Meghana Raj: ಮೇಘನಾ ರಾಜ್ ಬಳಿ ಇದೆ ಸಾಹಸಸಿಂಹ ನೀಡಿದ ಆ ದುಬಾರಿ ವಸ್ತು; ಏನದು ಗೊತ್ತೇ?

Dr. Vishnuvardhan: ಈಗಲೂ ಕೂಡಾ ಮೇಘನಾ ರಾಜ್ ಕುಟುಂಬ ವಿಷ್ಣುವರ್ಧನ್ ಅವರ ಮನೆಗೆ ಹೋದರೆ ಭಾರತಿ ಅವರು ಮೇಘನಾಗೆ ಕೈ ತುತ್ತು ನೀಡುತ್ತಾರಂತೆ. ಈ ಎರಡು ಕುಟುಂಬ ಅಷ್ಟೊಂದು ಆತ್ಮೀಯತೆಹೊಂದಿದೆ.

news18-kannada
Updated:June 30, 2020, 12:40 PM IST
Meghana Raj: ಮೇಘನಾ ರಾಜ್ ಬಳಿ ಇದೆ ಸಾಹಸಸಿಂಹ ನೀಡಿದ ಆ ದುಬಾರಿ ವಸ್ತು; ಏನದು ಗೊತ್ತೇ?
ಡಾ. ವಿಷ್ಟುವರ್ಧನ್ ಜೊತೆ ಮೇಘನಾ ರಾಜ್.
  • Share this:
ಸ್ಯಾಂಡಲ್‍ವುಡ್ ಯುವ ಸಾಮ್ರಾಟ ಚಿರಂಜೀವಿ ಸರ್ಜಾ ನಿಧನರಾಗಿ ಮೂರು ವಾರಗಳು ಕಳೆದರೂ ಅವರ ನೆನಪು ಇನ್ನೂ ಕಾಡುತ್ತಲೇ ಇದೆ. ಅದರಲ್ಲೂ ಅವರ ಪತ್ನಿ, ನಟಿ ಮೇಘನಾ ರಾಜ್ ಅವರನ್ನು ತೀವ್ರ ಆಘಾತಕ್ಕೆ ತಳ್ಳಿದೆ. ಇತ್ತೀಚೆಗಷ್ಟೆ ಚಿರು ಅಗಲಿಕೆಯ ನೆನಪಿನಲ್ಲಿಯೇ ಮೇಘನಾ ರಾಜ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರು.

ಇದರ ಜೊತೆಗೆ ಸದ್ಯ ಮೇಘನಾ ರಾಜ್ ಅವರು ಸಾಹಸಿಂಹ ವಿಷ್ಟುವರ್ಧನ್ ಜೊತೆ ತೆಗೆಸಿಕೊಂಡ ಫೋಟೋ ಕೂಡ ವೈರಲ್ ಆಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಕೂಡ ಇದೆ. ಮೊದಲಿನಿಂದಲೂ ಸುಂದರ್​​ರಾಜ್​, ಪ್ರಮಿಳಾ ಜೋಷಾಯ್ ಕುಟುಂಬಕ್ಕೂ ವಿಷ್ಣು ಕುಟುಂಬಕ್ಕೂ ಬಹಳ ಆತ್ಮೀಯತೆ ಇದೆ. ಮೇಘನಾ ಚಿಕ್ಕ ಹುಡುಗಿ ಆದಾಗಿನಿಂದ ವಿಷ್ಣುವರ್ಧನ್ ಅವರನ್ನು ಎತ್ತಿ ಬೆಳೆಸಿದ್ದರು.

Ranjani Raghavan: ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಪುಟ್ಟಗೌರಿ ರಂಜನಿ ರಾಘವನ್..!

Dr. Vishnuvardhan: Meghana Raj has the costliest gift which was presented by Vishnuvardhan
ಡಾ. ವಿಷ್ಣುವರ್ಧನ್ ಜೊತೆ ಮೇಘನಾ ರಾಜ್.


ಡಾ. ವಿಷ್ಣುವರ್ಧನ್ ಹಾಗೂ ಭಾರತಿ ಇಬ್ಬರೂ ಮೇಘನಾ ಅವರನ್ನು ತಮ್ಮ ಮಕ್ಕಳಂತೆಯೇ ಇಷ್ಟಪಡುತ್ತಿದ್ದರು. ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ಸಾಹಸಸಿಂಹ ನಿಧನರಾದಾಗ ಅವರು ಧರಿಸುತ್ತಿದ್ದ ದುಬಾರಿ ಬೆಲೆಯ ವಾಚ್​​​​​​ವೊಂದನ್ನು ಕೀರ್ತಿ ತಮ್ಮ ಬಳಿ ಇರಿಸಿಕೊಂಡಿದ್ದರು. ಆದರೆ ನಂತರ ಅದನ್ನು ಅಪ್ಪಾಜಿ ನೆನೆಪಿಗಾಗಿ ಮೇಘನಾ ಅವರಿಗೆ ನೀಡಿದ್ದರು.

ಈ ಹಿಂದೆ ವಿಷ್ಟು ಅವರು ಧರಿಸುತ್ತಿದ್ದ ದುಬಾರಿ ಬೆಲೆಯ ವಾಚ್ ಹಾಕಿಕೊಂಡು ಮೇಘನಾ ಫೋಟೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್ ಮಾಡಿಕೊಂಡಿದ್ದರು. ಈಗಲೂ ಕೂಡಾ ಮೇಘನಾ ಕುಟುಂಬ ವಿಷ್ಣು ಮನೆಗೆ ಹೋದರೆ ಭಾರತಿ ಅವರು ಮೇಘನಾಗೆ ಕೈ ತುತ್ತು ನೀಡುತ್ತಾರಂತೆ. ಈ ಎರಡು ಕುಟುಂಬ ಅಷ್ಟೊಂದು ಆತ್ಮೀಯತೆಹೊಂದಿದೆ. ಇನ್ನೂ ಇತ್ತೀಚೆಗೆ ಚಿರು ನಿಧನರಾದ ಸಂದರ್ಭ ಭಾರತಿ ವಿಷ್ಣುವರ್ಧನ್, ಕೀರ್ತಿ ಹಾಗೂ ಅನಿರುಧ್ಧ್ ಅವರು ಮೇಘನಾ ಮನೆಗೆ ತೆರಳಿ ಸಾಂತ್ವಾನ ಹೇಳಿದ್ದರು.

Radhika Pandit: ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ರಾಕಿಂಗ್ ದಂಪತಿ: ಏನಂತಾರೆ ರಾಧಿಕಾ..?
ಸಾಹಸಸಿಂಹ ವಿಷ್ಟುವರ್ಧನ್ ಧರಿಸುತ್ತಿದ್ದ ವಾಚ್ ಮೇಘನಾ ಕೈಯಲ್ಲಿ.
ಸಾಹಸಸಿಂಹ ವಿಷ್ಟುವರ್ಧನ್ ಧರಿಸುತ್ತಿದ್ದ ವಾಚ್ ಮೇಘನಾ ಕೈಯಲ್ಲಿ.


ಮೊನ್ನೆಯಷ್ಟೆ ಮೇಘನಾ ಅವರು ತನ್ನ ಅಧಿಕೃತ ಫೇಸ್‍ಬುಕ್ ಪೇಜಿನಲ್ಲಿ ಪ್ರೊಫೈಲ್ ಫೋಟೋ ಬದಲಾಯಿಸಿದ್ದರು. ಚಿರು ಮತ್ತು ಮೇಘನಾ ಕಾರಿನಲ್ಲಿ ಕುಳಿತು, ಇಬ್ಬರು ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಂಡ ನೂತನ ಫೋಟೋ ಅಪ್‍ಡೇಟ್ ಮಾಡಿದ್ದರು. ಅಲ್ಲದೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮೇಘ ಎಸ್ ರಾಜ್ ಬದಲು ಮೇಘನಾ ರಾಜ್ ಸರ್ಜಾ ಎಂದು ಹೆಸರು ಬದಲಿಸಿಕೊಂಡಿದ್ದರು.
First published: June 30, 2020, 12:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading