ಮೇಘನಾ ರಾಜ್​ - ಚಿರಂಜೀವಿ ಸರ್ಜಾ ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿದ್ದ ಹಳೆಯ ವಿಡಿಯೋ ವೈರಲ್​

ಮೇಘನಾ ಹಾಗೂ ಚಿರು ಯಾವಾಗಲೂ ಒಟ್ಟಾಗಿ ವರ್ಕೌಟ್​ ಮಾಡುತ್ತಿದ್ದರು. ನಿತ್ಯ ಮುಂಜಾನೆ ಇಬ್ಬರೂ ಜಿಮ್​ನಲ್ಲಿ ಬೆವರು ಹರಿಸುತ್ತಿದ್ದರು. ಈ ವರ್ಕೌಟ್​ ವಿಡಿಯೋ ಈಗ ವೈರಲ್​ ಆಗುತ್ತಿದೆ.

news18-kannada
Updated:October 19, 2020, 1:36 PM IST
ಮೇಘನಾ ರಾಜ್​ - ಚಿರಂಜೀವಿ ಸರ್ಜಾ ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿದ್ದ ಹಳೆಯ ವಿಡಿಯೋ ವೈರಲ್​
ಮೇಘನಾ ರಾಜ್​- ಚಿರು (ಕೃಪೆ: SGV Kannada Media)
  • Share this:
ಚಿರಂಜೀವಿ ಸರ್ಜಾ ಅವರನ್ನು ಸ್ಯಾಂಡಲ್​ವುಡ್​ ಕಳೆದುಕೊಂಡು ಸಾಕಷ್ಟು ದಿನಗಳೇ ಕಳೆದಿವೆ. ಈ ನೊವಿನಲ್ಲೇ ಚಿರು ಪತ್ನಿ ಮೇಘನಾ ರಾಜ್​ ಸೀಮಂತ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಇದರ ಫೋಟೋಗಳು ವೈರಲ್​ ಆಗಿದ್ದವು. ಈಗ ಮೇಘನಾ ರಾಜ್​ ಹಾಗೂ ಚಿರು ಜಿಮ್​ನಲ್ಲಿ ಒಟ್ಟಿಗೆ ವರ್ಕೌಟ್​ ಮಾಡುತ್ತಿರುವ ಹಳೆಯ ವಿಡಿಯೋ ಒಂದು ಸಾಕಷ್ಟು ವೈರಲ್​ ಆಗುತ್ತಿದೆ.

ಜೂನ್​ ಏಳರಂದು ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮೃತಪಟ್ಟಿದ್ದರು. ಹಾಯಾಗಿ ಓಡಾಡಿಕೊಂಡಿದ್ದ ಅವರನ್ನು ಕಳೆದುಕೊಂಡ ಕುಟುಂಬಕ್ಕೆ ದಿಕ್ಕು ತೋಚದಂತಾಗಿತ್ತು. ಚಿರು ಕೊನೆಯುಸಿರೆಳೆವಾಗ ಮೇಘನಾ ಐದು ತಿಂಗಳ ಗರ್ಭಿಣಿ ಎನ್ನುವ ವಿಚಾರ ತಿಳಿದಮೇಲಂತೂ ಅಭಿಮಾನಿಗಳು ಮತ್ತಷ್ಟು ಮರುಕ ಹೊರ ಹಾಕಿದ್ದರು.

ಮೇಘನಾ-ಚಿರು ಸದಾ ಒಟ್ಟಿಗೇ ಇರುತ್ತಿದ್ದರು. ಸರ್ಜಾ ಕುಟುಂಬ ಫಿಟ್​ನೆಸ್​ ವಿಚಾರದಲ್ಲಿ ಎತ್ತಿದ ಕೈ. ಅರ್ಜುನ್​ ಸರ್ಕಾ, ಚಿರು, ಧ್ರುವ ಸರ್ಜಾ, ಮೇಘನಾ ರಾಜ್​ ಫಿಟ್​ನೆಸ್​ಗೆ ಹೆಚ್ಚು ಒತ್ತು ನೀಡಿದವರು. ಹೀಗಾಗಿ ನಿತ್ಯ ಇವರೆಲ್ಲರೂ ಜಿಮ್​ನಲ್ಲಿ ಬೆವರು ಹರಿಸುತ್ತಿದ್ದರು.ಮೇಘನಾ ಹಾಗೂ ಚಿರು ಯಾವಾಗಲೂ ಒಟ್ಟಾಗಿ ವರ್ಕೌಟ್​ ಮಾಡುತ್ತಿದ್ದರು. ನಿತ್ಯ ಮುಂಜಾನೆ ಇಬ್ಬರೂ ಜಿಮ್​ನಲ್ಲಿ ಬೆವರು ಹರಿಸುತ್ತಿದ್ದರು. ಈ ವರ್ಕೌಟ್​ ವಿಡಿಯೋ ಈಗ ವೈರಲ್​ ಆಗುತ್ತಿದೆ.
Published by: Rajesh Duggumane
First published: October 15, 2020, 11:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading