Instagramನಲ್ಲಿ ಪತಿಯ ಹೆಸರು ಕೈಬಿಟ್ಟ ಚಿರಂಜೀವಿ ಪುತ್ರಿ, ಶ್ರೀಜಾ-ಕಲ್ಯಾಣ್ ಬದುಕಲ್ಲಿ ಬಿರುಕು!?

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ ಕಲ್ಯಾಣ್ ಇನ್ಟಾಗ್ರಾಮ್ ನಲ್ಲಿ ಪತಿ ಕಲ್ಯಾಣ್ ಹೆಸರು ತೆಗೆದು ಶ್ರೀಜಾ ಕೊನಿಡೇಲಾ ಅಂತ ತನ್ನ ಮೂಲ ಹೆಸರು ಹಾಕಿಕೊಂಡಿದ್ದು, ಶ್ರೀಜಾ- ಕಲ್ಯಾಣ್ ವಿಚ್ಛೇದನ ವದಂತಿಗೆ ಪುಷ್ಠಿ ನೀಡಿದಂತಾಗಿದೆ.

ಶ್ರೀಜಾ,ಕಲ್ಯಾಣ್​ ದೇವ್​, ಚಿರಂಜೀವಿ

ಶ್ರೀಜಾ,ಕಲ್ಯಾಣ್​ ದೇವ್​, ಚಿರಂಜೀವಿ

  • Share this:
ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟ-ನಟಿಯರ ಡಿವೋರ್ಸ್ (Divorce) ಕೇಸ್ ಭಾರೀ ಸದ್ದು ಮಾಡ್ತಿದೆ. ನಿನ್ನೆಯಷ್ಟೇ ರಜನಿಕಾಂತ್ ಮಗಳು ಐಶ್ವರ್ಯಾ ಹಾಗೂ ನಟ ಧನುಷ್ ಇಬ್ಬರು ವಿಚ್ಚೇದನದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಚ್ಚಿಕೊಂಡ್ರು. ಇದೀಗ ಚಿರಂಜೀವಿ ಪುತ್ರಿ (Chiranjeevi Daughter) ಶ್ರೀಜಾ (Sreeja) ಹಾಗೂ ನಟ ಕಲ್ಯಾಣ್ ದೇವ್ (Kalyan dev) ಬದುಕಲ್ಲೂ ಬಿರುಕು ಮೂಡಿದ್ಯಾ ಅನ್ನೋ ಅನುಮಾನ ಶುರುವಾಗಿ. ಶ್ರೀಜಾ ಕಲ್ಯಾಣ್ ತನ್ನ ಪತಿಯ ಹೆಸರನ್ನ ಇನ್ಸ್ಟಾಗ್ರಾಮ್ (Instagram) ನಿಂದ ತೆಗೆದು ಹಾಕಿರೋ ಅವರ ನಡೆ ಇನ್ನಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. 2016ರಲ್ಲಿ ವಿವಾಹವಾಗಿರೋ ಶ್ರೀಜಾ ಹಾಗೂ ಕಲ್ಯಾಣ್ ದೇವ್ ಗೆ ಇಬ್ಬರು ಮಕ್ಕಳಿದ್ದಾರೆ. ವಿಚ್ಛೇದನದ ಬಗ್ಗೆ ಚಿರಂಜೀವಿಯಾಗಲಿ ಶ್ರೀಜಾ ಆಗಲಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಟ ಕಲ್ಯಾಣ್ ದೇವ್ ಸಹ ಈ ಬಗ್ಗೆ ಬಹಿರಂಗವಾಗಿ ಎಲ್ಲೂ ಹೇಳಿಕೊಂಡಿಲ್ಲ. ಸೋಮವಾರ ಶ್ರೀಜಾ ಕಲ್ಯಾಣ್ ತನ್ನ ಪತಿಯ ಹೆಸರನ್ನಇನ್​​ಸ್ಟಾಗ್ರಾಂ (Instagram) ನಿಂದ ತೆಗೆದು ಹಾಕಿದ್ದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಹೆಸರು ತೆಗೆದು ಹಾಕುವ ಜೊತೆಗೆ ಅವರನ್ನು ಅನ್ ಫಾಲೋ ಮಾಡಿದ್ದಾರೆ.

ಸಮಂತಾರನ್ನೇ ಫಾಲೋ ಮಾಡಿದ್ರಾ ಶ್ರೀಜಾ!?

ಸಮಂತಾ (Samantha) ಕೂಡ ನಾಗಚೈತ್ಯ ಜೊತೆ ಡಿವೋರ್ಸ್ ಘೋಷಿಸುವುದಕ್ಕೂ ಮುನ್ನ ಇನ್ಸ್ಟಾಗ್ರಾಮ್ ನಲ್ಲಿ ಅಕ್ಕಿನೇನಿ ಹೆಸರನ್ನು ತೆಗೆದು ಸಮಂತಾ ರುತು ಪ್ರಭು ಎಂದು ತನ್ನ ಮೂಲ ಹೆಸರನ್ನು ಹಾಕಿಕೊಂಡಿದ್ದರು. ಇದೀಗ ಚಿರಂಜೀವಿ ಪುತ್ರಿ ಶ್ರೀಜಾ ಕೂಡ ಇನ್ಸ್ಟಾಗ್ರಾಮ್ ನಲ್ಲಿ ಪತಿಯ ಹೆಸರು ತೆಗೆದು ಹಾಕಿದ್ದಾರೆ. ಇದು ಶ್ರೀಜಾ ಹಾಗೂ ನಟ ಕಲ್ಯಾಣ್ ದೇವ್ ಬದುಕಲ್ಲಿ ಬಿರುಕು ಮೂಡಿದ್ಯಾ ಅನ್ನೋ ಅನುಮಾನ ಮೂಡಿಸಿದೆ.
ಮಾರ್ಚ್ 2016ರಲ್ಲಿ ಬೆಂಗಳೂರಿನ ದೇವನಹಳ್ಳಿ ಬಳಿಯ ಕುಟುಂಬದ ಫಾರ್ಮ್ ಹೌಸ್ನಲ್ಲಿ ಚಿರಂಜೀವಿ ಪುತ್ರಿ ಶ್ರೀಜಾ ಹಾಗೂ ಕಲ್ಯಾಣ್ ದೇವ್ ಮಗಳ ಮದುವೆ ಅದ್ಧೂರಿಯಾಗಿ ಜರುಗಿತ್ತು. ಸಮಾರಂಭದಲ್ಲಿ ಸಂಬಂಧಿಕರು, ಆತ್ಮೀಯ ಸ್ನೇಹಿತರು ಭಾಗಿಯಾಗಿದ್ರು. 2018ರಲ್ಲಿ ಶ್ರೀಜಾ ಹಾಗೂ ಕಲ್ಯಾಣ್ ದೇವ್ ಮಗುವಿನ ನಿರೀಕ್ಷೆಯಲ್ಲಿರೋದಾಗಿ ಘೋಷಿಸಿದ್ರು. ಬಳಿಕ ಶ್ರೀಜಾ ತನ್ನ ಮಗುವಿನ ಚಿತ್ರವನ್ನ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ರು.

ಇದನ್ನು ಓದಿ : ಫ್ಯಾಮಿಲಿ ಜೊತೆ ಮೆಗಾಸ್ಟಾರ್ Chiranjeevi ಸಂಕ್ರಾಂತಿ ಆಚರಣೆಯ ವಿಡಿಯೋ ಇಲ್ಲಿದೆ ನೋಡಿ..

ಮೊದಲ ಪತಿಯಿಂದ ಡಿವೋರ್ಸ್ ಪಡೆದಿದ್ದ ಶ್ರೀಜಾ!

ಕಲ್ಯಾಣ್ ದೇವ್ ಜೊತೆ ವಿವಾಹವಾಗುವುದಕ್ಕೂ ಮುನ್ನ ಚಿರಂಜೀವಿ ಪುತ್ರಿ ಶ್ರೀಜಾ 19 ವರ್ಷವಿದ್ದಾಗ ಗೆಳೆಯ ಸಿರೀಶ್ ಭಾರದ್ವಾಜ್ ರನ್ನು ವಿವಾಹವಾಗಿದ್ರು. ಬಳಿಕ ಗಂಡ ಹಾಗೂ ಅತ್ತೆ ವರದಕ್ಷಿಣೆ ಬೇಡಿಕೆ ಇಡ್ತಿದ್ದಾರೆ ಎಂದು ಹೇಳಿ ಸಿರೀಶ್ ಭಾರದ್ವಾಜ್ ವಿರುದ್ಧ ಕಿರುಕುಳದ ಆರೋಪ ಮಾಡಿದ್ರು. 2011ರಲ್ಲಿ ಕಾನೂನಾತ್ಮಕವಾಗಿ ಇಬ್ಬರು ದೂರವಾದ್ರು. ಬಳಿಕ 2016ರಲ್ಲಿ ಕಲ್ಯಾಣ್ ದೇವ್ ರನ್ನು ವಿವಾಹವಾದ್ರು.

ಇದನ್ನು ಓದಿ: ಮೆಗಾಸ್ಟಾರ್‌ ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾ ಬಿಡುಗಡೆಗೂ ಕೊರೊನಾ ಅಡ್ಡಿ...!

ಶ್ರೀಜಾ ಕಲ್ಯಾಣ್ ತನ್ನ ಪತಿಯ ಹೆಸರನ್ನ ಇನ್ಸ್ಟಾಗ್ರಾಮ್ (Instagram) ನಿಂದ ತೆಗೆದು ಹಾಕುವ ಮುನ್ನವೇ ಇಬ್ಬರ ಬದುಕಲ್ಲಿ ಬಿರುಕು ಮೂಡಿದೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಕಲ್ಯಾಣ್ ದೇವ್ ಹಾಗೂ ರಚಿತಾ ರಾಮ್ ಅಭಿನಯದ ‘ಸೂಪರ್ ಮಚ್ಚಿ’ ಚಿತ್ರ ಬಿಡುಗಡೆಯಾಗಿ ನೆಲಕಚ್ಚಿತು. ಈ ಚಿತ್ರಕ್ಕೆ ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಯಾವ ಸದಸ್ಯರು ಬೆಂಬಲ ಸೂಚಿಸಿರಲಿಲ್ಲ. ಈ ಸಿನಿಮಾ ಬಾಕ್ಸಾಫೀಸ್​​ನಲ್ಲಿ ಮೊದಲ ದಿನ ಒಂದೂ ರೂಪಾಯಿಯನ್ನು ಕಲೆಕ್ಟ್​ ಮಾಡಿಲ್ಲ ಎಂದು ವರದಿಯೊಂದು ತಿಳಿಸಿತ್ತು. ಇದೀಗ ಈ ರೀತಿಯ ವಿಷಯಗಳು ನಡೆದಿದ್ದು, ಏನೋ ನಡೆದಿದೆ ಎಂದು ಎಲ್ಲರು ಹೇಳುತ್ತಿದ್ದಾರೆ.
Published by:Vasudeva M
First published: