• Home
  • »
  • News
  • »
  • entertainment
  • »
  • Megastar Chiranjeevi: ಮೂರನೇ ಮದುವೆಗೆ ರೆಡಿಯಾದ್ರಾ ಚಿರಂಜೀವಿ ಪುತ್ರಿ ಶ್ರೀಜಾ?

Megastar Chiranjeevi: ಮೂರನೇ ಮದುವೆಗೆ ರೆಡಿಯಾದ್ರಾ ಚಿರಂಜೀವಿ ಪುತ್ರಿ ಶ್ರೀಜಾ?

ಮೆಗಾ ಸ್ಟಾರ್ ಪುತ್ರಿ ಶ್ರೀಜಾ 3 ನೇ ಮದ್ವೆಗೆ ರೆಡಿ ಆದ್ರೇ?

ಮೆಗಾ ಸ್ಟಾರ್ ಪುತ್ರಿ ಶ್ರೀಜಾ 3 ನೇ ಮದ್ವೆಗೆ ರೆಡಿ ಆದ್ರೇ?

ನಾನು 2022 ರಲ್ಲಿ ಒಬ್ಬ ವ್ಯಕ್ತಿಯನ್ನ ಭೇಟಿಯಾದೆ. ಅವರು ನನ್ನ ತುಂಬಾ ಅರ್ಥ ಮಾಡಿಕೊಂಡಿದ್ದಾರೆ. ತುಂಬಾ ಪ್ರೀತಿಸುತ್ತಾರೆ. ಕಷ್ಟ-ಸುಖದಲ್ಲೂ ಜೊತೆಗೆ ಇರುತ್ತಾರೆ. ಸದಾ ನನ್ನ ಬೆಂಬಲಕ್ಕೆ ನಿಲ್ಲುತ್ತಾರೆ. ಅವರನ್ನ ಮೀಟ್ ಆಗಿರೋದೇ ಅದ್ಭುತ ಎಂದು ಶ್ರೀಜಾ ಹೇಳಿಕೊಂಡಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಬೆಳ್ಳಿ ತೆರೆ ಮೇಲಿನ ಬದುಕು ಬೇರೆ. ಅಲ್ಲಿ ಪಾತ್ರಗಳಾಗಿ ಅನೇಕ ಮದುವೆಗಳಾಗುವುದು (Megastar Chiranjeevi) ಉಂಟು. ಜನ ಕೂಡ ಇದನ್ನ ಮೆಚ್ಚುತ್ತಾರೆ. ದುಡ್ಡುಕೊಟ್ಟು ಅಂತಹ ಸಿನಿಮಾಗಳನ್ನೂ ಹೋಗಿ ನೋಡಿ ಬರ್ತಾರೆ. ಆದರೆ ಅದೇ (Sreeja 3rd Marriage News Viral) ಸಿನಿಮಾದವ್ರು ರಿಯಲ್ ಲೈಫ್​ ಅಲ್ಲಿ ಎರಡೋ ಮೂರೋ ಮದುವೆ ಆದ್ರೂ ಅಷ್ಟೆ. ಜನರಲ್ಲಿ ಅದೇಕೋ (Megastar Chiru Daughter Sreeja) ನಂಬಿಕೆ ಹಾರಿ ಹೋಗಿ ಬಿಡುತ್ತದೆ. ಆದರೆ ಆಯಾ ಸ್ಟಾರ್ ಮಕ್ಕಳು ಸ್ಟಾರ್ ಅಲ್ಲದೇ ಇದ್ರೆ, ಅವರ ರಿಯಲ್ ಲೈಫ್​ ಕೇವಲ ಸುದ್ದಿ ಆಗಿ ಹೋಗುತ್ತದೆ. ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಪುತ್ರಿ (Sreeja Special Video Viral) ಶ್ರೀಜಾ ಅಂತಹದ್ದೇ ಮೂರನೇ ಮದುವೆ ವಿಷಯಕ್ಕೆ ಸುದ್ದಿಯಲ್ಲಿದ್ದಾರೆ.  ಇತರ ಮಾಹಿತಿ ಇಲ್ಲಿದೆ.


ಮೆಗಾ ಸ್ಟಾರ್ ಪುತ್ರಿ ಶ್ರೀಜಾ ಮೂರನೇ ಮದ್ವೆಗೆ ರೆಡಿ ಆದ್ರೇ?
ಮೆಗಾ ಸ್ಟಾರ್ ಚಿರಂಜೀವಿ ಇರಲಿ, ಅವರ ಪುತ್ರ ರಾಮ್​ಚರಣ್ ಆಗಿರಲಿ, ಇವರಾರು ವಿವಾದಗಳನ್ನ ಮೈಮೇಲೆ ಎಳೆದುಕೊಂಡಿಲ್ಲ. ಟ್ರೋಲ್ ಆಗಿರೋದು ಕೂಡ ಕಡಿಮೇನೆ. ಗಾಸಿಪ್​​ಗಳೂ ಬಹುತೇಕ ಇಲ್ವೇ ಇಲ್ಲ ಅಂದುಕೊಳ್ಳಬಹುದು.


Megastar Chiranjeevi Daughter Sreeja Special Video viral
ಶ್ರೀಜಾ ಪ್ರಸ್ತಾಪಿಸಿದ ಆ ವ್ಯಕ್ತಿ ಯಾರು?


ಆದರೆ ಮೆಗಾ ಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ಸದಾ ಸುದ್ದಿಯಲ್ಲಿರುತ್ತಾರೆ. ಅದು ಆಕೆಯ ವೈಯುಕ್ತಿಕ ಲೈಫ್ ಬಗ್ಗೆ ಅಂತಲೇ ಹೇಳಬಹುದು. ನಿಜ, ಶ್ರೀಜಾ ಈಗಾಗಲೇ ಒಂದು ಮದುವೆ ಆಗಿ ಡಿವೋರ್ಸ್ ಮಾಡಿಕೊಂಡಿದ್ದಾರೆ.









View this post on Instagram






A post shared by Sreeja (@sreejakonidela)





ಶ್ರೀಜಾ 2ನೇ ಮದುವೆನೂ ಮುರಿದು ಬಿತ್ತೇ?


ಮೆಗಾ ಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ಎರಡನೇ ಮದುವೆ ಅದ್ಧೂರಿಯಾಗಿಯೇ ನಡೆದಿತ್ತು. ಬೆಂಗಳೂರಿನ ದೇವನಹಳ್ಳಿಯ ಚಿರು ಫಾರ್ಮ್ ಹೌಸ್​ ನಲ್ಲಿಯೇ ಈ ಒಂದು ಮದುವೆ ಆಗಿತ್ತು. 2016 ರಲ್ಲಿ ಉದ್ಯಮಿ ಕಲ್ಯಾಣ್ ದೇವ್ ಅವರನ್ನ ಶ್ರೀಜಾ ಮದುವೆ ಆಗಿದ್ದರು.


ಹೌದು, ಕಲ್ಯಾಣ್ ದೇವ್​ರಿಂದ ಶ್ರೀಜಾ ಅವರಿಗೆ ನವಿಷ್ಕಾ ಅನ್ನೋ ಒಂದು ಮಗು ಕೂಡ ಇದೆ. 2007 ರಲ್ಲಿ ಸಿರೀಶ್ ಭಾರದ್ವಾಜ್ ಅವರನ್ನ ಶ್ರೀಜಾ ಮದುವೆ ಆಗಿದ್ದರು. ಆಗ ಈ ದಂಪತಿಗೆ ನಿವ್ರತಿ ಅನ್ನೋ ಮಗು ಕೂಡ ಆಗಿದೆ. ಆದರೆ 2011 ರಲ್ಲಿ ಈ ಜೋಡಿ ಡಿವೋರ್ಸ್ ಪಡೆದು ದೂರ ಆಗಿತ್ತು.


ಶ್ರೀಜಾ ಶೇರ್ ಮಾಡಿರೋ ಆ ವೀಡಿಯೋದಲ್ಲಿ ಏನ್ ಇದೆ?
ಶ್ರೀಜಾ ಮತ್ತು ಕಲ್ಯಾಣ್​ ದೇವ್ ನಡುವಿನ ದಾಂಪತ್ಯ ಜೀವನ ಬಿರುಕು ಬಿದ್ದಂತಿದೆ. ಈಗ ಹರಿದಾಡ್ತಿರೋ ಮಾಹಿತಿ ಪ್ರಕಾರ, ಶ್ರೀಜಾ ವಾಪಸ್ ತವರು ಮನೆಗೆ ಬಂದಿದ್ದಾರೆ ಅನ್ನೋ ಮಾಹಿತಿನೂ ಇದೆ.


ಇದರ ಬೆನ್ನಲ್ಲಿಯೇ ಶ್ರೀಜಾ ಈಗೊಂದು ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ ನಲ್ಲಿ ಶೇರ್ ಮಾಡಿರೋ ಈ ವೀಡಿಯೋದಲ್ಲಿ ಒಂದು ಸ್ಪೆಷಲ್ ವ್ಯಕ್ತಿಯ ವಿಷಯವೂ ಪ್ರಸ್ತಾಪವೂ ಇದೆ. ಅದರ ಬಗ್ಗೆ ಕೂಡ ಶ್ರೀಜಾ ಈ ಒಂದು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.


ನಾನು 2022 ರಲ್ಲಿ ಒಬ್ಬ ಒಳ್ಳೆ ವ್ಯಕ್ತಿಯನ್ನ ಭೇಟಿಯಾದೆ!
ಶ್ರೀಜಾ ತನ್ನ ಜೀವನದಲ್ಲಿ ಮೂರನೇ ವ್ಯಕ್ತಿಯನ್ನ ಭೇಟಿಯಾಗಿದ್ದಾರೆ. ಈ ವ್ಯಕ್ತಿಯ ಬಗ್ಗೆ ಅದೇನೋ ಪಾಸಿಟಿವ್ ಫೀಲಿಂಗ್ ಇದ್ದಂತಿದೆ. ಅದನ್ನ ಈಗ ಶೇರ್ ಮಾಡಿರೋ ವೀಡಿಯೋದಲ್ಲಿಯೇ ಹೇಳಿಕೊಂಡಿದ್ದಾರೆ.


Megastar Chiranjeevi Daughter Sreeja Special Video viral
ಶ್ರೀಜಾ 2ನೇ ಮದುವೆನೂ ಮುರಿದು ಬಿತ್ತೇ?


ನಾನು 2022 ರಲ್ಲಿ ಒಬ್ಬ ವ್ಯಕ್ತಿಯನ್ನ ಭೇಟಿಯಾದೆ. ಅವರು ನನ್ನ ತುಂಬಾ ಅರ್ಥ ಮಾಡಿಕೊಂಡಿದ್ದಾರೆ. ತುಂಬಾ ಪ್ರೀತಿಸುತ್ತಾರೆ. ಕಷ್ಟ-ಸುಖದಲ್ಲೂ ಜೊತೆಗೆ ಇರುತ್ತಾರೆ. ಸದಾ ನನ್ನ ಬೆಂಬಲಕ್ಕೆ ನಿಲ್ಲುತ್ತಾರೆ. ಅವರನ್ನ ಮೀಟ್ ಆಗಿರೋದೇ ಅದ್ಭುತ ಎಂದು ಶ್ರೀಜಾ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Aditi Prabhudeva-Choo Mantar: ಸುಂದರ ಸೀರೆಯಲ್ಲಿ ಬಂದ ಅದಿತಿ, ಬ್ಲೌಸ್ ಡಿಸೈನ್ ಮೇಲೆ ನೆಟ್ಟಿಗರ ಕಣ್ಣು


ಶ್ರೀಜಾ ಪ್ರಸ್ತಾಪಿಸಿದ ಆ ವ್ಯಕ್ತಿ ಯಾರು?
ಮೆಗಾ ಸ್ಟಾರ್ ಚಿರಂಜೀವಿ ಪುತ್ರಿ ಪ್ರಸ್ತಾಪಿಸಿದ ಆ ವ್ಯಕ್ತಿ ಯಾರು? ಶ್ರೀಜಾ ಈ ಮೂಲಕ ಮೂರನೇ ಮದುವೆಯ ಹಿಂಟ್​ ಕೊಟ್ಟರೇ? ಹಾಗೆ ಶ್ರೀಜಾ ಹೇಳಿರೋ ಆ ವ್ಯಕ್ತಿಯ ಬಗ್ಗೆ ಶೀಘ್ರದಲ್ಲಿ ಏನಾದ್ರೂ ಹೇಳ್ತಾರಾ? ಗೊತ್ತಿಲ್ಲ. ಆದರೆ ಈಗ ಶ್ರೀಜಾ ಶೇರ್ ಮಾಡಿರೋ ವೀಡಿಯೋ ಮಾತ್ರ ಬೇಜಾನ್ ವೈರಲ್ ಆಗಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು