#MeToo: ನಟ ಅರ್ಜುನ್​​ ಸರ್ಜಾರಿಗೂ ತಟ್ಟಿದ ಬಿಸಿ: ಫೇಸ್​ಬುಕ್​ನಲ್ಲಿ ಬಾಂಬ್​ ಸಿಡಿಸಿದ ಶ್ರುತಿ ಹರಿಹರನ್​..!

Anitha E | news18
Updated:October 20, 2018, 12:50 PM IST
#MeToo: ನಟ ಅರ್ಜುನ್​​ ಸರ್ಜಾರಿಗೂ ತಟ್ಟಿದ ಬಿಸಿ: ಫೇಸ್​ಬುಕ್​ನಲ್ಲಿ ಬಾಂಬ್​ ಸಿಡಿಸಿದ ಶ್ರುತಿ ಹರಿಹರನ್​..!
Anitha E | news18
Updated: October 20, 2018, 12:50 PM IST
ಅನಿತಾ ಈ, ನ್ಯೂಸ್​ 18 ಕನ್ನಡ 

ಬಾಲಿವುಡ್ ನಲ್ಲಿ  #MeToo ಅಭಿಯಾನ ಜೋರಾಗಿದ್ದಂತೆ ಈತ ದಕ್ಷಿಣ ಭಾರತದ ಸಿನಿ ರಂಗದಲ್ಲೂ ಕೂಡ ಇದು ಸದ್ದು ಮಾಡುತ್ತಿದೆ. ಗಾಯಕ ರಘು ದೀಕ್ಷಿತ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದ ನಂತರ, ನಟಿ ಸಂಗೀತ ಭಟ್ ಕೂಡ ಧ್ವನಿ ಎತ್ತಿದ್ದರು. ಈಗ ನಟಿ ಶ್ರುತಿ ಹರಿಹರನ್​ ಸಹ ಖ್ಯಾತ ನಟರೊಬ್ಬರಿಂದ ತಮಗಾದ ಅನುಭವದ ಕುರಿತು ಈಗ ಹೇಳಿಕೊಂಡಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಮೊದಲ ಬಾರಿಗೆ ಪಾತ್ರಕ್ಕಾಗಿ ಪಲ್ಲಂಗ ಕುರಿತಂತೆ ಧ್ವನಿ ಎತ್ತಿದ್ದ ನಟಿ ಶ್ರುತಿ ಹರಿಹರನ್​ ಈಗ #MeToo ಅಭಿಯಾನದಡಿ ಬಹುಭಾಷಾ ನಟ ಅರ್ಜುನ್​ ಸರ್ಜಾ ವಿರುದ್ದ ಬಾಂಬ್​ ಸಿಡಿಸಿದ್ದಾರೆ.

ಹೌದು, ಶ್ರುತಿ ಹಾಗೂ ಅರ್ಜುನ್​ ಸರ್ಜಾ  'ವಿಸ್ಮಯ' ಸಿನಿಮಾದಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಚಿತ್ರೀಕರಣದ ವೇಳೆ ಅರ್ಜುನ್​ ಸರ್ಜಾ ತಮ್ಮೊಂದಿಗೆ ಎಲ್ಲೆ ಮೀರಿ ವರ್ತಿಸಿದ್ದರು ಎಂದು ಶ್ರುತಿ ಕೆಲವೇ ನಿಮಿಷಗಳ ಹಿಂದೆ ತಮ್ಮ ಫೇಸ್​ಬುಕ್​ ಗೋಡೆಯ ಮೇಲೆ ಬರೆದುಕೊಂಡಿದ್ದಾರೆ.



'ವಿಸ್ಮಯ ಸಿನಿಮಾದ ಚಿತ್ರೀಕರಣದ ವೇಳೆ ಅರ್ಜುನ್​ ನನ್ನನ್ನು ಪದೇ‌ ಪದೇ ಹೋಟೆಲ್, ಪಬ್​ಗೆ ಕರೆಯುತ್ತಿದ್ದರು' ಎಂದು ಶ್ರುತಿ ಆರೋಪಿಸಿದ್ದಾರೆ.


Loading...

ಇದನ್ನೂ ಓದಿ...

ಪಾತ್ರಕ್ಕಾಗಿ ಪಲ್ಲಂಗ ಕುರಿತಂತೆ ದನಿ ಎತ್ತಿದ್ದ ಶ್ರುತಿ ನಾಪತ್ತೆ

ಶ್ರುತಿ ಹರಿಹರನ್​ ಫೇಸ್​ಬುಕ್​ ಗೋಡೆಯ ಮೇಲೆ ಬರೆದುಕೊಂಡಿರುವ ವಿಷಯದ ವಿವರ ಹೀಗಿದೆ...

'ನಾನು ಅರ್ಜುನ್​ ಸರ್ಜಾ ಅವರ ಅಭಿನಯವನ್ನು ನೋಡುತ್ತಾ ಬೆಳೆದವಳು. ಅವರೊಂದಿಗೆ ಅಭಿನಯಿಸಲು ಅವಕಾಶ ಸಿಕ್ಕಾಗ ತುಂಬಾ ಖುಷಿಯಾಗಿತ್ತು. ಎರಡು ಭಾಷೆಗಳಲ್ಲಿ ತೆರೆ ಕಾಣಬೇಕಿದ್ದ 'ವಿಸ್ಮಯ' ಸಿನಿಮಾದಲ್ಲಿ ನಾವಿಬ್ಬರೂ ಗಂಡ-ಹೆಂಡತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದೆವು. ಅದರ ಚಿತ್ರೀಕರಣದ ವೇಳೆ ದೃಶ್ಯದ ಶೂಟಿಂಗ್​ ಆರಂಭಕ್ಕೂ ಮುನ್ನ ಅಭ್ಯಾಸ ಮಾಡುತ್ತಿದ್ದೆವು. ಆಗ ರೊಮ್ಯಾಂಟಿಕ್​ ದೃಶ್ಯದ ಅಭ್ಯಾಸ ಆರಂಭಿಸುವ ಮುನ್ನವೇ ನನ್ನ ಅನುಮತಿ ಪಡೆಯದೆ ಅರ್ಜುನ್​ ನನ್ನನ್ನು ಆಲಂಗಿಸಿಕೊಂಡು, ನನ್ನ ಬೆನ್ನ ಮೇಲೆ ಮನಸ್ಸಿಗೆ ಬಂದಂತೆ ಕೈಯಾಡಿಸಿದ್ದರು. ನಂತರ ಇದನ್ನು ಸಿನಿಮಾದಲ್ಲಿ ಹೀಗೆ ಚಿತ್ರೀಕರಿಸಿದರೆ ಚೆನ್ನಾಗಿರುತ್ತದೆ ಎಂದು ನಿರ್ದೇಶಕರಿಗೆ ಹೇಳಿದರು. ನನ್ನ ಅನುಮತಿ ಪಡೆಯದೆ ಈ ರೀತಿ ನಡೆದುಕೊಂಡಿದ್ದಕ್ಕೆ ತುಂಬಾ ಸಿಟ್ಟು ಬಂದಿತ್ತು. ಈ ಘಟನೆ ನಂತರ ನನಗೆ ಅರ್ಜುನ್​ ಸರ್ಜಾ ಅವರೊಂದಿಗೆ ಕೆಲಸ ಮಾಡಲು ಕಷ್ಟವಾಗುತ್ತಿದೆ ಎಂದು ನಿರ್ದೇಶಕರಿಗೆ ಅರಿವಾಗಿತ್ತು. ಅಲ್ಲದೆ ಘಟನೆ ಬಗ್ಗೆ ನಾನು ಮೇಕಪ್​ ತಂಡದೊಂದಿಗೆ ಹೇಳಿಕೊಂಡಿದ್ದೆ. ಇದಾದ ನಂತರ ನಾನು ದೃಶ್ಯಗಳ ತಾಲೀಮಿಗೆ ಹೋಗದೆ, ನೇರವಾಗಿ ಚಿತ್ರೀಕರಣಕ್ಕೆ ಹೋಗುತ್ತಿದೆ. ಆದರೆ ಈಗಲಾದರೂ ಅರ್ಜುನ್​ ಸರ್ಜಾ ಅವರಿಗೆ ನ1-ನಟಿಯರ ನಡುವೆ ಇರುವ ಸೂಕ್ಷ್ಮವಾದ ಅಂತರದ ಬಗ್ಗೆ ತಿಳಿಸುವ ಅಗತ್ಯ ಇದೆ. ಹಿರಿಯ ನಟನಾಗಿ ತನ್ನ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಬೇರೆಯವರಿಗೆ ನೋವು ನೀಡಬಾರದೆಂದು ಸಾರ್ವಜನಿಕ ವೇದಿಕೆಗೆ ಈ ವಿಷಯವನ್ನು ತಂದಿದ್ದೇನೆ' ಎಂದು ಶ್ರುತಿ ಬರೆದುಕೊಂಡಿದ್ದಾರೆ.
First published:October 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...