ಲವ್ ಮಾಕ್ಟೈಲ್(Love Mocktail).. ಪ್ರೇಮಿಗಳಿಗೆ ಈ ಸಿನಿಮಾ ಒಂದು ಪಾಠವನ್ನೇ ಕಲಿಸಿತ್ತು ಅಂದರೆ ತಪ್ಪಾಗಲ್ಲ. 2020ರ ಆರಂಭದಲ್ಲಿ ರಿಲೀಸ್ ಆದ ‘ಲವ್ ಮಾಕ್ಟೇಲ್’ (Love Mocktail)ಸಿನಿಮಾ ಸೂಪರ್ ಹಿಟ್ ಆಗಿತ್ತು. ರಿಲೀಸ್ ಆದ ದಿನ ಚಿತ್ರಮಂದಿರಗಳಿಗೆ ಜನ ಬರಲಿಲ್ಲ. ದಿನಗಳೆದಂತೆ ಈ ಸಿನಿಮಾ ಮಾಡಿದ ಕ್ರೇಜ್(Craze) ಇದೆಯಲ್ಲಾ, ಯಾವ ಕನ್ನಡ ಸಿನಿಮಾಗೂ ಆಗಿಲ್ಲ. ಸಿನಿಮಾ ಸೋತೇ ಹೋಯಿತು ಅಂದುಕೊಳ್ಳುವಾಗಲೇ ಲವ್ಮಾಕ್ಟೈಲ್ ಸೂಪರ್ ಡೂಪರ್(Super Duper Hit) ಹಿಟ್ ಆಗಿತ್ತು. ನೋಡ ನೋಡುತ್ತಲೇ ಚಿತ್ರ ಬಾಕ್ಸಾಫೀಸ್(Box Office)ನಲ್ಲಿ ಕಮಾಲ್ ಮಾಡಿತ್ತು. ಕೊರೋನಾ ಕೊಂಚ ಬ್ರೇಕ್ ಕೊಟ್ಟಿದ್ದಾಗ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಇದಾದ ಬಳಿಕ ಒಟಿಟಿಯಲ್ಲೂ ಈ ಸಿನಿಮಾ ಸಖತ್ ಸೌಂಡ್ ಮಾಡಿತ್ತು. ಲವ್ ಮಾಕ್ಟೈಲ್ 1 ಸಿನಿಮಾದ ಯಶಸ್ಸಿನಲ್ಲಿರುವಾಗಲೇ ಚಿತ್ರತಂಡ, ಲವ್ ಮಾಕ್ಟೈಲ್ 2 ಸಿನಿಮಾ ಮಾಡುವುದಾಗಿ ಹೇಳಿದ್ದರು. ಇದೀಗ ಸಿನಿಮಾ ಕೂಡ ರೆಡಿಯಾಗಿದೆ. ಲವ್ ಮಾಕ್ಟೈಲ್ 2 ಸಿನಿಮಾ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿತ್ತು. ಫೆಬ್ರವರಿ 11ರಂದು ಸಿನಿಮಾ ರಿಲೀಸ್ ಮಾಡುವುದಾಗಿ ಹೇಳಿಕೊಂಡಿತ್ತು. ಸಿನಿಮಾ ರಿಲೀಸ್ ದಿನಾಂಕ ಹತ್ತಿರ ಬರುತ್ತಿದ್ದರು ಟ್ರೈಲರ್(Trailer) ಮಾತ್ರ ಇನ್ನೂ ರಿಲೀಸ್ ಆಗಿಲ್ಲ. ಇದಕ್ಕೆ ಕೋಪ ಗೊಂಡಿರುವ ಮಿಲನಾ ನಾಗರಾಜ್ ಪತಿ ಡಾರ್ಲಿಂಗ್ ಕೃಷ್ಣಗೆ ವಾರ್ನಿಂಗ್ ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಟ್ರೈಲರ್ ರಿಲೀಸ್ ಮಾಡುವಂತೆ ಮಿಲನಾ ಸ್ವೀಟ್ ವಾರ್ನಿಂಗ್!
ಲವ್ ಮಾಕ್ಟೈಲ್ ಸಿನಿಮಾದಲ್ಲಿ ಹೆಂಡತಿ ಹುಟ್ಟಹಬ್ಬವನ್ನು ಮರೆಯುವ ಗಂಡನಿಗೆ ಒದಿಯುವ ದೃಶ್ಯವೊಂದು ಸಖತ್ ವೈರಲ್ ಆಗಿತ್ತು. ಅದೇ ದೃಶ್ಯವನ್ನು ವಿಡಿಯೋ ಮಾಡಿ ಮಿಲನಾ ನಾಗರಾಜ್, ಪತಿ ಕೃಷ್ಣಗೆ ವಾರ್ನಿಂಗ್ ಕೊಟ್ಟಿದ್ದಾರೆ. ‘ಎಲ್ಲರೂ ಟ್ರೈಲರ್ ರಿಲೀಸ್ ಮಾಡುತ್ತಿದ್ದಾರೆ. ನೀನೇನ್ ಮಾಡ್ತಿದ್ದೀಯಾ. ಟ್ರೈಲರ್ ರೆಡಿ ಇದೆ ತಾನೆ ರಿಲೀಸ್ ಮಾಡೀಕೆ ಏನ್ ಕಷ್ಟ ನಿನಗೆ ಅಂತ ಹೇಳಿದ್ದಾರೆ. ಈ ಸಿನಿಮಾದ ನಿರ್ಮಾಪಕಿ ನಾನು ನನ್ನ ಮಾತನ್ನೇ ಕೇಳಲ್ವಾ?ಮನೆಗೆ ಬಂದವರಿಗೆಲ್ಲ ಟ್ರೈಲರ್ ತೋರಿಸ್ತೀಯಾ. ಆದ್ರೆ, ರಿಲೀಸ್ ಮಾಡೋಕೆ ಏನ್ ಪ್ರಾಬ್ಲಂ’ ಎಂದು ಅವರು ಅಂದಿದ್ದಾರೆ. ಇದಕ್ಕೆ ಡಾರ್ಲಿಂಗ್ ಕೃಷ್ಣ ‘ರಿಲೀಸ್ ಮಾಡ್ತೀನಿ. ಶೀಘ್ರದಲ್ಲೇ ಲವ್ ಮಾಕ್ಟೈಲ್ 2 ಟ್ರೈಲರ್ ಬರುತ್ತೆ’ ಅಂತ ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನು ಓದಿ : ಸೆಂಚುರಿ ಸ್ಟಾರ್ ಮೇಲೆ ಕಣ್ಣಿಟ್ಟ ಹೊಂಬಾಳೆ ಫಿಲ್ಮ್ಸ್, ಸಂತೋಷ್ ಆನಂದ್ರಾಮ್ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ!
ಫೆಬ್ರವರಿ 11ಕ್ಕೆ ಲವ್ ಮಾಕ್ಟೈಲ್ - 2 ರಿಲೀಸ್!
ಶೀರ್ಷಿಕೆಯೇ ಸೂಚಿಸುವಂತೆ ಇದು ಲವ್ ಸ್ಟೋರಿ ಸಿನಿಮಾ. ಪ್ರೇಮಿಗಳಿಗೆ ಸೂಕ್ತವಾಗುವಂತಹ ಕಥೆಯನ್ನು ನಿರೀಕ್ಷಿಸಲಾಗುತ್ತಿದೆ. ಹಾಗಾಗಿ ಫೆ.14ರ ಪ್ರೇಮಿಗಳ ದಿನದಂದು ಈ ಸಿನಿಮಾ ರಿಲೀಸ್ ಆಗಬಹುದು ಎಂದು ಸಿನಿಪ್ರಿಯರು ಊಹಿಸಿದ್ದರು. ಆದರೆ, ಆ ದಿನಕ್ಕಿಂದ ಮೂರು ದಿನ ಮುನ್ನವೇ ಸಿನಿಮಾ ಬಿಡುಗಡೆಯಾಗುತ್ತಿದೆ . ‘ಲವ್ ಮಾಕ್ಟೇಲ್ 2’ ಚಿತ್ರಕ್ಕೆ ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳು ಕೇಳುಗರಿಗೆ ಇಷ್ಟ ಆಗಿವೆ. ಚಿತ್ರದ ಸೆನ್ಸಾರ್ ಪ್ರಕ್ರಿಯೆ ಕೂಡ ಮುಗಿದಿದೆ. ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣ ಪತ್ರ ಸಿಕ್ಕಿದೆ.
ಇದನ್ನು ಓದಿ: ಅಭಿಮಾನಿಗಳಿಂದ `ರಾಜರತ್ನ’ ಮೂರ್ತಿ ಪ್ರತಿಷ್ಠಾಪನೆ, ಪುನೀತ್ ತತ್ವ-ಆದರ್ಶ ಪಾಲನೆಗಾಗಿ ಪತ್ರಿಮೆ ಅನಾವರಣ!
ರಿಲೀಸ್ ಡೇಟ್ ಪೋಸ್ಟ್ಪೋನ್ ಆಗುತ್ತಾ?
ಕೊರೋನಾದಿಂದಾಗಿ ಎಲ್ಲ ದೊಡ್ಡ ಸಿನಿಮಾಗಳು ಕೂಡ ತಮ್ಮ ರಿಲೀಸ್ ದಿನಾಂಕವನ್ನು ಮುಂದೂಡುತ್ತಿದ್ದಾರೆ. ಇದೇ ಹಾದಿಯಲ್ಲಿ ಲವ್ ಮಾಕ್ಟೈಲ್ 2 ಸಿನಿಮಾ ಕೂಡ ಸಾಗುತ್ತಾ ಎಂಬ ಪ್ರಶ್ನೆ ಎದುರಾಗಿದೆ. ಕಾರಣ ಕೊರೋನಾದಿಂದ ಈಗಾಗಲೇ ಚಿತ್ರರಂಗ ನಲುಗಿಹೋಗಿದೆ. ಹೀಗಾಗಿ ಕೊರೋನಾ ಆತಂಕ ಕಡಿಮೆಯಾದ ಮೇಲೆ ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ