ಮೆಗಾಸ್ಟಾರ್ ಚಿಂರಜೀವಿ ಅಭಿನಯದ 152ನೇ ಸಿನಿಮಾ 'ಆಚಾರ್ಯ'. ಈ ಸಿನಿಮಾಗೆ ಆರಂಭದಿಂದಲೂ ಒಂದಲ್ಲ ಒಂದು ರೀತಿಯ ಸಂಕಷ್ಟ ಎದುರಾಗುತ್ತಲೇ ಇದೆ. 'ಸೈರಾ ನರಸಿಂಹರೆಡ್ಡಿ' ನಂತರ ಚಿರು ನಟಿಸುತ್ತಿರುವ ಚಿತ್ರ ಇದಾಗಿರುವ ಕಾಣರಕ್ಕೆ ಇದರ ಬಗ್ಗೆ ಅಭಿಮಾನಿಗಳಿಗೆ ತುಂಬಾ ನಿರೀಕ್ಷೆ ಇದೆ.
ಸಿನಿಮಾ ಆರಂಭದಲ್ಲಿ ಈ ಚಿತ್ರಕ್ಕೆ ನಾಯಕಿ
ತ್ರಿಶಾ ಎಂದು ಹೇಳಲಾಗುತ್ತಿತ್ತು. ಅದಕ್ಕೆ ತ್ರಿಶಾ ಸಹ ಓಕೆ ಎಂದಿದ್ದರು. ಆದರೆ ಇತ್ತೀಚೆಗಷ್ಟೆ ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ಈ ಸಿನಿಮಾದಿಂದ ಹೊರ ಹೋಗುತ್ತಿರುವುದಾಗಿ ತ್ರಿಷಾ ಟ್ವೀಟ್ ಮಾಡಿದ್ದರು. ನಂತರ ನಾಯಕಿ ಪಾತ್ರಕ್ಕೆ ಅನುಷ್ಕಾರನ್ನು ಸಂಪರ್ಕಿಸಲಾಗಿದ್ದು, ಸ್ವೀಟಿ ಸಹ ಈ ಪಾತ್ರಕ್ಕೆ ಒಲ್ಲೆ ಎಂದಿದ್ದಾರಂತೆ.
![Actress Trisha Walks Out Of Chiranjeevi's New Film Acharya Because Of Creative Differences]()
ಚಿರಂಜೀವಿ
ಅನುಷ್ಕಾ ಕೈಯಲ್ಲಿ ಸದ್ಯ ಯಾವುದೇ ಸಿನಿಮಾಗಳಿಲ್ಲ. ಅವರ ಆಭಿನಯದ 'ನಿಶ್ಯಬ್ಧಂ' ಬಿಡುಗಡೆಯ ಹಂತದಲ್ಲಿದ್ದು, ಅದರ ಪ್ರಚಾರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ ಸ್ವೀಟಿ. ಆದರೆ ಸಿನಿಮಾಗಳು ಕೈಯಲ್ಲಿಲ್ಲ ಎಂದಾಗ ಯಾರಾದರೂ ದೊಡ್ಡ ಸ್ಟಾರ್ಗಳ ಚಿತ್ರದಲ್ಲಿ ಅವಕಾಶ ಬಂದರೆ ಒಪ್ಪಿಕೊಳ್ಳುತ್ತಾರೆ. ಆದರೆ ಅನುಷ್ಕಾ ಇದಕ್ಕೆ ಇಲ್ಲ ಎಂದಿರುವುದು ಚರ್ಚೆಗೆ ಕಾರಣವಾಗಿದೆ.
![Anushka Shetty is going to share a screen with Chiranjeevi in Acharya Movie]()
ಅನುಷ್ಕಾ ಶೆಟ್ಟಿ ಹಾಗೂ ಚಿರಂಜೀವಿ
ಇನ್ನು ಈ ಸಿನಿಮಾಗೆ ಈಗ ನಾಯಕಿ ಯಾರು ಎಂದು ತಲೆಕೆಡಿಸಿಕೊಂಡಿರುವ ಚಿತ್ರತಂಡ ಕಾಜಲ್ ಅಗರ್ವಾಲ್ ಅವರನ್ನು ಸಂಪರ್ಕಿಸಿದೆ ಎಂಬ ಸುದ್ದಿ ಇದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಅನ್ನೋದಕ್ಕೆ ಚಿತ್ರತಂಡವಷ್ಟೇ ಉತ್ತರಿಸಬೇಕಿದೆ.
ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ ಭಾವಿ ಪತ್ನಿ ರೇವತಿ ಜೊತೆ ತೆಗೆದ ಸೆಲ್ಫಿಗೂ ತಟ್ಟಿದ ಕೊರೋನಾ ಬಿಸಿ..!
ಈ ಸಿನಿಮಾದಲ್ಲಿ ಚಿರು ಜತೆ ವಿಶೇಷ ಪಾತ್ರದಲ್ಲಿ ನಟಿಸಲು ಮಹೇಶ್ ಬಾಬು ಅವರನ್ನೂ ಸಂಪರ್ಕಿಸಲಾಗಿತ್ತು. ಈಗಾಗಲೇ ಮಲ್ಟಿ ಸ್ಟಾರರ್ ಚಿತ್ರಗಳಲ್ಲಿ ನಟಿಸಿರುವ ಮಹೇಶ್ ಬಾಬು ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಾಣರಕ್ಕೆ ಈ ಚಿತ್ರದಲ್ಲಿ ನಟಿಸುವ ಆಸಕ್ತಿ ತೋರಲಿಲ್ಲವಂತೆ.
![Trisha Walks Out of Chiranjeevis Telugu Film Over Creative Differences]()
ತ್ರಿಶಾ ಹಾಗೂ ಚಿರಂಜೀವಿ
ಇನ್ನು ಈ ಚಿತ್ರವನ್ನು ಬರುವ ಆಗಸ್ಟ್ನಲ್ಲಿ ಬಿಡುಗಡೆ ಮಾಡೋಕೆ ಚಿತ್ರತಂಡ ನಿರ್ಧರಿಸಿತ್ತು. ಈಗ ಅದೂ ಕೂಡ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾಗೆ ಎರಡನೇ ನಾಯಕ ಹಾಗೂ ನಾಯಕಿಯನ್ನು ಹುಡುಕುವ ಕೆಲಸ ಪೂರ್ಣಗೊಳ್ಳಬೇಕಿದೆ. ನಂತರ ಸಿನಿಮಾದ ಚಿತ್ರೀಕರಣ ಆರಂಭಗೊಳ್ಳಲಿದೆ. ಇದರಿಂದಾಗಿ ಈಗ ಚಿರು ಅಭಿಮಾನಿಗಳೂ ಈ ಸಿನಿಮಾದ ರಿಲೀಸ್ ದಿನಾಂಕಕ್ಕಾಗಿ ಕಾತರದಿಂದ ಕಾಯುವಂತಾಗಿದೆ.
Pooja Hegde: ಬಾಲಿವುಡ್ನಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆಗೆ ಸಿಕ್ತು ಕೋಟಿ ಕೋಟಿ ಬಂಪರ್ ಆಫರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ