ನಾನು ಜೀವನದಲ್ಲಿ ಮರೆಯಲಾಗದ ವ್ಯಕ್ತಿ Puneeth Rajkumar ಎಂದ ಚಿರಂಜೀವಿ: ಅಂತಿಮ ನಮನ ಸಲ್ಲಿಸಿದ ವೆಂಕಟೇಶ್​..!

ಕೆಲವೇ ಸಮಯದ ಹಿಂದೆಯಷ್ಟೆ ಟಾಲಿವುಡ್​ ಮೆಗಾ ಸ್ಟಾರ್​ ಚಿರಂಜೀವಿ, ನಟ ಶ್ರೀಕಾಂತ್​, ವಿಕ್ಟರಿ ವೆಂಕಟೇಶ್​, ಆಲಿ ಹಾಗೂ ಜೂನಿಯರ್ ಎನ್​ಟಿಆರ್​ ಅವರು ಪುನೀತ್ ರಾಜ್​ಕುಮಾರ್ ಅವರ ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದ್ದಾರೆ. ಶಿವಣ್ಣ ಹಾಗೂ ಪುನೀತ್​ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. 

ಪುನೀತ್​ ರಾಜ್​ಕುಮಾರ್​ ಅಂತಿಮ ದರ್ಶನ ಪಡೆದ ಚಿರಂಜೀವಿ ಹಾಗೂ ವಿಕ್ಟರಿ ವೆಂಕಟೇಶ್​

ಪುನೀತ್​ ರಾಜ್​ಕುಮಾರ್​ ಅಂತಿಮ ದರ್ಶನ ಪಡೆದ ಚಿರಂಜೀವಿ ಹಾಗೂ ವಿಕ್ಟರಿ ವೆಂಕಟೇಶ್​

  • Share this:
ಅಣ್ಣಾವ್ರ ಕುಟುಂಬಕ್ಕೂ ಹಾಗೂ ಟಾಲಿವುಡ್​ ಸ್ಟಾರ್​ಗಳ ಕುಟುಂಬಗಳ ನಡುವೆ ಬಹಳ ಹಿಂದಿನಿಂದಲೂ ಆತ್ಮೀಯವಾದ ಸಂಬಂಧವಿದೆ. ಯಾವುದೇ ಟಾಲಿವುಡ್​ ಸ್ಟಾರ್​ ಬೆಂಗಳೂರಿಗೆ ಬಂದರೆ, ಅವರು ರಾಜ್​ಕುಮಾರ್​ ಅವರ ಮನೆಗೆ ಬಾರದೆ ಹೋಗುತ್ತಿರಲಿಲ್ಲ. ಇನ್ನು ಟಾಲಿವುಡ್​ ನಟರ ಮನೆಯ ಕಾರ್ಯಕ್ರಮಗಳಲ್ಲಿ ರಾಜ್​ ಕುಟುಂಬದವರ ಹಾಜರಿ ಇರುತ್ತಿತ್ತು. ಸಿನಿರಂಗವೇ ಒಂದು ಕುಟುಂಬ ಇದ್ದಂತೆ ಎಂದು ನಂಬಿದ್ದ ರಾಜ್​ಕುಮಾರ್​ ಅವರು ಎಂದರೆ ಬೇರೆ ಭಾಷೆಯ ಕಲಾವಿದರಿಗೆ ಗೌರವ. ಹೀಗಿರುವಾಗ ಅಣ್ಣಾವ್ರ ಕಿರಿಯ ಮಗ ಅಗಲಿದರೆ  ಅವರ ಕುಟುಂಬದ ನೋವಿನಲ್ಲಿ ಭಾಗಿಯಾಗದೆ ಇರಲು ಹೇಗೆ ಸಾಧ್ಯ. ಇಂದು ಬೆಳಗಿನಿಂದಲೇ ಟಾಲಿವುಡ್​ ಸ್ಟಾರ್​ಗಳು ಬಂದು ಪುನೀತ್​ ರಾಜ್​ಕುಮಾರ್​ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. 

ಕೆಲವೇ ಸಮಯದ ಹಿಂದೆಯಷ್ಟೆ ಟಾಲಿವುಡ್​ ಮೆಗಾ ಸ್ಟಾರ್​ ಚಿರಂಜೀವಿ, ನಟ ಶ್ರೀಕಾಂತ್​, ವಿಕ್ಟರಿ ವೆಂಕಟೇಶ್​, ಆಲಿ ಹಾಗೂ ಜೂನಿಯರ್ ಎನ್​ಟಿಆರ್​ ಅವರು ಪುನೀತ್ ರಾಜ್​ಕುಮಾರ್ ಅವರ ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದ್ದಾರೆ. ಶಿವಣ್ಣ ಹಾಗೂ ಪುನೀತ್​ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

Shivarajkumar completely break down of puneeth raj kumar death
ಪುನೀತ್​ ರಾಜ್​ಕುಮಾರ್​ ದರ್ಶನ ಪಡೆದ ಜೂನಿಯರ್ ಎನ್​ಟಿಆರ್​


ರಾಜ್​ಕುಮಾರ್​ ಅವರ ಕುಟುಂದ ಜೊತೆ ಬಹಳ ವರ್ಷಗಳಿಂದ ಆತ್ಮೀಯವಾದ ಸಂಬಂಧವಿದೆ. ಅವರ ಮನೆಯಲ್ಲಿ ಏನೇ ಕಾರ್ಯಕ್ರಮವಾದರೂ ನಮ್ಮನ್ನು ಆಹ್ವಾನಿಸುತ್ತುಇದ್ದರು. ನಮ್ಮ ಮನೆಗಳಲ್ಲಿ ಏನೇ ಶುಭ ಕಾರ್ಯವಾದರೂ ಅದರಲ್ಲಿ ಅವರುಗಳೂ ಭಾಗಿಯಾಗುತ್ತಿದ್ದರು. ಪುನೀತ್​ ಅವರನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ನಿಜಕ್ಕೂ ಅವರ ಅಗಲಿಕೆ ನೋವು ತಂದಿದೆ ಎಂದಿದ್ದಾರೆ ನಟ ಚಿರಂಜೀವಿ.

ಇದನ್ನೂ ಓದಿ: Puneeth Rajkumar ಅಂತ್ಯಸಂಸ್ಕಾರ ನಾಳೆ: ಸಿಎಂ ಬಸವರಾಜ ಬೊಮ್ಮಾಯಿ

ನಂತರ ಮಾತನಾಡಿದ ನಟ ಶ್ರೀಕಾಂತ್​ ಅವರು, ಅಪ್ಪು ಅವರ ಜೊತೆ ನಾನು ಜೇಮ್ಸ್​ ಸಿನಿಮಾದಲ್ಲಿ ನಟಿಸಿದ್ದೇನೆ. 45 ದಿನ ಅವರ ಜೊತೆ ಕಳೆದಿದ್ದೇನೆ. ಅವರು ಹೇಗೆ ಇರುತ್ತಿದ್ದರು, ಅವರು ಸಹ ನಟಿರಿಗೆ ಕೊಡುತ್ತಿದ್ದ ಗೌರವ ಎಲ್ಲವನ್ನೂ ಕಣ್ಣಾರೆ ನೋಡಿದ್ದೇನೆ. ಇದು ನಿಜಕ್ಕೂ ಆಗಬಾರದಿತ್ತು ಎಂದು ಕನ್ನಡದಲ್ಲೇ ಮಾತನಾಡಿದ್ದಾರೆ.

ಇಂದು ಬೆಳಿಗ್ಗೆಯೇ ಬೆಂಗಳೂರಿಗೆ ಬಂದ ನಟ ಬಾಲಕೃಷ್ಣ ಅವರು ಪುನೀತ್​ ಅವರಿಗೆ ಪುಷ್ಪ ನಮನ ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ್ದರು. ತಮ್ಮನಂತಿದ್ದ ಪುನೀತ್​ನನ್ನು ಕಳೆದುಕೊಂಡಿರುವುದು ತೀವ್ರ ದುಃಖ ತಂದಿದೆ. ತನ್ನದೇ ಆದ ಪರಿಶ್ರಮದಿಂದ ಮೇಲಕ್ಕೆ ಬಂದಿದ್ದ ಪುನೀತ್. ನಮ್ಮ ತಂದೆ ಕಾಲದಿಂದಲೂ ರಾಜ್ ಕುಮಾರ್ ಕುಟುಂಬದೊಂದಿಗೆ ಉತ್ತಮ ಸಂಬಂಧವಿದೆ. ಅವರ ಸಾವಿನ ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇವರು ಇಷ್ಟು ಬೇಗ ಕರೆಯಿಸಿಕೊಂಡಿರುವುದು ನಂಬಲು ಸಾಧ್ಯವಾಗುತ್ತಿಲ್ಲ. ನೆಚ್ಚಿನ ತಮ್ಮದಂತಿದ್ದ ಪುನೀತ್ ನನ್ನು ಭೇಟಿಯಾದಾಗ ತುಂಬಾ ಚೆನ್ನಾಗಿ ಮಾತನಾಡಿಸುತ್ತಿದ್ದ. ಪುನೀತ್ ಅಗಲಿಕೆ ಭಾರತ ಚಿತ್ರರಂಗಕ್ಕೆ ಅಪಾರ ನಷ್ಟವಾಗಿದೆ. ಪ್ರತಿ ವರ್ಷ ಲೇಪಾಕ್ಷಿ ಉತ್ಸವ ನಡೆದಾಗಲೆಲ್ಲ ಅವರನ್ನು ಕರೆಯುತ್ತಿದ್ದೆ‌. ಅವರು ಸಹ ಸಂತೋಷದಿಂದ ಬರುತ್ತಿದ್ದರು. ಪುನೀತ್ ಹಠಾತ್ ಸಾವು ನಿಜಕ್ಕೂ ನಂಬಲಾಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಕಣ್ಣೀರಿಡುತ್ತಾ ಭಾವುಕರಾಗಿದ್ದರು.

ಇದನ್ನೂ ಓದಿ: Puneeth Rajkumar Funeral: ಅಂತಿಮ ನಮನ ಸಲ್ಲಿಸಿದ ಟಾಲಿವುಡ್ ಸ್ಟಾರ್​ಗಳು: ಕಣ್ಣೀರಿಟ್ಟ ನಟ ಬಾಲಕೃಷ್ಣ

ಇನ್ನು ಪುನೀತ್​ ಅವರ ದೊಡ್ಡ ಮಗಳು ಈಗಾಗಲೇ ನ್ಯೂಯಾರ್ಕ್​ನಿಂದ ಬೆಂಗಳೂರಿಗೆ ಬಂದಿದ್ದಾರೆ. ಸದಾಶಿವನಗರದ ಮನೆ ತಲುಪಿದ್ದು, ಯಾವ ಕ್ಷಣದಲ್ಲಾದರೂ ಅವರು ಕಂಠೀರವ ಕ್ರೀಡಾಂಗಣದತ್ತ ಬರಬಹುದು ಎನ್ನಲಾಗುತ್ತಿದೆ.

ಇಂದು ಸಂಜೆ ನಡೆಯಬೇಕಿದ್ದ ಪುನೀತ್ ರಾಜ್​ಕುಮಾರ್​ ಅವರ ಅಂತ್ಯಕ್ರಿಯೆಯನ್ನು ನಾಳೆಗೆ ಮುಂದೂಡಲಾಯಿತು. ಈ ವಿಷಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಘವೇಂದ್ರ ರಾಜ್​ಕುಮಾರ್​ ಅವರು ಖಚಿತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ದತೆ ಮಾಡಿದ್ದ ಗುಂಡಿ ಸುತ್ತಲು ಬ್ಯಾರಿಕೇಡ್ ಹಾಕಲಾಗಿದೆ. ಒಂದು ಕಡೆ ಪುನೀತ್​ ಅವರ ಅಂತಿಮ ದರ್ಶನ ಪಡೆಯಲು ಬರುತ್ತಿರುವ ಅಭಿಮಾನಿಗಳ ಸಂಖ್ಯೆಯಲ್ಲಿ ಏರಿಕೆ ಆಗುತ್ತಲೇ ಇದೆ. ಈ ಕಾರಣದಿಂದಾಗಿಯೇ ಮುಖ್ಯಮಂತ್ರಿಗಳು ಪುನೀತ್​ ರಾಜ್​ಕುಮಾರ್ ಅವರ ಕುಟುಂಬದವರ ಬಳಿ ಮಾತನಾಡಿ, ಅಂತ್ಯಕ್ರಿಯೆಯನ್ನು ಮುಂದೂಡಿದ್ದಾರಂತೆ.
Published by:Anitha E
First published: