ಖ್ಯಾತ ಗಾಯಕ ಮಿಕಾ ಸಿಂಗ್ (Mika Singh)ಅವರು ವಿದೇಶ ಪ್ರವಾಸದಲ್ಲಿದ್ದಾರೆ. ಈ ವೇಳೆ ಅಲ್ಲಿಂದಲ್ಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಪ್ರಧಾನ ಮಂತ್ರಿ ಅವರ ಈ ಕಾರ್ಯಕ್ಕೆ ಭಾರತವೇ ಮೆಚ್ಚುಗೆ ವ್ಯಕ್ತಪಡಿಸುವಂತಾಗಿದೆ. ಗಾಯಕ ಮಿಕಾ ಸಿಂಗ್ ಅವರು ಭಾರತದ ಕರೆನ್ಸಿ ಬಳಸಿ ಕತಾರ್‌ನ ದೋಹದ ವಿಮಾನ ನಿಲ್ದಾಣದಲ್ಲಿ ಶಾಪಿಂಗ್ (Shopping) ಮಾಡಿದ್ದಾರೆ. ಈ ಕುರಿತಾಗಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಕತಾರ್‌ನ ದೋಹದ ವಿಮಾನ ನಿಲ್ದಾಣದಲ್ಲಿ ಭಾರತೀಯ ಕರೆನ್ಸಿ ಬಳಸಿ ಶಾಪಿಂಗ್ ಮಾಡಬಹುದು. ಭಾರತೀಯ ಕರೆನ್ಸಿಯನ್ನು ಡಾಲರ್‌ನಂತೆ ಬಳಸಲು ಅವಕಾಶ ಮಾಡಿಕೊಟ್ಟ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿ ಮೋದಿ ಅವರಿಗೆ ಸಲ್ಯೂಟ್ ಸಲ್ಲಿಸಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಟ್ಯಾಗ್ (Tag) ಮಾಡಿದ್ದಾರೆ.
ಮಿಕಾ ಸಿಂಗ್ ಅವರು ಐಷಾರಾಮಿ ಲೂಯಿ ವಿಟಾನ್ ಔಟ್‌ಲೆಟ್‌ನಲ್ಲಿ ಶಾಪಿಂಗ್ ಮಾಡಿದ್ದಾರೆ. ಈ ವೇಳೆ ಭಾರತದ ರೂಪಾಯಿ ಬಳಸಿದ್ದಾರೆ. ಭಾರತೀಯ ಕರೆನ್ಸಿ ಈಗ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡುತ್ತಿರುವ ಖುಷಿಯನ್ನು ಹಂಚಿಕೊAಡಿದ್ದಾರೆ. ಇದು ವೈರಲ್ ಆಗಿದೆ.
ನಿಜಕ್ಕೂ ಸಿಹಿ ಸುದ್ದಿ
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನೀವು ಕತಾರ್ ಅಥವಾ ಇತರೆ ಗಲ್ಫ್ ದೆಶಗಳಿಗೆ ಪ್ರವಾಸ ಕೈಗೊಳ್ಳುವುದಾದರೆ ಇದು ನಿಮಗೆ ನಿಜಕ್ಕೂ ಸಿಹಿ ಸುದ್ದಿಯಾಗಲಿದೆ. ಭಾರತದ ಪ್ರವಾಸಿಗರು ಭಾರತದ ರೂಪಾಯಿಯನ್ನು ಡಾಲರ್‌ಗೆ ಬದಲಾವಣೆ ಮಾಡಿಕೊಳ್ಳುವ ಅಥವಾ ಅಮೆರಿಕಾದ ಡಾಲರ್‌ಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಏಕೆಂದರೆ ಯಾವುದೇ ವಹಿವಾಟುಗಳನ್ನು, ಉತ್ಪನ್ನಗಳನ್ನು ಭಾರತೀಯ ಕರೆನ್ಸಿ ಬಳಸಿ ಮಾಡಬಹುದು ಎಂದು ಹೇಳಿದ್ದಾರೆ.
Good morning.
I felt so proud to be able to use Indian rupees whilst shopping at #Dohaairport in the @LouisVuitton store. You can even use rupees in any restaurant.. Isn’t that wonderful? A massive salute to @narendramodi saab for enabling us to use our money like dollars. pic.twitter.com/huhKR2TjU6
— King Mika Singh (@MikaSingh) April 12, 2023
ಟ್ವೀಟ್‌ನಲ್ಲಿ ಏನಿದೆ?
ಮಿಕಾ ಸಿಂಗ್ ಅವರು, ಶುಭ ಮುಂಜಾನೆ, ಕತಾರ್‌ನ ದೋಹ ಏರ್‌ಪೋರ್ಟ್ನ ಲೂಯಿಸ್ ವಿಟಾನ್ ಸ್ಟೋರ್‌ನಲ್ಲಿ ಭಾರತೀಯ ರೂಪಾಯಿಯನ್ನು ಬಳಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ನೀವು ಯಾವುದೇ ರೆಸ್ಟೋರೆಂಟ್‌ಗಳಲ್ಲಿಯೂ ಭಾರತೀಯ ಕರೆನಸಿ ಬಳಕೆ ಮಾಡಬಹುದು. ಇದು ಸೋಜಿಗವಲ್ಲವೇ? ಭಾರತೀಯ ಕರೆನ್ಸಿಯನ್ನು ಡಾಲರ್ ರೂಪದಲ್ಲಿ ಬಳಸಲು ಅವಕಾಶ ಮಾಡಿಕೊಟ್ಟ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಬಿಗ್ ಸಲ್ಯೂಟ್ ಎಂದು ಕೊಂಡಾಡಿದ್ದಾರೆ.
ಎಷ್ಟು ಮಂದಿ ಮೆಚ್ಚುಗೆ?
ಭಾರತದ ಕರೆನ್ಸಿ ಅಂತರಾಷ್ಟಿçÃಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕುರಿತು ಮಿಕಾ ಸಿಂಗ್ ಮಾಡಿರುವ ವಿಡಿಯೋವನ್ನು ಏ.12ರ ಬುಧವಾರದಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು 612.2 ಸಾವಿರ ಮಂದಿ ವೀಕ್ಷಿಸಿದ್ದಾರೆ. 14.6 ಸಾವಿರ ಮಂದಿ ಇಷ್ಟ ಪಟ್ಟಿದ್ದಾರೆ ಹಾಗೂ ಮೂರು ಸಾವಿರಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಕೂಡ ಮಾಡಲಾಗಿದೆ.
ಇನ್ನು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊAಡಿದ್ದ ಮಿಕಾ ಸಿಂಗ್ ಅವರಿಗೆ ಸಾಕಷ್ಟು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ.
ದೂರು ಕೈಬಿಡಲು ಅರ್ಜಿ
17 ವರ್ಷದ ಹಿಂದೆ ಅನುಮತಿಯಿಲ್ಲದೆ ಚುಂಬಿಸಿದ ಆರೋಪದ ಮೇಲೆ ನಟಿ ರಾಖಿ ಸಾವಂತ್ ಅವರು ಮಿಕಾ ಸಿಂಗ್ ವಿರುದ್ಧ ಸಲ್ಲಿಸಿದ ದೂರನ್ನು ಕೈಬಿಡುವಂತೆ ಮಿಕಾ ಸಿಂಗ್ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಗಾಯಕನ ಮನವಿಯನ್ನು ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಪಿ ಡಿ ನಾಯಕ್ ಅವರ ವಿಭಾಗೀಯ ಪೀಠವು ಸೋಮವಾರ ವಿಚಾರಣೆ ನಡೆಸಿತು. ಸಿಂಗ್ ಅವರ ಕಾನೂನು ತಜ್ಞರ ತಂಡವು 2006ರ ಪ್ರಕರಣವನ್ನು ವಜಾಗೊಳಿಸಬೇಕು ಎಂದು ವಾದಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ