• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Mika Singh: ಕೊನೆಗೂ ಗಾಯಕ ಮಿಕಾ ಸಿಂಗ್ ಮದುವೆ ಫಿಕ್ಸ್​, ಸ್ವಯಂವರದಲ್ಲಿ ಆಯ್ಕೆಯಾದ ಹುಡುಗಿ ಇವರೇ ನೋಡಿ!

Mika Singh: ಕೊನೆಗೂ ಗಾಯಕ ಮಿಕಾ ಸಿಂಗ್ ಮದುವೆ ಫಿಕ್ಸ್​, ಸ್ವಯಂವರದಲ್ಲಿ ಆಯ್ಕೆಯಾದ ಹುಡುಗಿ ಇವರೇ ನೋಡಿ!

ಮಿಕಾ ಸಿಂಗ್

ಮಿಕಾ ಸಿಂಗ್

Mika Singh Wedding: ಇನ್ನು ಮಿಕಾ 13-14 ವರ್ಷಗಳಿಂದ ಆಕಾಂಕ್ಷಾ ಅವರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದಾರೆ. ಅಲ್ಲದೇ, ನೀತ್ ಅವರ ಜೊತೆ ಈ ಮೊದಲು ಒಟ್ಟಿಗೆ ಒಂದು ಪ್ರಾಜೆಕ್ಟ್​ನಲ್ಲಿ ಕೆಲಸ ಮಾಡಿದ್ದರು.

  • Share this:

 ಸುಮಾರು ಒಂದು ತಿಂಗಳ ಕಾಲ ಹುಡುಕಾಡಿದ ನಂತರ ಗಾಯಕ ಮಿಕಾ ಸಿಂಗ್ (Mika Singh)  ಕೊನೆಗೂ ರಿಯಾಲಿಟಿ ಟಿವಿ (Reality Show) ಶೋ - ಸ್ವಯಂವರ್: ಮಿಕಾ ಡಿ ವೋಹ್ತಿ ಮೂಲಕ ತನ್ನ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸುಮಾರು 15 ನಿರೀಕ್ಷಿತ ವಧುಗಳನ್ನು ಒಳಗೊಂಡಿದ್ದ ಈ  ಕಾರ್ಯಕ್ರಮದಲ್ಲಿ ವಾರಗಳಲ್ಲಿ ಅನೇಕ ಎಲಿಮಿನೇಷನ್‌ಗಳ ಮೂಲಕ ಕೊನೆಯ ಮೂರು ಸ್ಪರ್ಧಿಯನ್ನು ಅಂತಿಮ ಹಂತಕ್ಕೆ ತಂದು ನಿಲ್ಲಿಸಲಾಗಿತ್ತು. ಪ್ರಾಂತಿಕಾ ದಾಸ್, ಆಕಾಂಕ್ಷಾ ಪುರಿ ಮತ್ತು ನೀತ್ ಮಹಲ್, ಈ ಮೂರು ಜನರಲ್ಲಿ ಮಿಕಾ ಕೊನೆಗೂ ಒಬ್ಬರನ್ನು ಆಯ್ಕೆ ಮಾಡಿದ್ದಾರೆ.  


ಕೊನೆಗೂ ಜೀವನ ಸಂಗಾತಿ ಆಯ್ಕೆ ಮಾಡಿದ ಮಿಕಾ ಸಿಂಗ್


ಇನ್ನು ಮಿಕಾ 13-14 ವರ್ಷಗಳ ಕಾಲ ಆಕಾಂಕ್ಷಾ ಅವರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದಾರೆ. ಅಲ್ಲದೇ, ನೀತ್ ಅವರ ಜೊತೆ ಈ ಮೊದಲು ಒಟ್ಟಿಗೆ ಒಂದು ಪ್ರಾಜೆಕ್ಟ್​ನಲ್ಲಿ ಕೆಲಸ ಮಾಡಿದ್ದರು. ಹಾಗೆಯೇ ಪ್ರಾಂತಿಕಾ ಅವರೊಂದಿಗೆ ಅವರ ಕೆಮಿಸ್ಟ್ರಿ ಬಹಳ ಅದ್ಭುತವಾಗಿದೆ ಎಂದು ಜನರು ಮೆಚ್ಚಿಕೊಂಡಿದ್ದಾರೆ.


ಜುಲೈ 25 ರಂದು ಪ್ರಸಾರವಾದ ಅಂತಿಮ ಸಂಚಿಕೆಯಲ್ಲಿ ಶೋಬ್ ಇಬ್ರಾಹಿಂ, ನಿಯತಿ ಫಟ್ನಾನಿ, ಇಕ್ಬಾಲ್ ಖಾನ್, ಕರಣ್ ವಿ ಗ್ರೋವರ್ ಮತ್ತು ಇತರ ಅನೇಕ ನಟ, ನಟಿಯರು ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ್ದಾರೆ. ಶಾರ್ದೂಲ್ ಪಂಡಿತ್ ಮತ್ತು ಭಾರತಿ ಸಿಂಗ್ ಕಾಮಿಡಿ ಈ ಕಾರ್ಯಕ್ರಮಕ್ಕೆ ಮೆರುಗು ನೀಡಿದ್ದು,  ಅಲ್ಲದೇ, ‘ಗುಡ್ ಸೇ ಮೀತಾ ಇಷ್ಕ್’, ‘ಚನ್ನಾ ಮೇರೆಯಾ’, ‘ನಾ ಉಮ್ರ್ ಕಿ ಸೀಮಾ ಹೋ’, ‘ಬೋಹೊತ್ ಪ್ಯಾರ್ ಕರ್ತೇ ಹೈ’ ಧಾರಾವಾಹಿಯ ನಟ, ನಟಿಯರು ಸಹ ಭಾಗವಹಿಸಿದ್ದರು. ಮಿಕಾ ಸಿಂಗ್ ಅವರು ಒಳ್ಳೆಯ ಸುದ್ದಿ ನೀಡುವುದರಲ್ಲಿ ಸಮಯವನ್ನು ವ್ಯರ್ಥ ಮಾಡುವುದಿಲ್ಲ ಎಂದು ಭಾರತಿ ಕಾಮಿಡಿ ಮಾಡಿದ್ದಾರೆ.


ಇದನ್ನೂ ಓದಿ: ವಿಕ್ರಾಂತ್ ರೋಣ ಸಂಭ್ರಮಾಚರಣೆ ಶುರು, ಸಿನಿಮಾ ಬಿಡುಗಡೆ ಮೊದಲೇ ಥಿಯೇಟರ್ ಸಿಂಗಾರ ಮಾಡಿದ ಫ್ಯಾನ್ಸ್


3 ಫೈನಲಿಸ್ಟ್‌ಗಳು ಮದುವೆ ಹೆಣ್ಣಿನಂತೆ ತಯಾರಾಗಿ ವೇದಿಕೆ ಮೇಲೆ ಬಂದಿದ್ದು, ಅವರು ತಮಮ್ ಮನದಲ್ಲಿ ಮಿಕಾ ಸಿಂಗ್ ಅವರ ಮೇಲಿರುವ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಮಯದಲ್ಲಿ ಆಕಾಂಕ್ಷಾ   ಪ್ರಾಂತಿಕಾ ಮತ್ತು ನೀತ್‌ಗೆ, ನಾನು ಮಿಕಾ ಅವರನ್ನು ಬಹಳ ವರ್ಷಗಳಿಂದ ಬಲ್ಲೆ. ನಾನು ಅವರು ಉತ್ತಮ ಸ್ನೇಹಿತೆ. ಹಾಗಾಹಿ ಅವರು ನಿಮ್ಮಿಬ್ಬರಲ್ಲಿ ಯಾರನ್ನಾದರೂ ಆಯ್ಕೆ ಮಾಡಿದರೂ ಸಹ ನಾನು ಅವರ ಸ್ನೇಹಿತೆಯಾಗಿ ಇರುತ್ತೇನೆ. ನೀವು ಅದನ್ನು  ನಿಭಾಯಿಸಬೇಕು ಎಂದಿದ್ದಾರೆ.




ಬಹು ಕಾಲದ ಗೆಳತಿ ಜೊತೆ ಮಿಕಾ ಮದುವೆ


ಇನ್ನು ಮಿಕಾ ಸಹ ನಾನು ಕೇವಲ ಈ ಹುಡುಗಿಯರ ಜೊತೆ ಉತ್ತಮ ಬಾಂಧವ್ಯ ಹೊಂದಿಲ್ಲ, ಅವರ ಕುಟುಂಬದವರ ಜೊತೆ ಜೊತೆ ಒಳ್ಳೆಯ ಸಂಬಂಧ ಹೊಂದಿದ್ದೇನೆ ಎಂದು ಹೇಳಿದ್ದಾರೆ.  ಪ್ರದರ್ಶನದ ನಂತರ, ಕಾರ್ಯಕ್ರಮ ಮುಗಿಯುತ್ತಿರುವ ಸಂದರ್ಭದಲ್ಲಿ ಮಿಕಾ ಸಿಂಗ್ ನಾನು ಯಾವುದೇ ಪಂಡಿತರಿಗಿಂತ ಹೆಚ್ಚು ಮದುವೆಗಳಲ್ಲಿ ಭಾಗವಹಿಸಿದ್ದೇನೆ. ನಿಜ ಹೇಳಬೇಕೆಂದರೆ, ನಾನು 2000 ಕ್ಕೂ ಹೆಚ್ಚು ಮದುವೆಗಳಲ್ಲಿ ಪ್ರದರ್ಶನ ನೀಡಿದ್ದೇನೆ ಆದರೆ ಇಂದು ನನಗೆ ಆತಂಕವಾಗುತ್ತಿವೆ. ನನ್ನ ಕೈಗಳು ನಡುಗುತ್ತಿವೆ. ನಾನು ಮೂವರಿಗೂ ಹೇಳುವುದು ಒಂದೇ, ನಾನು ಈ ಸ್ನೇಹವನ್ನು ಪ್ರೀತಿಸುತ್ತೇನೆ ಎಂದಿದ್ದಾರೆ.




ಇದನ್ನೂ ಓದಿ: ರಿಲೀಸ್ ಆಯ್ತು ಅಪ್ಪು ನಟಿಸಿರುವ ಲಕ್ಕಿಮ್ಯಾನ್​ ಸಿನಿಮಾದ ಟೀಸರ್​, ಮತ್ತೆ ತೆರೆಯ ಮೇಲೆ ದೇವರ ದರ್ಶನ!

top videos


    ಮಿಕಾ ಅಂತಿಮವಾಗಿ ಆಕಾಂಕ್ಷಾ ಪುರಿಯ ಹೆಸರನ್ನು ಹೇಳುತ್ತಾರೆ. ಬಹುಕಾಲದ ಗೆಳತಿ ಆಕಾಂಕ್ಷ ಅವರನ್ನು ತಮ್ಮ ಬಾಳ ಸಂಗಾತಿಯಾಗಿ ಅವರ ಆಯ್ಕೆ ಮಾಡಿಕೊಂಡಿದ್ದು, ಇಬ್ಬರು ಹಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಇನ್ನು ಕಾರ್ಯಕ್ರಮದ ಕೊನೆಯಲ್ಲಿ ಮಿಕಾ ಆಕಾಂಕ್ಷಾಳಿಗೆ ಬಳೆ ಕೊಡುತ್ತಾರೆ.  ಸ್ವಯಂವರ ಮೂಲಕ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದು, ಇಬ್ಬರು ಒಟ್ಟಿಗೆ ಸಂತೋಷವಾಗಿರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

    First published: