ಜಮ್ಮು-ಕಾಶ್ಮೀರದಲ್ಲಿ ಕಲಂ 370 ರದ್ದು ಮಾಡಿಸ ಹಿನ್ನಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನದ ಸಂಬಂಧಗಳಲ್ಲಿ ಬಿರುಕುಂಟಾಗಿದೆ. ಜತೆಗೆ ಗಡಿಯಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಪರಿಸ್ಥಿತಿ ಉಂಟಾಗಿದೆ. ಇವೆಲ್ಲದರ ನಡುವೆ ಬಾರತ ಹಾಗೂ ಪಾಕ್ ನಡುವಿನ ವ್ಯಾಪಾರ ಸಬಂಧಗಳು ಸದ್ಯಕ್ಕೆ ನಿಂತು ಹೋಗಿವೆ. ಪಾಕ್ನಿಂದ ಭಾರತದ ರಾಯಭಾರಿಯನ್ನೂ ದೇಶಕ್ಕೆ ವಾಪಸ್ ಕಳುಹಿಸಲಾಗಿದೆ.
ಪುಲ್ವಾಮಾ ದಾಳಿಯ ನಂತರ ಭಾರತ ಹಾಗೂ ಪಾಕ್ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಹೀಗಿರುವಾಗಲೇ ಬಾಲಿವುಡ್ನ ಖ್ಯಾತ ಗಾಯಕ ಮಿಕ ಸಿಂಗ್ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಸಂಗೀತ ಕಾರ್ಯಕ್ರಮ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷಾರಫ್ ಅವರ ಸಂಬಂಧಿಕರ ಮನೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಿಕ ಹಾಡುಗಳನ್ನು ಹಾಡಿದ್ದಾರೆ.
ಈ ಕಾರ್ಯಕ್ರಮಕ್ಕೆ ಮಿಕ 1. 6 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ವಿಷಯದಿಂದಾಗಿ ಈಗ ಮಿಕ ವಿವಾದಕ್ಕೀಡಾಗಿದ್ದು, ಸಾಮಾಜಿಕ ಜಾಲತಾಣದಲ್ಲೂ ಅವರ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.
ಇದನ್ನೂ ಓದಿ: ಕೋಟಿ ಕೋಟಿ ಬಾಚಿಕೊಂಡ 'ಕುರುಕ್ಷೇತ್ರ': ಒಟ್ಟಾರೆ ದುರ್ಯೋಧನ ಗಳಿಸಿದೆಷ್ಟು ಗೊತ್ತಾ..!
ಇದರ ಬೆನ್ನಲ್ಲೇ ಅಖಿಲ ಭಾರತ ಸಿನಿಮಾ ಕಲಾವಿದರ ಸಂಸ್ಥೆ (AICWA) ಮಿಕ ಅವರ ಮೇಲೆ ನಿಷೇಧ ಹೇರಿದೆ. ಅದೂ ಅನಿರ್ಧಿಷ್ಟಾವಧಿ ನಿಷೇಧ ಹೇರಲಾಗಿದ್ದು, ಅವರನ್ನು ಸಿನಿಮಾ, ಸಂಗೀತ ಕಾರ್ಯಕ್ರಮಗಳಿಗೆ ಸೇರಿಸದಂತೆ ಆದೇಶಿಸಲಾಗಿದೆ.
All India Cine Workers Association announce a total ban on Pakistani actors and artists working in the film industry. #PulwamaAttack pic.twitter.com/QpSMUg9r8b
— ANI (@ANI) February 18, 2019
— ANI (@ANI) February 18, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ