Acharya Release Date: ಚಿರಂಜೀವಿ ಮತ್ತು ರಾಮ್​ಚರಣ್ ಅಭಿನಯದ ಆಚಾರ್ಯ ರಿಲೀಸ್ ಡೇಟ್ ಫಿಕ್ಸ್, ಫೆಬ್ರವರಿಯಲ್ಲಿ ತೆರೆಗೆ

Chiranjeevi and Ram Charan Movie Acharya Release Date: ಪುಷ್ಪ ಚಿತ್ರತಂಡ ಅಂದುಕೊಂಡದ್ದಕ್ಕಿಂತ ಮುಂಚೆಯೇ ಸಿನಿಮಾನವನ್ನ ಬಿಡುಗಡೆಗೊಳಿಸುವುದಾಗಿ ನಿರ್ಧರಿಸಿತ್ತು. ಆದರೆ ಆಚಾರ್ಯ ಸಿನಿಮಾ ಈ ಡೇಟ್​ ಮೇಲೆ ಕಣ್ಣಿಟ್ಟಿತ್ತು. ಮತ್ತೆ ಪುಷ್ಪ ಸಿನಿಮಾ ಬಿಡುಗಡೆ ದಿನಾಂಕ ಮುಂದೆ ಹೋಗುತ್ತೆ ಅಂತ ಹೇಳಲಾಗಿತ್ತು.

ಆಚಾರ್ಯ ಸಿನಿಮಾ ಪೋಸ್ಟರ್

ಆಚಾರ್ಯ ಸಿನಿಮಾ ಪೋಸ್ಟರ್

  • Share this:
    Acharya Movie Release Date Announced: ಮೆಗಾಸ್ಟಾರ್​ ಚಿರಂಜೀವಿ (Megastar Chiranjeevi) ಮತ್ತು ಅವರ ಪುತ್ರ ರಾಮಚರಣ್ (Ram Charan Teja) ನಟನೆಯ ಟಾಲಿವುಡ್​​ನ ಮೋಸ್ಟ್​ ಎಕ್ಸ್​ಪೆಕ್ಟೆಡ್​ "ಆಚಾರ್ಯ" ಸಿನಿಮಾದ ರಿಲೀಸ್​ ಡೇಟ್​ ಅನೌನ್ಸ್​ ಆಗಿದೆ. ಫೆಬ್ರವರಿ 4ಕ್ಕೆ ಆಚಾರ್ಯ ಸಿನಿಮಾ ಅದ್ಧೂರಿಯಾಗಿ ತೆರೆ ಮೇಲೆ ಬರಲಿದೆ. ಸಾಕಷ್ಟು ದಿನಗಳಿಂದ ಸಿನಿಮಾ ರಿಲೀಸ್​ ಬಗ್ಗೆ ಸೃಷ್ಟಿಯಾಗಿದ್ದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಕೊರಟಾಳ ಶಿವ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಆಚಾರ್ಯ ಕೊನೆಗೂ ಅಭಿಮಾನಿಗಳಿಗೆ ದರ್ಶನ ನೀಡುವ ದಿನಾಂಕವನ್ನು ಘೋಷಣೆ ಮಾಡಿದೆ. ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​ (Allu Arjun) ಅಭಿನಯದ ಪುಷ್ಪ (Pushpa Movie) ಸಿನಿಮಾ ಡಿಸೆಂಬರ್​ 17ರಂದು ರಿಲೀಸ್​ ಆಗುತ್ತೆ ಅಂತ ಚಿತ್ರತಂಡ ಅನೌನ್ಸ್ ಮಾಡಿತ್ತು. ಇದಾದ ಬಳಿಕ ಆಚಾರ್ಯ ಸಿನಿಮಾ ಕೂಡ ಡಿಸೆಂಬರ್​ನಲ್ಲಿ ತೆರೆಗೆ ಬರಲು ಸಜ್ಜಾಗಿತ್ತು. ಹೀಗಾಗಿ ಪುಷ್ಟ ಸಿನಿಮಾ ಬಿಡುಗಡೆ ದಿನಾಂಕವನ್ನ ಮುಂದೂಡಲಾಗುತ್ತೆ (Postponed) ಅಂತ ಹೇಳಲಾಗುತ್ತಿತ್ತು. ಆದರೆ ಈಗ ಆಚಾರ್ಯ ಸಿನಿಮಾ ಫೆಬ್ರವರಿ 4ರಂದು ಬಿಡುಗಡೆ ಮಾಡುವುದಾಗಿ ಸಿನಿಮಾ ತಂಡ ಘೋಷಣೆ ಮಾಡಿದೆ.

    ಸೈರಾ ನರಸಿಂಹ ರೆಡ್ಡಿ ಚಿತ್ರದ ಬಳಿಕ ಆಚಾರ್ಯ ಸಿನಿಮಾದಲ್ಲಿ ಮೆಗಾಸ್ಟಾರ್​ ಚಿರಂಜೀವಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿರಂಜೀವಿ ಪುತ್ರ ರಾಮ್​ ಚರಣ್​ ಬಂಡವಾಳ ಹೂಡಿದ್ದಾರೆ. ಅಷ್ಟೇ ಅಲ್ಲದೇ ಆಚಾರ್ಯ ಸಿನಿಮಾದಲ್ಲಿ ರಾಮ್​ ಚರಣ್​ ತಂದೆ ಜತೆ ನಟಿಸಿದ್ದಾರೆ.
    ಇನ್ನೂ ಚಿತ್ರದಲ್ಲಿ ಕಾಜಲ್​ ಅಗರವಾಲ್​, ಪೂಜಾ ಹೆಗ್ದೆ, ಕೀರ್ತಿ ಸುರೇಶ್​, ಸೋನು ಸೂದ್​ ಹಾಗೂ ಕನ್ನಡದ ಕಿಶೋರ್​ ಹಾಗೂ ಭಜರಂಗಿ ಸಿನಿಮಾ ಖ್ಯಾತಿಯ ಲೋಕಿ ಸೇರಿ ಹಲವು ಪ್ರಮುಖ ಕಲಾವಿದರು ಈ ಸಿನಿಮಾದಲ್ಲಿ ತೆರೆಹಂಚಿಕೊಂಡಿದ್ದಾರೆ. ರಾಮ್​ ಚರಣ್​ ಜತೆ ನಿರಂಜನ್​ ರೆಡ್ಡಿ ಸಹ ನಿರ್ಮಾಣದ ಹೊರೆ ಹೊತ್ತಿದ್ದಾರೆ. ಇನ್ನೂ ಈ ಚಿತ್ರಕ್ಕೆ ಮಣಿ ಶರ್ಮ ಸಂಗೀತ ಸಂಯೋಜನೆ ಮಾಡಿದ್ದಾರೆ.

    ಪುಷ್ಪ ಜೊತೆ ಆಚಾರ್ಯ ಕ್ಲಾಶ್ ಮಿಸ್

    ಅಲ್ಲು ಅರ್ಜುನ್​ ನಟನೆಯ ಪುಷ್ಪ ಸಿನಿಮಾ ಕೂಡ ಈ ಹಿಂದೆ ಕ್ರಿಸ್​ಮಸ್​ಗೆ ತೆರೆಗೆ ಬರಲು ಚಿತ್ರತಂಡ ತಯಾರಿ ಮಾಡಿಕೊಂಡಿತ್ತು. ಆದರೆ ಬಾಲಿವುಡ್​​ನ ಬಹುನಿರೀಕ್ಷಿತ ಸಿನಿಮಾ 83 ಕ್ರಿಸ್​ಮಸ್​ಗೆ ಬಿಡುಗಡೆಯಾಗುತ್ತೆ ಅಂತ ಚಿತ್ರತಂಡ ಹೇಳಿತ್ತು. ಹೀಗಾಗಿ ಪುಷ್ಪ ಚಿತ್ರತಂಡ ಅಂದುಕೊಂಡದ್ದಕ್ಕಿಂತ ಮುಂಚೆಯೇ ಸಿನಿಮಾನವನ್ನ ಬಿಡುಗಡೆಗೊಳಿಸುವುದಾಗಿ ನಿರ್ಧರಿಸಿತ್ತು. ಆದರೆ ಆಚಾರ್ಯ ಸಿನಿಮಾ ಈ ಡೇಟ್​ ಮೇಲೆ ಕಣ್ಣಿಟ್ಟಿತ್ತು. ಮತ್ತೆ ಪುಷ್ಪ ಸಿನಿಮಾ ಬಿಡುಗಡೆ ದಿನಾಂಕ ಮುಂದೆಹೋಗುತ್ತೆ ಅಂತ ಹೇಳಲಾಗಿತ್ತು. ಕಾರಣ ಚಿರಂಜೀವಿ ಕಂಡರೇ ಅಲ್ಲು ಅರ್ಜುನ್​ಗೆ ತುಂಬ ಗೌರವ. ಅವರು ದಿನಾಂಕ ಕೇಳಿದರೆ ಬಿಟ್ಟುಕೊಡಲು ಅಲ್ಲು ಅರ್ಜುನ್​ ರೆಡಿಯಾಗಿದ್ದರು.

    ಇದನ್ನೂ ಓದಿ: ಮತ್ತೊಂದು ಸಿನಿಮಾ ರಿಮೇಕ್ ಮಾಡಲು ಹೊರಟ ಚಿರಂಜೀವಿ?

    ಆದರೆ ಆಚಾರ್ಯ ಸಿನಿಮಾ ತಂಡ ಬಿಡುಗಡೆ ದಿನಾಂಕವನ್ನ ಮುಂದೂಡಿದ್ದಾರೆ. ಜನವರಿ ಮಧ್ಯ ಭಾಗದಲ್ಲಿ ಸಿನಿಮಾ ಬಿಡುಗಡೆಯಾಗುತ್ತೆ ಅಂತ ಹೇಳಲಾಗಿತ್ತು. ಈಗ ಫೆಬ್ರವರಿ 4ರಂದು ಸಿನಿಮಾ ಬಿಡುಗಡೆಯಾಗಲಿದೆ.





    ಇದು ಅಭಿಮಾನಿಗಳಿಗೆ ಖುಷಿ ಜತೆಗೆ ಬೇಸರ ಮೂಡಿಸಿದೆ. ಈ ವರ್ಷವೇ ತನ್ನ ನೆಚ್ಚಿನ ಸಿನಿಮಾವನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಮುಂದಿನ ವರ್ಷ ಸಿನಿಮಾ ಬಿಡುಗಡೆಯಾಗುತ್ತಿರುವುದು ಕೊಂಚ ನಿರಾಸೆ ಮೂಡಿಸಿದೆ.

    ಹೊಸ ದಾಖಲೆ ನಿರ್ಮಿಸಿದ್ದ ಆಚಾರ್ಯ

    ಈ ಹಿಂದೆ ಸಿನಿಮಾ ಚಿತ್ರೀಕರಣಕ್ಕಾಗಿ ಬಾಹುಬಲಿ, ತಾನಾಜಿ ಸಿನಿಮಾಗಳಿಗಿಂತ ದೊಡ್ಡ ಸೆಟ್​ವೊಂದನ್ನ ನಿರ್ಮಿಸಿ ದಾಖಲೆ ಬರೆದಿತ್ತು. ದೇವಸ್ಥಾನ ಹಾಗೂ ಒಂದು ಹಳ್ಳಿಯ ಸೆಟ್​ ನಿರ್ಮಿಸಿ ಚಿತ್ರ ಬಹುತೇಕ ದೃಶ್ಯಗಳನ್ನ ಇಲ್ಲಿಯೇ ಚಿತ್ರೀಕರಿಸಲಾಗಿತ್ತು.ಸಿನಿಮಾ ಒಂದಕ್ಕಾಗಿ ಇಲ್ಲಿಯವರೆಗೂ ಭಾರತದಲ್ಲಿ ಈ ರೀತಿಯ ಸೆಟ್​ ಯಾರು ನಿರ್ಮಿಸಿರಲಿಲ್ಲವಂತೆ.

    (ವರದಿ - ವಾಸುದೇವ ಎಂ)
    Published by:Soumya KN
    First published: