ಗಂಡು 10 ಮದುವೆ ಆಗಬಹುದು, ಹೆಣ್ಣು ಯಾಕೆ ಆಗಬಾರದು?; ವೈವಾಹಿಕ ಜೀವನದ ಬಗ್ಗೆ ಮಾತನಾಡಿದ ಕನ್ನಡದ ನಟಿ!

Shefali Jariwala: ಹುಡುಗರು ಸಿನಿಮಾದ ಮೂಲಕ ‘ತೊಂದ್ರೆ ಇಲ್ಲ ಪಂಕಜಾ’ ಹಾಡಿಗೆ ಮೈ ಬಳುಕಿಸಿದ ನಟಿ ಈಗ ಮಾಧ್ಯಗಳ ಎದುರು ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಮೊದಲ ಮದುವೆ ಮುರಿದು ಬಿದ್ದಾಗ ಜೀವನ ಮುಗಿಯಿತು ಎಂದು ಅಂದುಕೊಳ್ಳುತ್ತೇವೆ. ಆದರೆ ಅದು ನಿಜಕ್ಕೂ ಕಷ್ಟವೇ. ನಾನು ಚಿಕ್ಕ ವಯಸ್ಸಿನಲ್ಲಿ ಮದುವೆಯಾದೆ ಎಂದು ಹೇಳಿದ್ದಾರೆ

ನಟಿ ಶೆಫಾಲಿ ಜರಿವಾಲ

ನಟಿ ಶೆಫಾಲಿ ಜರಿವಾಲ

 • Share this:
  ಪುನೀತ್​ ರಾಜ್​ಕುಮಾರ್, ಶ್ರೀನಗರ ಕಿಟ್ಟಿ, ಲೂಸ್​ ಮಾದ ಯೋಗಿ, ರಾಧಿಕ ಪಂಡಿತ್​​ ನಟನೆಯ ‘ಹುಡುಗರು’ ಸಿನಿಮಾದಲ್ಲಿ ನಟಿಸಿದ ನಟಿ ಶೆಫಾಲಿ ಜರಿವಾಲ ಅವರು ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಶೆಫಾಲಿ  2004ರಲ್ಲಿ ಹರ್ಮಿತ್​ ಸಿಂಗ್​ ಅವರನ್ನು ವಿವಾಹವಾದರು. ಆದರೆ 2009ರ ವೇಳೆ ಈ ಜೋಡಿ ವಿಚ್ಚೇಧನದ ಮೂಲಕ ಬೇರೆ ಬೇರೆಯಾದರು. ಆ ಬಳಿಕ ಪ್ರಯಾಗ್​ ತ್ಯಾಗಿ ಅವರನ್ನು 2014ರಲ್ಲಿ ವಿವಾಹವಾಗಿದ್ದಾರೆ .

  ಹುಡುಗರು ಸಿನಿಮಾದ ಮೂಲಕ ‘ತೊಂದ್ರೆ ಇಲ್ಲ ಪಂಕಜಾ’ ಹಾಡಿಗೆ ಮೈ ಬಳುಕಿಸಿದ ನಟಿ ಈಗ ಮಾಧ್ಯಮಗಳ ಎದುರು ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಮೊದಲ ಮದುವೆ ಮುರಿದು ಬಿದ್ದಾಗ ಜೀವನ ಮುಗಿಯಿತು ಎಂದು ಅಂದುಕೊಳ್ಳುತ್ತೇವೆ. ಆದರೆ ಅದು ನಿಜಕ್ಕೂ ಕಷ್ಟವೇ. ನಾನು ಚಿಕ್ಕ ವಯಸ್ಸಿನಲ್ಲಿ ಮದುವೆಯಾದೆ. ವಿಚ್ಚೇಧನವೂ ಆಯ್ತು. ನನಗೆ ಈ ಘಟನೆ ಅರಗಿಸಿಕೊಳ್ಳಲಾಗಲಿಲ್ಲ ಈ ಸಮಯದಲ್ಲಿ ನನ್ನ ಪಾಲಕರು, ಸ್ನೇಹಿತರು ನನ್ನ ಪರ ನಿಂತರು. ಹೀಗಾಗಿ ಅದರಿಂದ ಹೊರ ಬಂದೆ. ಪ್ರೀಯಿಯನ್ನು ನಂಬದಂತಾಯಿತು. ಆ ಬಳಿಕ ಮತ್ತೆ ಪ್ರೀತಿ ಮಾಡುತ್ತೇನೆ, ಮದುವೆಯಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಎಂದು ಶೆಫಾಲಿ ಹೇಳಿದ್ದಾರೆ.

  ನಟಿ ಶೆಫಾಲಿ ಜರಿವಾಲ


  ನಂತರ ಮಾತು ಮುಂದುವರಿಸಿದ ಅವರು ಗಂಡಸರು 10 ಮದುವೆಯಾಗುತ್ತಾರೆ. ಹೆಣ್ಣು ಯಾಕೆ ಆಗಬಾರದು? ಹೆಣ್ಣು ಬೋಲ್ಡ್​ ಇದ್ದಾಳೆ, ಅವಳದ್ದು ತಪ್ಪು ಅಂತ ಹೇಗೆ ಹೇಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

  38 ವರ್ಷದ ಶೆಫಾಲಿ ಮೊದಲ ವಿಚ್ಚೇಧನದ ಬಳಿ ಪರಾಗ್​ ತ್ಯಾಗಿ ಅವರನ್ನು ವಿವಾಹವಾದರು. ಸದ್ಯ ಈ ಜೋಡಿ ಅನ್ಯೋನ್ಯವಾಗಿದ್ದಾರೆ.
  Published by:Harshith AS
  First published: