ಪಾಕಿಸ್ತಾನದ ಪ್ರಸಿದ್ಧ ಚಲನಚಿತ್ರ ಮತ್ತು ಕಿರುತೆರೆ ನಟಿ ಮೆಹ್ವಿಶ್ ಹಯಾತ್. ಇವರು ತನ್ನ ಸಹ ದೇಶವಾಸಿಗಳಿಗೆ ಸ್ವಾತಂತ್ರ್ಯ ದಿನದಂದು (ಆಗಸ್ಟ್ 14) ಶುಭಾಶಯ ಕೋರಿದ್ದರು. ಆದರೆ ಈ ಪೋಸ್ಟ್ ಮಾತ್ರ ಬೇರೆ ಕಾರಣಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜೊತೆಗೆ ಸಾಕಷ್ಟು ಟ್ರೋಲ್ಗೂ ಗುರಿಯಾಗಿದೆ ಮತ್ತು ಇದಕ್ಕೆ ಕೈ ಕಟ್ಟಿ ಕೂರದ ನಟಿ ಪ್ರತಿಯಾಗಿ ತನ್ನ ದ್ವೇಷಿಗಳಿಗೆ ಖಾರವಾಗಿಯೇ ಉತ್ತರಿಸಿದ್ದಾರೆ.
ಆಗಸ್ಟ್ 14ರಂದು ಪಾಕಿಸ್ತಾನ ಸ್ವಾತಂತ್ರ್ಯೋತ್ಸವ ಆಚರಿಸಿತು. ಈ ಸಂದರ್ಭದಲ್ಲಿ ಮೆಹ್ವಿಶ್ ಇನ್ಸ್ಟಾಗ್ರಾಮ್ನಲ್ಲಿ 'ಒಗ್ಗಟ್ಟಿನ ಪ್ರಯತ್ನ ಮತ್ತು ನಮ್ಮ ಮೇಲಿನ ನಂಬಿಕೆಯಿಂದ ಮಾತ್ರ ನಾವು ನಮ್ಮ ಕನಸಿನ ಪಾಕಿಸ್ತಾನವನ್ನು ವಾಸ್ತವಕ್ಕೆ ತರಲು ಸಾಧ್ಯವಾಗುತ್ತದೆ.' ದೇಶಭಕ್ತಿ ಪ್ರದರ್ಶಿಸಿದರೆ ಸಾಕಾಗುವುದಿಲ್ಲ, ನಾವು ಈ ದೇಶವನ್ನು ನಿಜವಾಗಿಯೂ ಗೌರವಿಸಿದರೆ, ನಾವು ನಮ್ಮ ಪೂರ್ವಜರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸ್ವಾತಂತ್ರ್ಯ ದಿನದ ಶುಭಾಶಯಗಳು. ಪಾಕಿಸ್ತಾನ ಜಿಂದಾಬಾದ್.” ಎಂದು ಬರೆದು ಬಿಳಿ ಕುರ್ತಾ ಧರಿಸಿ ಪಾಕಿಸ್ತಾನದ ಬಾವುಟ ಹಿಡಿದಿರುವ ನಗುಮೊಗದ ಫೋಟೋ ಅಪ್ಲೋಡ್ ಮಾಡಿ ಶುಭಾಶಯ ತಿಳಿಸಿದ್ದರು. ಅವರ ಈ ಪೋಸ್ಟನ್ನು 1,50,000ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದರು.
ಆದರೆ ದುರಂತದ ಸಂಗತಿ ಎಂದರೆ ಕೆಲವು ಕೀಳು ಮನಸ್ಥಿತಿಗಳು ಆಕೆಯ ಶುಭಾಶಯ ಅರ್ಥ ಅಳವಡಿಸಿಕೊಳ್ಳಲು ಪ್ರಯತ್ನಿಸುವ ಬದಲು ಆಕೆಯ ಒಳ ಉಡುಪು ಕುರಿತಾಗಿ ಮಾತನಾಡಿದ್ದಾರೆ. ಅಂದರೆ ಆಕೆ ಧರಿಸಿರುವ ಬ್ರಾದ ಬಣ್ಣದ ವಿಚಾರವಾಗಿ ಅಸಹ್ಯಕರವಾದ ಕಮೆಂಟ್ ಮಾಡಿದ್ದಾರೆ. ಇದಕ್ಕೆ ಖಡಕ್ಕಾಗಿ ಉತ್ತರಿಸಿದ ಆಕೆ, ನಾನು ಧರಿಸಿರುವ ಬ್ರಾದ ಬಣ್ಣ ಚರ್ಚಿಸುವವರ ಮನಸ್ಸು ಎಷ್ಟು ಕೀಳುಮಟ್ಟದಿಂದ ಕೂಡಿದೆ ಮತ್ತು ಎಷ್ಟು ಕ್ಷುಲ್ಲಕ ವ್ಯಕ್ತಿಗಳು ಎಂಬುದು ತಿಳಿಯುತ್ತದೆ. ಕಪ್ಪು, ಬೂದು ಮತ್ತು ಹಸಿರು ಇದು ನನ್ನ ಖಾಸಗಿ ವಿಚಾರ ಎಂದು ಹೇಳಿದ್ದಾರೆ.
ಈ ಮಧ್ಯೆ, ಪಾಕಿಸ್ತಾನದಲ್ಲಿ ಮಹಿಳಾ ಬರಹಗಾರರನ್ನು ಸ್ವಾತಂತ್ರ್ಯ ದಿನದಂದು ನಿಂದಿಸಲಾಯಿತು ಮತ್ತು ಕಿರುಕುಳ ನೀಡಲಾಯಿತು. ಐಎಎನ್ಎಸ್ ವರದಿಯ ಪ್ರಕಾರ, ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ನಗರದ ಗ್ರೇಟರ್ ಇಕ್ಬಾಲ್ ಪಾರ್ಕಿನಲ್ಲಿ ಮಹಿಳಾ ಟಿಕ್ ಟೋಕರ್ ಮತ್ತು ಆಕೆಯ ಸಹಚರರ ಮೇಲೆ ಹಲ್ಲೆ ಮಾಡಲಾಯಿತು ಮತ್ತು ಕದ್ದ ಆರೋಪದ ಮೇಲೆ ನೂರಾರು ಅಪರಿಚಿತ ವ್ಯಕ್ತಿಗಳ ವಿರುದ್ಧ ಲಾಹೋರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೆಹ್ವಿಶ್ ಹಯಾತ್ ಪಯಣ
ಈಕೆ 2009ರಲ್ಲಿ ಪಾಕಿಸ್ತಾನದಲ್ಲಿ ತನ್ನ ನಟನಾ ವೃತ್ತಿಯನ್ನು ಇನ್ಶಾ ಅಲ್ಲಾ ಚಿತ್ರದ ಮೂಲಕ ಆರಂಭಿಸಿದರು. ಆದರೆ ಆಕೆಯ ವೃತ್ತಿಜೀವನ 2010ರಲ್ಲಿ ದೂರದರ್ಶನದೊಂದಿಗೆ ಪ್ರಾರಂಭವಾಯಿತು ಮತ್ತು 2012ರ ರೊಮ್ಯಾಂಟಿಕ್ ಧಾರಾವಾಹಿ ಮೆರಾಯ್ ಕಟೀಲ್ ಮೆರೇ ದಿಲ್ದಾರದಲ್ಲಿನ ಪಾತ್ರದ ಮೂಲಕ ಆಕೆ ಮನೆಮಾತಾದಳು.
View this post on Instagram
ಹಯಾತ್ 2014ರಲ್ಲಿ ಮತ್ತೆ ಚಲನಚಿತ್ರಗಳಲ್ಲಿ ನಟಿಸಲು ಆರಂಭಿಸಿದರು ಮತ್ತು ಆ ನಂತರ ಲಾ, ಪಂಜಾಬ್ ನಹಿನ್ ಜೌಂಗಿ ಮತ್ತು ಲೋಡ್ ವೆಡ್ಡಿಂಗ್ನಂತಹ ಹಲವಾರು ಹಿಟ್ ಪಾಕಿಸ್ತಾನಿ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ನಟಿ ಪ್ರಸ್ತುತ ಪಾಕಿಸ್ತಾನದ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರಾಗಿದ್ದು, 2 ಬಾರಿ ಲಕ್ಸ್ ಸ್ಟೈಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 2019ರಲ್ಲಿ, ನಟಿಗೆ 'ತಮ್ಘಾ-ಇ-ಇಮ್ತಿಯಾಜ್' ಪ್ರಶಸ್ತಿ ನೀಡಲಾಯಿತು. ಇದು ಪಾಕಿಸ್ತಾನದ ಶ್ರೇಷ್ಠ (ನಾಲ್ಕನೇ-ಅತ್ಯುನ್ನತ) ನಾಗರಿಕ ಗೌರವಗಳಲ್ಲಿ ಒಂದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ