Meghana Raj Sarja: ಚಿರು ಅಗಲಿಕೆಯ ಬೆನ್ನಲ್ಲೇ ಹೆಸರು ಬದಲಾಯಿಸಿಕೊಂಡ ಮೇಘನಾ ರಾಜ್!

Chiranjeevi Sarja: ಮೇಘನಾ ರಾಜ್ ಅವರು ಇಂದು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹೊಸ ಹೆಸರನ್ನು ಅಪ್ಡೇಟ್ ಮಾಡಿದ್ದಾರೆ.

news18-kannada
Updated:June 25, 2020, 3:14 PM IST
Meghana Raj Sarja: ಚಿರು ಅಗಲಿಕೆಯ ಬೆನ್ನಲ್ಲೇ ಹೆಸರು ಬದಲಾಯಿಸಿಕೊಂಡ ಮೇಘನಾ ರಾಜ್!
ಚಿರಂಜೀವಿ ಸರ್ಜಾ - ಮೇಘನಾ ರಾಜ್
  • Share this:
ಯುವ ಸಾಮ್ರಾಟ ಚಿರಂಜೀವಿ ಸರ್ಜಾ ಸಾವಿನ ನೆನಪು ಇನ್ನೂ ಕಾಡುತ್ತಲೇ ಇದೆ. ಅದರಲ್ಲೂ ಚಿರು ಅಗಲುವಿಕೆ ಅವರ ಪತ್ನಿ, ನಟಿ ಮೇಘನಾ ರಾಜ್ ಅವರನ್ನು ತೀವ್ರ ಆಘಾತಕ್ಕೆ ತಳ್ಳಿದೆ. ಸುಮಾರು ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ 2018ರಲ್ಲಿ ವೈವಾಹಿಕ ಬದುಕಿಗೆ ಕಾಲಿರಿಸಿದ್ದರು. ಸೇಂಟ್ ಆಂಥೋನೀಸ್ ಫೈರಿ ಚರ್ಚ್‌ನಲ್ಲಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಕ್ರೈಸ್ತ ಹಾಗೂ ಹಿಂದೂ ಸಂಪ್ರದಾಯದಂತೆ ಇಬ್ಬರೂ ಮದುವೆಯಾಗಿದ್ದರು.

ಇತ್ತೀಚೆಗಷ್ಟೆ ಮೇಘನಾ ಅವರು ತಮ್ಮ ಅಂತರಂಗದ ಭಾವನೆಗಳನ್ನು ಹೊರಹಾಕಿದ್ದರು. ನಾನು ಜನ್ಮ ನೀಡಲಿರುವ ಮಗು ನೀನು ಕೊಟ್ಟ ಅನುಪಮ ಕಾಣಿಕೆ, ಚಿರು ನಿನ್ನ ನೆನಪನ್ನು ಅದರಲ್ಲಿ ನಾನು ಅನುಕ್ಷಣವೂ, ಅನು ದಿನವೂ ಕಾಣುವೇ ಎಂದು ಅವರು ಅವರ ಪತ್ರದಲ್ಲಿ ಉಲ್ಲೇಖಿಸಿದ್ದರು. ಸದ್ಯ ಇದಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಮೇಘನಾ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

Viral Video: ಶ್ರೀಮುರಳಿ ಕೆನ್ನೆಗೆ ಬಾರಿಸಿದ ರೌಡಿ ಬೇಬಿ: ವಿಡಿಯೋ ಇಲ್ಲಿದೆ..!

 


ಹೌದು, ಮೇಘನಾ ರಾಜ್ ಅವರು ಇಂದು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹೊಸ ಹೆಸರನ್ನು ಅಪ್ಡೇಟ್ ಮಾಡಿದ್ದಾರೆ.

ತಮ್ಮ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹೆಸರು ಚೇಂಗ್ ಮಾಡಿದ್ದಾರೆ. ಈ ಮೊದಲು ಇನ್​ಸ್ಟಾದಲ್ಲಿ ಮೇಘ ಎಸ್ ರಾಜ್ ಎಂದು ಇತ್ತು. ಅದನ್ನೀಗ ಮೇಘನಾ ರಾಜ್ ಸರ್ಜಾ ಎಂದು ಬದಲಿಸಿಕೊಂಡಿದ್ದು ಪ್ರತಿ ಕ್ಷಣವೂ ಚಿರುವಿನ ನೆನಪಿನಲ್ಲಿಯೇ ಕಳೆಯುತ್ತಿದ್ದಾರೆ.

ಜನ ಮೆಚ್ಚಿದ ಜೋಡಿ ರಾಜ್​ಕುಮಾರ್​-ಪಾರ್ವತಮ್ಮರ ವಿವಾಹ ವಾರ್ಷಿಕೋತ್ಸವ: ಟ್ವೀಟ್​ ಮಾಡಿದ ರಾಘವೇಂದ್ರ ರಾಜ್​ಕುಮಾರ್​

ಮೊನ್ನೆಯಷ್ಟೆ ಮೇಘನಾ, ಚಿರು ಬಗ್ಗೆ ಭಾವನಾತ್ಮಕ ಪತ್ರ ಬರೆದಿದ್ದರು. "ಚಿರು ನಾನು ನಿನಗೆ ಏನನ್ನು ಹೇಳಬೇಕು ಎಂದುಕೊಂಡಿದ್ದೀನೋ ಅದನ್ನು ಶಬ್ದಗಳ ಮೂಲಕ ಹೇಳಲು ಸಾಧ್ಯವಾಗುತ್ತಿಲ್ಲ. ನೀನು ನನ್ನ ಹೃದಯದ ಒಂದು ಭಾಗ. ನನ್ನನ್ನು ನೀನು ಒಂಟಿಯಾಗಿ ಬಿಟ್ಟು ಹೋಗಲು ಸಾಧ್ಯವೇ ಇಲ್ಲ. ಈಗ ಹುಟ್ಟುತ್ತಿರುವ ಮಗು ನೀನು ನನಗೆ ನೀಡಿದ ಉಡುಗೊರೆ. ಅದು ನಮ್ಮ ಪ್ರೀತಿಯ ಸಂಕೇತ. ನನ್ನ ಮಗುವಾಗಿ ನಿನ್ನನ್ನು ಮತ್ತೆ ಭೂಮಿಗೆ ಕರೆತರು ನಾನು ಕಾತುರನಾಗಿದ್ದೇನೆ. ನೀನು ನನ್ನವನು. ಐ ಲವ್ ಯು" ಎಂದು ಪತ್ರದಲ್ಲಿ ತಿಳಿಸಿದ್ದರು.
First published:June 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading