• Home
  • »
  • News
  • »
  • entertainment
  • »
  • Meghana Raj: ಮತ್ತೆ ಬಣ್ಣ ಹಚ್ಚಿದ ಮೇಘನಾ ರಾಜ್; ಇದ್ರಲ್ಲಿ ಪ್ರಜ್ವಲ್ ಪೊಲೀಸ್ ಆಫೀಸರ್!

Meghana Raj: ಮತ್ತೆ ಬಣ್ಣ ಹಚ್ಚಿದ ಮೇಘನಾ ರಾಜ್; ಇದ್ರಲ್ಲಿ ಪ್ರಜ್ವಲ್ ಪೊಲೀಸ್ ಆಫೀಸರ್!

ಮೇಘನಾ ರಾಜ್ ಚಿತ್ರದಲ್ಲಿ
ಪ್ರಜ್ವಲ್ ಪೊಲೀಸ್ ಆಫೀಸರ್

ಮೇಘನಾ ರಾಜ್ ಚಿತ್ರದಲ್ಲಿ ಪ್ರಜ್ವಲ್ ಪೊಲೀಸ್ ಆಫೀಸರ್

ಮೇಘನಾ ರಾಜ್ ಅಭಿನಯದ ಈ ಚಿತ್ರದಲ್ಲಿ ಕನ್ನಡದ ನಾಯಕ ನಟ ಎಂಟ್ರಿ ಕೂಡ ಆಗಿದೆ. ಅದು ಬೇರೆ ಯಾರೋ ಅಲ್ಲ. ಚಿರು ಮತ್ತೊಬ್ಬ ಗೆಳೆಯ ಪ್ರಜ್ವಲ್ ದೇವರಾಜ್ ಪ್ರಜ್ವಲ್ ಇಲ್ಲಿ ವಿಶೇಷ ಪಾತ್ರದ ಮೂಲಕವೇ ಗೆಳೆಯರ ಚಿತ್ರಕ್ಕೆ ಸಾಥ್ ಕೊಡುತ್ತಿದ್ದಾರೆ.

  • Share this:

ನಟಿ ಮೇಘನಾ ರಾಜ್ (Meghna Raj) ಮತ್ತೆ ಸಿನಿಮಾದತ್ತ ವಾಲಿದ್ದಾರೆ. ಪುತ್ರನಿಗೆ ಹೆಚ್ಚಿನ ಟೈಮ್ ಕೊಟ್ಟಿದ್ದ ಮೇಘನಾ ರಾಜ್ ಬಣ್ಣದ ಲೋಕಕ್ಕೆ ಈಗಾಗಲೇ ಮರಳಿದ್ದಾರೆ. ಚಿರು (Chiranjeevi Sarja) ಗೆಳೆಯರೆಲ್ಲ ಜೊತೆಗೆ ಇರೋದ್ರಿಂದ ಮೊದಲಿನ ಅದೇ ಕಾನ್ಫಿಡೆನ್ಸ್ ನಲ್ಲಿಯೇ ಮೇಘನಾ ಮರಳಿ ಬಣ್ಣದ ಜಗತ್ತಿಗೆ ಕಾಲಿಟ್ಟಿದ್ದಾರೆ. ಮೇಘನಾ ರಾಜ್ ಅಭಿನಯದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಮೇಘನಾ ಅವರಿಗೆ ಸೂಟೇಬಲ್ ಅನಿಸೋ ಪಾತ್ರವನ್ನೆ ಡೈರೆಕ್ಟರ್ (Director Pannaga Bharana) ಪನ್ನಗಾ ಭರಣ ಕ್ಯಾರೆಕ್ಟರ್ ಡಿಸೈನ್ ಮಾಡಿದ್ದಾರೆ. ಆ ಕ್ಯಾರೆಕ್ಟರ್​ನ ಚಿತ್ರೀಕರಣ ಕೂಡ ಈಗ ಶುರು ಆಗಿದೆ. ವಿಶೇಷವೆಂದ್ರೆ ಮೇಘನಾ ಅಭಿನಯದ ಈ ಚಿತ್ರಕ್ಕೆ ಈಗ ಕನ್ನಡದ ಮತ್ತೊಬ್ಬ ನಾಯಕನ ಎಂಟ್ರಿ ಕೂಡ ಆಗಿದೆ.

ಮೇಘನಾ ರಾಜ್-ಪನ್ನಗ ಭರಣ ಸಿನಿಮಾ ಎಲ್ಲಿಗೆ ಬಂತು?
ಚಿರಂಜೀವಿ ಸರ್ಜಾ ಸ್ನೇಹ ಜೀವಿ ಅನ್ನೋದು ಎಲ್ಲರಿಗೂ ಗೊತ್ತಿದೆ. ಗೆಳೆಯರಿಗೂ ಹೆಚ್ಚು ಟೈಮ್ ಕೊಡುತ್ತಿದ್ದ ಚಿರು ಅಂದ್ರೆ ಎಲ್ಲರಿಗೂ ಪಂಚ ಪ್ರಾಣವೇ ಆಗಿದ್ದರು. ಚಿರು ಇದ್ದಲ್ಲಿ ನಗು ಗ್ಯಾರಂಟಿ ಅನ್ನೋ ವಿಷಯ ಎಲ್ಲರಿಗೂ ಗೊತ್ತಿತ್ತು. ಆದರೆ ಚಿರು ಇಲ್ಲವಾದ ಮೇಲೆ ಗೆಳಯರ ಬಳಗದಲ್ಲಿದ್ದ ಆ ನಗು ಮಾಸಿ ಹೋಗಿತ್ತು.


ಮೇಘನಾ ಕೂಡ ಚಿರುನನ್ನ ಮಿಸ್ ಮಾಡಿಕೊಳ್ತಿದ್ದಾರೆ. ಅದು ಸಹಜ ಬಿಡಿ, ಪ್ರೀತಿ-ತುಂಬಾ ಸುಂದರ ದಾಂಪತ್ಯ ಮಾಡಿದವ್ರಲ್ಲವೇ? ಇಂತಹ ಈ ಜೋಡಿಯ ನಡುವೆ ಆ ಗಾಢ ಪ್ರೇಮಕ್ಕೆ ಅನೇಕ ಸಾಕ್ಷಿಗಳೂ ಇವೆ.


Actor Prajwal Devaraj Joined team of Meghana Raj New Movie
ಪೊಲೀಸ್ ಆಫೀಸರ್ ಪ್ರಜ್ವಲ್ ದೇವರಾಜ್


ಮೇಘನಾ ರಾಜ್ ಅಭಿನಯದ ಹೊಸ ಸಿನಿಮಾ ಅಪ್​ಡೇಟ್ಸ್ ಏನು?
ಇಂತಹ ಪ್ರೇಮಿಗಳಲ್ಲಿ ಗೆಳೆಯರ ಬಳಗವೂ ತುಂಬಾ ಸ್ಟ್ರಾಂಗ್ ಆಗಿಯೇ ಇದೆ. ಚಿರು ಇಲ್ಲವಾದ ಸಮಯದಲ್ಲಿ ಮೇಘನಾ ರಾಜ್​ ಅವರ ಜೊತೆಗಿದ್ದು ಧೈರ್ಯ ತುಂಬಿದ್ದಾರೆ. ಈ ಒಂದು ಧೈರ್ಯವೇ ಮೇಘನಾ ರಾಜ್ ಮತ್ತೆ ಬಣ್ಣದ ಲೋಕಕ್ಕೆ ಬರೋವಂತೆ ಮಾಡಿದೆ.


ಇದನ್ನೂ ಓದಿ: Arrest Warrant: ಏಕ್ತಾ ಕಪೂರ್ ಹಾಗೂ ಶೋಭಾ ಕಪೂರ್​ಗೆ ಬಂಧನ ಭೀತಿ, ಅರೆಸ್ಟ್ ವಾರೆಂಟ್ ಜಾರಿ!


ಚಿರು ಆಪ್ತ ಸ್ನೇಹಿತ ಪನ್ನಗ ಭರಣ ಈಗೊಂದು ಸಿನಿಮಾ ಆರಂಭಿಸಿದ್ದಾರೆ. ಈ ಚಿತ್ರಕ್ಕೆ ಮೇಘನಾ ರಾಜ್ ನಾಯಕಿ ಅನ್ನೋದೆ ವಿಶೇಷ. ಮೇಘನಾ ಈ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಬಂದಿದ್ದಾರೆ.


ಭರದಿಂದಲೇ ಸಾಗಿದ ಮೇಘನಾ ರಾಜ್-ಪನ್ನಗ ಭರಣ ಚಿತ್ರದ ಶೂಟಿಂಗ್
ಹೌದು, ಮೇಘನಾ ರಾಜ್ ಅಭಿನಯದ ಚಿತ್ರದ ಚಿತ್ರೀಕರಣ ಭರದಿಂದಲೇ ನಡೆಯುತ್ತಿದೆ. ಆದರೆ ಚಿತ್ರದ ಟೈಟಲ್ ಮಾತ್ರ ಇನ್ನೂ ರಿವೀಲ್ ಆಗಿಲ್ಲ. ಅದನ್ನ ಒಂದು ವಿಶೇಷ ದಿನವೇ ರಿವೀಲ್ ಮಾಡೋ ಪ್ಲಾನ್​ ನಲ್ಲಿಯೇ ಸಿನಿಮಾ ತಂಡ ಇರೋದು ಇನ್ನೂ ಒಂದು ವಿಶೇಷ.


Actor Prajwal Devaraj Joined team of Meghana Raj New Movie
ಮೇಘನಾ ರಾಜ್  ಅಭಿನಯದ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್


ಚಿರು ಜನ್ಮ ದಿನ ಅಕ್ಟೋಬರ್-07 ರಂದು ಸಿನಿಮಾ ಟೈಟಲ್ ರಿವೀಲ್
ನಿಜ, ಮೇಘನಾ ರಾಜ್ ಅಭಿನಯದ ಈ ಚಿತ್ರದ ಟೈಟಲ್​ನ್ನ ಚಿರಂಜೀವಿ ಸರ್ಜಾ ಜನ್ಮ ದಿನದಂದೇ ರಿವೀಲ್ ಆಗುತ್ತಿದೆ. ಮುಂದಿನ ತಿಂಗಳು ಅಕ್ಟೋಬರ್-7 ರಂದು ಚಿರು ಜನ್ಮ ದಿನ ಇದೆ. ಆ ದಿನವೇ ಮೇಘನಾ ರಾಜ್ ಚಿತ್ರ ಟೈಟಲ್ ರಿವೀಲ್ ಆಗುತ್ತಿದೆ.


ಮೇಘನಾ-ಪನ್ನಗ ಭರಣ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಎಂಟ್ರಿ
ಮೇಘನಾ ರಾಜ್ ಅಭಿನಯದ ಈ ಚಿತ್ರದಲ್ಲಿ ಕನ್ನಡದ ನಾಯಕ ನಟ ಎಂಟ್ರಿ ಕೂಡ ಆಗಿದೆ. ಅದು ಬೇರೆ ಯಾರೋ ಅಲ್ಲ. ಚಿರು ಮತ್ತೊಬ್ಬ ಗೆಳೆಯ ಪ್ರಜ್ವಲ್ ದೇವರಾಜ್. ಪ್ರಜ್ವಲ್ ಇಲ್ಲಿ ವಿಶೇಷ ಪಾತ್ರದ ಮೂಲಕವೇ ಗೆಳೆಯರ ಚಿತ್ರಕ್ಕೆ ಸಾಥ್ ಕೊಡುತ್ತಿದ್ದಾರೆ.


ಇದನ್ನೂ ಓದಿ: Shraddha Srinath: ಬಹು ಭಾಷಾ ನಟಿ ಶ್ರದ್ಧಾ ಶ್ರೀನಾಥ್​ಗೆ ಹುಟ್ಟುಹಬ್ಬದ ಸಂಭ್ರಮ


ಇನ್ನು ಸಿನಿಮಾದ ಇತರ ಡಿಟೈಲ್ಸ್ ಶೀಘ್ರದಲ್ಲಿಯೇ ಹೊರ ಬೀಳಲಿವೆ. ಸದ್ಯಕ್ಕೆ ಪ್ರಜ್ವಲ್ ದೇವರಾಜ್ ಸಿನಿಮಾ ಟೀಮ್ ಜಾಯಿನ್ ಆಗಿರೋ ಅಪ್​ಡೇಟ್ಸ್ ಹೊರಬಿದ್ದಿದೆ. ಸದ್ಯ ಎಲ್ಲೆಡೆ ಹರಿದಾಡುತ್ತಿರೋ ಫೋಟೋಗಳು ಹೇಳುವಂತೆ ಪ್ರಜ್ವಲ್ ಇಲ್ಲಿ ಪೊಲೀಸ್ ಪಾತ್ರದಲ್ಲಿಯೇ ಕಂಗೊಳಿಸುತ್ತಿದ್ದಾರೆ. ವೇಟ್ ಮಾಡಿ ಬೇರೆ ಮಾಹಿತಿ ಕೊಡ್ತಿರ್ತೀವಿ

First published: