HOME » NEWS » Entertainment » MEGHANA RAJ SPEAKS FIRST TIME INFANT OF MEDIA AFTER CHIRANJEEVI SARJAS DEATH SESR

Meghana Raj: ಧ್ರುವ ನನ್ನ ಶಕ್ತಿ, ಚಿರು ಸ್ಥಾನ ನಾನು ತುಂಬಬೇಕಿದೆ: ಮೇಘನಾ ರಾಜ್​ ಆಡಿದ ಮಾತುಗಳಿವು

ಲಯನ್​ ಕಿಂಗ್​ ಚಿತ್ರದಲ್ಲಿ ಸಿಂಬಾ ಪರಿಚಯಿಸಿದಂತೆ ಚಿರು ಕೂಡ ನಮ್ಮ ಮಗುವನ್ನು ಅದೇ ರೀತಿಯೇ ಜಗತ್ತಿಗೆ ತೋರಿಸಬೇಕು ಎಂದುಕೊಂಡಿದ್ದರು. ಆದರೆ, ಅವರ ಕನಸು ನನಸಾಗಲೇ ಇಲ್ಲ

news18-kannada
Updated:November 12, 2020, 7:57 PM IST
Meghana Raj: ಧ್ರುವ ನನ್ನ ಶಕ್ತಿ, ಚಿರು ಸ್ಥಾನ ನಾನು ತುಂಬಬೇಕಿದೆ: ಮೇಘನಾ ರಾಜ್​ ಆಡಿದ ಮಾತುಗಳಿವು
ಧ್ರವ ಸರ್ಜಾ- ಮೇಘನಾ
  • Share this:
ಚಿರುಜೀವಿ ಅಕಾಲಿಕೆ ಬಳಿಕ ಮೊದಲ ಬಾರಿಗೆ ಮಾಧ್ಯಮದೊಂದಿಗೆ ಮಾತನಾಡಿರುವ ನಟಿ ಮೇಘನಾ ರಾಜ್ ಹಲವು ವಿಚಾರಗಳ ಕುರಿತು ಮಾತನಾಡಿದರು. ಈ ವೇಳೇ  ನೋವಿನಲ್ಲಿದ್ದ ಕುಟುಂಬ ಮಗು ಹುಟ್ಟಿದ ಬಳಿಕ  ಸಂತೋಷ ಕಂಡುಕೊಂಡ ಬಗೆ ಕೂಡ ತಿಳಿಸಿದರು. ಇದೇ ಸಂದರ್ಭದಲ್ಲಿ ನೋವಿನಲ್ಲಿ ತಮ್ಮ ಜೊತೆಗೆ ನಿಂತ ಕುಟುಂಬಕ್ಕೆ ಧನ್ಯವಾದ ತಿಳಿಸಿದರು. ಅದರಲ್ಲಿಯೂ ತಮ್ಮ ಬೆನ್ನೆಲುಬಾಗಿ ನಿಂತಿದ್ದ ಧ್ರವ ಸರ್ಜಾ ನನ್ನ ಶಕ್ತಿಯ ಆಧಾರ ಎಂದರು. ಚಿರು ಅಕಾಲಿಕೆ ಸ್ಥಾನವನ್ನು ನಾನು ತುಂಬಲೇ ಬೇಕಿದೆ. ಆಸ್ಥಾನವನ್ನು ತುಂಬುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಿರು ಅಕಾಲಿಕೆ ನೋವನ್ನು ಮರೆಯಲು ಸಾಧ್ಯವಿಲ್ಲ. ಆದರೆ, ಈಗ ಮಗುವಿನಲ್ಲಿ ಚಿರು ಕಾಣುತ್ತಿದ್ದೇನೆ. ಚಿರು ಮಗುವಿನ ಬಗ್ಗೆ ಸಾಕಷ್ಟು ಕನಸು ಕಂಡಿದ್ದರು ಎಂದು ಅನೇಕ ವಿಚಾರಗಳ ಕುರಿತು ಮಾತನಾಡಿದರು. ಕಲಘಟಗಿಯಿಂದ ಕುಶಲಕರ್ಮಿಗಳು ತಯಾರಿಸಿ ಉಡುಗೊರೆ ನೀಡಿದ   ಮಗುವಿನ ತೊಟ್ಟಿಲ ಶಾಸ್ತ್ರ ಇಂದು ಸಂಭ್ರಮದಿಂದ ಮೇಘನಾ ಮನೆಯಲ್ಲಿ ನಡೆದಿದೆ. ಈ ಕಾರ್ಯಕ್ರಮದ ಬಳಿಕ  ಮಾಧ್ಯಮಗಳ ಮುಂದೆ ಅವರು ಕಾಣಿಸಿಕೊಂಡರು.

ನಾಮಕರಣಕ್ಕೆ ಬೆಳ್ಳಿ ತೊಟ್ಟಿಲು

ಮಗುವಿನ ತೊಟ್ಟಿಲು ಶಾಸ್ತ್ರ ನಡೆದಿದ್ದು, ನಾಮಕರಣ ಮುಂದೆ ನಡೆಯಲಿದೆ. ಮಗುವಿಗೆ ಮುದ್ದಾದ ಹೆಸರನ್ನು ಈಗಾಗಲೇ ಜ್ಯೋತಿಷಿಗಳು ತಿಳಿಸಿದ್ದು, ಇದಕ್ಕಾಗಿ ಹುಟುಕಾಟ ನಡೆಸಿದ್ದೇವೆ. ಅನೇಕ ಹೆಸರುಗಳನ್ನು ಕೆಲವರು ಹಂಚಿಕೊಳ್ಳುತ್ತಿದ್ದಾರೆ ಎಂದರು. ಇನ್ನು  ಧ್ರುವ ಖರೀದಿಸಿದ ಬೆಳ್ಳಿ ತೊಟ್ಟಿಲನ್ನು ನಾಮಕರಣ ಶಾಸ್ತ್ರದಲ್ಲಿ ಬಳಕೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.




ಚಿರುರಂತೆ ಈ ಕ್ಷಣ ಅನುಭವಿಸುತ್ತೇನೆ

ಚಿರು ಅಕಾಲಿಕೆಯಿಂದ ನಾನು ಸಂಪೂರ್ಣ ಕುಸಿದೆ. ನಾನು ಎಷ್ಟು ಬಲಶಾಲಿ ಎಂಬುದು ನನಗೆ ತಿಳಿದಿಲ್ಲ. ಚಿರು  ಪ್ರತಿ ಕ್ಷಣವನ್ನು ಎಂಜಾಯ್​ ಮಾಡುತ್ತಿದ್ದರು. ನಾನು ಸದಾ ಮುಂದಿನ ಬಗ್ಗೆ ಚಿಂತಿಸುತ್ತಿದ್ದೆ. ಚಿರು ಹೋದ ನಂತರ ನನಗೆ ತಿಳಿಯಿತು ಮುಂದೆ ಏನಾಗುವುದೊ ತಿಳಿಯದು. ಆ ಕ್ಷಣದಲ್ಲಿ ಜೀವಿಸಬೇಕು ಎಂದರು.

ಮತ್ತೆ ನಟಿಸುತ್ತೇನೆ

ಸದ್ಯ ತಾಯ್ತನದ ಸಂಭ್ರಮದಲ್ಲಿರುವ ನಟಿ ಮೇಘನಾ ಮತ್ತೆ ನಟನೆಯನ್ನು ಮುಂದುವರೆಸುವ ಬಗ್ಗೆ ಕೂಡ ತಿಳಿಸಿದ್ದಾರೆ. ನಟನೆ ಎಂಬುದು ನನ್ನ ಫ್ಯಾಷನ್​. ರಕ್ತದಲ್ಲಿಯೇ ಬಂದಿದೆ. ಚಿರು ಕೂಡ ನನಗೆ ನಟಿಸುವುದನ್ನು ನಿಲ್ಲಿಸು ಎಂದು ಯಾವತ್ತು ಹೇಳಿಲ್ಲ. ಎಲ್ಲಿಯವರೆಗೂ ಸಾಧ್ಯವೋ ಅಲ್ಲಿಯವರೆಗೂ ನಾನು ನಟಿಸುತ್ತೇನೆ. ಸ್ವಲ್ಪ ಸಮಯದಲ್ಲಿಯೇ ಮತ್ತೆ ನಟನೆ ಶುರು ಮಾಡುತ್ತೇನೆ ಎಂದು ತಿಳಿಸಿದರು. ಈ ಹಿಂದೆ ಮಾತನಾಡಿದ್ದ ಮೇಘನಾ ತಂದೆ ಸುಂದರ್​ ರಾಜ್​ ಕೂಡ, ಮಗಳು ಮುಂದೆ  ನಟಿಸುತ್ತೇನೆ ಎಂದರೆ ನಾವು ಬೆಂಬಲವಾಗಿ ನಿಲ್ಲುತ್ತೇವೆ. ಕಲಾವಿದರ ಕುಟುಂಬ ನಮ್ಮದು ಕಲಾಸೇವೆಯೇ ನಮ್ಮ ಬದುಕು ಎಂದಿದ್ದರು.

ಸಿಂಬಾನಂತೆ ಮಗು ಎತ್ತಬೇಕು ಎಂಬ ಚಿರು ಕನಸು ನನಸಾಗಲಿಲ್ಲ

ನಾವು ತಪಾಸಣೆಗಾಗಿ ಆಸ್ಪತ್ರೆಗೆ ಹೋದಾಗ ಅಲ್ಲಿ ಒಂದು ಬಾಲ್ಕನಿಯನ್ನು ನೋಡಿ ಚಿರು,  ನಾನು 'ಲಯನ್​ ಕಿಂಗ್'​ ಚಿತ್ರದಲ್ಲಿ ಸಿಂಬಾ ಪರಿಚಯಿಸಿದಂತೆ ಚಿರು ಕೂಡ ನಮ್ಮ ಮಗುವನ್ನು ಅದೇ ರೀತಿಯೇ ಜಗತ್ತಿಗೆ ತೋರಿಸಬೇಕು ಎಂದುಕೊಂಡಿದ್ದರು. ಆದರೆ, ಅವರ ಕನಸು ನನಸಾಗಲೇ ಇಲ್ಲ ಎಂದು ಮೌನವಾದರು.
Published by: Seema R
First published: November 12, 2020, 7:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading