಬಿಬಿಎಫ್ ಅಥ್ಲೀಟ್ ಕೆನ್ನಿ ಸೊರು ಹಿಂದಿನ ಸಂದರ್ಶನವೊಂದರಲ್ಲಿ ಹೇಳಿದ್ದರು.

ಇದನ್ನೂ ಓದಿ:  Naga Chaitanya: ನಾಗಚೈತನ್ಯ ಜೊತೆಗಿನ ಸಂಬಂಧದ ಬಗ್ಗೆ ಕ್ಲಾರಿಟಿ ಕೊಟ್ಟ ಶೋಭಿತಾ! ನಿಟ್ಟುಸಿರು ಬಿಟ್ಟ ಸ್ಯಾಮ್​ ಫ್ಯಾನ್ಸ್​

"ಜನರು ತಮ್ಮ ಭುಜದ ಅಂಗರಚನೆಯಲ್ಲಿ ವಿಭಿನ್ನ ನಿರ್ಮಾಣವನ್ನು ಹೊಂದಿರುತ್ತಾರೆ ಮತ್ತು ವಿಭಿನ್ನ ಜೀವನಶೈಲಿ ಇತಿಹಾಸಗಳನ್ನು ಹೊಂದಿರುತ್ತಾರೆ. ಆದ್ದರಿಂದ ಈ ಭಾರವನ್ನು ಹೊರುವುದು ವಿಭಿನ್ನ ಪ್ರಮಾಣದ ಅಸ್ವಸ್ಥತೆಗೆ ಕಾರಣವಾಗಬಹುದು. ಆದ್ದರಿಂದ, ನೀವು ಭುಜದ ಗಾಯದ ಇತಿಹಾಸವನ್ನು ಹೊಂದಿಲ್ಲದಿದ್ದರೆ ಮತ್ತು ನೀವು ನೋವು ಮುಕ್ತವಾಗಿದ್ದರೆ ಮಾತ್ರ ಈ ಪುಶ್ ಅಪ್ ಗಳನ್ನು ಟ್ರೈ ಮಾಡಿರಿ. ಎಲ್ಲಿಯವರೆಗೆ ಈ ಪುಶ್-ಅಪ್ ಗಳನ್ನು ಮಾಡುವುದರಿಂದ ನಿಮ್ಮ ಭುಜಗಳು ನೋವಾಗುವುದಿಲ್ಲವೋ, ಅಲ್ಲಿಯವರೆಗೆ ನೀವು ಇದನ್ನು ಮಾಡಬಹುದು" ಎಂದು ಸೊರು ಹೇಳಿದರು.
Published by:Ashwini Prabhu
First published: