• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Milana Nagaraj - Krishna: ತೆರೆ ಮೇಲೆ ಮತ್ತೆ ಒಂದಾದ ಆದಿ, ನಿಧಿಮಾ - ಲವ್​ ಬರ್ಡ್ಸ್​ ಆಗ್ತಿದ್ದಾರೆ ಲವ್ ಮಾಕ್ಟೇಲ್​ ಜೋಡಿ!

Milana Nagaraj - Krishna: ತೆರೆ ಮೇಲೆ ಮತ್ತೆ ಒಂದಾದ ಆದಿ, ನಿಧಿಮಾ - ಲವ್​ ಬರ್ಡ್ಸ್​ ಆಗ್ತಿದ್ದಾರೆ ಲವ್ ಮಾಕ್ಟೇಲ್​ ಜೋಡಿ!

ಮಿಲನಾ ನಾಗರಾಜ್​, ಡಾರ್ಲಿಂಗ್​ ಕೃಷ್ಣ

ಮಿಲನಾ ನಾಗರಾಜ್​, ಡಾರ್ಲಿಂಗ್​ ಕೃಷ್ಣ

New Film Update: ಲವ್ ಮಾಕ್ಟೇಲ್ ನಂತರ ಮತ್ತೆ ಈ ಜೋಡಿ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದ್ದು, ಮತ್ತೊಂದು ಹಿಟ್ ಚಿತ್ರದ ಭರವಸೆಯಲ್ಲಿ ಕಾಯುತ್ತಿದ್ದಾರೆ.

  • Share this:

ಲವ್ ಮಾಕ್ಟೇಲ್ (Love Mocktail) ಹಾಗೂ ಲವ್ ಮಾಕ್ಟೇಲ್ 2 ಚಿತ್ರದ ಮೂಲಕ ಮೋಡಿ ಮಾಡಿದ್ದ ಜೋಡಿ ಮಿಲನಾ ನಾಗರಾಜ್ (Milana Nagaraj) ಮತ್ತು ಡಾರ್ಲಿಂಗ್ ಕೃಷ್ಣ (darling Krishna) ಮತ್ತೆ ಜೋಡಿಯಾಗಿದ್ದಾರೆ. ರಿಯಲ್ ಲೈಫ್ ಕಪಲ್, ಈಗ ರೀಲ್ ಕಪಲ್ ಆಗಿ ಜನರಿಗೆ ಮನರಂಜನೆ ನೀಡಲು ವೇದಿಕೆ ಸಿದ್ದವಾಗಿದೆ ಎನ್ನಬಹುದು. ಹೌದು, ಲವ್‌ ಬರ್ಡ್ಸ್ (Love birds) ಹೆಸರಿನ ಚಿತ್ರ ಸೆಟ್ಟೇರಿದ್ದು ಅದರಲ್ಲಿ ಕೃಷ್ಣ ಹಾಗೂ ಮಿಲನಾ ನಾಯಕ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.


ರೋಮಿಯೋ ಹಾಗೂ ರಾಗ ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನಿರ್ದೇಶಕ ಪಿ.ಸಿ. ಶೇಖರ್ ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದು, ಮಿಲನಾ ಹಾಗೂ ಕೃಷ್ಣ ಅಭಿಮಾನಿಗಳು ಜೋಡಿಯನ್ನು ಮತ್ತೆ ತೆರೆ ಮೇಲೆ ಕಾಣಲು ಕಾತರದಿಂದ ಕಾಯುತ್ತಿದ್ದಾರೆ.


ನಿರ್ದೇಶಕರ ಪ್ರಕಾರ ಇದೊಂದು ವಿಭಿನ್ನ ಪ್ರೇಮಕತೆಯಾಗಿದೆ. ಸಾಮಾನ್ಯವಾಗಿ ಎಲ್ಲರೂ ಪ್ರೀತಿಸಿ ಮದುವೆಯಾಗುತ್ತಾರೆ. ಪ್ರೀತಿಸಿದ ವ್ತಕ್ತಿಯನ್ನು ಪಡೆಯಲು ಹರಸಾಹಸ ಮಾಡುವವರೂ ಇದ್ದಾರೆ. ಆದರೆ ಈ ಚಿತ್ರ ಮದುವೆಯಾದ ಜೋಡಿಗಳು ನಂತರ ಪ್ರೀತಿಯಲ್ಲಿ ಬೀಳುವ ಕಥಾ ಹಂದರವನ್ನು ಹೊಂದಿದೆ. ಅಲ್ಲದೇ ಇದು ಮಹಿಳೆಯರನ್ನು ಹೆಚ್ಚಾಗಿ ಕೇಂದ್ರಿಕರಿಸಿದೆ ಎನ್ನಬಹುದು.


ಕಥೆಯ ಸುಳಿವು ಕೊಟ್ಟ ನಿರ್ದೇಶಕರು


ಈಗಿನ ಮಹಿಳೆಯರು ಗಂಡನ ಮೇಲೆ ಅವಲಂಬಿತರಲ್ಲ. ತಾವು ದುಡಿದು, ತಮ್ಮ ಕಾಲ ಮೇಲೆ ನಿಲ್ಲುವ ಶಕ್ತಿ ಅವರಿಗಿದೆ. ಯಾವುದೇ ಸಂಬಂಧದಲ್ಲಿ ಸಣ್ಣ ಸಣ್ಣ ಸಮಸ್ಯೆಗಳು ಮಾಮೂಲಿ ಆದರೆ ಅದನ್ನು ಹೇಗೆ ನಿಭಾಯಿಸಿಕೊಂಡು ಹೋಗುತ್ತೇವೆ ಎಂಬುದು ಮುಖ್ಯ ಎನ್ನುವುದನ್ನ ಈ ಕಥೆ ಹೇಳುತ್ತದೆ ಎಂದು ನಿರ್ದೇಶಕರು ಕತೆಯ ಸುಳಿವು ನೀಡಿದ್ದಾರೆ.


ಇನ್ನು ಈ ಚಿತ್ರಕ್ಕೆ ಮೊದಲೇ ಕೃಷ್ಣ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿತ್ತು. ನಾಯಕಿಯ ಹುಡುಕಾಟ ಮಾಡುತ್ತಿದ್ದಾಗ, ಮಿಲನಾ ಅವರನ್ನೇ ಮಾಡಿದರೆ ಆ ಪಾತ್ರ ನ್ಯಾಯ ಸಿಗುತ್ತದೆ. ಅವರಿಬ್ಬರು ಸ್ಯಾಂಡಲ್ವುಡ್ನ ಮೇಡ್ ಫಾರ ಈಚ್ ಅದರ್ ಕಪ್ ಎಂದು ಶೇಖರ್ ಮಿಲನಾ ಹಾಗೂ ಕೃಷ್ಣ ಜೋಡಿಯನ್ನು ಹಾಡಿ ಹೊಗಳಿದ್ದಾರೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಅವರಿಬ್ಬರು ಅದ್ಭುತ ನಟನೆ ಮಾಡುತ್ತಾರೆ. ಜನರಿಗೆ ಈ ಜೋಡಿ ಎಂದರೆ ಬಹಳ ಇಷ್ಟ. ಈಗಾಗಲೇ ಜನರಿಗೆ ಹತ್ತಿರವಿರುವ ಜೋಡಿಯನ್ನು ಇಟ್ಟುಕೊಂಡು ಸಿನೆಮಾ ಮಾಡುವುದು ಜನರಿಗೆ ಇನ್ನಷ್ಟು ಹತ್ತಿರವಾಗಲು ಸಾಧ್ಯವಾಗುತ್ತದೆ ಎಂಬುದು ನಿರ್ದೇಶಕರ ಅಭಿಪ್ರಾಯ.


ಇನ್ನು ಈ ಚಿತ್ರದ ಬಗ್ಗೆ ಮಾತನಾಡಿದ ನಟಿ ಮಿಲನಾ ನಾಗರಾಜ್, ಲವ್ ಮಾಕ್ಟೇಲ್ ನಂತರ ನಮಗೆ ಬಹಳ ಆಫರ್ಗಳು ಬಂದಿದೆ. ನಾವು ಜನರಿಗೆ ಇಷ್ಟವಾಗುವ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಸುಮ್ಮನಿದ್ವಿ. ಈ ಲವ್ ಬರ್ಡ್ಸ್ ಕತೆಯನ್ನು ಕೇಳಿದಾಗ ನಮಗೆ ಬಹಳ ಇಷ್ಟವಾಯಿತು. ಅಲ್ಲದೇ ಶೇಖರ್ ಅವರು ಉತ್ತಮ ನಿರ್ದೇಶಕ ಸಹ, ಹಾಗಾಗಿ ನಾವು ಈ ಕತೆಯನ್ನು ಒಪ್ಪಿದ್ದು, ಜನರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ ಎಂದಿದ್ದಾರೆ.


ಇದನ್ನೂ ಓದಿ: ಈ ನಟ, ನಟಿಯರು ಒಬ್ಬರಿಗೊಬ್ಬರು ಸಂಬಂಧಿಕರಂತೆ! ಇವರ ರಿಲೇಷನ್‌ಶಿಪ್ ಹೇಗಿದೆ ನೋಡಿ


ಇನ್ನು ಈಗಾಗಲೇ ಬೆಂಗಳೂರಿನಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಒಂದು ಸ್ಥಳದಲ್ಲಿ 18 ಸೆಟ್ ಹಾಕಿ, ಕೇವಲ ಒಂದೇ ಶೆಡ್ಯೂಲ್ನಲ್ಲಿ ಪೂರ್ತಿ ಚಿತ್ರದ ಚಿತ್ರೀಕರಣ ಮುಗಿಸಲು ನಿರ್ದೇಶಕರು ಹಾಗೂ ನಿರ್ಮಾಪಕರು ನಿರ್ಧರಿಸಿದ್ದಾರೆ.


ಅರ್ಜುನ್ ಜನ್ಯ ಸಂಗೀತ


ಇನ್ನು ಈ ಸಿನೆಮಾದಲ್ಲಿ ಸಹ ಅದ್ಭುತ ಹಾಡುಗಳಿದ್ದು, ಮ್ಯೂಸಿಕ್ ಮಾಂತ್ರಿಕ ಅರ್ಜಿನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇದು ಶೇಖರ್ ಮತ್ತು ಅರ್ಜುನ್ಯ ಜನ್ಯ ಅವರ 9 ನೇ ಕಾಂಬಿನೇಷನ್ ಎನ್ನಲಾಗುತ್ತಿದೆ.


ಅಲ್ಲದೇ ಅದ್ಬುತ ನಟ, ನಟಿಯರಾದ ರಂಗಾಯಣ ರಘು, ವೀಣಾ ಸುಂದರ್, ಸಾಧುಕೋಕಿಲಾ, ಅವಿನಾಶ್ ಸೇರಿದಂತೆ ಉತ್ತಮ ತಾರಬಳಗವನ್ನು ಈ ಚಿತ್ರ ಹೊಂದಿದೆ.


ಇದನ್ನೂ ಓದಿ: ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಸಿನೆಮಾ ನೋಡಲು ಮೆಟ್ರೋದಲ್ಲಿ ಬಂದ್ರು ಮಿನಿಸ್ಟ್ರು!


ಲವ್ ಮಾಕ್ಟೇಲ್ ನಂತರ ಮತ್ತೆ ಈ ಜೋಡಿ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದ್ದು, ಮತ್ತೊಂದು ಹಿಟ್ ಚಿತ್ರದ ಭರವಸೆಯಲ್ಲಿ ಕಾಯುತ್ತಿದ್ದಾರೆ.

First published: