ನ್ಯೂಸ್ 18 ಕನ್ನಡ
ಸದ್ಯ ಮೀಟೂ ಎಲ್ಲ ಚಿತ್ರರಂಗದಲ್ಲಿ ಸೆನ್ಸೇಷನ್ ಸೃಷ್ಟಿಮಾಡಿದೆ. ಕನ್ನಡದ ನಟಿಯರಾದ ಸಂಗೀತಾ ಭಟ್, ಶೃತಿ ಹರಿಹರನ್ ಸೇರಿ ವಿವಿಧ ಚಿತ್ರರಂಗದ ನಟಿಯರು ತಮ್ಮ ವೃತ್ತಿ ಬದುಕಿನಲ್ಲಿ ಉಂಟಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಈಗ ಈ ವಿಚಾರದಲ್ಲಿ ‘ಹೆಬ್ಬುಲಿ’ ನಟಿ ಅಮಲಾ ಪೌಲ್ ಹೊಸ ಬಾಂಬ್ ಸಿಡಿಸಿದ್ದಾರೆ. ತಮಿಳು ನಿರ್ದೇಶಕ ಸುಶಿ ಗಣೇಶನ್ ವಿರುದ್ಧ ಮೀಟೂ ಆರೋಪ ಮಾಡಿದ್ದಾರೆ.
ಕಳೆದ ವರ್ಷ ತೆರೆಕಂಡಿದ್ದ ಸುಶಿ ಗಣೇಶನ್ ನಿರ್ದೇಶನದ ‘ತಿರುಟ್ಟು ಪಾಯಲೆ 2’ ಚಿತ್ರದಲ್ಲಿ ಅಮಲಾ ನಟಿಸಿದ್ದರು. ಈ ಚಿತ್ರದ ಶೂಟಿಂಗ್ ವೇಳೆ ಸುಶಿ ಗಣೇಶನ್ ಅನುಚಿತಚಾಗಿ ವರ್ತಿಸಿದ್ದಾರೆ. ಅವರಿಗೆ ಮಹಿಳೆಯರ ಬಗ್ಗೆ ಗೌರವವೇ ಇಲ್ಲ ಎಂದಿದ್ದಾರೆ ಅಮಲಾ.
ಇದನ್ನು ಓದಿ : #MeToo: ಚಂದನವನದಲ್ಲಿ ನಿರ್ದೇಶಕ ಶಿವಮಣಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ..!
ಗಣೇಶನ್ ವಿರುದ್ಧ ತಮಿಳು ನಟಿ ಲೀನಾ ಮಣಿಮೇಕಲೈ ಇಂಥದ್ದೇ ಆರೋಪ ಮಾಡಿದ್ದರು. ಅವರ ಬೆಂಬಲಕ್ಕೆ ನಿಂತಿರುವ ಅಮಲಾ, ‘ಲೀನಾ ಈಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಅವರನ್ನು ನಿರ್ದೇಶಕರು ಸುಲಭವಾಗಿ ಟಾರ್ಗೆಟ್ ಮಾಡಿದ್ದಾರೆ.
#MeToo #MeTooIndia #LeenaManimekalai #susiganesan pic.twitter.com/Jt2sS685H5
— Amala Paul ⭐️ (@Amala_ams) October 24, 2018
Just got the shock of my life! @DirectorSusi & @sgmanjari called &I picked up to explain the stand.While I was trying to pacify his wife; Susi strted abusing me&to my surprise his wife strted laughing&they both joined to slut shame me. De feel de can scare me with dese tactics 👊🏿
— Amala Paul ⭐️ (@Amala_ams) October 24, 2018
ತಿರುಟ್ಟು ಪಾಯಲೆ 2’ ಚಿತ್ರದಲ್ಲೂ ನನ್ನ ಜತೆ ಅವರು ಅನುಚಿತವಾಗಿ ನಡೆದುಕೊಂಡಿದ್ದರು. ಉದ್ದೇಶ ಪೂರಕವಾಗಿ ಡಬಲ್ ಮೀನಿಂಗ್ ಮಾತುಗಳನ್ನಾಡುತ್ತಿದ್ದರು’ ಎಂದು ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ