ಮೇಘನಾ ರಾಜ್ ಮಗ ರಾಯನ್ ರಾಜ್ ಸರ್ಜಾ ಅವರ ಬಹಳಷ್ಟು ವಿಡಿಯೋ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಲೇ ಇರುತ್ತಾರೆ. ಚಿರುವಿನ ಮಗನ ಬಗ್ಗೆ ಅವರ ಅಭಿಮಾನಿಗಳಿಗೆ ಕೂಡಾ ಸಾಕಷ್ಟು ಪ್ರೀತಿ ಇದೆ. ಮುದ್ದು ಮುದ್ದಾಗಿ ತೊದಲು ಮಾತನಾಡುವ ರಾಯನ್ ಅಪ್ಪ, ಅಮ್ಮ ಎಂದು ಹೇಳುತ್ತಾನೆ. ಈಗ ನಟಿ ಮತ್ತೊಂದು ಹೊಸ ವಿಡಿಯೋವನ್ನು ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದಾರೆ. ಇದರಲ್ಲಿ ಅಮ್ಮನ ತೋಳಲ್ಲಿ ಆಡುತ್ತಿರುವ ರಾಯನ್ ಸರ್ಜಾನ ಕ್ಯೂಟ್ ಲುಕ್ ನೀವು ಕಾಣಬಹುದು. ರಾಯನ್ ರಾಜ್ ಸರ್ಜಾ ಅಮ್ಮನ ಜೊತೆ ನಿಂತು ಅಪ್ಪಾ ಎನ್ನುತ್ತಾನೆ. ನಂತರ ಅಮ್ಮನ ಮುದ್ದಾಡುತ್ತಾನೆ. ಈ ವಿಡಿಯೋದಲ್ಲಿ ರಾಯನ್ ಹಳದಿ ಬಣ್ಣದ ಟೀಶರ್ಟ್ ಧರಿಸಿದ್ದರೆ ಮೇಘನಾ ರಾಜ್ ಅವರು ಕೆಂಬಣ್ಣದ ಡ್ರೆಸ್ ಧರಿಸಿದ್ದಾರೆ.
ಸನ್ ಶೈನ್ ಸಿರೀಸ್
ಸನ್ ಶೈನ್ ಸಿರೀಸ್ ಎಂದು ಕ್ಯಾಪ್ಶನ್ ಕೊಟ್ಟು ನಟಿ ವಿಡಿಯೋ ಶೇರ್ ಮಾಡಿಕೊಂಡಿದ್ದು ಈ ವಿಡಿಯೋ ಈಗಾಗಲೇ 174 ಸಾವಿರ ವ್ಯೂಸ್ ಗಳಿಸಿದೆ. ಅದೇ ರೀತಿ 665 ಜನರು ಈ ವಿಡಿಯೋ ಮೆಚ್ಚಿ ಕಮೆಂಟ್ ಮಾಡಿದ್ದಾರೆ.
ತಲೆ ನೇವರಿಸಿ ಮುದ್ದು ಮಾಡಿದ ಮಗ
ಹಗ್ಗಿ ಎಂದು ನಟಿ ತಮ್ಮನ್ನು ಹಗ್ ಮಾಡುವಂತೆ ಮಗನಿಗೆ ಹೇಳಿದಾಗ ರಾಯನ್ ಅಮ್ಮನನ್ನು ತಬ್ಬಿಕೊಂಡು ಅಮ್ಮನ ಕೂದಲು ನೇವರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.
ನೆಟ್ಟಿಗರು ಏನಂದ್ರು?
ಪುಟ್ಟ ಮಗುವಿನ ಕ್ಯೂಟ್ನೆಸ್ ನೋಡಿ ಮೆಚ್ಚಿದ ಜನರು ಅವನು ಯಾವಾಗಲೂ ಅಪ್ಪನನ್ನೇ ಕರೆಯುತ್ತಾನೆ ಎಂದಿದ್ದಾರೆ. ಇನ್ನೂ ಕೆಲವರು ಕ್ಯೂಟ್ ಬೇಬಿ, ಲವ್ಲೀ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Meghana Raj: ಗೋಲ್ಡ್ ಕಲರ್ ಸೀರೆಯಲ್ಲಿ ನಟಿ ಮೇಘನಾ ರಾಜ್ ಮಿಂಚಿಂಗ್! ಏನ್ ಸ್ಪೆಷಲ್ ಎಂದ ಫ್ಯಾನ್ಸ್?
View this post on Instagram
ಚಿರು ಜನ್ಮ ದಿನ ಅಕ್ಟೋಬರ್-07 ರಂದು ಸಿನಿಮಾ ಟೈಟಲ್ ರಿವೀಲ್
ನಿಜ, ಮೇಘನಾ ರಾಜ್ ಅಭಿನಯದ ಈ ಚಿತ್ರದ ಟೈಟಲ್ನ್ನ ಚಿರಂಜೀವಿ ಸರ್ಜಾ ಜನ್ಮ ದಿನದಂದೇ ರಿವೀಲ್ ಆಗುತ್ತಿದೆ. ಮುಂದಿನ ತಿಂಗಳು ಅಕ್ಟೋಬರ್-7 ರಂದು ಚಿರು ಜನ್ಮ ದಿನ ಇದೆ. ಆ ದಿನವೇ ಮೇಘನಾ ರಾಜ್ ಚಿತ್ರ ಟೈಟಲ್ ರಿವೀಲ್ ಆಗುತ್ತಿದೆ.
ಇದನ್ನೂ ಓದಿ: Ramachari: ರಾಮಾಚಾರಿ ಮಾಡಿದ ಪ್ರಾಜೆಕ್ಟ್ ಕದಿಯಲು ಬಂದ ಚಾರು!
ಮೇಘನಾ-ಪನ್ನಗ ಭರಣ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಎಂಟ್ರಿ
ಮೇಘನಾ ರಾಜ್ ಅಭಿನಯದ ಈ ಚಿತ್ರದಲ್ಲಿ ಕನ್ನಡದ ನಾಯಕ ನಟ ಎಂಟ್ರಿ ಕೂಡ ಆಗಿದೆ. ಅದು ಬೇರೆ ಯಾರೋ ಅಲ್ಲ. ಚಿರು ಮತ್ತೊಬ್ಬ ಗೆಳೆಯ ಪ್ರಜ್ವಲ್ ದೇವರಾಜ್. ಪ್ರಜ್ವಲ್ ಇಲ್ಲಿ ವಿಶೇಷ ಪಾತ್ರದ ಮೂಲಕವೇ ಗೆಳೆಯರ ಚಿತ್ರಕ್ಕೆ ಸಾಥ್ ಕೊಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ