Vijay Deverakonda: ಲೈಗರ್​ನಲ್ಲಿ ನಟಿಸಲು​​ ಮೈಕ್​ ಟೈಸನ್ ಪಡೆದಿದ್ದು 25 ಕೋಟಿ!? ಇದೆಲ್ಲಾ ಬೇಕಿತ್ತಾ ಅಂತಿದ್ದಾರಾ ಅಭಿಮಾನಿಗಳು!

ಮೈಕ್​ ಟೈಸನ್​ನನ್ನು ಸಿನಿಮಾದಲ್ಲಿ ಹಾಕಿಕೊಳ್ಳುವ ಅಲೋಚನೆ ಬಂದಿದ್ದು  ನಿರ್ದೇಶಕಕ ಪುರಿ ಜಗನ್ನಾಥ್​ ಅವರಿಗೆ,  ಈ ಐಡಿಯಾವನ್ನು ‘ಲೈಗರ್’ ನಿರ್ಮಾಪಕರಲ್ಲೊಬ್ಬರಾದ ಕರಣ್ ಜೋಹರ್ ಅವರು ಸಂಪೂರ್ಣವಾಗಿ ವಿರೋಧಿಸಿದ್ದರು.

ಲೈಗರ್​ನಲ್ಲಿ ನಟಿಸಲು ಮೈಕ್ ಟೈಸನ್ ಪಡೆದಿದ್ದು 25 ಕೋಟಿ

ಲೈಗರ್​ನಲ್ಲಿ ನಟಿಸಲು ಮೈಕ್ ಟೈಸನ್ ಪಡೆದಿದ್ದು 25 ಕೋಟಿ

  • Share this:

ವಿಜಯ್ ದೇವರಕೊಂಡ ಇತ್ತೀಚೆಗೆ ಬಿಡುಗಡೆಯಾದ ತಮ್ಮ ಚಿತ್ರ ಲೈಗರ್ (Liger) ಚಿತ್ರವನ್ನು ಥಿಯೇಟರ್‌ನಲ್ಲಿ (Theater) ನೋಡಿದ ಬಳಿಕ ಫುಲ್ ಅಪ್ ಸೆಟ್​ ಆಗಿದ್ದಾರಂತೆ.  ಭಾರತದಲ್ಲಷ್ಟೆ ಅಲ್ಲ ವಿದೇಶಗಳಲ್ಲೂ ಲೈಗರ್ ಸಿನಿಮಾ ಬಿಡುಗಡೆಗೂ ಮುನ್ನ ವಿಜಯ್​ ದೇವರಕೊಂಡ (Vijay Deverakonda) ಭರ್ಜರಿ ಪ್ರಚಾರ ಮಾಡಿದ್ರು.  ಬಿಡುಗಡೆ ಬಳಿಕ ಚಿತ್ರ ನಿರೀಕ್ಷಿತ ಸಕ್ಸಸ್​ ಕಾಣಲಿಲ್ಲ. ಮೊದಲ ದಿನವೇ ಸಿನಿಮಾ ಬಗ್ಗೆ ನೆಗೆಟಿವ್​ ಕಾಮೆಂಟ್​ ಕೇಳಿ ಬಂತು, ಬಾಕ್ಸ್ ಆಫೀಸ್‌ನಲ್ಲಿ ಲೈಗರ್​ ಕಳಪೆ ಪ್ರದರ್ಶನವು ಚಿತ್ರ ತಂಡಕ್ಕೆ ಬೇಸರ ಉಂಟು ಮಾಡಿದೆ ಎಂದು ಹೇಳಲಾಗ್ತಿದೆ. 


25 ಕೋಟಿ ಪಡೆದ ಮೈಕ್ ಟೈಸನ್

ಬಾಕ್ಸಿಂಗ್​ನಲ್ಲಿ ದೊಡ್ಡ ಹೆಸರು ಮಾಡಿರೋ ಮೈಕ್ ಟೈಸನ್​ ಅವರನ್ನು ಲೈಗರ್​ ಚಿತ್ರದಲ್ಲಿ ಕಾಣಬಹುದು. ಈ ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಮೈಕ್ ಟೈಸನ್ ದೃಶ್ಯಗಳಿವೆ. ಚಿತ್ರದಲ್ಲಿ ನಟಿಸಲು ಮೈಕ್ ಟೈಸನ್ ಅವರು ಬರೋಬ್ಬರಿ 25 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಒಂದು ಸಣ್ಣ  ದೃಶ್ಯಕ್ಕೆ ಮೈಕ್ ಟೈಸನ್​ಗೆ ಇಷ್ಟೋಂದು ದೊಡ್ಡ ಮೊತ್ತ ಕೊಟ್ಟಿದ್ದು, ಚಿತ್ರತಂಡಕ್ಕೆ ಭಾರೀ ನಷ್ಟ ಉಂಟು ಮಾಡಿದೆ.



ತಲೆಕೆ

mike tyson get 25 crore remuneration for vijay devarakonda starrer liger movie
ಲೈಗರ್​ನಲ್ಲಿ ನಟಿಸಲು ಮೈಕ್ ಟೈಸನ್ ಪಡೆದಿದ್ದು 25 ಕೋಟಿ


ತಲೆಕೆಳಗಾಯ್ತು ಪುರಿ ಆಲೋಚನೆಗಳು

ಮೈಕ್ ಟೈಸನ್ ಅವರು ಬಾಕ್ಸಿಂಗ್​ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದರು. ಆದರೆ, ಈಗಿನ ಜನರೇಷನ್​ನವರಿಗೆ ಮೈಕ್ ಟೈಸನ್ ಬಗ್ಗೆ ಸರಿಯಾಗಿ ತಿಳಿದಿಲ್ಲ. ಅನೇಕರಿಗೆ ಅವರು ಯಾರು ಎಂಬುದೇ ಗೊತ್ತಿಲ್ಲ. ಈ ಕಾರಣಕ್ಕೆ ಚಿತ್ರದಲ್ಲಿ ಅವರನ್ನು ಹಾಕಿಕೊಂಡರೆ ಹೆಚ್ಚು ಮೈಲೇಜ್ ಸಿಗಲಿದೆ ಎಂಬ ನಿರ್ದೇಶಕ ಪುರಿ ಜಗನ್ನಾಥ್ ಅವರ ಆಲೋಚನೆ ತಲೆಕೆಳಗಾಗಿದೆ.

ಇದನ್ನೂ ಓದಿ: Liger Collection: ವೀಕೆಂಡ್​​ನಲ್ಲೂ ಥಿಯೇಟರ್​ಗೆ ಬರಲಿಲ್ಲ ಜನ! ಬಾಕ್ಸ್ ಆಫೀಸ್​​ನಲ್ಲಿ ಲೈಗರ್ ಗಳಿಸಿದ್ದು ಎಷ್ಟು!?

ಮೈಕ್ ಟೈಸನ್​ಗಾಗಿ ಹಠ ಹಿಡಿದ್ದ ಪುರಿ

ಮೈಕ್ ಟೈಸನ್ ಗಾಗಿ ಹಠ ಹಿಡಿದ್ದರಂತೆ ನಿರ್ದೇಶಕ ಪುರಿ ಜಗನ್ನಾಥ್​, ಮೈಕ್​ ಟೈಸನ್​ನನ್ನು ಸಿನಿಮಾದಲ್ಲಿ ಹಾಕಿಕೊಳ್ಳುವ ಅಲೋಚನೆ ಬಂದಿದ್ದು  ನಿರ್ದೇಶಕಕ ಪುರಿ ಜಗನ್ನಾಥ್​ ಅವರಿಗೆ,  ಈ ಐಡಿಯಾವನ್ನು ‘ಲೈಗರ್’ ನಿರ್ಮಾಪಕರಲ್ಲೊಬ್ಬರಾದ ಕರಣ್ ಜೋಹರ್ ಅವರು ಸಂಪೂರ್ಣವಾಗಿ ವಿರೋಧಿಸಿದ್ದರು.

ಬಿಗ್​ ಲಾಸ್​​, ನೆಲಕ್ಕಚಿದ ಲೈಗರ್!

ಮೈಕ್ ಟೈಸನ್​ ಸಿನಿಮಾದಲ್ಲಿ ನಟಿಸಿದರೆ ಯಾವುದೇ ರೀತಿಯಲ್ಲಿ ಉಪಯೋಗ ಆಗುವುದಿಲ್ಲ ಎಂಬ ಮಾತನ್ನು ಹೇಳಿದ್ದರು. ಆದ್ರೆ ಪುರಿ ಜಗನ್ನಾಥ್​ ಯಾರ ಮಾತನ್ನು ಕೇಳದೆ ಎಷ್ಟೇ ಖರ್ಚಾದರೂ ಮೈಕ್ ಟೈಸನ್ ಸಿನಿಮಾದಲ್ಲಿ ನಟಿಸಬೇಕು ಎಂದು ಪುರಿ ಹಠ ಹಿಡಿದರು. ಇದೀಗ ಸಿನಿಮಾ ನೆಲಕ್ಕಚಿದ ಬಳಿಕ ನಿರ್ದೇಶಕರು ಮೈಕ್​ ಟೈಸನ್​ ನಿಂದಾದ ಲಾಸ್​ ಬಗ್ಗೆ ಚಿಂತಿಸುತ್ತಿದ್ದಾರೆ. 

ಇದನ್ನೂ ಓದಿ: Vijay Deverakonda: ಥಿಯೇಟರ್​ನಲ್ಲಿ ಸದ್ದು ಮಾಡ್ತಿಲ್ಲ ಲೈಗರ್; ಸಿನಿಮಾ ನೋಡಿ ಹೊರ ಬಂದು ಕಣ್ಣೀರು ಹಾಕಿದ್ರಾ ವಿಜಯ್!?

ಬಾಕ್ಸ್​ ಆಫೀಸ್​ನಲ್ಲಿ ಕಳಪೆ ಪ್ರದರ್ಶನ

ಚಾರ್ಮಿ ಲೈಗರ್ ಚಿತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದರು ಕಳೆದ ವಾರ ಬಿಡುಗಡೆಯಾದಾಗ ಲೈಗರ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ನೀರಸ ಪ್ರತಿಕ್ರಿಯೆಯನ್ನು ಪಡೆಯಿತು. ಹಿಂದಿಯಲ್ಲೂ ಕಳೆದ ವಾರ ಬಿಡುಗಡೆಯಾಗಿದ್ದ ಈ ಚಿತ್ರ ಶುಕ್ರವಾರ ಕೇವಲ 4.50 ಕೋಟಿ (ಹಿಂದಿ ಆವೃತ್ತಿ) ಕನೆಕ್ಷನ್​ ಆಗಿದೆ.

ಓಟಿಟಿಗಳ ಬಗ್ಗೆ ಮಾತಾಡಿ ಚಾರ್ಮಿ, ಜನರು ಮನೆಯಲ್ಲಿಯೇ ಕುಳಿತುಕೊಳ್ಳುವ ಮೂಲಕ ಒಂದೇ ಕ್ಲಿಕ್‌ನಲ್ಲಿ ಚಿತ್ರ ನೋಡಲು ಬಯಸುತ್ತಿದ್ದಾರೆ. ಇಡೀ ಕುಟುಂಬವು ಟಿವಿಯಲ್ಲಿ ಅತಿ ದೊಡ್ಡ ಬಜೆಟ್ ಚಲನಚಿತ್ರ ನೋಡಬಹುದು. ಹೀಗಾಗಿ ಜನರು ಥಿಯೇಟರ್‌ಗಳಿಗೆ ಬರುವುದಿಲ್ಲ ಎಂದು ಚಾರ್ಮ್ ಫ್ರೀ ಪ್ರೆಸ್ ಜರ್ನಲ್‌ಗೆ ತಿಳಿಸಿದರು.

ಲೈಗರ್ ಚಿತ್ರ ಬಿಡುಗಡೆಗೆ ತಡವಾಗಿದ್ದು ಯಾಕೆ?

ಲೈಗರ್ ಚಿತ್ರ ಬಿಡುಗಡೆಯಲ್ಲಿನ ಬಹು ವಿಳಂಬ ಕೂಡ ಚಿತ್ರದ ಮೇಲೆ ಪರಿಣಾಮ ಬೀರಿದಿಯಾ ಅನ್ನೋ ಪ್ರಶ್ನೆಗೆ ಮಾತಾಡಿದ ಚಾರ್ಮಿ, ನಾವು 2020ರ ಜನವರಿಯಲ್ಲಿ ಲಿಗರ್‌ನ ಮಾತುಕತೆ ಆರಂಭಿಸಿದೆವು, ಬಳಿಕ ನಾವು ಕರಣ್ ಜೋಹರ್ ಅವರನ್ನು 2019ರಲ್ಲಿ ಭೇಟಿಯಾದೆವು. ಬಳಿಕ ನಾವು ಮೂರು ವರ್ಷಗಳ ಕಾಲ ರಿಲೀಸ್ ತಡೆಹಿಡಿದಿದ್ದೇವೆ. ಏಕೆಂದರೆ ಲೈಗರ್ ಥಿಯೇಟ್ರಿಕಲ್ ಬಿಡುಗಡೆಯಾಗಬೇಕು ಅನ್ನೋದು ನಮ್ಮ ಆಸೆಯಾಗಿತ್ತು. ಮೊದಲ ಮತ್ತು 2ನೇ ಲಾಕ್‌ಡೌನ್‌ಗಳು, 3ನೇ ವೇವ್​ ಕೊರೊನಾದಿಂದ ಚಿತ್ರ ರಿಲೀಸ್​​ ತಡವಾಯ್ತು ಎಂದು ಚಾರ್ಮಿ ಹೇಳಿದ್ದಾರೆ.
Published by:Pavana HS
First published: