news18-kannada Updated:January 3, 2021, 1:54 PM IST
mr bachelor
ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ರಿಯಲ್ ಲೈಫ್ನ ಮುದ್ದು ಜೋಡಿ. ಇಬ್ಬರು ಸಾಕಷ್ಟು ವರುಷಗಳಿಂದ ಪ್ರೇಮಿಗಳು. ಇವರಿಬ್ಬರ ಪ್ರೇಮಕ್ಕೆ ಇನ್ನೂ ಕೆಲವೇ ದಿನಗಳಲ್ಲಿ ದಾಂಪತ್ಯ ರೂಪ ಸಿಗಲಿದೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ಕೆಲವೇ ವಾರಗಳಲ್ಲಿ ಸತಿಪತಿಗಳಾಗಲಿದ್ದಾರೆ. ಮೇಡ್ ಫಾರ್ ಈಚ್ ಅದರ್ ಎಂಬಂತಿರೋ ಈ ಜೋಡಿ ಮೊದಲಿಗೆ ತೆರೆಮೇಲೆ ಚಾರ್ಲಿ ಎಂಬ ಸಿನಿಮಾ ಮೂಲಕ ಒಂದಾಗಿತ್ತು. ಆದಾದ ನಂತರ ಲವ್ ಮೋಕ್ಟೆಲ್ ನಲ್ಲಿ ಜೊತೆಯಾಗಿದ್ರು. ಈ ಜೋಡಿಗೆ ಎರಡನೇ ಯತ್ನದಲ್ಲಿ ಕನ್ನಡಿಗರ ಪ್ರೀತಿ ಬಹುವಾಗಿಯೇ ಸಿಕ್ಕಿತು. ದೊಡ್ಡ ಗೆಲುವನ್ನೇ ಚಿತ್ರ ಪ್ರೇಮಿಗಳು ನೀಡಿದವರು. ಈಗ ಈ ರಿಯಲ್ ಲೈಫ್ ಜೋಡಿಯನ್ನ ಮೂರನೇ ಬಾರಿಗೆ ಒಂದಾಗಿಸುವ ಪ್ರಯತ್ನ ಸ್ಯಾಂಡಲ್ವುಡ್ನಲ್ಲಿ ನಡೆದಿದೆ. ಮಿಸ್ಟರ್ ಬ್ಯಾಚುಲರ್ ಎಂಬ ಚಿತ್ರ ಇದಕ್ಕೆ ವೇದಿಕೆಯಾಗಿದೆ.
ಅಂದಹಾಗೆ ಮಿಸ್ಟರ್ ಬ್ಯಾಚುಲರ್ ಚಿತ್ರಕ್ಕೆ ಆಂಧ್ರ ಮೂಲದ ನಾಯ್ಡು ಭಂಡಾರ ಎಂಬುವವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತೆಲುಗಿನ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಪೂರಿ ಜಗನ್ನಾಥ್ ಜೊತೆ ಕೆಲಸ ಮಾಡಿರುವ ಅನುಭವ ನಾಯ್ಡು ಭಂಡಾರ ಅವರಿಗಿದೆ. ಇದೇ ಅನುಭವವನ್ನ ಬೆನ್ನಿಗಿಟ್ಕೊಂಡು ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಮಿಸ್ಟರ್ ಬ್ಯಾಚುಲರ್ ಎಂಬ ಚಿತ್ರವನ್ನ ತೆರೆಮೇಲೆ ಕಟ್ಟಿಕೊಡಲು ಹೊರಟಿದ್ದಾರೆ.
Darshan: ಡಿ ಬಾಸ್, ಡೆಡ್ಲಿ ಸೋಮ ಇಬ್ಬರಿಗೂ ʻಡಿʼ ಲಕ್; ಡಿ ಅಕ್ಷರದ ಗುಟ್ಟು ಬಿಚ್ಚಿಟ್ಟ ನಟ ಆದಿತ್ಯ
ಈ ಚಿತ್ರಕ್ಕೆ ಈ ಮೊದಲು ವರ್ಜಿನ್ ಎಂಬ ಶೀರ್ಷಿಕೆ ಇಡಲಾಗಿತ್ತು. ಲಾಕ್ ಡೌನ್ ಸಮಯದಲ್ಲಿಯೇ ಶುರುವಾಗಿ ಅದಾಗಲೇ ಟಾಕಿ ಪೋರ್ಷನ್ ಚಿತ್ರೀಕರಣ ಕೂಡ ಮುಗಿಸಿಕೊಂಡಿದೆ. ಈಗ ಕಾರಣಾಂತರಗಳಿಂದ ವರ್ಜಿನ್ ಶೀರ್ಷಿಕೆ ಬದಲಾಗಿದೆ. ಮಿಸ್ಟರ್ ಬ್ಯಾಚುಲರ್ ಎಂಬ ಕ್ಯಾಚಿ ಶೀರ್ಷಿಕೆಯನ್ನು ಫಿಕ್ಸ್ ಮಾಡಲಾಗಿದೆ. ಹೊಸ ವರ್ಷದ ಸಂಭ್ರಮದಲ್ಲಿ ಈ ಚಿತ್ರದ ಪೋಸ್ಟರ್ ಅನಾವರಣ ಗೊಂಡಿದೆ. ಚಿತ್ರದ ಕಥೆಯ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ ಚಿತ್ರತಂಡ.
ಇನ್ನು ಚಿತ್ರದ ನಿರ್ದೇಶಕರಂತೆ ನಿರ್ಮಾಪಕರು ಸಹ ತೆಲುಗು ಮೂಲದವರು. ಸ್ವರ್ಣಲತಾ ಹಾಗೂ ಶ್ರೀನಿವಾಸ್ ಎಂಬುವವರ ಬಂಡವಾಳದಲ್ಲಿ ಮಿಸ್ಟರ್ ಬ್ಯಾಚುಲರ್ ದೃಶ್ಯರೂಪ ಪಡೆದುಕೊಂಡಿದೆ. ಇದೊಂದು ಕಾಮಿಡಿ ಕ್ಯೂಟ್ ಡ್ರಾಮಾ ಎಂಬ ಮಾಹಿತಿಯನ್ನ ಚಿತ್ರತಂಡ ಬಿಟ್ಟುಕೊಟ್ಟಿದ್ದು, ಮಣಿಕಾಂತ್ ಕದ್ರಿ ಸಂಗೀತದ ಜವಾಬ್ದಾರಿ, ಕ್ರೇಜಿ ಮೈಂಡ್ಸ್ ಸಂಕಲನದ ಹೊಣೆಯನ್ನ ಹೊತ್ತಿದ್ದಾರೆ ಹಾಗೆ ಮಿಸ್ಟರ್ ಬ್ಯಾಚುಲರ್ ನ ಮತ್ತೊಂದು ಹೈಲೈಟ್ಸ್ ಎಂದರೆ ಮಿಲನಾ ಅಲ್ಲದೆ ನಿಮಿಕಾ ರತ್ನಾಕರ್ ಕೂಡ ನಾಯಕಿಯಾಗಿ ಕಾಣಿಸಿಕೊಂಡಿರೋದು.
ಬ್ಲಾಕ್ಬಸ್ಟರ್ ಚಂದ್ರ ಚಕೋರಿ ಚಿತ್ರಕ್ಕೆ ಹೀರೋ ಆಗಬೇಕಾಗಿದ್ದು ಶ್ರೀಮುರಳಿ ಅಲ್ವಂತೆ: ಮತ್ಯಾರು?
ಮಿಸ್ಟರ್ ಬ್ಯಾಚುಲರ್ ಕೇವಲ ಕನ್ನಡದಲ್ಲಿ ಮಾತ್ರ ಅಲ್ಲ. ತೆಲುಗಿನಲ್ಲೂ ಡಬ್ ಆಗಿ ರಿಲೀಸ್ ಆಗಲಿದೆ. ಆ ಮೂಲಕ ಲವ್ ಮೋಕ್ಟೆಲ್ ಮೂಲಕ ಕನ್ನಡ ಚಿತ್ರರಂಗದಲ್ಲಿ ಸದ್ದು ಸುದ್ದಿ ಮಾಡಿದ್ದ ಕೃಷ್ಣ ಹಾಗೂ ಮಿಲನಾ ಟಾಲಿವುಡ್ ನಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸದ್ಯಕ್ಕೆ ಪೋಸ್ಟರ್ ನಿಂದಲೇ ಚಿತ್ರರಸಿಕರಲ್ಲಿ ಆಸಕ್ತಿ ಕೆರಳಿಸಿರೋ ಈ ಸಿನಿಮಾ ಹಾಡುಗಳ ಚಿತ್ರೀಕರಣ ಬಾಕಿ ಉಳಿಸಿಕೊಂಡಿದ್ದು, ಹಾಡುಗಳ ಚಿತ್ರೀಕರಣ ಮುಗಿಸಿ ತೆರೆಗೆ ಸಜ್ಜಾಗಲಿದೆ.
Published by:
Vinay Bhat
First published:
January 3, 2021, 1:53 PM IST