ಕೊರೋನಾ..ಕೊರೋನಾ.. (Corona)ಸದ್ಯದಲ್ಲಿ ಕೇಳಿದರೂ ಯಾರಲ್ಲಿ ಕೇಳಿದರೂ ಕೊರೋನಾದ ಹಾವಳಿ.. ವರ್ಷಕ್ಕೆ(Year) ಒಂದು ಸಾರಿ ಬರುವ ಹಬ್ಬದಂತೆಯೇ(Festival) ಆರು ತಿಂಗಳಿಗೊಮ್ಮೆ ಬಂದು ಅಬ್ಬರಿಸುವ ಈ ಮಹಾಮಾರಿ ಇಂದ ಜನಸಾಮಾನ್ಯರು ಮಾತ್ರ ಕಳೆದ ಎರಡು ವರ್ಷಗಳಿಂದ ಹೈರಾಣಾಗಿ ಹೋಗಿದ್ದಾರೆ. ಅದರಲ್ಲೂ ಉದ್ದಿಮೆಗಳ(Business) ಪಾಲಿಗೆ ಕೊರೋನಾ ಮಹಾಮಾರಿ ದೊಡ್ಡ ರಾಕ್ಷಸಿಯಂತೆ ಆಗಿಬಿಟ್ಟಿದೆ.. ಸಿನಿಮಾ(Cinema) ಪ್ರಿಯರಿಗೆ ಸೋಂಕಿನ ಹಾವಳಿ ಒಂದು ದೊಡ್ಡ ಪಿಡುಗಾಗಿ ಪರಿಣಮಿಸಿದೆ.. ಯಾವಾಗ ನನ್ನ ನೆಚ್ಚಿನ ನಟನ(Actor) ಸಿನಿಮಾ ಬಿಡುಗಡೆಯಾಗದೆ ಚಿತ್ರಮಂದಿರದಲ್ಲಿ ಅದನ್ನು ನೋಡಿ ಕಣ್ತುಂಬಿಕೊಳ್ಳುತ್ತಿವೇ ಎಂದು ಕಾಯುತ್ತಿದ್ದ ಹಲವಾರು ಅಭಿಮಾನಿಗಳಿಗೆ ಕೊರೋನಾ ಮಹಾಮಾರಿ ಪ್ರತಿವರ್ಷ ಶಾಕ್(Shock) ನೀಡುತ್ತಲೇ ಬಂದಿದೆ. ಹೀಗಾಗಿ ಹಲವಾರು ದೊಡ್ಡ ದೊಡ್ಡ ಸಿನಿಮಾ ನಟರ ಸಿನಿಮಾಗಳ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿವೆ.. ಕಳೆದ ವರ್ಷ ಬಿಡುಗಡೆಯಾಗಬೇಕಿದ್ದ ಸಿನಿಮಾಗಳು ಈ ವರ್ಷ ಬಿಡುಗಡೆ ಆಗಲೂ ಸಜ್ಜಾಗಿವೆ.. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ವರ್ಷವೂ ಸಹ ಸಿನಿಮಾ ಬಿಡುಗಡೆ ಯಾಗುವುದು ಬಹುತೇಕ ಡೌಟ್ ಎನ್ನುವಂತಾಗಿದೆ. ಯಾಕಂದ್ರೆ ಕೊರೋನಾ ನಿಯಂತ್ರಣ ಮಾಡಲು ಸರ್ಕಾರ ಜಾರಿಗೆ ತಂದಿರುವ ಕ್ರಮ ಇದಕ್ಕೆ ಕಾರಣ.
ಕೆಲವೊಂದು ರಾಜ್ಯಗಳಲ್ಲಿ ಚಿತ್ರಮಂದಿರ ತೆರೆಯಲು ಅನುಮತಿ ನೀಡಿಯೇ ಇಲ್ಲ.. ಮತ್ತೊಂದಷ್ಟು ರಾಜ್ಯಗಳಲ್ಲಿ ಶೇಕಡಾ 50ರಷ್ಟು ಚಿತ್ರಮಂದಿರದ ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಸಿನಿಮಾಗಳನ್ನ ಇಂತಹ ಸಂದರ್ಭದಲ್ಲಿ ಬಿಡುಗಡೆ ಮಾಡಿದರೆ ಖಂಡಿತ ಲಾಭ ಮಾಡಿಕೊಳ್ಳಲು ಆಗುವುದಿಲ್ಲ ಎಂಬ ಲೆಕ್ಕಾಚಾರದಲ್ಲಿ ಸಿನಿಮಾ ತಂಡಗಳಿವೆ.. ಹೀಗಾಗಿಯೇ ಮೊನ್ನೆ ಮೊನ್ನೆ ಬಹುನಿರೀಕ್ಷೆ ಮೂಡಿಸಿರುವ RRR ಸಿನಿಮಾ ಸಹ ಎರಡು ದಿನಾಂಕಗಳನ್ನು ಘೋಷಣೆ ಮಾಡಿ ಎಲ್ಲರಿಗೂ ಆಶ್ಚರ್ಯ ಮೂಡಿಸಿತ್ತು.. ಕೊರೋನಾ ಹಾವಳಿ ಕಡಿಮೆಯಾದರೆ ಮಾರ್ಚ್ನಲ್ಲಿ ಸಿನಿಮಾ ಬಿಡುಗಡೆ ಇಲ್ಲದಿದ್ದರೆ ಏಪ್ರಿಲ್ ಅಂತ್ಯಕ್ಕೆ ಸಿನಿಮಾ ಬಿಡುಗಡೆ ಎಂದು ದಿನಾಂಕಗಳನ್ನು ಘೋಷಣೆ ಮಾಡಿತ್ತು.. ಈಗ ಅದೇ ಮಾದರಿಯಲ್ಲಿ ಕನ್ನಡ ಸಿನಿಮಾ ಕೂಡ ಮೂರು ಹೊಸ ದಿನಾಂಕಗಳನ್ನು ಸಿನಿಮಾ ಬಿಡುಗಡೆಗಾಗಿ ಘೋಷಿಸುವ ಮೂಲಕ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.
ಇದನ್ನೂ ಓದಿ: ಕ್ರಿಕೆಟಿಗರನ್ನೂ ಕಾಡುತ್ತಿರೋ ‘ಪುಷ್ಪಾ’, ಶ್ರೀವಲ್ಲಿ ಹಾಡಿಗೆ ಸುರೇಶ್ ರೈನಾ ಸಖತ್ ಡ್ಯಾನ್ಸ್
ಸಿನಿಮಾ ಒಂದೇ ಆದರೂ ಬಿಡುಗಡೆ ದಿನಾಂಕ ಮಾತ್ರ ಹಲವು
ಇಷ್ಟು ದಿನ ಚಿತ್ರರಂಗದವರು ಪರಿಸ್ಥಿತಿ ಮೊದಲಿನಂತೆ ಸುಧಾರಿಸಿ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಸರ್ಕಾರ ಅವಕಾಶ ನೀಡುತ್ತದೆ.. ಕೊರೋನಾ ಭಯಮರೆತು ಜನರು ಚಿತ್ರಮಂದಿರಗಳತ್ತ ಮುಖ ಮಾಡಿ ಸಿನಿಮಾ ನೋಡುತ್ತಾರೆ ಎಂದು ಸಿನಿಮಾ ತಂಡಗಳು ಕಾಯುತ್ತಿದ್ದವು.. ಆದರೆ ಅವರ ನಿರೀಕ್ಷೆ ಈಡೇರದ ಕಾರಣ ಇದೀಗ ಹೊಸದೊಂದು ದಾರಿಯನ್ನ ಸಿನಿಮಾ ತಂಡಗಳು ಕಂಡುಕೊಂಡಿವೆ. ಹೌದು ಸಿನಿಮಾ ಒಂದೇ ಆದರೂ ಬಿಡುಗಡೆಯ ದಿನಾಂಕ ಮಾತ್ರ ಒಂದೇ ಆಗಿಲ್ಲ. ಒಂದಲ್ಲ ಒಂದು ದಿನ ಪರಿಸ್ಥಿತಿ ತಿಳಿಯಾಗಬಹುದು ಎಂಬ ಭರವಸೆಯ ಮೇರೆಗೆ ಒಂದರ ಜತೆಗೆ ಇನ್ನೊಂದು ಬಿಡುಗಡೆ ದಿನಾಂಕವನ್ನೂ ನಿಗದಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಸೈಫ್ ಹಾಗೂ ಕರೀನಾ ಪುತ್ರ ತೈಮೂರ್ ವಿರುದ್ಧ ಮತ್ತೆ ತಿರುಗಿ ಬಿದ್ದ ಧರ್ಮಾಂಧರು
ಓಲ್ಡ್ ಮಾಂಕ್ ತಂಡದಿಂದ ಚಿತ್ರ ಬಿಡುಗಡೆಗಾಗಿ ಮೂರು ದಿನಾಂಕ ಘೋಷಣೆ
ಕನ್ನಡದ 'ಓಲ್ಡ್ ಮಾಂಕ್' ಸಿನಿಮಾ ತಂಡ ಕೂಡ ಅದೇ ದಾರಿ ಹಿಡಿದಿದ್ದರೂ ಮತ್ತೊಂದು ಹೆಜ್ಜೆಯನ್ನು ಮುಂದಿರಿಸಿದೆ. ಅಂದರೆ ಈ ಚಿತ್ರಕ್ಕೀಗ ಬಿಡುಗಡೆ ದಿನಾಂಕ ಒಂದಲ್ಲ, ಎರಡೂ ಅಲ್ಲ, ಮೂರು. ಹೌದು.. ಕರೊನಾ ಕಡಿಮೆಯಾದ್ರೆ ಫೆ. 11ಕ್ಕೆ, 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟರೆ ಫೆ. 24ಕ್ಕೆ, 'ಆರ್ಆರ್ಆರ್' ಚಿತ್ರದ ಬಿಡುಗಡೆ ಮುಂದಕ್ಕೆ ಹೋದರೆ ಏಪ್ರಿಲ್ 24ಕ್ಕೆ ನಮ್ಮ ಸಿನಿಮಾ 'ಓಲ್ಡ್ಮಾಂಕ್' ಬಿಡುಗಡೆ ಆಗಲಿದೆ ಎಂದು ಸಿನಿತಂಡ ಹೇಳಿಕೊಂಡಿದೆ.
Release Date Fixed😎 pic.twitter.com/slYVR2oDWm
— SRINI (@lordmgsrinivas) January 23, 2022
ಇನ್ನು ಮೇಲೆ ಹೇಳಿದ ಯಾವ ದಿನಾಂಕದಲ್ಲೂ ಬಿಡುಗಡೆ ಸಾಧ್ಯವಾಗದಿದ್ದರೆ ಮೇ ತಿಂಗಳಲ್ಲಿ ಖಂಡಿತ ಚಿತ್ರ ಬಿಡುಗಡೆ ಆಗಲಿದೆ ಎಂದೂ ನಟ-ನಿರ್ದೇಶಕ ಶ್ರೀನಿ ಹೇಳಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ