Chiranjeevi: ಅಪರೂಪದ ಫೋಟೋ ಹಂಚಿಕೊಂಡ ಚಿರು: ಹಿರಿಯರ ಬಗ್ಗೆ ಕಾಳಜಿ ವಹಿಸಿ ಎಂದ ಮೆಗಾಸ್ಟಾರ್​ ..!

Chiranjeevi: ಮೆಗಾಸ್ಟಾರ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ತಮ್ಮ ಅಪರೂಪದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಆ ಫೋಟೋ ಮೂಲಕ ಫ್ಯಾನ್ಸ್​ಗಳಿಗೆ ಮತ್ತೊಂದು ಮನವಿ ಮಾಡಿದ್ದಾರೆ. 

Anitha E | news18-kannada
Updated:March 26, 2020, 6:34 PM IST
Chiranjeevi: ಅಪರೂಪದ ಫೋಟೋ ಹಂಚಿಕೊಂಡ ಚಿರು: ಹಿರಿಯರ ಬಗ್ಗೆ ಕಾಳಜಿ ವಹಿಸಿ ಎಂದ ಮೆಗಾಸ್ಟಾರ್​ ..!
ಅಮ್ಮನೊಂದಿಗೆ ಚಿರು
  • Share this:
ನಿನ್ನೆಯಷ್ಟೆ ಟ್ವಿಟರ್ ಹಾಗೂ ಇನ್​ಸ್ಟಾಗ್ರಾಂಗೆ ಎಂಟ್ರಿಕೊಟ್ಟ ಟಾಲಿವುಡ್​ ಮೆಗಾಸ್ಟಾರ್​ ಚಿರಂಜೀವಿ ಈಗ ಅಭಿಮಾನಿಗಳಿಗೆ ಒಂದು ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದ ಕೂಡಲೇ ಕೊರೋನಾ ಕುರಿತಾಗಿ ಟ್ವೀಟ್​ ಮಾಡಿದ್ದ ಚಿರು ಮನೆಗಳಿಂದ ಹೊರ ಬಾರದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.

ಇದೇ ಮೆಗಾಸ್ಟಾರ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ತಮ್ಮ ಅಪರೂಪದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಆ ಫೋಟೋ ಮೂಲಕ ಫ್ಯಾನ್ಸ್​ಗಳಿಗೆ ಮತ್ತೊಂದು ಮನವಿ ಮಾಡಿದ್ದಾರೆ.

Mega Star Chiranjeevi decided to donate one crore for Film Workers ae
ಚಿರಂಜೀವಿ


ಹೌದು, ತಮ್ಮ ಅಮ್ಮನ ಜೊತೆಗೆ ತೆಗೆಸಿಕೊಂಡ ಚಿತ್ರವನ್ನು ಹಂಚಿಕೊಂಡಿರುವ ಚಿರಂಜೀವಿ, ಮನೆಗಳಲ್ಲಿ ಎಲ್ಲರೂ ಹಿರಿಯರನ್ನು ಹುಷಾರಾಗಿ ನೋಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಅದರಲ್ಲೂ ಚಿರಂಜೀವಿ ಇಂದು ಮಧ್ಯಾಹ್ನವಷ್ಟೆ ಸಿನಿ ಬಡ ಕಲಾವಿದರಿಗಾಗಿ ಒಂದು ಕೋಟಿ ಕೊಡುವುದಾಗಿ ಟ್ವೀಟ್​ ಮಾಡಿದ್ದಾರೆ. ಅಲ್ಲದೆ ಚಿರಂಜೀವಿ ಅವರ ಮಗ ರಾಮ್​ಚರಣ್​ ಸಹ ಕೊರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದು 70 ಲಕ್ಷ ಕೊಡುವುದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Mega Star Chiranjeevi: ಬಡ ಕಲಾವಿದರಿಗೆ ಧನಸಹಾಯ ಮಾಡಲು ಮುಂದಾದ ಮೆಗಾಸ್ಟಾರ್​ ಚಿರು-ರಾಮ್​ಚರಣ್​..!

ಕೊರೋನಾ ವೈರಸ್​ನಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದು, ಅದರಲ್ಲಿ ವಯಸ್ಸಾದವರ ಸಂಖ್ಯೆಯೇ ಹೆಚ್ಚಾಗಿದೆ. ಇದೇ ಕಾರಣಕ್ಕೆ ಸೋಂಕು ತಗುಲದಂತೆ ಎಚ್ಚರವಹಿಸುವಂತೆ ಚಿರು ಮನವಿ ಮಾಡಿದ್ದಾರೆ.

Nikhil-Revathi: ಬೇವು ಬೆಲ್ಲ ಹಂಚಿಕೊಂಡು ಸುಖ-ದುಖಃದಲ್ಲಿ ಸಮಪಾಲು ಸ್ವೀಕರಿಸುವುದಾಗಿ ಸಾರಿದ ನಿಖಿಲ್​-ರೇವತಿ..!

First published: March 26, 2020, 6:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading