#MeToo: ನಟಿ ಸಂಜನಾ ವಿರುದ್ಧ ದೂರು ನೀಡಿದ ಗಂಡ-ಹೆಂಡತಿ ಸಿನಿಮಾದ ನಿರ್ದೇಶಕ ರವಿ ಶ್ರೀವತ್ಸ

- News18
- Last Updated: October 20, 2018, 4:57 PM IST
ನ್ಯೂಸ್ 18 ಕನ್ನಡ
ಬಾಲಿವುಡ್ ಸೇರಿದಂತೆ ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸುತ್ತಿರುವ #MeToo ಅಭಿಯಾನಕ್ಕೆ ಸೆಲೆಬ್ರಿಟಿಗಳ ಬೆಂಬಲ ಸಿಗುತ್ತದೆ. ಜತೆಗೆ ಸಾಕಷ್ಟು ಆರೋಪಗಳೂ ಕೇಳಿ ಬರುತ್ತಿವೆ. ಇತ್ತೀಚೆಗಷ್ಟೆ ನಟಿ ಸಂಜನಾ ಗಲ್ರಾಣಿ ಅವರು ನಿರ್ದೇಶಕ ರವಿ ಶ್ರೀವತ್ಸ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. 'ಗಂಡ ಹೆಂಡತಿ' ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕ ತನಗೆ ಮುಜುಗರವಾಗುವಂತೆ ಚುಂಬನ ಹಾಗೂ ಹಸಿಬಿಸಿ ದೃಶ್ಯಗಳಲ್ಲಿ ಅಭಿನಯಿಸಲು ತನ್ನ ಮೇಲೆ ಒತ್ತಡ ಹೇರಿದ್ದರು. ಅದಕ್ಕೆ ವಿರೋಧಿಸಿದಕ್ಕೆ ಅವರು ತನಗೆ ಬೆದರಿಕೆ ಹಾಕಿ 50ಕ್ಕೂ ಹೆಚ್ಚು ಚುಂಬನದ ದೃಶ್ಯಗಳನ್ನು ಚಿತ್ರೀಕರಿಸಿದ್ದರು. ಅದು ಅವರ ಮೊದಲ ಸಿನಿಮಾ, ಆಗ ಅವರಿಗೆ 16 ವರ್ಷವಾಗಿದ್ದ ಕಾರಣ ಏನು ಮಾಡಬೇಕೆಂದು ತೋಚದೆ ಸುಮ್ಮನೆ ಇದ್ದರು ಆರೋಪಿಸಿದ್ದಾರೆ.
ನಟಿ ಸಂಜನಾ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. 12 ವರ್ಷಗಳ ಬಳಿಕ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಇದರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ರವಿ ಶ್ರೀವತ್ಸ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ ರವಿ.
ಸದ್ಯ ರವಿ ಅವರು ನೀಡಿರುವ ದೂರನ್ನು ಸ್ವೀಕರಿಸಿರುವ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ವಿಚಾರಣೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ.
ಬಾಲಿವುಡ್ ಸೇರಿದಂತೆ ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸುತ್ತಿರುವ #MeToo ಅಭಿಯಾನಕ್ಕೆ ಸೆಲೆಬ್ರಿಟಿಗಳ ಬೆಂಬಲ ಸಿಗುತ್ತದೆ. ಜತೆಗೆ ಸಾಕಷ್ಟು ಆರೋಪಗಳೂ ಕೇಳಿ ಬರುತ್ತಿವೆ.