Old Monk: ಸಿನಿಮಾ ಚೆನ್ನಾಗಿದ್ರೂ ಸಿಕ್ತಿಲ್ಲ ಥಿಯೇಟರ್​​.. `ಓಲ್ಡ್ ಮಾಂಕ್‘ಗೆ ಪರಭಾಷೆ ಚಿತ್ರಗಳಿಂದ ಸಮಸ್ಯೆ!

ಪರಭಾಷೆ ಚಿತ್ರಗಳ ಹಾವಾಳಿಯಿಂದ ಕನ್ನಡ ಚಿತ್ರಗಳಿಗೆ ತೊಂದರೆ ಆಗುತ್ತಿರುವುದು ಇದೇ ಮೊದಲೇನಲ್ಲಾ, ಈ ಹಿಂದೆಯೂ ಹಲವಾರು ಸಿನಿಮಾಗಳು ಬೇರೆ ಭಾಷೆ ಚಿತ್ರಗಳ ಮಧ್ಯೆ  ಸಿಲುಕಿ ಕನ್ನಡ ಸಿನಿಮಾಗಳು ಪರದಾಟ ನಡೆಸಿವೆ. ಕನ್ನಡದ ‘ಓಲ್ಡ್ ಮಾಂಕ್’ ಚಿತ್ರಕ್ಕೆ ಈ ಸಮಸ್ಯೆ ಈಗ ಎದುರಾಗಿದೆ.

ಓಲ್ಡ್​ ಮಾಂಕ್​ ಸಿನಿಮಾದ  ಪೋಸ್ಟರ್​​

ಓಲ್ಡ್​ ಮಾಂಕ್​ ಸಿನಿಮಾದ ಪೋಸ್ಟರ್​​

  • Share this:
ಹಾಸ್ಯ ಮತ್ತು ಪ್ರಣಯ ಎರಡನ್ನೂ ಸುಂದರವಾಗಿ ಕಟ್ಟಿಕೊಟ್ಟಿರುವ ಸಿನಿಮಾ 'ಓಲ್ಡ್ ಮಾಂಕ್' (Old Monk) . ಈ ಸಿನಿಮಾ (film) ಅನೇಕ ಹಿರಿಯ ಮತ್ತು ಕಿರಿಯ ಕಲಾವಿದರ ಸಂಗಮವಾಗಿದ್ದು, ಪ್ರೇಕ್ಷಕರ ಮನಸ್ಸನನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಎಂ ಜಿ ಶ್ರೀನಿವಾಸ್(M.G. Srinivas) ಅವರ ನಿರ್ದೇಶನದ ಸಿನಿಮಾವೆಂದರೆ, ವಿಭಿನ್ನವಾದ ಏನನ್ನಾದರೂ ನಿರೀಕ್ಷಿಸಬಹುದು ಎಂಬುದರಲ್ಲಿ ಸಂಶಯವಿಲ್ಲ. ಏಕೆಂದರೆ ಗುಣಮಟ್ಟದ ಸಿನಿಮಾಗಳನ್ನು ನೀಡಿದ ಹೆಗ್ಗಳಿಕೆ ಅವರದ್ದು.ಓಲ್ಡ್ ಮಾಂಕ್ ವಿಷಯದಲ್ಲೂ, ವೀಕ್ಷಕರು ಅವರ ಮೇಲಿಟ್ಟ ನಂಬಿಕೆಯನ್ನು ಹುಸಿ ಮಾಡಿಲ್ಲ. ನಟನೆ ಮತ್ತು ನಿರ್ದೇಶನ ಎರಡಲ್ಲೂ ಪಳಗಿದ್ದಾರೆ ಅವರು. ಕಳೆದ ವಾರ ರಿಲೀಸ್(Release)​ ಆದ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಸಿನಿಮಾ ಚೆನ್ನಾಗಿದ್ರೂ ಥಿಯೇಟರ್(Theater)​ಗಳು ಸಿಗದೇ ನಷ್ಟ ಅನುಭವಿಸುತ್ತಿದೆ. ಈ ಬಗ್ಗೆ ಸ್ವತಃ ಎಂ.ಜಿ.ಶ್ರೀನಿವಾಸ್​ ಅಸಮಾಧಾನ ವ್ಯಕ್ತಡಿಸಿದ್ದಾರೆ.

ಪರಭಾಷೆ ಸಿನಿಮಾಗಳಿಂದ ‘ಓಲ್ಡ್​​ ಮಾಂಕ್​’ಗೆ ಸಮಸ್ಯೆ

ಶ್ರೀನಿವಾಸ್ ಅವರು ನಿರ್ದೇಶಿಸಿದ ಶ್ರೀನಿವಾಸ ಕಲ್ಯಾಣ ಸಿನಿಮಾದಂತೆ ಇದು ಕೂಡ ಒಂದು ಪ್ರಣಯ ಪ್ರಧಾನ ಸಿನಿಮಾ. ಮದುವೆ ಈ ಸಿನಿಮಾದ ಕಥೆಯ ಪ್ರಮುಖ ವಿಷಯ ವಸ್ತು.  ಆದರೆ ಇದು 80 ಮತ್ತು 90 ರ ದಶಕದ ಕೆಲವು ಹಾಸ್ಯ ಪ್ರಧಾನ ಸಿನಿಮಾಗಳ ನೆನಪು ತರಿಸುತ್ತದೆ ಎಂದರೆ ತಪ್ಪಾಗಲಾರದು. ಪರಭಾಷೆ ಚಿತ್ರಗಳ ಹಾವಾಳಿಯಿಂದ ಕನ್ನಡ ಚಿತ್ರಗಳಿಗೆ ತೊಂದರೆ ಆಗುತ್ತಿರುವುದು ಇದೇ ಮೊದಲೇನಲ್ಲಾ, ಈ ಹಿಂದೆಯೂ ಹಲವಾರು ಸಿನಿಮಾಗಳು ಬೇರೆ ಭಾಷೆ ಚಿತ್ರಗಳ ಮಧ್ಯೆ  ಸಿಲುಕಿ ಕನ್ನಡ ಸಿನಿಮಾಗಳು ಪರದಾಟ ನಡೆಸಿವೆ. ಕನ್ನಡದ ‘ಓಲ್ಡ್ ಮಾಂಕ್’ ಚಿತ್ರಕ್ಕೆ ಈ ಸಮಸ್ಯೆ ಈಗ ಎದುರಾಗಿದೆ.

ಚಿತ್ರಮಂದಿರಗಳು ಸಿಗದ ಬಗ್ಗೆ ನಿರ್ದೇಶಕನ ಮಾತು!

ಈ ಚಿತ್ರ ರಿಲೀಸ್ ಆಗಿ ಎರಡು ವಾರ ಆಗುತ್ತಿದೆ. ಈಗ ಚಿತ್ರ ತಂಡಕ್ಕೆ ದೊಡ್ಡ ಸಂಕಷ್ಟ ಎದುರಾಗಿದೆ. ಸಿನಿಮಾ ನೋಡಲು ಪ್ರೇಕ್ಷಕರು ಬಯಸಿದರೂ ಕೂಡ, ಅವರಿಗೆ ಸಿನಿಮಾ ತೋರಿಸಲು ಸಾಧ್ಯ ಆಗುತ್ತಿಲ್ಲ. ಯಾಕೆಂದರೆ ಕರ್ನಾಟಕದ ಹಲವೆಡೆ ಈ ಚಿತ್ರಕ್ಕೆ ಥಿಯೇಟರ್ ಸಿಗುತ್ತಿಲ್ಲವಂತೆ. ಪರಭಾಷೆ ಚಿತ್ರಗಳಿಗೆ ಥಿಯೇಟರ್ ನೀಡಿರುವ ಕಾರಣಕ್ಕೆ ಕನ್ನಡದ ಈ ಚಿತ್ರಕ್ಕೆ ಸುಲಭವಾಗಿ ಚಿತ್ರಮಂದಿರಗಳು ದೊರೆಯುತ್ತಿಲ್ಲವಂತೆ. ಈ ವಿಚಾರವನ್ನು ಹಂಚಿಕೊಂಡ ಚಿತ್ರದ ನಿರ್ದೇಶಕ, ನಟ ಶ್ರೀನಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಓಲ್ಡ್​ ಮಾಂಕ್​ ಬಾಟೆಲ್​ನಲ್ಲಿ ಸಿಕ್ಕಾಪಟ್ಟೆ ಎಂಟರ್​ಟೈನ್​ಮೆಂಟ್​.. ಸಿನಿಮಾ ನೋಡ್ತಿದ್ರೆ ಏರುತ್ತೆ ಕಾಮಿಡಿ ಕಿಕ್ಕು!

ಟ್ವಿಟ್ಟರ್​ನಲ್ಲಿ ಬೇಸರ ವ್ಯಕ್ತಪಡಿಸಿದ ಶ್ರೀನಿ!

‘ನನಗೆ ನಿಜವಾಗಲೂ ಬೇಜಾರಾಗೋದು, ಬೇರೆ ಭಾಷೆ ಸಿನಿಮಾ ರಿಲೀಸ್ ಆಗ್ತಿದೆ ಅನ್ನೋದಲ್ಲ. ಆದ್ರೆ ಬೇರೆ ಭಾಷೆ ಸಿನಿಮಾಗಳಿಗೆ ಸಿಗೋ ಹೆಚ್ಚಿನ ಸಂಖ್ಯೆಯ ಶೋಗಳು, ಥಿಯೇಟರ್‌ಗಳು ನಮಗೆ ಸಿಗಲ್ಲ. ಅದಕ್ಕೆ ತಕ್ಕಂತೆ ಸಾಕಷ್ಟು ಜನರು ಬೇರೆ ಭಾಷೆ ಸಿನಿಮಾ ನೋಡುವುದಕ್ಕೆ ಮೊದಲು ಪ್ರಾಮುಖ್ಯತೆ ಕೊಡುತ್ತಾರೆ. ತುಂಬಾ ಜನ ಕನ್ನಡ ಸಿನಿಮಾ ಒಂದು ಚೆನ್ನಾಗಿದೆ ಅಂತ ಹೇಳಿದ ಮೇಲೆ ನಮ್ಮ ಕನ್ನಡ ಸಿನಿಮಾ ನೋಡ್ತಾರೆ. ಆದ್ರೆ ಅಷ್ಟರಲ್ಲಿ ಶೋಗಳು ಕಡಿಮೆ ಆಗುತ್ತೆ. ಚಿತ್ರಮಂದಿರಗಳಿಂದ ಚಿತ್ರ ಎತ್ತಂಗಡಿ ಆಗುತ್ತೆ. ಎಲ್ಲರಲ್ಲೂ ಒಂದು ಮನವಿ ಏನ್ ಅಂದರೆ, ನಾವು ಕೂಡ ಒಳ್ಳೆ ಸಿನಿಮಾ ಮಾಡುವ ಎಲ್ಲಾ ಕೆಪಾಸಿಟಿ ಇದೆ. ಮೊದಲ ಪ್ರಾಮುಖ್ಯತೆ ದಯಮಾಡಿ ಕನ್ನಡ ಸಿನಿಮಾಗಳನ್ನು ನೋಡಿ’ ಎಂದು ಶ್ರೀನಿ ಟ್ವೀಟ್ ಮಾಡಿದ್ದಾರೆ


ಇದನ್ನೂ ಓದಿ: ಮತ್ತೆ ಒಂದಾಗ್ತಿದ್ದಾರೆ ಪ್ರಭಾಸ್​-ರಾಜಮೌಳಿ! ಮತ್ತೊಂದು ಇತಿಹಾಸ ಸೃಷ್ಟಿಸಲಿದ್ದಾರೆ `ಬಾಹುಬಲಿ’ ಜೋಡಿ

ಈ ವಾರ ಆದ್ರೂ ಸಿನಿಮಾ ನೋಡಿ ಎಂದ ಶ್ರೀನಿ!

‘ಚಿತ್ರ ಮೊದಲ ವಾರದಲ್ಲೇ ನೋಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಅದೇ ಟೈಮ್‌ನಲ್ಲಿ ಬೇರೆ ಭಾಷೆ ಸಿನಿಮಾಗಳನ್ನ ನೋಡಿದವರಿಗೆ ಮನವಿ. ಕಡೆಪಕ್ಷ ಈವಾರ ಆದ್ರೂ ನಮ್ಮ ಸಿನಿಮಾ ನೋಡಿ, ಇನ್ನು ಹೆಚ್ಚು ಥೀಯೇಟರ್‌ಗಳಲ್ಲಿ ಒಂದು ಒಳ್ಳೆ ಕನ್ನಡ ಚಿತ್ರ ಗೆಲ್ಲಲು ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದ್ದಾರೆ.
Published by:Vasudeva M
First published: