ರೆಜಿನಾ ಕಸ್ಸಂದ್ರ‘ಪುಷ್ಪ’(Pushpa) ಸಿನಿಮಾ ಹೆಚ್ಚು ಸೌಂಡ್ ಮಾಡಿದ್ದೇ ‘ಊ ಅಂಟಾವಾ ಮಾವ...’ ಎಂಬ ಸಾಂಗ್ನಿಂದ. ಈ ಚಿತ್ರದಲ್ಲಿ ಅಲ್ಲು ಅರ್ಜುನ್(Allu Arjun) ಅಭಿನಯಿಸಿದ್ದರೂ, ಈ ಹಾಡು ನೋಡಲೆಂದೇ ಅದೆಷ್ಟೋ ಮಂದಿ ಚಿತ್ರಮಂದಿರಕ್ಕೆ ತೆರಳಿದ್ದರು. ಈ ಸಿನಿಮಾ ರಿಲೀಸ್ ಸಮಯದಲ್ಲಿ ಈ ಹಾಡು ವಿವಾದಕ್ಕೆ ಕಾರಣವಾಗಿತ್ತು. ಈ ಹಾಡಿನ ವಿರುದ್ಧ ಕಿರುಕ್ಕುಳಗೊಳಾಗದ ಗಂಡಸರ ಸಂಘ ವಿರೋಧ ವ್ಯಕ್ತಪಡಿಸಿತ್ತು. ಈ ಹಾಡು ಸಿನಿಮಾದಿಂದ ತೆಗೆಯದಿದ್ದರೆ ಚಿತ್ರ ಪ್ರದರ್ಶನ ನಿಲ್ಲಿಸುತ್ತೇವೆ ಎಂದು ವಾರ್ನಿಂಗ್(Warning) ಕೊಟ್ಟಿದ್ದರು. ಈ ಹಾಡಿನಲ್ಲಿ ಗಂಡಸರ ಬಗ್ಗೆ ಕೆಟ್ಟದಾಗಿ ಬಿಂಬಿಸುವ ಸಾಹಿತ್ಯ(lyrics)ಗಳಿದ್ದವು. ಯಾವ ಬಟ್ಟೆ ಹಾಕಿದರೇನು, ನೀವು ನೋಡ ನೋಟ ಸರಿಯಿಲ್ಲ. ನಿಮ್ಮ ಕಣ್ಣುಗಳು ಸರಿಯಿಲ್ಲ ಎಂಬ ಸಾಲುಗಳು ಇತ್ತು. ಇದರ ವಿರುದ್ಧ ಹಲವಾರು ಸಂಘಟನೆಗಳು ಆಕ್ರೋಶ ಹೊರಹಾಕಿದ್ದರು. ಇದೀಗ ಅದೇ ಸಾಲಿಗೆ ಮತ್ತೊಂದಯ ಐಟಂ ಸಾಂಗ್(Item Song) ಸೇಪರ್ಡೆಯಾಗಿದೆ. ‘ಊ ಅಂಟಾವ’ ಸಾಂಗ್ನ ರೀತಿಯಲ್ಲೇ ಫೇಮಸ್ ಆಗಲು ಹೋದ ಈ ಹಾಡು ವಿವಾದಕ್ಕೆ ಕಾರಣವಾಗಿದೆ. ಹೌದು, ಮೆಗಾಸ್ಟಾರ್ ಚಿರಂಜೀವಿ(Mega Star Chiranjeevi) ಹಾಗೂ ರಾಮ್ಚರಣ್(Ram Charan) ಅಭಿನಯದ ‘ಆಚಾರ್ಯ’ ಸಿನಿಮಾದ ಈ ಐಟಂ ಸಾಂಗ್ ವಿವಾದ ಸೃಷ್ಟಿಸಿದೆ. ಐಟಂ ಸಾಂಗ್ ಓಕೆ.. ಆದರೆ ಲಿರೀಕ್ಷೆ ಮಾತ್ರ ಹೀಗ್ ಯಾಕೆ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
‘ಆಚಾರ್ಯ’ ಸನಿಮಾದ ‘ಸಾನಾ ಕಷ್ಟಂ’ ಸಾಂಗ್ ವಿವಾದ!
ಮೆಗಾಸ್ಟಾರ್ ಚಿರಂಜೀವಿ ಹಾಗೂ ಅವರ ಪುತ್ರ ರಾಮ್ಚರಣ್ ಅಭಿನಯದ ‘ಆಚಾರ್ಯ’ ಸಿನಿಮಾ ಫೆಬ್ರವರಿ 4ಕ್ಕೆ ತೆರೆಗೆ ಬರಲಿದೆ. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ ಹೋದರೂ ಹೋಗಬಹುದು ಅಂತಿದ್ದಾರೆ ಸಿನಿ ಪಂಡಿತರು. ಆದರೆ, ಚಿತ್ರತಂಡ ನಿಧಾನಕ್ಕೆ ಪ್ರಚಾರ ಆರಂಭಿಸಿದೆ. ಇತ್ತೀಚೆಗೆ ಟೀಸರ್ ರಿಲೀಸ್ ಮಾಡುವ ಮೂಲಕ ಸಿನಿಮಾದ ನಿರೀಕ್ಷೆಯನ್ನು ಹೆಚ್ಚಿಸುವ ಕೆಲಸವನ್ನು ಮಾಡಿತ್ತು. ಅದೇ ರೀತಿ ಈಗ ಚಿತ್ರತಂಡದ ವಿಶೇಷ ಹಾಡನ್ನು ಬಿಡುಗಡೆ ಮಾಡಲಾಗಿದೆ. ಈ ಹಾಡಿನ ಲಿರಿಕ್ಸ್ ವಿವಾದ ಸೃಷ್ಟಿಸಿದೆ. ಯಾಕೆ ಐಟಂ ಸಾಂಗ್ ಬರೆಯುವಾಗ ಲಿರಿಕ್ಸ್ ಮೇಲೆ ಹಿಡಿತ ಇರುವುದಿಲ್ಲವಾ? ಹೀಗೆ ಬರೆಯಬೇಕೆಂದು ಯಾರಾದರೂ ನಿಮಗೆ ಸೂಚಿಸಿದ್ದಾರಾ? ಐಟಂ ಸಾಂಗ್ಗೋಸ್ಕರ್ ಯಾಕೆ ಅವಮಾನ ಮಾಡುತ್ತೀರಾ ಎಂಬ ಪ್ರಶ್ಬೆ ಎದ್ದಿದೆ.
ಇದನ್ನು ಓದಿ: ನಾಳೆ ನಮ್ ಬಾಸ್ ಬರ್ತ್ಡೇ ಮಾಡ್ಲೇಬೇಕು... ಒಂದಿನ ಕಾಲೇಜಿಗೆ ರಜೆ ಕೊಡಿ ಎಂದು ಪತ್ರ ಬರೆದ ಯಶ್ ಅಭಿಮಾನಿ!
ಆರ್ಎಂಪಿ ವೈದ್ಯರಿಗೆ ನೋವು ತರುವ ರೀತಿ ಲಿರಿಕ್ಸ್!
‘ಸಾನಾ ಕಷ್ಟಂ..’ ಲಿರಿಕಲ್ ಸಾಂಗ್ ಬಿಡುಗಡೆ ಆಗಿದೆ. ಈ ಹಾಡಿನಲ್ಲಿ ಆರ್ಎಂಪಿ ವೈದ್ಯರಿಗೆ ನೋವು ತರುವ ರೀತಿಯಲ್ಲಿ ಲಿರಿಕ್ಸ್ ಬರೆಯಲಾಗಿದೆ. ‘ಮಹಿಳೆಯರನ್ನು ಸ್ಪರ್ಶಿಸುವ ಅವಕಾಶವನ್ನು ಪಡೆಯಲು ಹುಡುಗರು RMP ವೈದ್ಯರಾಗುತ್ತಿದ್ದಾರೆ’ ಎನ್ನುವ ಸಾಲಿದೆ. ಇದಕ್ಕೆ ತೆಲಂಗಾಣ ವೈದ್ಯರು ದೂರು ದಾಖಲು ಮಾಡಿದ್ದಾರೆ.ಆಚಾರ್ಯ ಹೆಸರಿನ ಪಾತ್ರದಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಕೊರಟಾಲ ಶಿವ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಶೂಟಿಂಗ್ ಪೂರ್ಣಗೊಳ್ಳಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ಕೆಲಸಗಳು ನಿಂತಿದ್ದವು.
ಇದನ್ನು ಓದಿ: ಗುಟ್ಟಾಗಿ ಮದುವೆಯಾದ್ರಾ ಕಾಜೋಲ್ ತಂಗಿ ತನಿಶಾ ಮುಖರ್ಜಿ? ಫೋಟೋ ಹೇಳ್ತಿದೆ ಹೊಸ ಕಥೆ
ಆಚಾರ್ಯ ಸಿನಿಮಾದಲ್ಲಿ ಅಪ್ಪ-ಮಗನ ಜುಗುಲ್ಬಂದಿ
ಒಂದೇ ಸಿನಿಮಾದಲ್ಲಿ ಅಪ್ಪ-ಮಗನ ಜುಗುಲ್ಬಂದಿ ಇರಲಿದೆ. ವಿದ್ಯಾರ್ಥಿಗಳ ನಾಯಕ ಸಿದ್ಧನ ಪಾತ್ರದಲ್ಲಿ ರಾಮ್ಚರಣ್ ಅಭಿನಯಿಸಿದ್ದಾರೆ. ಇದೊಂದು ಅತಿಥಿ ಪಾತ್ರ. ಹೆಚ್ಚು ಹೊತ್ತು ತೆರೆ ಮೇಲೆ ರಾಮ್ಚರಣ್ ಪಾತ್ರ ಕಾಣಿಸಿಕೊಳ್ಳುವುದಿಲ್ಲ. ತೆರೆ ಮೇಲೆ ಇದ್ದಷ್ಟು ಅಪ್ಪ-ಮಗ ಇಬ್ಬರು ಸಖತ್ ಮನರಂಜನೆ ನೀಡುವುದು ಖಚಿತ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ